»   » ಮದುವೆ ದಿನಾಂಕ ಗೊಂದಲ ನಿವಾರಿಸಿದ ಶರ್ಮಿಳಾ

ಮದುವೆ ದಿನಾಂಕ ಗೊಂದಲ ನಿವಾರಿಸಿದ ಶರ್ಮಿಳಾ

Posted By:
Subscribe to Filmibeat Kannada

ಸಾಕಷ್ಟು ಗೊಂದಲದ ಗೂಡಾಗಿದ್ದ ಸೈಫ್ ಅಲಿ ಖಾನ್ ಮತ್ತು ಕರೀನಾ ಕಪೂರ್ ಮದುವೆ ದಿನಾಂಕವನ್ನು ಇದೀಗ ಶರ್ಮಿಳಾ ಠಾಗೋರ್ ಮತ್ತೊಮ್ಮೆ ಪಕ್ಕಾ ಮಾಡಿದ್ದಾರೆ. ಅದು ಈ ಮೊದಲು ಹೇಳಿದಂತೆ ಅಕ್ಟೋಬರ್ 16, 2012 ರಂದೇ ನಡೆಯಲಿದೆ. ನಿನ್ನೆ ಮಾಧ್ಯಮಗಳಿಗೆ ಬಂದಿದ್ದ ಸುದ್ದಿಯ ಪ್ರಕಾರ, ಮದುವೆ ದಿನಾಂಕ ಮುಂದೂಡಲ್ಪಟ್ಟಿದೆ ಎಂಬುದಾಗಿತ್ತು. ಜೊತೆಗೆ, ಲಂಡನ್ ಮದುವೆಯ ವೇದಿಕೆ ಎಂಬುದಾಗಿತ್ತು.

ಆದರೆ ಈಗ, ಅದೆಲ್ಲವೂ ಸುಳ್ಳು ಎನ್ನಲಾಗಿದೆ. ನಿನ್ನೆ ಮಾಧ್ಯಮಗಳಲ್ಲಿ ಬಂದಿದ್ದ ಸುದ್ದಿಯನ್ನು ನೋಡಿ ಅದಕ್ಕೆ ಪ್ರತಿಕ್ರಿಯೆ ನೀಡಿರುವ ಶರ್ಮಿಳಾ ಠಾಗೋರ್, "ನಾನು ಈ ವಿಷಯದಲ್ಲಿ ಮಾಧ್ಯಮವನ್ನು ದಾರಿ ತಪ್ಪಿಸುತ್ತಿರವ ಸೈಫ್ ಅಲಿಗೆ ಎಚ್ಚರಿಕೆ ಕೊಡುತ್ತೇನೆ. ಮದುವೆ ದಿನಾಂಕ ಈ ಮೊದಲು ಹೇಳಿದಂತೆ ಅಕ್ಟೋಬರ್ 16. ಮದುವೆ ಭಾರತದಲ್ಲೇ ನಡೆಯಲಿದೆ. ಮುಂಬೈ ಅಥವಾ ಪಟೌಡಿ ಮದುವೆ ವೇದಿಕೆಯ ಸ್ಥಳವಾಗಲಿದೆ" ಎಂದು ಖಾತ್ರಿ ಪಡಿಸಿದ್ದಾರೆ.

"ಸೈಫ್ ಮಿಯಾ ಈ ಗ್ರಹದಲ್ಲೇ ಅತ್ಯಂತ ಬಿಜಿಯಾಗಿರುವ ಮನುಷ್ಯ. ಆತ ಮದುವೆ ಪಟೌಡಿಯಲ್ಲೇ ನಡೆಯಲಿ ಎಂದು ಇಷ್ಟಪಟ್ಟಿದ್ದಾನೆ. ಆದರೆ ಕರೀನಾ ಪೋಷಕರು ಮದುವೆಯನ್ನು ಮುಂಬೈನಲ್ಲೇ ಮಾಡಲು ಇಷ್ಟಪಡುತ್ತಿದ್ದಾರೆ. ಕರೀನಾ ಪೋಷಕರೇ ಈ ಮದುವೆಯ ಸ್ಥಳವನ್ನು ನಿರ್ಧರಿಸಲಿದ್ದಾರೆ.

ಸಿದ್ಧತೆಯೆಲ್ಲವೂ ಅಂದುಕೊಂಡಂತೆ ಚೆನ್ನಾಗಿಯೇ ನಡೆಯುತ್ತಿದೆ. ಕರೀನಾ ರಾಣಿಯಂತೆ ಪೋಷಾಕು ಧರಸಿಲಿದ್ದಾಳೆ. ನನ್ನ ಆಭರಣಗಳನ್ನೇ ಧರಿಸಲಿದ್ದಾಳೆ. ಈಗಾಗಲೇ ಮಾಡಿರುವ ಮುಗಿಸಿರುವ ಕೆಲಸಗಳಲ್ಲದೇ ಇನ್ನೂ ಸಾಕಷ್ಟು ಕೆಲಸಗಳು ಬಾಕಿ ಇವೆ. ಅವುಗಳನ್ನೆಲ್ಲಾ ಪ್ಲಾನ್ ಪ್ರಕಾರ ಒಂದಾದಮೇಲೆ ಇನ್ನೊಂದರಂತೆ ಮಾಡಲಾಗುವುದು" ಎಂದಿದ್ದಾರೆ.

ಒಟ್ಟಿನಲ್ಲಿ ದೊಡ್ಡ ಸೆಲೆಬ್ರಿಟಿ ಜೋಡಿಯ ಮದುವೆ ದಿನಾಂಕ ಪಕ್ಕಾ ಆದಂತಾಗಿದೆ. ಶರ್ಮಿಳಾ ಠಾಗೋರ್  ಮಧ್ಯೆ ಪ್ರವೇಶಿಸಿ ಉಂಟಾಗಿದ್ದ ಗೊಂದಲ ನಿವಾರಿಸಿದ್ದಾರೆ. ಬಹುನಿರೀಕ್ಷಿತ ಬಾಲಿವುಡ್ ಮದುವೆಯೊಂದು ಅಕ್ಟೋಬರ್ ನಲ್ಲಿ ನಡೆಯಲಿದೆ. ಸದ್ಯಕ್ಕೆ ಸೈಫ್ ಮತ್ತು ಕರೀನಾ ತಮ್ಮ ತಮ್ಮ ಸಿನಿಮಾಗಳಲ್ಲಿ ಬಿಜಿಯಾಗಿದ್ದರೆ ಅವರ ಕುಟುಂಬಗಳು ಮದುವೆ ಸಿದ್ಧತೆಯಲ್ಲಿ ತೊಡಗಿವೆ. (ಏಜೆನ್ಸೀಸ್)

English summary
Sharmila Tagora has finally given all the rumours a rest by confirming Saif Ali Khan and Kareena Kapoor's wedding date. Sharmila says that the wedding will take place in Mumbai or Pataudi on 16 October 2012 as told before. 
 
Please Wait while comments are loading...