For Quick Alerts
  ALLOW NOTIFICATIONS  
  For Daily Alerts

  ಲಂಡನ್ ನಲ್ಲಿ ಸೈಫ್-ಕರೀನಾ ಕಪೂರ್ ಗಟ್ಟಿಮೇಳ

  |

  ಸೈಫ್ ಅಲಿ ಖಾನ್ ಮತ್ತು ಕರೀನಾ ಕಪೂರ್ ಮದುವೆ ದಿನಾಂಕ ಮಾತ್ರವಲ್ಲ, ಸ್ಥಳವೂ ಬದಲಾವಣೆಯಾಗಿದೆ. ಈ ಮೊದಲು ಭಾರತದಲ್ಲಿಯೇ ಎನ್ನಲಾಗಿದ್ದ ಮದುವೆ ಈಗ 'ಲಂಡನ್'ನಲ್ಲಿ ನಡೆಯಲಿದೆ ಎನ್ನಲಾಗುತ್ತಿದೆ. ಅಷ್ಟೇ ಅಲ್ಲ, ಈ ಮೊದಲು ಬರುವ ಅಕ್ಟೋಬರ್ 16, 2012 ರಂದು ಮದುವೆ ದಿನಾಂಕ ನಿಗದಿಯಾಗಿತ್ತು. ಅದನ್ನು ಸ್ವತಃ ಸೈಫ್ ಅಲಿ ಖಾನ್ ಈಗ ಅಲ್ಲಗಳೆದಿದ್ದಾರೆ.

  ಶರ್ಮಿಳಾ ಠಾಗೋರ್ ಈ ಮೊದಲು ಮದುವೆ ದಿನಾಂಕ ಅಕ್ಟೋಬರ್ 16 (16 ಅಕ್ಟೋಬರ್ 2012) ಎಂದು ಮಾಧ್ಯಮಕ್ಕೆ ತಿಳಿಸಿದ್ದರು. ಆದರೆ ಇದೀಗ ಸ್ವತಃ ಮದುಮಗ ಸೈಫ್, ಈ ವಿಷಯವನ್ನು ಅಲ್ಲಗಳೆದು ಇನ್ನೂ ಮದುವೆ ದಿನಾಂಕ ಪಕ್ಕಾ ಆಗಿಲ್ಲ" ಎಂದಿದ್ದಾರೆ. ಈಗ ಯಾವಾಗಲೇ ಮದುವೆ ಎನ್ನುವಂತಾಗಿದೆ.

  ಸುದ್ದಿ ಮಾಧ್ಯಮಗಳಿಗೆ ಬಂದ ಮಾಹಿತಿ ಪ್ರಕಾರ ಈ ಮೊದಲು ಸ್ವದೇಶದಲ್ಲೇ ನಿಶ್ಚಯವಾಗಿದ್ದ ಮದುವೆ ಇದೀಗ ಲಂಡನ್ ವೇದಿಕೆಗೆ ಬದಲಾಗಿದ್ದರ ಹಿಂದೆ ಬಲವಾದ ಕಾರಣವಿದೆ. ಸೆಲೆಬ್ರೆಟಿಗಳ ಮದುವೆ ಎಂದರೆ ಮುಗಿಬೀಳುವ ಮಾಧ್ಯಮದ ಮಂದಿಯನ್ನು ದೂರವಿಡುವ ಸಲುವಾಗಿಯೇ ಈ ಬದಲಾವಣೆ ಮಾಡಲಾಗಿದೆ.

  ಲಂಡನ್ನಿನಲ್ಲಿ ಮದುವೆ ಮಾಡಿಕೊಳ್ಳಲು ನಿರ್ಧರಿಸಿದ್ದಾರೆ ಕರೀನಾ ಹಾಗೂ ಸೈಫ್. ಈ ಬಗ್ಗೆ ಪಟೌಡಿ ಕುಟುಂಬ ಸದ್ಯದಲ್ಲೇ ಅಂದರೆ ಮುಂದಿನ ವಾರ ಭೂಪಾಲ್ ಗೆ ತೆರಳಲಿದೆ. ಅಲ್ಲಿ ಮಾತುಕತೆ ನಡೆದ ನಂತರವಷ್ಟೇ ಮದುವೆಯ ದಿನಾಂಕ, ವೇದಿಕೆ ಹಾಗೂ ಮಿಕ್ಕ ಎಲ್ಲಾ ವಿಷಯಗಳು ಫೈನಲ್ ಆಗಲಿವೆ ಎನ್ನಲಾಗುತ್ತಿದೆ.

  ಈ ಎಲ್ಲಾ ಅಂತೆ-ಕಂತೆಗಳು, ಗೊಂದಲಗಳನ್ನು ನೋಡಿದರೆ ಸದ್ಯದಲ್ಲೇ ಈ ಎರಡೂ ಸೆಲೆಬ್ರೆಟಿಗಳ ಕುಟಂಬದವರು ಅರ್ಜೆಂಟ್ ಕುಳಿತು ಮಾತುಕತೆ ನಡೆಸುವುದು ಒಳ್ಳೆಯದು ಎನ್ನದೇ ವಿಧಿಯಲ್ಲ. ಏಕೆಂದರೆ, ಮದುವೆಯ ಬಗ್ಗೆ ಒಬ್ಬೊಬ್ಬರು ಒಂದೊಂದು ಹೇಳಿಕೆ ನೀಡಿ ಸುದ್ದಿ ಮಾಧ್ಯಮವನ್ನು ದಾರಿ ತಪ್ಪಿಸುವುದಕ್ಕಿಂತ ಎಲ್ಲರಿಂದಲೂ ಒಂದೇ ಹೇಳಿಕೆ ಬರುವಂತೆ ಮಾಡಿದರೆ ಎಲ್ಲರಿಗೂ ಒಳಿತು. (ಏಜೆನ್ಸೀಸ್)

  English summary
  Rumour has it that Saif Ali Khan will marry his beloved Kareena Kapoor in London as Saif wants a quite wedding away from media.
 

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X