Just In
Don't Miss!
- News
ಕೊರೊನಾ ಭೀತಿ: ಅಯ್ಯೋ.. ಭಾರತದಲ್ಲಿ ಹೀಗ್ಯಾಕಾಯ್ತು ಪರಿಸ್ಥಿತಿ!?
- Education
GESCOM Recruitment 2021: ಅಪ್ರೆಂಟಿಸ್ ತರಬೇತಿಗೆ ಐಟಿಐ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ
- Finance
ಮಾರ್ಚ್ 2021ರ ಬ್ಯಾಂಕ್ ರಜಾ ದಿನಗಳು: 11 ದಿನಗಳು ಮುಚ್ಚಲ್ಪಡಲಿದೆ!
- Automobiles
ನ್ಯೂ ಜನರೇಷನ್ ಸಫಾರಿ ಎಸ್ಯುವಿ ಕಾರಿನ ವಿತರಣೆಗೆ ಅಧಿಕೃತ ಚಾಲನೆ ನೀಡಿದ ಟಾಟಾ ಮೋಟಾರ್ಸ್
- Lifestyle
ಬುದ್ಧ ಬೌಲ್ ಎಂದರೇನು? ಇದೇಗೆ ಆರೋಗ್ಯಕ್ಕೆ ಪ್ರಯೋಜನಕಾರಿ?
- Sports
ಪಿಚ್ ಚೆನ್ನಾಗಿತ್ತು, ಬ್ಯಾಟಿಂಗ್ ಗುಣಮಟ್ಟ ಚೆನ್ನಾಗಿರಲಿಲ್ಲ: ವಿರಾಟ್ ಕೊಹ್ಲಿ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಮಗನ ಹೆಸರು ಬದಲಿಸುವ ಬಗ್ಗೆ ಕರೀನಾಗೆ ಪತ್ರ ಬರೆದಿದ್ದ ಸೈಫ್ ಅಲಿ ಖಾನ್
ನಟ ಸೈಫ್ ಅಲಿ ಖಾನ್, ಕರೀನಾ ಕಪೂರ್ ದಂಪತಿ ಎರಡು ದಿನಗಳ ಹಿಂದಷ್ಟೆ ತಮ್ಮ ಎರಡನೇ ಮಗುವನ್ನು ಸ್ವಾಗತಿಸಿದ್ದಾರೆ. ಕರೀನಾ ಕಪೂರ್ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.
ಸೈಫ್-ಕರೀನಾ ರ ಮೊದಲ ಮಗು ತೈಮೂರ್ ವಿಷಯದಲ್ಲಿ ಮಾಡಿದ್ದ ತಪ್ಪನ್ನು ಎರಡನೇ ಮಗುವಿನ ವಿಷಯದಲ್ಲಿ ಮಾಡಬಾರದೆಂದು ನಿರ್ಧಾರ ಮಾಡಿದ್ದಾರೆ ಈ ದಂಪತಿ ಎನ್ನಲಾಗುತ್ತಿದೆ.
ಮೊದಲ ಮಗುವಿಗೆ ತೈಮೂರ್ ಎಂದು ಹೆಸರಿಟ್ಟಾಗ ಸೈಫ್-ಕರೀನಾ ವಿರುದ್ಧ ಮೂದಲಿಕೆಗಳ ಸುರಿಮಳೆಯೇ ಆಗಿತ್ತು. ಯಾವ ಮಟ್ಟಕ್ಕೆ ಸಾಮಾಜಿಕ ಜಾಲತಾಣದಲ್ಲಿ ವಿರೋಧ ವ್ಯಕ್ತಪಡಿಸಲಾಗಿತ್ತೆಂದರೆ, ಆ ಮಗುಗೆ ಏನಾದರೂ ಆಗಿಬಿಡಲಿ ಎಂದು ಸಹ ಕೆಲವರು ಕಮೆಂಟ್‌ಗಳನ್ನು ಹಾಕಿದ್ದರು.
ತೈಮೂರ್ ಒಬ್ಬ ದುಷ್ಟ, ರಕ್ತಿಪಿಪಾಸೂ ರಾಜನ ಹೆಸರು. ಆ ದುಷ್ಟ ದೊರೆಯ ಹೆಸರು ಇಟ್ಟಿದ್ದಕ್ಕೆ ಸೈಫ್-ಕರೀನಾ ಗೆ ಭಾರಿ ವಿರೋಧ ವ್ಯಕ್ತವಾಗಿತ್ತು. ಆದರೆ ಈ ವಿರೋಧವನ್ನು ಸಹಿಸದ ಸೈಫ್, ತಮ್ಮ ಮಗುವಿನ ಹೆಸರು ಬದಲಿಸುವ ಬಗ್ಗೆ ಕರೀನಾ ಗೆ ಪತ್ರ ಬರೆದಿದ್ದರಂತೆ.
ತೈಮೂರ್ ಹೆಸರು ಬದಲಾಯಿಸುವ ನಿರ್ಧಾರ ಕರೀನಾ ಗೆ ತಿಳಿಸಿದಾಗ ಅವರು ವಿರೋಧಿಸಿದ್ದರಂತೆ. ಆ ನಂತರ ಅವರ ಪಿಆರ್ ತಂಡ ಇನ್ನೂ ಕೆಲವರು ಹೆಸರು ಬದಲಿಸುವಂತೆ ಮನವಿ ಮಾಡಿದಾಗಲೂ ಕರೀನಾ ಬೇಡವೆಂದರಂತೆ.
ಕೊನೆಗೆ ಸೈಫ್ ಅಲಿ ಖಾನ್ ಪತ್ರವೊಂದನ್ನು ಕರೀನಾ ಗೆ ಬರೆದರಂತೆ. ಆದರೆ ಕೆಲವು ದಿನಗಳ ನಂತರ ಸೈಫ್ ಸಹ ಹೆಸರು ಬದಲಿಸುವುದು ಬೇಡ ಎಂದುಕೊಂಡು ಸುಮ್ಮನಾದರಂತೆ. ಈ ವಿಷಯವನ್ನು ಈ ಹಿಂದೆ ಒಮ್ಮೆ ಸೈಫ್ ಅಲಿ ಖಾನ್ ಮಾಧ್ಯಮಕ್ಕೆ ನೀಡಿದ ಸಂದರ್ಶನವೊಂದರಲ್ಲಿ ಹೇಳಿದ್ದರು.
ಇದೀಗ ಎರಡನೇ ಮಗು ಜನನವಾಗಿದ್ದು, ಈ ಬಾರಿ ಭಾರಿ ಎಚ್ಚರಿಕೆಯಿಂದ ಮಗುವಿಗೆ ಹೆಸರಿಡಲಿದ್ದಾರೆ ಸೈಫ್-ಕರೀನಾ ದಂಪತಿ.