»   » ಛೋಟೆ ನವಾಬ ಸೈಫ್ ಬುಲೆಟ್ ರಾಜ ಟ್ರೈಲರ್

ಛೋಟೆ ನವಾಬ ಸೈಫ್ ಬುಲೆಟ್ ರಾಜ ಟ್ರೈಲರ್

By ಜೇಮ್ಸ್ ಮಾರ್ಟಿನ್
Subscribe to Filmibeat Kannada
For Quick Alerts
ALLOW NOTIFICATIONS
For Daily Alerts

  ಛೋಟೆ ನವಾಬ ಸೈಫ್ ಅಲಿ ಖಾನ್ ಇಮೇಜ್ ಬದಲಾವಣೆ ತರಲಿದೆ ಎಂದೇ ಜನಪ್ರಿಯಗೊಂಡಿರುವ 'ಬುಲೆಟ್ ರಾಜ' ಚಿತ್ರದ ಟ್ರೈಲರ್ ಬಿಡುಗಡೆಗೊಂಡಿದೆ. ಸೋನಾಕ್ಷಿ ಸಿನ್ಹಾ ಜತೆ ಹೊಸ ಲುಕ್ ನಲ್ಲಿ ಕಾಣಿಸಿಕೊಂಡಿರುವ ಸೈಫ್ ಚಿತ್ರರಂಗದಲ್ಲಿ ಹೊಸ ಆಧ್ಯಾಯ ಶುರು ಮಾಡಿಕೊಂಡಿದ್ದಾರೆ.

  ಓಂಕಾರ ಚಿತ್ರದ ರೀತಿ ಬುಲೆಟ್ ರಾಜದಲ್ಲೂ ಸೈಫ್ ಗೆ ವಿಭಿನ್ನ ಪಾತ್ರವಿದೆಯಂತೆ. ನಗರವಾಸಿ ಯುವಕನ ಲುಕ್ ನಲ್ಲೆ ಕಾಣುತ್ತಿದ್ದ ಸೈಫ್ ಅವರಿಗೆ ಹೊಸ ಲುಕ್, ವಿಭಿನ್ನ ಸೃಷ್ಟಿಸಿದ್ದು ರಾಷ್ಟ್ರೀಯ ಪ್ರಶಸ್ತಿ ವಿಜೇತ ನಿರ್ದೇಶಕ ತಿಗ್ಮಂಶು ಧೂಲಿಯಾ.

  ಬಹುಮುಖ ತಿಗ್ಮಂಶು ಅವರ ಚಿತ್ರ ಎಂದ ಮೇಲೆ ಅಭಿಮಾನಿಗಳು ಬುಲೆಟ್ ರಾಜ ಚಿತ್ರಕ್ಕಾಗಿ ತುಂಬಾ ಕಾತುರದಿಂದ ಕಾದಿದ್ದಾರೆ. ಗೂಂಡಾರಾಜ್ ದೇಸಿ ರೌಡಿಯಂತೆ ಬುಲೆಟ್ ನಲ್ಲಿ ಸುತ್ತಾಡುತ್ತಾ ಖಳರನ್ನು ಹೊಡೆಯುವ ದೃಶ್ಯಗಳು ಸೈಫ್ ಗೂ ಮೆಚ್ಚುಗೆಯಾಗಿದೆಯಂತೆ. ಓಂಕಾರದ 'ಲಂಗ್ಡಾ ತ್ಯಾಗಿ' ಪಾತ್ರವೇ ಒಮ್ಮೆ ಕಣ್ಮುಂದೆ ಸುಳಿದಾಡಿತಂತೆ.

  ಬಾಲಿವುಡ್ ನ ಸದ್ಯದ ಹಾಟ್ ತಾರೆ ಸೋನಾಕ್ಷಿ ಜತೆ ಸೈಫ್ ರೋಮ್ಯಾನ್ಸ್, ಸೈಫ್ ಸಾಹಸ ದೃಶ್ಯಗಳು, ಪೊಲೀಸ್ ಅಧಿಕಾರಿಯಾಗಿ ವಿದ್ಯುತ್ ಜಮ್ವಾಲ್ ನಟನೆ ಎಲ್ಲವೂ ಟ್ರೈಲರ್ ನಲ್ಲಿ ಅಡಕವಾಗಿದೆ. ಬೆಂಗಾಲ ಭಾಗದ ಕಥೆಯುಳ್ಳ ಬುಲೆಟ್ ರಾಜ ಬಗ್ಗೆ ಮತ್ತಷ್ಟು ಮಾಹಿತಿ ಫಸ್ಟ್ ಲುಕ್ ಇಲ್ಲಿದೆ ನೋಡಿ...

  ಚಿತ್ರ ಯಾವಾಗ ರಿಲೀಸ್

  ತಿಗ್ಮಂಷು ಅವರ ಬುಲೆಟ್ ರಾಜ ಚಿತ್ರದ ಫಸ್ಟ್ ಲುಕ್ ಇತ್ತೀಚೆಗೆ ರಿಲೀಸ್ ಆಗಿತ್ತು. ಭೂಗತ ಜಗತ್ತಿನ ಕಥೆ ಗ್ರಾಮೀಣ ಬದುಕಿನ ಝಲಕ್ ವುಳ್ಳ ಚಿತ್ರದ ಪೋಸ್ಟರ್ ನೋಡಿ ಅಭಿಮಾನಿಗಳು ಥ್ರಿಲ್ ಆಗಿದ್ದರು. ಸದ್ಯದ ಮಾಹಿತಿಯಂತೆ ಚಿತ್ರ ನವೆಂಬರ್ 29,2013ರಂದು ಬಿಡುಗಡೆಯಾಗುವುದು ಖಚಿತವಾಗಿದೆ.

  ತಿಗ್ಮಂಷು ಬಗ್ಗೆ

  ದಿಲ್ ಸೆ ಚಿತ್ರಕ್ಕೆ ಸ್ಕ್ರಿಪ್ಟ್ ಬರೆದ ತಿಗ್ಮಂಷು ನಟ, ನಿರ್ಮಾಪಕ, ನಿರ್ದೇಶಕ, ಸಾಹಿತಿಯಾಗಿ ಹೆಸರುವಾಸಿ. ಅನುರಾಗ್ ಕಶ್ಯಪ್ ಅವರ ಗ್ಯಾಂಗ್ ಆಫ್ ವಸ್ಸೆಪುರ್ ಚಿತ್ರದಲ್ಲಿ ರಾಮಧೀರ್ ಸಿಂಗ್ ಪಾತ್ರದಲ್ಲಿ ತಿಗ್ಮಂಷು ಉತ್ತಮ ಅಭಿನಯ ನೀಡಿದ್ದಾರೆ.

  ಇರ್ಫಾನ್ ಖಾನ್ ಅಭಿನಯದ ಭಾರತೀಯ ಅಥ್ಲೀಟ್ ಬಗ್ಗೆ ಪಾನ್ ಸಿಂಗ್ ತೋಮರ್ ಚಿತ್ರ ನಿರ್ದೆಶಿಸಿದ ತಿಗ್ಮಂಷು ರಾಷ್ಟ್ರಪ್ರಶಸ್ತಿ ಗಳಿಸಿದರು. ಸಾಹೇಬ್ ಬಿವಿ ಔರ್ ಗ್ಯಾಂಗ್ ಸ್ಟರ್ ಎರಡು ಭಾಗ ಕೂಡಾ ಜನಪ್ರಿಯತೆ ಗಳಿಸಿದೆ.

  ಕಿರುತೆರೆಯಲ್ಲಿ ಜೀ ಟಿವಿಯ ನಾಯ ದೌರ್, ಸ್ಟಾರ್ ಪ್ಲಸ್ ಮುಸಾಫೀರ್, ಫುರ್ಸತ್ ಮೇ ಮುಂತಾದ ಸರಣಿಗಳನ್ನು ನಿರ್ದೇಶಿಸಿದ ತಿಗ್ಮಂಷು ಹಿಂದಿ ಚಿತ್ರರಂಗದ ಉತ್ತಮ ಪ್ರತಿಭೆ.

  ಸೈಫ್- ಸೋನಾಕ್ಷಿ ಜೋಡಿ

  ದಬ್ಬಾಂಗ್ ಹುಡುಗಿ ಸೋನಾಕ್ಷಿ ಸಿನ್ಹಾ ಸದ್ಯಕ್ಕೆ ಬಾಲಿವುಡ್ ನ ಬಹುಬೇಡಿಕೆ ನಟಿಯಾಗಿದ್ದಾಳೆ. ಸೈಫ್ ಮಾರುಕಟ್ಟೆ ಮತ್ತೆ ಆರಂಭವಾಗಬೇಕಿದೆ. ಆದರೆ, ಈ ಚಿತ್ರ ಆಫರ್ ಬಂದಾಗ ಸೈಫ್ ಜತೆ ನಟಿಸಲು ತಕ್ಷಣವೇ ಒಪ್ಪಿಕೊಂಡಳಂತೆ.

  2012ರ ನವೆಂಬರ್ ನಲ್ಲಿ ಚಿತ್ರೀಕರಣ ಆರಂಭಿಸಿದ ಬುಲೆಟ್ ರಾಜ ಬಹುತೇಕ ಲಖ್ನೋ ಹಾಗೂ ಸುತ್ತಮುತ್ತ್ತಲಿನಲ್ಲಿ ಶೂಟಿಂಗ್ ಕಂಡಿದೆ.

  ಬ್ಯಾಡ್ ಮ್ಯಾನ್ ಬ್ಯಾಕ್

  ಬಾಲಿವುಡ್ ನ ಹೆಸರಾಂತ ಖಳನಟ ಗುಲ್ಶನ್ ಗ್ರೋವರ್ ಒಂದು ಕಾಲದಲ್ಲಿ ರೇಪ್ ಸೀನ್ ಸ್ಪೆಷಲಿಸ್ಟ್ ಎಂದೇ ಕುಖ್ಯಾತಿ ಗಳಿಸಿದ್ದ ಗುಲ್ಶನ್ ಗ್ರೋವರ್ ಈ ಚಿತ್ರದಲ್ಲಿ ಪ್ರಮುಖ ಖಳನಾಗಿ ಕಾಣಿಸಿಕೊಳ್ಳುತ್ತಿದ್ದಾರೆ.

  ರವಿ ಕಿಶನ್ ಹಾಗೂ ಸಾಹಸ ಕಲಾವಿದ ವಿದ್ಯುತ್ ಪಾತ್ರಕ್ಕೆ ತುಂಬಾ ಸ್ಕೋಪ್ ಇದೆಯಂತೆ. ಎಲ್ಲಾ ಪುರುಷ ಪಾತ್ರಧಾರಿಗಳಿಗೆ ಮೀಸೆ ಇರಲಿದೆಯಂತೆ. ಜಿಮ್ಮಿ ಹಾಗೂ ಸೈಫ್ ಜೋಡಿ ಅಭಿಮಾನಿಗಳನ್ನು ರಂಜಿಸಲಿದೆಯಂತೆ.

  ಚಿತ್ರದ ಸಾಹಸ

  ಚಿತ್ರದಲ್ಲಿ ಸಾಹಸ ಹಾಗೂ ಡೈಲಾಗ್ ಪ್ರಮುಖವಾಗಿ ಎಲ್ಲರನ್ನು ಸೆಳೆಯಲಿದೆ.
  Aayenge toh garmi badjayenge, Auratho ki respect karthe hain ಮುಂತಾದ ಡೈಲಾಗ್ ಗಳು ಪೋಸ್ಟರ್ ಹಾಗೂ ಟ್ರೇಲರ್ ನಲ್ಲಿ ಕಾಣಿಸಿಕೊಂಡಿದೆ.

  ಸೆಟ್ ನಲ್ಲಿ

  ಚಿತ್ರೀಕರಣದ ವೇಳೆ ಸೋನಾಕ್ಷಿ ಹಾಗೂ ಸೈಫ್ ರಸಗಳಿಗೆ

  ಚಿತ್ರದ ಅಧಿಕೃತ ಟ್ರೈಲರ್

  ಸೈಫ್ ಅಲಿಖಾನ್, ಸೋನಾಕ್ಷಿ ಸಿನ್ಹಾ, ಚಂಕಿ ಪಾಂಡೆ, ಜಿಮ್ಮಿ ಶೆರ್ಗಿಲ್, ಗುಲ್ಶನ್ ಗ್ರೋವರ್, ರವಿ ಕಿಶನ್, ವಿದ್ಯುತ್ ಜಮ್ವಾಲ್ ಪ್ರಮುಖ ತಾರಾಗಣವಿರುವ ತಿಗ್ಮಂಷು ಧೂಲಿಯಾ ನಿರ್ದೇಶನದ ಬುಲೆಟ್ ರಾಜ ಚಿತ್ರದ ಟ್ರೈಲರ್ ನೋಡಿ

  English summary
  Filmmaker Tigmanshu Dhulia is back with his most-awaited flick of the year. Dhulia's most-talked about movie Bullet Raja's official trailer, that got released today September 30, 2013, introduces us to the rugged Saif Ali Khan, who'll be seen high on action in the trailer.

  Kannada Photos

  Go to : More Photos

  ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more