For Quick Alerts
  ALLOW NOTIFICATIONS  
  For Daily Alerts

  ಸೈಫ್, ಕರೀನಾ ಮದುವೆಗೆ ಇಸ್ಲಾಂ ಸಂಸ್ಥೆ ತೀವ್ರ ಆಕ್ಷೇಪ

  By Rajendra
  |

  ಬಾಲಿವುಡ್ ತಾರೆಗಳಾದ ಕರೀನಾ ಕಪೂರ್ ಹಾಗೂ ಸೈಫ್ ಆಲಿ ಖಾನ್ ಅವರ ಮದುವೆ ಇಸ್ಲಾಂ ಧರ್ಮದ ಪ್ರಕಾರ ನಡೆದಿಲ್ಲ. ಇವರಿಬ್ಬರ ಮದುವೆ ಇಸ್ಲಾಂ ವಿರೋಧಿ ಎಂದು ಇಸ್ಲಾಂನ ಪ್ರಮುಖ ಧಾರ್ಮಿಕ ಸಂಸ್ಥೆ ದಾರುಲ್ ಉಲೂಮ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.

  ವಧು ಕರೀನಾ ಕಪೂರ್ ಅವರನ್ನು ಇಸ್ಲಾಂ ಧರ್ಮಕ್ಕೆ ಮತಾಂತರ ಮಾಡದೇನೆ ಈ ಮದುವೆ ಮಾಡಿರುವುದು ಇಸ್ಲಾಂ ವಿರೋಧಿ ಎಂದು ದಾರುಲ್ ಉಲೂಮ್ ದೇವ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.

  "ಮದುವೆಗೂ ಮುನ್ನ ಕರೀನಾ ಅವರು ಇಸ್ಲಾಂ ಧರ್ಮಕ್ಕೆ ಮತಾಂತರವಾಗಿಲ್ಲ. ಹಾಗಾಗಿ ಈ ಮದುವೆಯನ್ನು ಇಸ್ಲಾಂ ಪುರಸ್ಕರಿಸುವುದಿಲ್ಲ" ಎಂದು ಧಾರ್ಮಿಕ ಸಂಸ್ಥೆ ತಿಳಿಸಿದೆ. "ಮುಸ್ಲಿಂ ಕಾನೂನಿನ ಪ್ರಕಾರ ವಧು ಇಸ್ಲಾಂ ಧರ್ಮಕ್ಕೆ ಮತಾಂತರವಾಗದಿದ್ದರೆ ಅದು ಇಸ್ಲಾಂ ವಿರೋಧಿಗೂ ಕಾರಣವಾಗುತ್ತದೆ" ಎಂದಿದ್ದಾರೆ ಸಂಸ್ಥೆಯ ಹಿರಿಯ ಸದಸ್ಯ ಹಬೀಬೂರ್ ರೆಹಮಾನ್.

  ಅಕ್ಟೋಬರ್ 16ರಂದು ಸೈಫ್ ಹಾಗೂ ಕರೀನಾ ರಿಜಿಸ್ಟರ್ಡ್ದ್ ಮದುವೆಯಾಗಿದ್ದರು. ಅದಾದ ಬಳಿಕ ಇವರಿಬ್ಬರೂ ಉಂಗುರ ಬದಲಾಯಿಸಿಕೊಳ್ಳುವ ಮೂಲಕ ಕ್ರೈಸ್ತ ಧರ್ಮದಂತೆ ಮದುವೆಯಾದರು. ಆದರೆ ಸೈಫ್ ಇಸ್ಲಾಂ ಧರ್ಮಕ್ಕೆ ಸೇರಿದವರಾದ ಕಾರಣ ಅವರ ಮದುವೆ ಇಸ್ಲಾಂ ಧರ್ಮದಂತೆ ನೆರವೇರಬೇಕಾಗಿತ್ತು ಎಂಬುದು ಧಾರ್ಮಿಕ ಸಂಸ್ಥೆಯ ಅಭಿಪ್ರಾಯ.

  ಇಸ್ಲಾಂ ಧರ್ಮದಂತೆ ಇವರಿಬ್ಬರ ನಿಖಾಹ್ ನಡೆಯಬೇಕಿತ್ತು. ಆದರೆ ಕರೀನಾ ಅವರ ತಾಯಿ ಬಬಿತಾ ಅವರು ಕ್ರೈಸ್ತ ಧರ್ಮವನ್ನು ಪಾಲಿಸುತ್ತಿದ್ದು ಅವರ ಆಶಯದಂತೆ ಕ್ರೈಸ್ತ ಧರ್ಮದ ಪ್ರಕಾರ ಇವರಿಬ್ಬರೂ ಸತಿಪತಿಯರಾಗಿದ್ದಾರೆ. ಈಗ ಇವರಿಬ್ಬರ ಮದುವೆಗೆ ದರೂಲ್ ಉಲೂಮ್ ಆಕ್ಷೇಪ ವ್ಯಕ್ತಪಡಿಸಿರುವುದು ಚರ್ಚೆಗೆ ಗ್ರಾಸವಾಗಿದೆ. (ಏಜೆನ್ಸೀಸ್)

  English summary
  The Islamic seminary Darul Uloom Deoband on Thursday termed as “anti-Islam” the wedlock between film actors Kareena Kapoor and Saif Ali Khan, saying the bride did not convert to Islam before the marriage.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X