»   » ಕಿಡ್ನಾಪ್ ಕೇಸಿನಲ್ಲಿ ಸಲ್ಮಾನ್ ಆಪ್ತ ನಾಯಕಿ

ಕಿಡ್ನಾಪ್ ಕೇಸಿನಲ್ಲಿ ಸಲ್ಮಾನ್ ಆಪ್ತ ನಾಯಕಿ

Posted By:
Subscribe to Filmibeat Kannada
Sana Khan
ಬಾಲಿವುಡ್ ನ ಬ್ಯಾಡ್ ಬಾಯ್ ಸಲ್ಮಾನ್ ಖಾನ್ ಅವರ ಇಷ್ಟದ ನಾಯಕಿ ಈಗ ಸಕತ್ ತೊಂದರೆಯಲ್ಲಿದ್ದಾಳೆ. ತಮ್ಮ ಮುಂದಿನ ಚಿತ್ರ 'ಮೆಂಟಲ್' ಶೂಟಿಂಗ್ ಬದಿಗೊತ್ತಿ ಸಲ್ಮಾನ್ ಖಾನ್ ಆಕೆಗಾಗಿ ಮರುಕಪಡುತ್ತಿದ್ದಾನೆ.

ಸಲ್ಮಾನ್ ಖಾನ್ ಅವರ ಆಪ್ತವಲಯಕ್ಕೆ ಸೇರಿದ ಸನಾ ಖಾನ್ ಅವರಿಂದಾಗಿ ಮೆಂಟಲ್ ಶೂಟಿಂಗ್ ಮತ್ತೊಮ್ಮೆ ಸ್ಥಗಿತಗೊಂಡಿದೆ. ಸನಾ ಖಾನ್ ಸದ್ಯಕ್ಕೆ ಕಿಡ್ನಾಪ್ ಕೇಸ್ ನಲ್ಲಿ ಬುಕ್ ಆಗಿದ್ದಾರೆ.

ಮುಂಬೈ ಮಿರರ್ ವರದಿ ಪ್ರಕಾರ, ನಟಿ ಸನಾ ಖಾನ್ ಅವರು 15 ವರ್ಷ ವಯಸ್ಸಿನ ಹುಡುಗಿಗೆ ಪಾಠ ಕಲಿಸುವುದಕ್ಕೆ ಈ ರೀತಿ ಕಿಡ್ನಾಪ್ ಮಾಡಿದ್ದಾರೆ ಎಂದು ತಿಳಿದು ಬಂದಿದೆ.

ಸನಾ ಖಾನ್ ಅವರ ಕಸಿನ್ ನವೀದ್ ಜೊತೆ ಹುಡುಗಿಗೆ ಮದುವೆ ಗೊತ್ತು ಮಾಡಲು ಸನಾ ಯತ್ನಿಸಿದ್ದರು. ಆದರೆ, ನವೀದ್ ಮದುವೆ ಪ್ರಸ್ತಾಪವನ್ನು ಹುಡುಗಿ ತಳ್ಳಿ ಹಾಕಿದ್ದಳು. ಇದರಿಂದ ಕೋಪಗೊಂಡ ಸನಾ, ಅವಳಿಗೆ ತಕ್ಕ ಪಾಠ ಕಲಿಸುತ್ತೇನೆ ಇರು ಎಂದು ಹೇಳಿ ಕಿಡ್ನಾಪ್ ಮಾಡಿಸಿದ್ದರು ಎಂದು ವರದಿಯಾಗಿದೆ.

ಸದ್ಯಕ್ಕೆ ಸನಾ ಅವರ ಮೇಲೆ ಮುಂಬೈ ಪೊಲೀಸರು ಕೇಸು ದಾಖಲಿಸಿಕೊಂಡು ಹುಡುಕುತ್ತಿದ್ದಾರೆ. ಸಲ್ಮಾನ್ ಖಾನ್ ಅವರ ಮೆಂಟಲ್ ಚಿತ್ರದ ಶೂಟಿಂಗ್ ಗೆ ಬರಬೇಕಿದ್ದ ಸನಾ ಇದ್ದಕ್ಕಿದ್ದಂತೆ ಮಾಯವಾಗಿದ್ದಾಳೆ.

ಹುಡುಗಿ ನಾಪತ್ತೆಯಾದ ಮೇಲೆ ಆಕೆ ಪೋಷಕರು ಸಹಜವಾಗಿ ಪೊಲೀಸರ ಮೊರೆ ಹೊಕ್ಕು ಸನಾ ವಿರುದ್ಧ ದೂರು ದಾಖಲಿಸಿದ್ದರು. ಟರ್ಬೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಟ್ಯೂಷನ್ ಗೆ ಹೋಗಿದ್ದ ಮಗಳನ್ನು ಸನಾ ಖಾನ್ ಹಾಗೂ ಅವರ ತಂಡ ಕಿಡ್ನಾಪ್ ಮಾಡಲು ಯತ್ನಿಸಿದೆ. ಹಲವು ಗಂಟೆಗಳ ಕಾಲ ಮಗಳು ಮನೆಗೆ ಬಂದಿರಲಿಲ್ಲ ಎಂದು ದೂರಿನಲ್ಲಿ ಹೇಳಿದ್ದಾರೆ.

ಪ್ರಕರಣ ದಾಖಲಿಸಿಕೊಂಡ ಪೊಲೀಸರು ಓಶಿವಾರದಲ್ಲಿರುವ ಸನಾ ಖಾನ್ ಮನೆಗೆ ಹೋಗಿದ್ದಾರೆ. ಆದರೆ, ಸನಾ ಅಲ್ಲಿ ಕಂಡು ಬಂದಿಲ್ಲ. ಮೆಂಟಲ್ ಶೂಟಿಂಗ್ ಸ್ಪಾಟ್ ನಲ್ಲೂ ಕಾಣಿಸಿಕೊಂಡಿಲ್ಲ. ಪೊಲೀಸರು ಹುಡುಕಾಟ ಮುಂದುವರೆಸಿದ್ದಾರೆ.

ಆದರೆ, ಸನಾ ಖಾನ್ ಅವರ ವಕ್ತಾರ ಇಸ್ಮಾಯಿಲ್ ಶೇಖ್ ಅವರು ಸನಾ ಎಲ್ಲೂ ಓಡಿ ಹೋಗಿಲ್ಲ ಎಂದಿದ್ದಾನೆ. ಆದರೆ, ಸನಾ ವಿರುದ್ಧ ಪೊಲೀಸರಿಗೆ ದೂರು ನೀಡಿರುವ ಬಗ್ಗೆ ಮುಂಬೈ ಮಿರರ್ ನಲ್ಲಿ ಬಂದಿರುವ ವರದಿಯನ್ನು ಒಪ್ಪಿಕೊಂಡಿರುವ ಶೇಖ್, ಅಪ್ರಾಪ್ತ ಯುವತಿಯನ್ನು ಮದುವೆಗೆ ಒತ್ತಾಯಿಸಿಲ್ಲ ಹಾಗೂ ಕಿಡ್ನಾಪ್ ಮಾಡಿಲ್ಲ ಎಂದಿದ್ದಾನೆ.

ಸಲ್ಮಾನ್ ಖಾನ್ ತುಂಬಾ ಇಷ್ಟಪಡುವ ಯುವನಟಿಯರ ಪೈಕಿ ಸನಾ ಖಾನ್ ಕೂಡಾ ಒಬ್ಬರು. ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟು ಕೂಲ್ ಸಖತ್ ಹಾಟ್ ಮಗ ಚಿತ್ರದಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ಜೊತೆ ಕುಣಿದಿದ್ದಳು.

ನಂತರ ಬಿಗ್ ಬಾಸ್ 6ನೇ ಆವೃತ್ತಿಯಲ್ಲಿ ಸ್ಪರ್ಧಿಯಾಗಿ ಹಲವು ವಾರಗಳ ಕಾಲ ಸಲ್ಮಾನ್ ಕೃಪೆಯಿಂದ ಮನೆಯಲ್ಲಿ ಉಳಿದು ಮೂರನೇ ಸ್ಥಾನ ವಿಜೇತೆಯಾಗಿದ್ದು ಸನಾ ಸಾಧನೆ. 25 ವರ್ಷ ವಯಸ್ಸಿನ ಸನಾ ಐದು ಭಾಷೆಗಳಲ್ಲಿ 14ಕ್ಕೂ ಅಧಿಕ ಚಿತ್ರಗಳಲ್ಲಿ ನಟಿಸಿದ್ದಾಳೆ. 50ಕ್ಕೂ ಅಧಿಕ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದಾಳೆ. [ಸೆಕ್ಸಿ ಸಿಲ್ಕ್ ಸ್ಮಿತಾ ಪಾತ್ರದಲ್ಲಿ ಹಾಟ್ ಸನಾ ನೋಡಿ]

English summary
There seems no end to the troubles that have been hitting Salman Khan's upcoming movie Mental's shooting. And now, the latest trouble involves Salman's hot favourite heroine Sana Khan from the film Mental, who has been reportedly booked under kidnapping charges.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada