For Quick Alerts
  ALLOW NOTIFICATIONS  
  For Daily Alerts

  ಪ್ರಭಾಸ್ ಎದುರು ವಿಲನ್: ರಾವಣ ಪಾತ್ರದ ಬಗ್ಗೆ ಸೈಫ್ ಅಭಿಪ್ರಾಯ

  |

  ಪ್ರಭಾಸ್ ನಟಿಸುತ್ತಿರುವ 'ಆದಿಪುರುಷ್' ಸಿನಿಮಾ ಭಾರತ ಸಿನಿಮಾ ರಂಗದ ಗಮನ ಸೆಳೆದಿದೆ. ರಾಮಾಯಣ ಆಧರಿತ ಸಿನಿಮಾ ಎಂಬುದು ಒಂದೆಡೆಯಾದರೆ, ಇದು ಭಾರಿ ದೊಡ್ಡ ಬಜೆಟ್‌ನ ಸಿನಿಮಾ.

  ಆದಿಪುರುಷ್ ಸಿನಿಮಾದಲ್ಲಿ ಪ್ರಭಾಸ್ ರಾಮನ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಇದೇ ಸಿನಿಮಾದಲ್ಲಿ ರಾವಣನ ಪಾತ್ರದಲ್ಲಿ ನಟಿಸುತ್ತಿದ್ದಾರೆ, ಬಾಲಿವುಡ್‌ ಖ್ಯಾತ ನಟ ಸೈಫ್ ಅಲಿ ಖಾನ್.

  'ಅದಿಪುರುಷ್' ಸಿನಿಮಾ; ಪ್ರಭಾಸ್ ಸಹೋದರ ಲಕ್ಷ್ಮಣನ ಪಾತ್ರಕ್ಕೆ ಬಾಲಿವುಡ್ ನಟನ ಎಂಟ್ರಿ'ಅದಿಪುರುಷ್' ಸಿನಿಮಾ; ಪ್ರಭಾಸ್ ಸಹೋದರ ಲಕ್ಷ್ಮಣನ ಪಾತ್ರಕ್ಕೆ ಬಾಲಿವುಡ್ ನಟನ ಎಂಟ್ರಿ

  ಇದೇ ಮೊದಲ ಬಾರಿಗೆ ಸೈಫ್ ಅಲಿ ಖಾನ್, ಆದಿಪುರುಷ್ ಸಿನಿಮಾದ ಬಗ್ಗೆ ಬಹಿರಂಗವಾಗಿ ಮಾತನಾಡಿದ್ದಾರೆ. ಸಿನಿಮಾದ ಪಾತ್ರ, ರಾವಣನ ಗುಣ, ಪ್ರಭಾಸ್ ಎದುರು ನಟಿಸುತ್ತಿರುವುದು ಹಾಗೂ ಸಿನಿಮಾದ ನಿರ್ದೇಶಕರ ಬಗ್ಗೆ ಆಂಗ್ಲ ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ ನಟ ಸೈಫ್ ಅಲಿ ಖಾನ್.

  ರಾವಣನ ಪಾತ್ರ ನಿರ್ವಹಿಸಲು ಉತ್ಸುಕನಾಗಿದ್ದೇನೆ: ಸೈಫ್

  ರಾವಣನ ಪಾತ್ರ ನಿರ್ವಹಿಸಲು ಉತ್ಸುಕನಾಗಿದ್ದೇನೆ: ಸೈಫ್

  ರಾವಣನ ಪಾತ್ರ ನಿರ್ವಹಿಸಲು ಬಹಳ ಉತ್ಸುಕನಾಗಿದ್ದೇನೆ. ವಿಲನ್ ಎಂದು ಹೇಳುವುದಕ್ಕಿಂತಲೂ ರಾವಣ ತಾನು ನಂಬಿದ್ದಕ್ಕಾಗಿ ಹೋರಾಡಿದ. ರಾವಣನನ್ನು ವಿಲನ್ ಆಗಿ ತೋರಿಸುವ ಬದಲಿಗೆ ಆತನ ಒಟ್ಟಾರೆ ಗುಣಧರ್ಮವನ್ನು ವಿಶ್ಲೇಷಣೆಗೆ ಇಡಲಿದ್ದಾರೆ ನಿರ್ದೇಶಕ ಎಂದಿದ್ದಾರೆ ಸೈಫ್ ಅಲಿ ಖಾನ್.

  ರಾವಣನ ಎರಡು ಮುಖದ ದರ್ಶನವಾಗಲಿದೆ: ಸೈಫ್

  ರಾವಣನ ಎರಡು ಮುಖದ ದರ್ಶನವಾಗಲಿದೆ: ಸೈಫ್

  ರಾವಣನ ಎಲ್ಲಾ ಕಾರ್ಯಗಳಿಗೆ ನಿರ್ದಿಷ್ಟ ಕಾರಣ ಇತ್ತು, ಆತ ಸೀತೆಯನ್ನು ಹೊತ್ತೊಯ್ದಿದ್ದಕ್ಕೆ ಕಾರಣವಿತ್ತು, ರಾಮನೊಂದಿಗೆ ಹೋರಾಟಕ್ಕೆ ಆತನ ತಂಗಿಗೆ ಲಕ್ಷ್ಮಣನಿಂದ ಆಗಿದ್ದ ಅವಮಾನ ಕಾರಣವಾಗಿತ್ತು. ರಾವಣನ ಎರಡು ಮುಖವನ್ನು ಸಿನಿಮಾದಲ್ಲಿ ತೋರಿಸಲಾಗುತ್ತದೆ ಎಂದಿದ್ದಾರೆ ಸೈಫ್ ಅಲಿ ಖಾನ್.

  ಪ್ರಭಾಸ್‌ ಎದುರು ಕತ್ತಿ ಬೀಸಲು ಉತ್ಸುಕನಾಗಿದ್ದೇನೆ: ಸೈಫ್

  ಪ್ರಭಾಸ್‌ ಎದುರು ಕತ್ತಿ ಬೀಸಲು ಉತ್ಸುಕನಾಗಿದ್ದೇನೆ: ಸೈಫ್

  ಪ್ರಭಾಸ್ ಎದುರು ಕತ್ತಿ ಬೀಸಲು ಸಹ ಉತ್ಸುಕನಾಗಿದ್ದೇನೆ ಎಂದಿರುವ ಸೈಫ್ ಅಲಿ ಖಾನ್. ಸಿನಿಮಾದ ನಿರ್ದೇಶಕರಾದ ಓಮ್ ರಾವತ್ ಅವರ ಪ್ರತಿಭೆ ಮೇಲೆ ನನಗೆ ಅಪಾರ ನಂಬಿಕೆ ಇದೆ. ಈ ಹಿಂದೆ ಅವರೊಟ್ಟಿಗೆ ತಾನಾಜಿ ಸಿನಿಮಾದಲ್ಲಿ ನಟಿಸಿದ್ದು, ಅವರ ಪ್ರತಿಭೆಯನ್ನು ಹತ್ತಿರದಿಂದ ಕಂಡು ಬಲ್ಲೆ ಎಂದಿದ್ದಾರೆ.

  Meghana raj ಮನೆಯಲ್ಲಿ ಎಲ್ಲರಿಗೂ Corona ಪಾಸಿಟಿವ್ | Filmibeat Kannada
  ಲಕ್ಷ್ಮಣನ ಪಾತ್ರದಲ್ಲಿ ಯಾರು?

  ಲಕ್ಷ್ಮಣನ ಪಾತ್ರದಲ್ಲಿ ಯಾರು?

  ಪ್ರಭಾಸ್ ರಾಮನಾಗಿ ನಟಿಸುತ್ತಿರುವ ಈ ಸಿನಿಮಾದಲ್ಲಿ ಸೈಫ್ ರಾವಣ, ಲಕ್ಷ್ಮಣನಾಗಿ ಸನ್ನಿ ಸಿಂಗ್ ನಟಿಸಲಿದ್ದಾರೆ. ಇನ್ನು ಸೀತೆಯ ಆಯ್ಕೆ ಬಗ್ಗೆ ಅಧಿಕೃತ ಘೋಷಣೆ ಇನ್ನೂ ಆಗಿಲ್ಲ. ಆದರೆ ಕೃತಿ ಸೆನನ್ ಅಥವಾ ಕಿಯಾರಾ ಅಡ್ವಾಣಿ ಸೀತಾ ಆಗಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ.

  English summary
  Saif Ali Khan talks about his Ravan character in Adipurush movie. He is playing antagonist against Prabhas.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X