For Quick Alerts
  ALLOW NOTIFICATIONS  
  For Daily Alerts

  ಕ್ಯಾನ್ಸರ್ ನಿಂದ ಬಳಲುತ್ತಿರುವ ರಾಖಿ ಸಾವಂತ್ ತಾಯಿಗೆ ಸಲ್ಮಾನ್ ಸಹಾಯ: ಧನ್ಯವಾದ ತಿಳಿಸಿದ ನಟಿ

  |

  ವಿವಾದಾತ್ಮಕ ನಟಿ ಎಂದೇ ಗುರುತಿಸಿಕೊಂಡಿರುವ ರಾಖಿ ಸಾವಂತ್ ಅವರ ಹುಚ್ಚಾಟಗಳನ್ನೇ ಹೆಚ್ಚು ನೋಡಿರುತ್ತೀರಿ. ರಾಖಿ ಸಾವಂತ್ ಸದಾ ಮನರಂಜನೆ ವ್ಯಕ್ತಿಯಾಗೇ ಕಾಣಿಸುತ್ತಾರೆ. ಆದರೆ ಆಕೆಯ ಕಷ್ಟ, ನೋವಿನ ಬಗ್ಗೆ ಯಾರಿಗೂ ತಿಳಿದಿಲ್ಲ.

  ರಾಖಿ ಸಾವಂತ್ ತನ್ನ ತಾಯಿಯನ್ನು ಕಾಪಾಡಿಕೊಳ್ಳಲು ಹೋರಾಡುತ್ತಿದ್ದಾರೆ. ಹೌದು, ರಾಖಿ ಸಾವಂತ್ ತಾಯಿ ಮಾರಕ ಕ್ಯಾನ್ಸರ್ ನಿಂದ ಬಳಲುತ್ತಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ತಾಯಿಯ ಆಸ್ಪತ್ರೆ ಖರ್ಚಿಗೆ ಹಣವಿಲ್ಲದೆ ರಾಖಿ ಪರದಾಡುತ್ತಿದ್ದಾರೆ.

  ರಾಖಿ ಹಣಕ್ಕಾಗಿಯೇ ಈ ಬಾರಿಯ ಬಿಗ್ ಬಾಸ್ ಮನೆಗೂ ಎಂಟ್ರಿ ಕೊಟ್ಟಿದ್ದರು. ಬಿಗ್ ಬಾಸ್ ನಲ್ಲಿ 14ಲಕ್ಷ ರೂ. ಗಳಿಸಿದ್ದಾರೆ. ಆದರೆ ಈ ಹಣ ಆಸ್ಪತ್ರೆ ಖರ್ಚಿಗೆ ಸಾಲುತ್ತಿಲ್ಲ. ಕಷ್ಟದಲ್ಲಿರುವ ರಾಖಿ ಕುಟುಂಬಕ್ಕೆ ಸಲ್ಮಾನ್ ಖಾನ್ ಸಹೋದರರು ಸಹಾಯ ಹಸ್ತ ಚಾಚುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

  ಸಲ್ಮಾನ್ ಖಾನ್ ಅವರ ಸಹಾಯ, ಬೆಂಬಲಕ್ಕೆ ರಾಖಿ ಸಾವಂತ್ ತಾಯಿ ವಿಡಿಯೋ ಮೂಲಕ ಧನ್ಯವಾದ ತಿಳಿಸಿದ್ದಾರೆ. ಸಲ್ಮಾನ್ ಖಾನ್ ಮಾತ್ರವಲ್ಲದೇ ಸಲ್ಲು ಸಹೋದರ ಸೊಹೈಲ್ ಖಾನ್ ಅವರಿಗೂ ಧನ್ಯವಾದ ತಿಳಿಸಿದ್ದಾರೆ. ರಾಖಿ ಸಾವಂತ್ ತಾಯಿ ಬೇಗ ಚೇತರಿಸಿಕೊಳ್ಳಲಿ ಎಂದು ಅಭಿಮಾನಿಗಳು ಪ್ರಾರ್ಥನೆ ಮಾಡುತ್ತಿದ್ದಾರೆ.

  ಈ ಮೊದಲು ರಾಖಿ ಸಾವಂತ್ ಬಿಗ್ ಮನೆಯಿಂದ ಹೊರಬಂದ ಬಳಿಕ ಸಲ್ಮಾನ್ ಖಾನ್ ಜೊತೆ ಇರುವ ಫೋಟೋವನ್ನು ಹಂಚಿಕೊಂಡಿದ್ದರು. 'ನನ್ನ ಗಾಡ್ ಬ್ರದರ್, ಕಿಂಗ್ ಆಫ್ ಕಿಂಗ್, ಸಲ್ಮಾನ್ ಖಾನ್' ಎಂದು ಬರೆದುಕೊಂಡು ಫೋಟೋ ಶೇರ್ ಮಾಡಿದ್ದರು.

  Recommended Video

  ರಶ್ಮಿಕಾ ಮುಂಬೈನಲ್ಲಿ ಖರೀದಿಸಿದ ಮನೆಯ ಬೆಲೆ ಎಷ್ಟು ಕೋಟಿ ಗೊತ್ತಾ? | Filmibeat Kannada

  ಇತ್ತೀಚಿಗೆ ರಾಖಿ ಸಾವಂತ್ ಚಿಕಿತ್ಸೆ ಪಡೆಯುತ್ತಿರುವ ತಾಯಿಯ ಫೋಟೋವನ್ನು ಶೇರ್ ಮಾಡಿ, ಆರೋಗ್ಯಕ್ಕಾಗಿ ಎಲ್ಲರೂ ಪ್ರಾರ್ಥಿಸಿ ಎಂದು ಕೇಳಿಕೊಂಡಿದ್ದರು. ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ರಾಖಿ ಸಾವಂತ್ ತಾಯಿ ಚೇತರಿಸಿಕೊಳ್ಳುತ್ತಿದ್ದಾರೆ. ರಾಖಿ ಸಾವಂತ್ ತಾಯಿ ಜಯಾ ಅವರು ಮೂತ್ರಕೋಶ ಕ್ಯಾನ್ಸರ್ ನಿಂದ ಬಳಲುತ್ತಿದ್ದಾರೆ.

  English summary
  Actor Salman Khan helping cancer treatment for Rakhi sawant mother.
  Saturday, February 27, 2021, 11:41
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X