For Quick Alerts
  ALLOW NOTIFICATIONS  
  For Daily Alerts

  'ಬಿಗ್ ಬಾಸ್' ಹೋಸ್ಟ್ ಬದಲಾಗಲ್ಲ: ಸಲ್ಮಾನ್ ಖಾನ್ ಗೆ ಜಾಸ್ತಿ ದುಡ್ಡು ಸಿಕ್ಕಿಲ್ಲ.!

  |

  ಭಾರತೀಯ ಕಿರುತೆರೆಯ ಅತ್ಯಂತ ದೊಡ್ಡ ರಿಯಾಲಿಟಿ ಶೋ 'ಬಿಗ್ ಬಾಸ್' ಕಾರ್ಯಕ್ರಮವನ್ನು ವರ್ಷಗಳಿಂದ ಬಾಲಿವುಡ್ ಬಾಕ್ಸ್ ಆಫೀಸ್ ಸುಲ್ತಾನ್ ಸಲ್ಮಾನ್ ಖಾನ್ ಹೋಸ್ಟ್ ಮಾಡುತ್ತಾ ಬರುತ್ತಿದ್ದಾರೆ.

  ಈ ವರ್ಷ ಅಂತೂ 'ಬಿಗ್ ಬಾಸ್-13' ಕಾರ್ಯಕ್ರಮ ತೀರಾ ವಿವಾದಾತ್ಮಕವಾಗಿ ಸಾಗುತ್ತಿದೆ. 'ಬಿಗ್ ಬಾಸ್' ಮನೆಯೊಳಗೆ ಪ್ರತಿ ದಿನ ಸ್ಪರ್ಧಿಗಳ ರಂಪಾಟ ನಡೆಯುತ್ತಿದೆ. ಸ್ಪರ್ಧಿಗಳ ವರ್ತನೆಯಿಂದಾಗಿ ಹಲವು ಬಾರಿ ಸಲ್ಮಾನ್ ಖಾನ್ ಬೇಸರ ವ್ಯಕ್ತಪಡಿಸಿದ್ದಾರೆ.

  ಟಿ.ಆರ್.ಪಿ ಪಟ್ಟಿಯಲ್ಲಿ 'ಬಿಗ್ ಬಾಸ್-13' ಉತ್ತಮ ರೇಟಿಂಗ್ ಪಡೆಯುತ್ತಿರುವುದರಿಂದ ಈ ಕಾರ್ಯಕ್ರಮವನ್ನು ಐದು ವಾರಗಳ ಕಾಲ ಎಕ್ಸ್ ಟೆಂಡ್ ಮಾಡಲಾಗಿದೆ. ಇದಕ್ಕಾಗಿ ಸಲ್ಮಾನ್ ಖಾನ್ ಗೆ ಹೆಚ್ಚುವರಿ ಸಂಭಾವನೆ ಕೊಡಲಾಗುತ್ತದೆ. ಆದರೆ ಅನಾರೋಗ್ಯ ಕಾರಣದಿಂದ ಹೆಚ್ಚುವರಿ ಸಂಚಿಕೆಗಳನ್ನ ಸಲ್ಮಾನ್ ಖಾನ್ ಹೋಸ್ಟ್ ಮಾಡುತ್ತಿಲ್ಲ. ಸಲ್ಮಾನ್ ಜಾಗಕ್ಕೆ ನಿರ್ದೇಶಕಿ ಫರಾ ಖಾನ್ ಎಂಟ್ರಿಕೊಡಲಿದ್ದಾರೆ ಎಂಬ ಸುದ್ದಿ ಬಿಟೌನ್ ತುಂಬೆಲ್ಲಾ ಹರಿದಾಡಿತ್ತು.

  ಇದೀಗ ಇದೇ ಗಾಸಿಪ್ ಬಗ್ಗೆ ಸಲ್ಮಾನ್ ಖಾನ್ ಪ್ರತಿಕ್ರಿಯೆ ಕೊಟ್ಟಿದ್ದಾರೆ. 'ಬಿಗ್ ಬಾಸ್-13' ಕಾರ್ಯಕ್ರಮವನ್ನು ಪೂರ್ತಿಯಾಗಿ ಮುಗಿಸಿ ಕೊಡುವ ಬಗ್ಗೆ ಸಲ್ಮಾನ್ ಖಾನ್ ಕ್ಲಾರಿಟಿ ಕೊಟ್ಟಿದ್ದಾರೆ. ಮುಂದೆ ಓದಿರಿ...

  ಸಲ್ಮಾನ್ ಖಾನ್ ಕೊಟ್ಟ ಸ್ಪಷ್ಟನೆ

  ಸಲ್ಮಾನ್ ಖಾನ್ ಕೊಟ್ಟ ಸ್ಪಷ್ಟನೆ

  ''ಕಾರ್ಯಕ್ರಮವನ್ನು 'ಬಿಗ್ ಬಾಸ್' ಐದು ವಾರಗಳ ಕಾಲ ಎಕ್ಸ್ ಟೆಂಡ್ ಮಾಡಿದ್ದಾರೆ. ಆದ್ರೆ, ನನಗೆ ಸಿಗಬೇಕಾದ ಸಂಭಾವನೆಯನ್ನ ಕಡಿಮೆ ಮಾಡಿದ್ದಾರೆ'' ಎಂದು ಸ್ಪರ್ಧಿಗಳ ಮುಂದೆಯೇ ಸಲ್ಮಾನ್ ಖಾನ್ ಹೇಳಿದ್ದಾರೆ. ಅಲ್ಲಿಗೆ, 'ಬಿಗ್ ಬಾಸ್-13' ಶೋನ ಸ್ವತಃ ಸಲ್ಮಾನ್ ಖಾನ್ ಕಂಪ್ಲೀಟ್ ಮಾಡಿಕೊಡುವುದು ಗ್ಯಾರೆಂಟಿ.

  ಬಿಗ್ ಬಾಸ್ ಶೋನಿಂದ ಹೊರಬಂದ ಸಲ್ಮಾನ್ ಖಾನ್, ಹೊಸ ನಿರೂಪಕಿ ಎಂಟ್ರಿಬಿಗ್ ಬಾಸ್ ಶೋನಿಂದ ಹೊರಬಂದ ಸಲ್ಮಾನ್ ಖಾನ್, ಹೊಸ ನಿರೂಪಕಿ ಎಂಟ್ರಿ

  ಸಲ್ಮಾನ್ ಖಾನ್ ತಂದೆ ಏನಂತಾರೆ.?

  ಸಲ್ಮಾನ್ ಖಾನ್ ತಂದೆ ಏನಂತಾರೆ.?

  ''ಸಲ್ಮಾನ್ ಖಾನ್ ಆರೋಗ್ಯವಾಗಿದ್ದಾರೆ. 'ಬಿಗ್ ಬಾಸ್' ಶೋ ಕ್ವಿಟ್ ಮಾಡುತ್ತಿರುವ ಸುದ್ದಿ ಸುಳ್ಳು. ಬಿಡುವಿಲ್ಲದೆ ಸಲ್ಮಾನ್ ಖಾನ್ ಕೆಲಸ ಮಾಡುತ್ತಿರುವುದು ಸತ್ಯ. ಆದ್ರೆ, 'ಬಿಗ್ ಬಾಸ್' ಕಾರ್ಯಕ್ರಮದಿಂದ ಬ್ರೇಕ್ ತೆಗೆದುಕೊಳ್ಳುವ ನಿರ್ಧಾರವನ್ನ ಸಲ್ಮಾನ್ ಮಾಡಿಲ್ಲ'' ಎಂದು ಸಲ್ಮಾನ್ ಖಾನ್ ತಂದೆ ಸಲೀಂ ಖಾನ್ ಹೇಳಿದ್ದಾರೆ.

  'ಬಿಗ್ ಬಾಸ್-13' ಹೆಚ್ಚುವರಿ ಎಪಿಸೋಡ್ ಗಾಗಿ ಸಲ್ಮಾನ್ ಗೆ ಸಿಗ್ತಿದೆ ಕೋಟಿ ಕೋಟಿ ರೂಪಾಯಿ'ಬಿಗ್ ಬಾಸ್-13' ಹೆಚ್ಚುವರಿ ಎಪಿಸೋಡ್ ಗಾಗಿ ಸಲ್ಮಾನ್ ಗೆ ಸಿಗ್ತಿದೆ ಕೋಟಿ ಕೋಟಿ ರೂಪಾಯಿ

  ಗಾಸಿಪ್ ಹಬ್ಬಿದ್ದು ಹೀಗೆ..

  ಗಾಸಿಪ್ ಹಬ್ಬಿದ್ದು ಹೀಗೆ..

  ''ಸ್ಪರ್ಧಿಗಳ ವರ್ತನೆಯಿಂದ ಸಲ್ಮಾನ್ ಖಾನ್ ಬೇಸೆತ್ತಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿರುವ ಸಲ್ಮಾನ್ ಖಾನ್ 'ಬಿಗ್ ಬಾಸ್' ಶೋ ಕ್ವಿಟ್ ಮಾಡುತ್ತಿದ್ದಾರೆ. ಸಲ್ಮಾನ್ ಖಾನ್ ಜಾಗಕ್ಕೆ ಫರಾ ಖಾನ್ ಬರ್ತಾರೆ'' ಎಂದು 'ಬಿಗ್ ಬಾಸ್' ಮೂಲಗಳು ತಿಳಿಸಿದ್ದಾರೆ ಅಂತ ಈ ಹಿಂದೆ ವರದಿ ಆಗಿತ್ತು.

  ಎಂಟು ವರ್ಷಗಳಿಂದ ಹೋಸ್ಟ್

  ಎಂಟು ವರ್ಷಗಳಿಂದ ಹೋಸ್ಟ್

  ಕಲರ್ಸ್ ವಾಹಿನಿಯಲ್ಲಿ ಪ್ರಸಾರ ಆಗುತ್ತಿರುವ 'ಬಿಗ್ ಬಾಸ್' ಕಾರ್ಯಕ್ರಮದ ನಾಲ್ಕನೇ ಆವೃತ್ತಿಯಿಂದ ಸಲ್ಮಾನ್ ಖಾನ್ ಹೋಸ್ಟ್ ಆಗಿದ್ದಾರೆ. 2011 ರಿಂದ ಸತತ ಎಂಟು ವರ್ಷಗಳ ಕಾಲ 'ಬಿಗ್ ಬಾಸ್' ಶೋನ ಸಲ್ಮಾನ್ ಖಾನ್ ನಡೆಸಿಕೊಂಡು ಬಂದಿದ್ದಾರೆ.

  English summary
  Salman Khan confirms that he will continue as host in Bigg Boss 13.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X