For Quick Alerts
  ALLOW NOTIFICATIONS  
  For Daily Alerts

  ಈ ಮುಸುಡಿಗೆ ಇದೊಂದು ಚಿತ್ರ ಬಾಕಿ ಇತ್ತು ನೋಡಿ!

  By ಉದಯರವಿ
  |

  ಈ ಮುಸುಡಿಗೆ ಇದೊಂದು ಬಾಕಿ ಇತ್ತು ನೋಡಿ. ಈಗಾಗಲೆ ಹಲವಾರು ಚಿತ್ರಗಳಲ್ಲಿ ನಟ ಸೈಫ್ ಆಲಿ ಖಾನ್ ರಾಗಿ ಬೀಸಿದ್ದೇ ಬಂತು. ಈತ ವೈವಿಧ್ಯಮಯ ಪಾತ್ರಗಳನ್ನು ಪೋಷಿಸದೇ ಇದ್ದರೂ ಇಷ್ಟು ವರ್ಷಗಳ ಕಾಲ ಬಾಲಿವುಡ್ ನಲ್ಲಿ ಅದು ಹೇಗೆ ಕಾಲ ತಳ್ಳಿದ ಎಂಬುದೇ ಅಚ್ಚರಿಯ ಸಂಗತಿ.

  ತಾರೆ ದೀಪಿಕಾ ಪಡುಕೋಣೆ ಜೊತೆಗಿನ ಈತನ ಲೇಟೆಸ್ಟ್ ಚಿತ್ರ 'ಕಾಕ್ ಟೈಲ್' ಬಾಕ್ಸಾಫೀಸಲ್ಲಿ ಅಷ್ಟೋ ಇಷ್ಟೋ ದುಡ್ಡಿ ಬಾಚಿದೆ ಎಂದರೆ ಅದಕ್ಕೆ ಕಾರಣವಾಗಿರುವುದು ಈತನ ನಟನೆಯಂತೂ ಖಂಡಿತ ಅಲ್ಲ. ಅದೇನಿದ್ದರೂ ದೀಪಿಕಾ ಮೈಮಾಟ ಎನ್ನಬಹುದು.

  ಎಷ್ಟೇ ಮೇಕಪ್ ಮಾಡಿದರೂ ಈತನ ಮುಖಚಹರೆ ನೋಡಿದರೆ ಸಾಕು ನಲವತ್ತು ಪ್ಲಸ್ ಎಂದು ಪ್ರೇಕ್ಷಕರಿಗೆ ಸಲೀಸಾಗಿ ಗೊತ್ತಾಗಿ ಬಿಡುತ್ತಿತ್ತು. ಇಂತಹ ವಯಸ್ಕ ನಟನ ಜೊತೆ ದೀಪಿಕಾ ಕುಣಿಯುತ್ತಿದ್ದರೆ ಪ್ರೇಕ್ಷಕರು ಸಹಿಸಿಕೊಂಡಿದ್ದೇ ಹೆಚ್ಚು. ಇರಲಿ ಬಿಡಿ ವಿಷಯ ಇದಲ್ಲ.

  ಹೊಸ ಸಮಾಚಾರ ಏನಪ್ಪಾ ಅಂದ್ರೆ ಈತ ಈಗ ವಯಸ್ಕರ ಚಿತ್ರದಲ್ಲಿ ಅಭಿನಯಿಸಲಿದ್ದಾರಂತೆ. ವಯಸ್ಸಾದ ಮೇಲೆ ಇನ್ನೇನು ಮಾಡಕ್ಕೆ ಸಾಧ್ಯ ಅಂತೀರಾ? ಈತನ ಮುಂಬರುವ ಚಿತ್ರದ ಹೆಸರು 'ಗೋ ಗೋವಾ ಗಾನ್'. ಕಾಮಿಡಿ ಏನಪ್ಪಾ ಅಂದ್ರೆ ಇದೊಂದು ಹಾರರ್ ಪ್ರಧಾನ ಚಿತ್ರ ಎಂಬುದು.

  ಈ ಚಿತ್ರದ ಬಗ್ಗೆ ಸೈಫ್ ಮಾತನಾಡುತ್ತಾ, ಹಾರರ್ ಚಿತ್ರವಾದ ಇದು ಪ್ರೇಕ್ಷಕರನ್ನು ಬೆಚ್ಚಿ ಬೀಳಿಸಲಿದೆ. ಈ ಚಿತ್ರದ ಕಡ್ಡಾಯವಾಗಿ ವಯಸ್ಕರಿಗೆ ಮಾತ್ರ ಎಂದು ಸೈಫ್ ಹೇಳಿ ಪ್ರೇಕ್ಷಕರನ್ನು ಬೆಚ್ಚಿ ಬೀಳಿಸಿದ್ದಾನೆ. ಚಿತ್ರದಲ್ಲಿನ ಭಾಷೆ ಹಾಗೂ ದೃಶ್ಯಗಳು ಆ ರೀತಿ ಇವೆ ಎಂಬುದು ಸೈಫ್ ವಿವರಣೆ.

  ಈ ಚಿತ್ರವನ್ನು ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲೂ ಪ್ರದರ್ಶಿಸಲಿದ್ದೇವೆ. ಚಿತ್ರದಲ್ಲಿನ ಭಾಷೆ ಹಾಗೂ ದೃಶ್ಯಗಳು ತೀರಾ ಅಸಭ್ಯವಾಗಿಯೇನು ಇರುವುದಿಲ್ಲ. ಈ ಚಿತ್ರಕ್ಕೆ A ಸರ್ಟಿಫಿಕೇಟ್ ಸಿಕ್ಕರೂ ಸಿಗಬಹುದು ಅಥವಾ AA ಸಿಕ್ಕರೂ ಸಿಗಬಹುದು ಎಂದು ಅಡ್ಡಗೋಡೆ ಮೇಲೆ ದೀಪ ಇಟ್ಟಂತೆ ಹೇಳಿದ್ದಾನೆ.

  ಚಿತ್ರದಲ್ಲಿನ ಮೈನವಿರೇಳಿಸುವ ಸನ್ನಿವೇಶಗಳು ಪ್ರೇಕ್ಷಕರನ್ನು ಸೀಟಿನ ತುದಿಗೆ ಕೂರುವಂತೆ ಮಾಡುತ್ತವಂತೆ. ಚಿತ್ರದ ಮೇಕಿಂಗ್ ಆ ರೀತಿ ಇದೆ. ಚಿತ್ರಮಂದಿರದಿಂದ ಹೊರಗೆ ಬಂದರೂ ಪ್ರೇಕ್ಷಕರನ್ನು ಬಹಳವಾಗಿ 'ಗೋ ಗೋವಾ ಗಾನ್' ಚಿತ್ರ ಕಾಡುತ್ತದೆ ಹಾಗೆ ಹೀಗೆ ಎಂದು ಪ್ರೇಕ್ಷಕರ ತಲೆಗೆ ಹುಳ ಬಿಟ್ಟಿದ್ದಾನೆ. ನೋಡೋಣ ಏನಾಗುತ್ತದೋ ಏನೋ.

  English summary
  Saif Ali Khan says that his next movie Go Goa Gone, which is India's first horror zombie film, will be very scary. The actor says that Go Goa Gone would be strictly for adults because of its language and visuals.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X