»   » ಕರೀನಾ ಕಪೂರ್, ಸೈಫ್ ಮದುವೆಗೆ ಮೂರೇ ಜನ ಸಾಕ್ಷಿ

ಕರೀನಾ ಕಪೂರ್, ಸೈಫ್ ಮದುವೆಗೆ ಮೂರೇ ಜನ ಸಾಕ್ಷಿ

Posted By:
Subscribe to Filmibeat Kannada

ಬಾಲಿವುಡ್ ಲವ್ ಬರ್ಡ್ಸ್ ಸೈಫ್ ಆಲಿ ಖಾನ್ (42) ಹಾಗೂ ಕರೀನಾ ಕಪೂರ್ (32) ಅವರ ರಾಯಲ್ ಮದುವೆಯನ್ನು ಕಣ್ತುಂಬಿಕೊಳ್ಳಲು ಇಡೀ ದೇಶವೇ ಎದುರು ನೋಡುತ್ತಿದೆ. ಇದು ಅಂತಿಂತಹ ಮದುವೆಯಲ್ಲ. ಬಾಲಿವುಡ್ ನಲ್ಲಿ ನಡೆಯುತ್ತಿರುವ ಮತ್ತೊಂದು ಅದ್ದೂರಿ ಮದುವೆ.

ಕರೀನಾ ಹಾಗೂ ಸೈಫ್ ಮಂಗಳವಾರ (ಅ.16) ರಿಜಿಸ್ಟರ್ಡ್ ಮದುವೆಯಾಗುವ ಮೂಲಕ ನೂತನ ದಾಂಪತ್ಯ ಜೀವನಕ್ಕೆ ಅಡಿಯಿಟ್ಟರು. ರಿಜಿಸ್ಟರ್ಡ್ ಮದುವೆಗೆ ಕೆಲವೇ ಕೆಲವು ಬಂಧುಮಿತ್ರರು ಮಾತ್ರ ಸಾಕ್ಷಿಯಾದರು. ನೋಂದಣಿನೋಂದಣಿ ಅಧಿಕಾರಿಗಳು ಸೈಫ್ ಅವರ ಮುಂಬೈ ಬಾಂದ್ರಾ ನಿವಾಸಕ್ಕೆ ಆಗಮಿಸಿ ಕಾಗದ ಪತ್ರಗಳಿಗೆ ಸಹಿಹಾಕಿಸಿಕೊಂಡರು.

ಕರೀನಾ ಅವರ ತಂದೆ ರಣಬೀರ್ ಕಪೂರ್, ಅವರ ತಾಯಿ ಬಬಿತಾ ಹಾಗೂ ಸೈಫ್ ಅವರ ತಾಯಿ ಶರ್ಮಿಳಾ ಮಾತ್ರ ರಿಜಿಸ್ಟರ್ ಮದುವೆಗೆ ಸಾಕ್ಷಿಗಳಾಗಿ ಸಹಿ ಹಾಕಿದರು. ಇಂದು (ಅ.16) ಸಂಜೆ ಹೋಟೆಲ್ ತಾಜ್ ನಲ್ಲಿ ಅದ್ದೂರಿ ಆರತಕ್ಷತೆ ಕಾರ್ಯಕ್ರಮ ನಡೆಯಲಿದೆ. ಬುಧವಾರ (ಅ.17) ಹರಿಯಾಣದಲ್ಲಿರುವ ಸೈಫ್ ಪೂರ್ವಿಕರಾದ ಪಟೌಡಿ ನವಾಬರ ಅರಮನೆಯಲ್ಲಿ ಮುಸ್ಲಿಂ ಸಂಪ್ರದಾಯದಂತೆ ಮದುವೆ ನಡೆಯಲಿದೆ. ಮರುದಿನ ಆರತಕ್ಷತೆ ಕಾರ್ಯಕ್ರಮವಿರುತ್ತದೆ.

ಇದಾದ ಬಳಿಕ ಗುರುವಾರ (ಅ.18) ದೆಹಲಿಯಲ್ಲಿ ಮತ್ತೊಂದು ಆರತಕ್ಷತೆ ಕಾರ್ಯಕ್ರಮ ನಡೆಯಲಿದೆ. ಇದೆಲ್ಲವನ್ನೂ ನೋಡುತ್ತಿದ್ದರೆ ಕರೀನಾ ಹಾಗೂ ಸೈಫ್ ಮದುವೆ ಒಂದೆರಡು ದಿನಗಳಲ್ಲಿ ಮುಗಿಯುವುದಲ್ಲ. ಈಗಾಗಲೆ ಸಂಗೀತ್ ಹಾಗೂ ಮೆಹಂದಿ ಸಂಭ್ರಮವೂ ನಡೆದಿದೆ.

ಸೈಫ್ ಅವರನ್ನು ಕರೀನಾ ವರಿಸುತ್ತಿದ್ದರೂ ಅವರು ಮುಸ್ಲಿಂ ಧರ್ಮಕ್ಕೆ ಮತಾಂತರವಾಗುತ್ತಿಲ್ಲ. ಹಿಂದು ಧರ್ಮದ ಅಸ್ತಿತ್ವವನ್ನು ಉಳಿಸಿಕೊಂಡು ಅವರು ಸೈಫ್ ಜೊತೆ ಬಾಳಪಯಣ ಆರಂಭಿಸಿದ್ದಾರೆ. ಮುಂದೆ ತಮ್ಮ ಮನಸ್ಸನ್ನು ಬದಲಾಯಿಸಿಕೊಂಡು ಮತಾಂತರವಾಗುತ್ತಾರೋ ಇಲ್ಲವೋ ಗೊತ್ತಿಲ್ಲ. (ಪಿಟಿಐ)

English summary
Bollywood love birds Saif Ali Khan and Kareena Kapoor 16th October tied the knot in Mumbai in a quiet affair after a five-year courtship. "It was a registered marriage with three witnesses -- Kareena's father Randhir Kapoor, her mother Babita and Saif's mother Sharmila," marriage Registrar Surekha Ramesh told PTI.
Please Wait while comments are loading...