For Quick Alerts
  ALLOW NOTIFICATIONS  
  For Daily Alerts

  'ದಬಾಂಗ್-3' ಮೊದಲ ದಿನದ ಕಲೆಕ್ಷನ್ ಎಷ್ಟು ಗೊತ್ತಾ?

  |
  ನಿರೀಕ್ಷಿತ ಮಟ್ಟ ತಲುಪಲು ವಿಫಲವಾದ ದಬಾಂಗ್-3 | DABANG 3 | FILMIBEAT KANNADA

  ಬಾಲಿವುಡ್ ಬಾಕ್ಸ್ ಆಫೀಸ್ ಸುಲ್ತಾನ್ ಸಲ್ಮಾನ್ ಖಾನ್ ಮತ್ತು ಕಿಚ್ಚ ಸುದೀಪ್ ಅಭಿನಯದ ದಬಾಂಗ್-3 ಸಿನಿಮಾ ನಿನ್ನೆ(ಡಿಸೆಂಬರ್ 20) ದೇಶದಾದ್ಯಂತ ತೆರೆಗೆ ಬಂದಿದೆ. ಸುಮಾರು 2000ಕ್ಕು ಹೆಚ್ಚು ಚಿತ್ರಮಂದಿರಗಳಲ್ಲಿ ದಬಾಂಗ್-3 ತೆರೆಗೆ ಬಂದಿದೆ.

  ವಿಶೇಷ ಅಂದರೆ ಹಿಂದಿ ಮಾತ್ರವಲ್ಲದೆ ದಕ್ಷಿಣ ಭಾರತೀಯ ಭಾಷೆಯಲ್ಲು ತೆರೆಗೆ ಬಂದಿದೆ. ಮೊದಲ ಬಾರಿಗೆ ಸಲ್ಮಾನ್ ಸಿನಿಮಾ ಕನ್ನಡದಲ್ಲೂ ದೊಡ್ಡ ಮಟ್ಟಕ್ಕೆ ರಿಲೀಸ್ ಆಗಿದೆ. ದೇಶದಾದ್ಯಂತ ಅಬ್ಬರಿಸುತ್ತಿರುವ ದಬಾಂಗ್-3 ಸಿನಿಮಾ ಮೊದಲ ದಿನ ಎಷ್ಟು ಬಾಚಿಕೊಂಡಿದೆ ಎನ್ನುವ ಕುತೂಹಲ ಅಭಿಮಾನಿಗಳಲ್ಲಿ ಇತ್ತು. ಸದ್ಯ ಮೊದಲ ದಿನದ ಕಲೆಕ್ಷನ್ ರಿಪೋರ್ಟ್ ಹೊರಬಿದ್ದಿದೆ.

  Dabanng-3: ಕನ್ನಡದಲ್ಲಿ ಮ್ಯಾಜಿಕ್ ಮಾಡಿದ 'ಚುಲ್ ಬುಲ್ ಪಾಂಡೆ'Dabanng-3: ಕನ್ನಡದಲ್ಲಿ ಮ್ಯಾಜಿಕ್ ಮಾಡಿದ 'ಚುಲ್ ಬುಲ್ ಪಾಂಡೆ'

  ಮೊದಲ ದಿನದ ಕಲೆಕ್ಷನ್

  ಮೊದಲ ದಿನದ ಕಲೆಕ್ಷನ್

  ದಬಾಂಗ್-3 ಮೊದಲ ದಿನ 24.50 ಕೋಟಿ ಬಾಚಿಕೊಂಡಿದೆ ಎಂದು ಹೇಳಲಾಗುತ್ತಿದೆ. ಬಾಲಿವುಡ್ ಚಿತ್ರ ವಿಶ್ಲೇಷಕ ತರಣ್ ಆದರ್ಶ್ ಮೊದಲ ದಿನದ ಕಲೆಕ್ಷನ್ ವಿವರವನ್ನು ಬಹಿರಂಗ ಪಡಿಸಿದ್ದಾರೆ. ಸಲ್ಮಾನ್ ಖಾನ್ ಸಿನಿಮಾ ಮೊದಲ ದಿನ 24 ಕೋಟಿ ಗಳಿಕೆ ಮಾಡಿದೆ.

  ನಿರೀಕ್ಷೆ ಮಟ್ಟ ತಲುಪಲು ವಿಫಲ

  ನಿರೀಕ್ಷೆ ಮಟ್ಟ ತಲುಪಲು ವಿಫಲ

  ದಬಾಂಗ್-3 ಸಿನಿಮಾ, ಸಲ್ಮಾನ್ ಖಾನ್ ಹಿಂದಿನ ಸಿನಿಮಾ ಕಲೆಕ್ಷನ್ ಗೆ ಹೋಲಿಕೆ ಮಾಡಿದರೆ ದಬಾಂಗ್-3 ಸಿನಿಮಾ ಕಲೆಕ್ಷನ್ ತೀರ ಕಡಿಮೆಯಾಗಿದೆ. ಈ ವರ್ಷ ರಿಲೀಸ್ ಆದ ಭಾರತ್ ಸಿನಿಮಾ ಮೊದಲ ದಿನ ಬರೋಬ್ಬರಿ 40 ಕೋಟಿ ಬಾಚಿಕೊಂಡಿತ್ತು. ಕಳೆದ ವರ್ಷ ರಿಲೀಸ್ ಆದ ರೇಸ್ ಸಿನಿಮಾ 29.17 ಕೋಟಿ ಬಾಚಿಕೊಂಡರೆ, ಟೈಗರ್ ಜಿಂದಾ ಹೈ ಸಿನಿಮಾ 34 ಕೋಟಿ ದೋಚಿಕೊಂಡಿತ್ತು. ಈ ಎಲ್ಲಾ ಸಿನಿಮಾಗಳಿಗೆ ಹೋಲಿಸಿದರೆ ದಬಾಂಗ್-3 ಸಿನಿಮಾ ಕಲೆಕ್ಷನ್ ಕಡಿಮೆಯಾಗಿದೆ.

  'ದಬಾಂಗ್-3' ಟ್ವಿಟ್ಟರ್ ವಿಮರ್ಶೆ: ಮೊದಲ ಶೋ ನೋಡಿ ಪ್ರೇಕ್ಷಕರು ಹೇಳಿದ್ದೇನು?'ದಬಾಂಗ್-3' ಟ್ವಿಟ್ಟರ್ ವಿಮರ್ಶೆ: ಮೊದಲ ಶೋ ನೋಡಿ ಪ್ರೇಕ್ಷಕರು ಹೇಳಿದ್ದೇನು?

  'ದಬಾಂಗ್-2' 21 ಕೋಟಿ ಬಾಚಿಕೊಂಡಿತ್ತು

  'ದಬಾಂಗ್-2' 21 ಕೋಟಿ ಬಾಚಿಕೊಂಡಿತ್ತು

  7 ವರ್ಷದ ಹಿಂದೆ ರಿಲೀಸ್ ಆಗಿದ್ದ ದಬಾಂಗ್-2 ಸಿನಿಮಾ ಮೊದಲ ದಿನ 21 ಕೋಟಿ ಬಾಚಿಕೊಂಡಿತ್ತು. ಆದರೆ ಮೂರನೆ ಆವೃತ್ತಿಯೂ ಕೂಡ ಹೆಚ್ಚುಕಮ್ಮಿ ಅಷ್ಟೆ ಕಲೆಕ್ಷನ್ ಮಾಡಿದೆ. ಸಲ್ಮಾನ್ ಖಾನ್ ಸಿನಿಮಾಗಳಿಗೆ ಹೋಲಿಸಿದರೆ ದಬಾಂಗ್-3 ಕಲೆಕ್ಷನ್ ತೀರಾ ಕಮ್ಮಿಯಾಗಿದೆ.

  ಪ್ರತಿಭಟನೆಯಿಂದ ಸಿನಿಮಾ ಕಲೆಕ್ಷನ್ ಗೆ ಹೊಡೆತ?

  ಪ್ರತಿಭಟನೆಯಿಂದ ಸಿನಿಮಾ ಕಲೆಕ್ಷನ್ ಗೆ ಹೊಡೆತ?

  ಪೌರತ್ವ ತಿದ್ದುಪಡಿ ಕಾಯಿದೆ ವಿರೋಧಿಸಿ ದೇಶದಾದ್ಯಂತ ಪ್ರತಿಭಟನೆ ಮುಗಿಲು ಮುಟ್ಟಿದೆ. CAA ಮತ್ತು ANR ಗೆ ತೀವ್ರ ವಿರೋಧ ವ್ಯಕ್ತಪಡಿಸಿ ಜನ ಬೀದಿಗಿಳಿದು ಪ್ರತಿಭಟಿಸುತ್ತಿದ್ದಾರೆ. ಸಲ್ಮಾನ್ ಖಾನ್ ದಬಾಂಗ್-3 ಸಿನಿಮಾ ಇದೆ ಸಮಯದಲ್ಲಿ ರಿಲೀಸ್ ಆಗಿರುವುದರಿಂದ ಚಿತ್ರದ ಕಲೆಕ್ಷನ್ ಗೆ ಹೊಡೆತ ಬಿದ್ದಿರಬಹುದು.

  English summary
  Bollywood actor Salman Khan and Sudeep starrer Dabanng-3 First day 24 crore collection.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X