»   » ತಂಗಿ ಮದುವೆಯಲ್ಲಿ ಮಾಜಿ ಪ್ರೇಯಸಿಗೆ ಸಲ್ಲು ಟಾಂಗ್

ತಂಗಿ ಮದುವೆಯಲ್ಲಿ ಮಾಜಿ ಪ್ರೇಯಸಿಗೆ ಸಲ್ಲು ಟಾಂಗ್

Posted By:
Subscribe to Filmibeat Kannada

ಬಾಲಿವುಡ್ ಹೀರೋಯಿನ್ ಗಳ ಪಾಲಿಗೆ ಸಲ್ಮಾನ್ ಖಾನ್ ಬ್ಯಾಡ್ ಬಾಯ್ ಇದ್ಹಾಗೆ. ಅದಕ್ಕೆ ಲವ್ವಿ-ಡವ್ವಿ ವಿಚಾರದಲ್ಲಿ ಸಲ್ಮಾನ್ ಮಾಡಿಕೊಂಡ ರಂಪ-ರಾಮಾಯಣವೇ ಸಾಕ್ಷಿ. ಆದ್ರೀಗ ಅದೆಲ್ಲಾ ಹಳೆ ಕಥೆ ಬಿಡಿ.

ಈಗ ಎಲ್ಲವನ್ನೂ ಮರೆತು ಕೂಲಾಗಿ, ತಂಗಿ ಅರ್ಪಿತಾ ಮದುವೆಯನ್ನ ಅದ್ದೂರಿಯಾಗಿ ಮಾಡುತ್ತಿರುವ ಸಲ್ಮಾನ್, ಅದೇ ಸಮಾರಂಭದಲ್ಲಿ ತನ್ನ ಮಾಜಿ ಪ್ರೇಯಸಿಯನ್ನ ಚುಡಾಯಿಸಿದ್ದಾರೆ.

Salman Khan calls Katrina Kaif as Katrina Kapoor

ಸಿಟ್ಟು, ಕೋಪ, ದ್ವೇಷ ಅನ್ನುವುದಾವುದನ್ನೂ ಲೆಕ್ಕಿಸದೇ ಬಾಲಿವುಡ್ ನ ಎಲ್ಲಾ ನಟ-ನಟಿಯರಿಗೂ ತಂಗಿ ಮದುವೆಗೆ ಆಮಂತ್ರಣ ನೀಡಿದ್ದ ಸಲ್ಮಾನ್, ತಾನು ಹಸೆಮಣೆ ಏರ್ಬೇಕಿದ್ದ ಕತ್ರಿನಾ ಕೈಫ್ ಗೂ ಇನ್ವಿಟೇಷನ್ ನೀಡಿದ್ದರು. ಅದೇ ಖುಷಿಯಲ್ಲಿ ಕತ್ರಿನಾ ಕೂಡ ಅರ್ಪಿತಾಳನ್ನ ಹರಸೋಕೆ ಬಂದಿದ್ದರು. [ಮತ್ತೆ ಸಲ್ಮಾನ್ ತೆಕ್ಕೆಗೆ ಕತ್ರಿನಾ, ರಣ್ಬೀರ್ ಔಟ್?]

ಮಾಜಿ ಪ್ರೇಮಿಗಳು ಎದುರಾಗ್ತಿದ್ದ ಹಾಗೆ ಏನಾದ್ರೂ ಟ್ವಿಸ್ಟ್ ಬೇಕಲ್ವಾ. ಆ ಟ್ವಿಸ್ಟು ಸಂಗೀತ ಸಮಾರಂಭದಲ್ಲಿ ಸಿಕ್ತು. ವೇದಿಕೆ ಮೇಲೆ ಸಲ್ಲು ಕುಣಿಯುತ್ತಿದ್ದಾಗ ಕತ್ರಿನಾಳ ಜನಪ್ರಿಯ ಹಾಡು 'ಚಿಕ್ನಿ ಚಮೇಲಿ' ಪ್ಲೇ ಆಯ್ತು. ಕತ್ರಿನಾ ಜೊತೆ ಡ್ಯುಯೆಟ್ ಹಾಡೋಕೆ ಇದೇ ಸರಿಯಾದ ಸಮಯ ಅಂತ ಕರಣ್ ಜೋಹರ್ ಮೂಲಕ ಕತ್ರಿನಾ ಅವರನ್ನ ವೇದಿಕೆ ಮೇಲೆ ಕರೆಸಿಕೊಳ್ಳುವುದಕ್ಕೆ ಮುಂದಾದರು. [ಕತ್ರಿನಾ, ರಣಬೀರ್ ಈಗ ಒಂದೇ ಗೂಡಿನ ಹಕ್ಕಿಗಳು]

Salman Khan calls Katrina Kaif as Katrina Kapoor2

ಸಲ್ಲು ಆಮಂತ್ರಣಕ್ಕೆ ಕ್ಯಾಟ್ ಬಗ್ಗದೇ ಇದ್ದಾಗ, ''ಕತ್ರಿನಾ ಕೈಫ್ ಆಗಿ ಬೇಡ..! ಕತ್ರಿನಾ ಕಪೂರ್ ಆಗಿ ವೇದಿಕೆ ಮೇಲೆ ಬನ್ನಿ'' ಅಂತ ಟಾಂಗ್ ಕೊಟ್ಟಿದ್ದಾರೆ ಸಲ್ಮಾನ್ ಖಾನ್. ಇಷ್ಟು ಸಾಲದು ಅಂತ ಮುಗುಳ್ನಗುತ್ತಾ, ''ನಾನೇನು ಮಾಡಲಿ, ಕತ್ರಿನಾ ಖಾನ್ ಆಗುವುದಕ್ಕೆ ಚಾನ್ಸ್ ಕೊಟ್ಟೆ. ಆದರೆ ಕತ್ರಿನಾ ಕಪೂರ್ ಆಗುವುದು ನಿಮ್ಮ ಆಶಯ ಆಗಿತ್ತು'', ಅಂತ ಹಳೇ ಗರ್ಲ್ ಫ್ರೆಂಡ್ ಗೆ ಛೂಬಾಣ ಬಿಟ್ಟಿದ್ದಾರೆ. [ಕತ್ರಿನಾ ಕೈಫ್ ನನಗೆ ಅತ್ತಿಗೆ ಇದ್ದಂತೆ, ಸಲ್ಮಾನ್ ಖಾನ್!]

ಕತ್ರಿನಾ ಅದೃಷ್ಟಕ್ಕೆ ಅಲ್ಲಿ ರಣಬೀರ್ ಕಪೂರ್ ಇರ್ಲಿಲ್ಲ ಅನ್ನುವುದು ಬೇರೆ ವಿಷ್ಯ. ಆದರೆ ಸಲ್ಲು ಮಾತುಗಳನ್ನ ಗಂಭೀರವಾಗಿ ಪರಿಗಣಿಸದ ಕತ್ರಿನಾ ವಾಸ್ತವನ್ನ ಅರಿತು ಸಲ್ಲು ಜೊತೆ ಹೆಜ್ಜೆ ಹಾಕಿದ್ರು. ಇಲ್ದೇ ಹೋದರೆ ಸುಮ್ನೆ ಕೂರುವ ಜಾಯಮಾನ ಸಲ್ಮಾನ್ ನದ್ದಲ್ಲ ಅಂತ ಕತ್ರಿನಾಗೂ ಚೆನ್ನಾಗಿ ಗೊತ್ತಿದೆ! (ಏಜೆನ್ಸೀಸ್)

English summary
Amidst Arpita marriage celebration, Salman Khan left no stone to pull Katrina's leg. It so happened when Salman wanted to dance with Katrina on stage, he adressed her as Katrina Kapoor instead of Katrina Kaif.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada