For Quick Alerts
  ALLOW NOTIFICATIONS  
  For Daily Alerts

  ಸಲ್ಮಾನ್, ಕತ್ರಿನಾ 'ಏಕ್ ಥಾ ಟೈಗರ್' ದಾಖಲೆ ಗಳಿಕೆ

  |

  ಬಾಲಿವುಡ್ ನಟ ಸಲ್ಮಾನ್ ತಾನೊಬ್ಬ ಬಾಕ್ಸ್ ಆಫೀಸ್ ಕಿಂಗ್ ಎಂಬುದನ್ನು ಮತ್ತೊಮ್ಮೆ ಸಾಬೀತು ಮಾಡಿದ್ದಾರೆ. ಸ್ವಾತಂತ್ರ್ಯ ದಿನಾಚರಣೆಯಂದು (ಆಗಸ್ಟ್ 15, 2012) ಬಿಡುಗಡೆಯಾಗಿರುವ ಸಲ್ಲೂ ಅಭಿನಯದ 'ಏಕ್ ಥಾ ಟೈಗರ್' ಚಿತ್ರವು ಮೊದಲ ದಿನ ಬರೋಬ್ಬರಿ ರು. 30 ಕೋಟಿ ಗಳಿಸಿ ದಾಖಲೆ ನಿರ್ಮಿಸಿದೆ. ಮತ್ತೊಮ್ಮೆ ಸಲ್ಲೂ ಮ್ಯಾಜಿಕ್ ಸಾಬೀತಾಗಿದೆ. ಚಿತ್ರವು ಭಾರಿ ಓಪನಿಂಗ್ ಪಡೆದುಕೊಂಡಿದೆ.

  ಈ ಮೊದಲೂ ಕೂಡ, 'ರೆಡಿ', 'ವಾಂಟೆಡ್', 'ಬಾಡಿಗಾರ್ಡ್', ಹಾಗೂ 'ದಬಾಂಗ್' ಚಿತ್ರಗಳ ಮೂಲಕ ಬಾಲಿವುಡ್ ನಲ್ಲಿ ತಾನೊಬ್ಬ ಮಹಾನ್ ಸ್ಟಾರ್ ಎಂಬುದನ್ನು ಸಾಕ್ಷಿ ಸಮೇತ ತೋರಿಸಿಕೊಟ್ಟಿದ್ದ ಸಲ್ಮಾನ್ ಖಾನ್, ಇದೀಗ 'ಏಕ್ ಥಾ ಟೈಗರ್' ಚಿತ್ರದ ಮೂಲಕ ಮತ್ತೆ ಮಿಂಚುತ್ತಿದ್ದಾರೆ. ಸಲ್ಮಾನ್-ಕತ್ರಿನಾ ಜೋಡಿಯ ಈ ಚಿತ್ರ ಬಹುನಿರೀಕ್ಷೆಯ ಚಿತ್ರವಾಗಿತ್ತು. ನಿರೀಕ್ಷೆಯೀಗ ನಿಜವಾಗಿದೆ. ತಮ್ಮ ಈ ಹಿಂದಿನ ಎಲ್ಲಾ ಚಿತ್ರಗಳ ಮೊದಲ ದಿನದ ಗಳಿಕೆಯನ್ನು ಈ ಚಿತ್ರದ ಮೂಲಕ ಸಲ್ಲೂ ಮುರಿದಿದ್ದಾರೆ.

  'ಏಕ್ ಥಾ ಟೈಗರ್' ಚಿತ್ರ ಈ ಮೂಲಕ ಇತ್ತೀಚಿಗೆ ಭಾರಿ ದಾಖಲೆ ನಿರ್ಮಿಸಿದ್ದ 'ಅಗ್ನಿಪಥ್' ಚಿತ್ರದ ಗಳಿಕೆಯನ್ನು ಹಿಂದಿಕ್ಕಿದೆ. 'ಅಗ್ನಿಪಥ್' ಚಿತ್ರವು ಮೊದಲ ದಿನ ರು. 25 ಕೋಟಿ ಗಳಿಸಿತ್ತು. ಆದರೆ ಸಲ್ಲೂರ 'ಏಕ್ ಥಾ ಟೈಗರ್' ಚಿತ್ರವು ಮೊದಲ ದಿನ ರು. 29 ರಿಂದ 30 ಕೋಟಿ ಗಳಿಸಿ 'ಅಗ್ನಿಪಥ್' ದಾಖಲೆಯನ್ನು ಧೂಳಿಪಟ ಮಾಡಿದೆ. ನಿರೀಕ್ಷೆ ಮೀರಿ ಯಶಸ್ವಿಯಾಗಿದೆ ಎನ್ನಲಾಗಿದೆ.

  ಕಬೀರ್ ಖಾನ್ ನಿರ್ದೇಶನದ ಈ ಚಿತ್ರವು ಸಲ್ಲೂ ಹಾಗೂ ಕತ್ರಿನಾ ಜೋಡಿಯ ಅಭಿಮಾನಿಗಳಿಗೆ ಹೇಳಿಮಾಡಿಸಿದಂತಿದೆ ಎನ್ನಲಾಗುತ್ತಿದೆ. ಅವರಿಬ್ಬರ ಅಭಿಮಾನಿಗಳಲ್ಲಿ ಬಹಳಷ್ಟು ಮಂದಿ, ಮೊದಲ ದಿನ ಮೊದಲ ಶೋ ನೋಡಿ ತಮ್ಮ ಅಭಿಮಾನವನ್ನು ಮೆರೆದು ಬಾಕ್ಸ್ ಆಫೀಸ್ ದಾಖಲೆಗೆ ಕಾರಣರಾಗಿದ್ದಾರೆ. ಸಲ್ಲೂ ನಟನೆ ಹಾಗೂ ಕತ್ರಿನಾರ ಬ್ಯೂಟಿಗೆ ಪ್ರೇಕ್ಷಕರು ಕ್ಲೀನಿ ಬೌಲ್ಡ್!

  ಬಿಡುಗಡೆಯಾದ ಎಲ್ಲಾ ಕೇಂದ್ರಗಳಲ್ಲಿ 'ಏಕ್ ಥಾ ಟೈಗರ್' ಚಿತ್ರವು ಹೌಸ್ ಫುಲ್ ಪ್ರದರ್ಶನ ಕಾಣುತ್ತಿದ್ದು ಪ್ರೇಕ್ಷಕರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಡುತ್ತಿದ್ದಾರೆ. ಈ ಮಟ್ಟಿಗೆ ಭಾರಿ ಜಾದೂ ಮಾಡುತ್ತಿರುವ 'ಏಕ್ ಥಾ ಟೈಗರ್' ಚಿತ್ರದ ಮೂಲಕ ಬಾಲಿವುಡ್ ಕಿಂಗ್ ಗಳಾಗಿರುವ ಮಿಕ್ಕ ಎರಡು ಖಾನ್ ಗಳಾದ ಶಾರುಖ್ ಹಾಗೂ ಅಮೀರ್ ಅವರನ್ನು, ಸಲ್ಲೂ ಓವರ್ ಟೇಕ್ ಮಾಡಿದರೆ ಆಶ್ಚರ್ಯವಿಲ್ಲ ಎಂಬ ಮಾತು ಬಾಲಿವುಡ್ ಅಂಗಳದಲ್ಲಿ ಹರಿದಾಡುತ್ತಿದೆ. (ಏಜೆನ್ಸೀಸ್)

  English summary
  Salman Khan's Ek Tha Tiger has got an earth-shattering opening in Box Office. The movie, which is released is screening as houseful 45 screening in all the Centers. Salman Khan and Katrina Kaif lead this movie is directed by Kabir Khan. 
 

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X