twitter
    For Quick Alerts
    ALLOW NOTIFICATIONS  
    For Daily Alerts

    ಪನ್ವೇಲ್ ಪ್ರಕರಣ: ನೆರೆಯವನ ಆರೋಪಗಳಿಗೆ ಪ್ರತಿಕ್ರಿಯೆ ನೀಡಿದ ಸಲ್ಮಾನ್ ಖಾನ್

    |

    ಸಲ್ಮಾನ್ ಖಾನ್‌ರ ಪನ್ವೇಲ್ ಫಾರಂ ಹೌಸ್ ಬಳಿಯಲ್ಲಿಯೇ ಜಮೀನು ಹೊಂದಿದ್ದ ವ್ಯಕ್ತಿ ಕೇತನ್ ಕಕ್ಕಡ್ ವಿರುದ್ಧ ಸಲ್ಮಾನ್ ಮಾನನಷ್ಟ ಮೊಕದ್ದಮೆ ಹೂಡಿದ್ದು, ಪ್ರಕರಣದ ವಿಚಾರಣೆ ವೇಳೆ ವಕೀಲರ ಮೂಲಕ ಕೇತನ್ ತಮ್ಮ ಬಗ್ಗೆ ಮಾಡಿದ್ದ ಆರೋಪಗಳಿಗೆ ಖಡಕ್ ಎದುರುತ್ತರ ನೀಡಿದ್ದಾರೆ.

    ಯೂಟ್ಯೂಬ್ ಚಾನೆಲ್ ಒಂದರಲ್ಲಿ ಮಾತನಾಡಿದ್ದ ಕೇತನ್ ಕಕ್ಕಡ್, ಸಲ್ಮಾನ್ ಖಾನ್‌ ತಮ್ಮ ಜಮೀನು ಕಬಳಿಸಿದ್ದಾರೆಂದು ಆರೋಪಿಸಿದ್ದರು. ಅದು ಮಾತ್ರವೇ ಅಲ್ಲದೆ ಸಲ್ಮಾನ್‌ರ ಧರ್ಮದ ಬಗ್ಗೆಯೂ ನಿಂದನೆ ಮಾಡಿದ್ದರು. ಸಲ್ಮಾನ್ ವ್ಯಕ್ತಿತ್ವದ ಬಗ್ಗೆಯೂ ಟೀಕೆಗಳನ್ನು ಮಾಡಿದ್ದರು.

    Recommended Video

    ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಹಿಂದಿಕ್ಕಿ ನಂಬರ್ 1 ಪಟ್ಟಕ್ಕೇರಿದ ಜೋಡಿ ಶೆಟ್ರು

    ಈ ಬಗ್ಗೆ ವಕೀಲರ ಮೂಲಕ ನ್ಯಾಯಾಲಯದಲ್ಲಿ ಉತ್ತರಿಸಿದರುವ ಸಲ್ಮಾನ್ ಖಾನ್, ''ಜಮೀನಿನ ವಿಷಯಕ್ಕೆ ನೀವು ನನ್ನ ಧರ್ಮದ ವಿಷಯವನ್ನು ಏಕೆ ಎಳೆದು ತಂದಿರಿ. ಜಮೀನಿನ ವಿಷಯದಲ್ಲಿ ನೀವು ನನ್ನ ವೈಯಕ್ತಿಕ ನಿಂದನೆ, ತೇಜೊವಧೆ ಏಕೆ ಮಾಡಿದಿರಿ?'' ಎಂದು ಪ್ರಶ್ನೆ ಮಾಡಿದ್ದಾರೆ.

    ''ಜಮೀನಿನ ವಿಷಯದಲ್ಲಿ ಧರ್ಮ ಎಳೆದು ತಂದಿದ್ದೇಕೆ?''

    ''ಜಮೀನಿನ ವಿಷಯದಲ್ಲಿ ಧರ್ಮ ಎಳೆದು ತಂದಿದ್ದೇಕೆ?''

    ''ನನ್ನ ತಾಯಿ ಹಿಂದು, ತಂದೆ ಮುಸ್ಲಿಂ. ನನ್ನ ಸಹೋದರರು ಮದುವೆ ಆಗಿರುವುದು ಹಿಂದುಗಳನ್ನು ನಾವು ಮನೆಯಲ್ಲಿ ಎಲ್ಲ ಧರ್ಮಗಳನ್ನು ಪಾಲಿಸುತ್ತೇವೆ. ಎಲ್ಲ ಧರ್ಮದ ಹಬ್ಬಗಳನ್ನು ಆಚರಿಸುತ್ತೇವೆ. ಹೀಗಿರುವಾಗ ಧರ್ಮದ ಕಾರಣಕ್ಕೆ ನನ್ನನ್ನು ನಿಂದಿಸುವ ಅಗತ್ಯವೇನು'' ಎಂದು ಪ್ರಶ್ನೆ ಮಾಡಿದ್ದಾರೆ. ಕಕ್ಕಡ್‌ ಅವರ ಜಮೀನನ್ನು ಅರಣ್ಯ ಇಲಾಖೆ ರದ್ದು ಮಾಡಿದೆಯೇ ಹೊರತು ನಾನಲ್ಲ. ನಾನು ರಾಜಕೀಯದಿಂದ ದೂರ ಇರುವ ವ್ಯಕ್ತಿ. ಕಕ್ಕಡ್ ಮಾಡಿರುವುದು ಸುಳ್ಳು ಆರೋಪ'' ಎಂದು ಸಲ್ಮಾನ್ ಖಾನ್ ಪರವಾಗಿ ವಕೀಲ ಪ್ರದೀಪ್ ಗಂಡೆ ನ್ಯಾಯಾಲಯಕ್ಕೆ ತಿಳಿಸಿದ್ದಾರೆ.

    ಜಮೀನು ಕಬ್ಜಾ ಮಾಡಿದ್ದಾರೆಂದು ಆರೋಪ

    ಜಮೀನು ಕಬ್ಜಾ ಮಾಡಿದ್ದಾರೆಂದು ಆರೋಪ

    ಸಲ್ಮಾನ್ ಖಾನ್‌ರ ಪನ್ವೇಲ್ ಫಾರಂ ಹೌಸ್‌ ಸಮೀಪದಲ್ಲಿ ಜಮೀನು ಹೊಂದಿರುವ ಕೇತನ್ ಕಕ್ಕಡ್, 'ಸಲ್ಮಾನ್ ಖಾನ್ ನನ್ನ ಜಮೀನು ಕಿತ್ತುಕೊಂಡಿದ್ದಾರೆ. ಅವರ ಸೂಚನೆ ಮೇರೆಗೆ ಅರಣ್ಯ ಇಲಾಖೆ ನನ್ನ ಜಮೀನನ್ನು ರದ್ದು ಮಾಡಿದೆ. ಅಲ್ಲದೆ ನನ್ನ ಜಮೀನಿಗೆ ಓಡಾಡಲು ಇರುವ ಏಕೈಕ ದಾರಿಯನ್ನು ಗೇಟ್‌ ಇಟ್ಟು ಬಂದ್ ಮಾಡಿದ್ದಾರೆ ಸಲ್ಮಾನ್. ಅಲ್ಲಿ ಸಲ್ಮಾನ್ ಒಂದು ದೇವಸ್ಥಾನ ನಿರ್ಮಿಸಿದ್ದು ಅದರ ಗೇಟ್‌ ಅನ್ನು ಬಂದ್ ಮಾಡಿದ್ದಾರೆ'' ಎಂದು ಆರೋಪಿಸಿದ್ದರು.

    ಇಬ್ಬರು ಯುವತಿಯರ ಮೇಲೂ ಪ್ರಕರಣ

    ಇಬ್ಬರು ಯುವತಿಯರ ಮೇಲೂ ಪ್ರಕರಣ

    ಯೂಟ್ಯೂಬ್ ಚಾನೆಲ್‌ನಲ್ಲಿ ಮಾತನಾಡಿದ್ದ ಕೇತನ್ ಕಕ್ಕಡ್, ಸಲ್ಮಾನ್ ಖಾನ್ ತಮಗೆ ಸೇರಿದ ಜಮೀನನ್ನು ಕಬ್ಜಾ ಮಾಡಿದ್ದಾರೆ. ನನ್ನದು ಮಾತ್ರವಲ್ಲ ಇತರರ ಜಮೀನು ಸಹ ಕಬ್ಜಾ ಮಾಡಿದ್ದಾರೆ, ಪನ್ವೆಲಾದಲ್ಲಿ ಸಲ್ಮಾನ್ ಖಾನ್ ಭೂ ಮಾಫಿಯಾ ನಡೆಸುತ್ತಿದ್ದಾರೆ ಎಂದು ಕೇತನ್ ಆರೋಪ ಮಾಡಿದ್ದರು. ಸಲ್ಮಾನ್ ಖಾನ್ ಧರ್ಮವನ್ನು ಸಹ ಕೇತನ್ ನಿಂದಿಸಿದ್ದರು. ಯೂಟ್ಯೂಬ್ ಚಾನೆಲ್‌ನ ಸಂದರ್ಶನದಲ್ಲಿ ಹಾಜರಿದ್ದ ಇಬ್ಬರು ಯುವತಿಯರ ಮೇಲೂ ದಾವೆ ಹೂಡಲಾಗಿದೆ. ಆ ಇಬ್ಬರು ಮಹಿಳೆಯರು ಸಹ ಸಲ್ಮಾನ್ ಖಾನ್ ಅನ್ನು ದೂಷಿಸಿದ್ದರು. ಸಲ್ಮಾನ್ ಖಾನ್‌ರ ಹಳೆಯ ಪ್ರಕರಣಗಳ ಬಗ್ಗೆಯೂ ಯೂಟ್ಯೂಬ್ ಸಂದರ್ಶನದಲ್ಲಿ ಕಕ್ಕಡ್ ಮತ್ತು ಇಬ್ಬರು ಮಹಿಳೆಯರು ಚರ್ಚೆ ಮಾಡಿ, ಸಲ್ಮಾನ್ ಖಾನ್ ಅನ್ನು ನಿಂದಿಸಿದ್ದರು.

    ಸಲ್ಮಾನ್ ಖಾನ್‌ರ ಫಾರಂ ಹೌಸ್‌ನ ವಿಶೇಷತೆಗಳು

    ಸಲ್ಮಾನ್ ಖಾನ್‌ರ ಫಾರಂ ಹೌಸ್‌ನ ವಿಶೇಷತೆಗಳು

    ಸಲ್ಮಾನ್‌ ಖಾನ್‌ ಅವರು ಪನ್ವೆಲ್ ನಲ್ಲಿ ಐಶಾರಾಮಿ ಫಾರ್ಮ್‌ ಹೌಸ್‌ ಹೊಂದಿದ್ದಾರೆ. ಇದರ ಒಟ್ಟು ವಿಸ್ತೀರ್ಣ 150 ಎಕರೆ. ಈ ವಿಶಾಲ ಜಾಗದಲ್ಲಿ ಮನೆ, ತೋಟ, ಈಜುಕೊಳ, ಜಿಮ್, ಅತಿಥಿ ಗೃಹ ಸೇರಿದಂತೆ ಅಗತ್ಯ ಇರುವ ಎಲ್ಲವನ್ನು ಸಲ್ಲು ನಿರ್ಮಾಣ ಮಾಡಿಕೊಂಡಿದ್ದಾರೆ. 150 ಎಕರೆ ಜಾಗದಲ್ಲಿ ನಿರ್ಮಾಣ ಆಗಿರುವ ಈ ಫಾರ್ಮ್‌ ಹೌಸ್‌ ಬೆಲೆ 80 ಕೋಟಿ ಎನ್ನಲಾಗುತ್ತದೆ. ಫಾರಂ ಹೌಸ್‌ನಲ್ಲಿ ಕುದುರೆ ಲಾಯ, ಕೃಷಿ ಭೂಮಿ, ಮನೊರಂಜನಾ ಸ್ಥಳ ಇತರೆಗಳನ್ನು ವಿಂಗಡಿಸಲಾಗಿದೆ. ಲಾಕ್‌ಡೌನ್ ಸಮಯವನ್ನು ಸಲ್ಮಾನ್ ಖಾನ್ ಇಲ್ಲಿಯೇ ಕಳೆದಿದ್ದರು. ಫಾರಂ ಹೌಸ್‌ನಲ್ಲಿ ತಿಂಗಳುಗಟ್ಟಲೆ ಸಮಯ ಕಳೆಯುತ್ತಾರೆ ಸಲ್ಮಾನ್.

    English summary
    Salman Khan attacks Ketan Kakkad in court through his lawyer in Panvel land case. Kethan allegeds Salman Khan grabed his land. Salman filed defamation case against Ketan Kakkad.
    Friday, January 21, 2022, 20:57
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X