For Quick Alerts
  ALLOW NOTIFICATIONS  
  For Daily Alerts

  ಕಿಂಗ್ ಖಾನ್ ಹಿಂದೆ ಹಾಕಿದ 'ದಬ್ಬಾಂಗ್' ಖಾನ್

  By ಜೇಮ್ಸ್ ಮಾರ್ಟಿನ್
  |

  ಶಾರುಖ್ ಖಾನ್ ಹಾಗೂ ಸಲ್ಮಾನ್ ಖಾನ್ ಪೈಪೋಟಿ ಚಿತ್ರಗಳ ಯಶಸ್ಸಿನ ಗ್ರಾಫ್ ಗೆ ಮಾತ್ರ ಸೀಮಿತವಾಗಿಲ್ಲ. ಜಾಹೀರಾತು ಪ್ರಪಂಚ, ಸಾಮಾಜಿಕ ಜಾಲತಾಣಗಳಲ್ಲಿನ ಜನಪ್ರಿಯತೆಗೂ ಇಬ್ಬರ ನಡುವಿನ ಪೈಪೋಟಿ ಇದ್ದೇ ಇದೆ. ಏನು ಇಲ್ಲದಿದ್ದರೂ ಇಬ್ಬರು ಸ್ಟಾರ್ ಗಳ ಅಪ್ಪಟ ಅಭಿಮಾನಿಗಳಂತೂ ತಮ್ಮ ಸ್ಟಾರ್ ಗಳಿಗೆ ಬಹುಪರಾಕ್ ಹೇಳುತ್ತಾ ಕೀರ್ತಿ ಪತಾಕೆ ಹಾರಿಸುತ್ತಲೇ ಇರುತ್ತಾರೆ.

  ಗೂಗಲ್ ಸರ್ಚ್ ಇಂಜಿನ್ ನಲ್ಲಿ ಶಾರುಖ್ ಹಿಂದಿಕ್ಕಿ ಸಲ್ಮಾನ್ ಮುಂದೆ ಬಂದರೂ ಫೋರ್ಬ್ಸ್ ಸೆಲೆಬ್ರಿಟಿಗಳ ಗಳಿಕೆ ಪಟ್ಟಿಯಲ್ಲಿ ಶಾರುಖ್ ಮುಂದಿದ್ದಾರೆ. ಶಾರುಖ್ ಖಾನ್ ಅವರ ಚೆನ್ನೈ ಎಕ್ಸ್ ಪ್ರೆಸ್ ಗಳಿಕೆಯಂತೂ ಸಲ್ಮಾನ್ ಖಾನ್ ರ ಈ ಹಿಂದಿನ 'ದಬ್ಬಾಂಗ್' ದಾಖಲೆಗಳನ್ನು ಧ್ವಂಸಗೊಳಿಸಿದೆ. ಶಾರುಖ್ ಚಿತ್ರದ ದಾಖಲೆ ಮುರಿಯಲು ಮತ್ತೊಬ್ಬ ಖಾನ್ (ಅಮೀರ್) ಸಾರಥ್ಯದ ಚಿತ್ರ(ಧೂಮ್ 3) ಬರಬೇಕಾಯಿತು.

  ಈಗ ಶಾರುಖ್ ಹಾಗೂ ಸಲ್ಮಾನ್ ಜನಪ್ರಿಯ ಪೈಪೋಟಿ ವೆಬ್ ತಾಣ ಫೇಸ್ ಬುಕ್ ಮೂಲಕ ಅಳೆಯಲಾಗುತ್ತಿದೆ. ಸದ್ಯಕ್ಕೆ ಸಲ್ಮಾನ್ ಖಾನ್ ತಮ್ಮ ಮುಂದಿನ ಚಿತ್ರ 'ಜೈ ಹೋ' ಪ್ರಚಾರದಿಂದ ಅಭಿಮಾನಿಗಳ ಮುಕ್ತ ಪ್ರತಿಕ್ರಿಯೆಯಿಂದ ಫೇಸ್ ಬುಕ್ ನಲ್ಲಿ 12 ಮಿಲಿಯನ್ ಹಿಂಬಾಲಕರನ್ನು ಪಡೆದಿದ್ದಾರೆ. ಶಾರುಖ್ ಖಾನ್ ಅವರ ಬೆನ್ನ ಹಿಂದೆ 6.1 ಮಿಲಿಯನ್ ಫ್ಯಾನ್ಸ್ ಇದ್ದರೆ, ಧೂಮ್ 3 ಯಶಸ್ಸಿನ ನಂತರ ಅಮೀರ್ ಖಾನ್ ತಮ್ಮ ಅಧಿಕೃತ ಫೇಸ್ ಬುಕ್ ಪುಟದಲ್ಲಿ ಫ್ಯಾನ್ಸ್ ಸಂಖ್ಯೆ 9.9 ಮಿಲಿಯನ್ ಗೆ ಏರಿಸಿಕೊಂಡಿದ್ದಾರೆ.

  ಇದರ ಜತೆಗೆ ಸಲ್ಮಾನ್ ಖಾನ್ ಅವರು ಟ್ವಿಟ್ಟರ್ ನಲ್ಲಿ 5 ಮಿಲಿಯನ್ ಹಿಂಬಾಲಕರನ್ನು ಹೊಂದಿದ್ದಾರೆ. ಇದರಿಂದ ಜೈ ಹೋ ಚಿತ್ರಕ್ಕೆ ಭರ್ಜರಿ ಪ್ರಚಾರವಂತೂ ಸಿಗುತ್ತಿದೆ. ತೇರೆ ನೈನಾ, ಫೋಟೋಕಾಪಿ, ಬಾಕಿ ಸಬ್ ಫಸ್ಟ್ ಕ್ಲಾಸ್ ಮುಂತಾದ ಹಾಡುಗಳ ಜನಪ್ರಿಯತೆ ಸಾಮಾಜಿಕ ಜಾಲ ತಾಣಗಳಲ್ಲಿ ವೈರಸ್ ನಂತೆ ಹಬ್ಬುತ್ತಿದೆ. ಫೇಸ್ ಬುಕ್ ನಲ್ಲಿ ಶಾರುಖ್ ಸೋಲಿಸಿದ ಸಲ್ಮಾನ್ ಅವರ ಈಗ ಮುಂದಿನ ಟಾರ್ಗೆಟ್ ಬಾಕ್ಸಾಫೀಸ್ ಗಳಿಕೆ ಇರಬಹುದೇ?

  English summary
  Love him or hate him but Salman Khan has grown to be a phenomenon that nobody can ignore. From Twitter to Facebook to news portals, he is everywhere , for the right reasons. Recently, Salman has beaten Shahrukh and Aamir Khan in his Facebook page likes.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X