Don't Miss!
- News
ಫೆಬ್ರವರಿ 2023ರ ಮಾಸಭವಿಷ್ಯ: ಸಂಕ್ರಮಣದ ನಂತರದ ಫೆಬ್ರವರಿ ತಿಂಗಳಿನಲ್ಲಿ ಯಾವೆಲ್ಲ ರಾಶಿಗಳಿಗೆ ಶುಭವಾಗಲಿದೆ?
- Sports
ಆಕ್ಯುಪ್ರೆಶರ್ ಚಿಕಿತ್ಸೆ ಪಡೆಯುತ್ತಿರುವ ಚಿತ್ರವನ್ನು ಹಂಚಿಕೊಂಡ ಶ್ರೇಯಸ್ ಅಯ್ಯರ್
- Technology
ಅತಿ ಕಡಿಮೆ ಬೆಲೆಯಲ್ಲಿ ಹೊಸ ಸ್ಮಾರ್ಟ್ವಾಚ್ ಪರಿಚಯಿಸಿದ ಫೈರ್ಬೋಲ್ಟ್ !
- Lifestyle
ನಿಮ್ಮ ಗಂಡ 'ಅಮ್ಮನ ಮಗ'ವಾಗಿರುವುದರಿಂದ ತುಂಬಾನೇ ಸಮಸ್ಯೆ ಆಗುತ್ತಿದೆಯೇ?
- Finance
ಆಧಾರ್ ಕಾರ್ಡ್ ಸುರಕ್ಷತೆಗಾಗಿ ಯುಐಡಿಎಐ ನೂತನ ನಿಯಮ ತಿಳಿಯಿರಿ!
- Automobiles
ಕೈಗೆಟುಕುವ ಬೆಲೆಯಲ್ಲಿ ಮತ್ತೊಂದು ಎಸ್ಯುವಿ ಬಿಡುಗಡೆಗೊಳಿಸಲು ಸಜ್ಜಾದ ಮಾರುತಿ ಸುಜುಕಿ
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಜೀವ ಬೆದರಿಕೆ ಹಿನ್ನೆಲೆ ಬಂದೂಕು ಲೈಸೆನ್ಸ್‌ಗೆ ಅರ್ಜಿ ಸಲ್ಲಿಸಿದ ಸಲ್ಮಾನ್ ಖಾನ್
ಬಾಲಿವುಡ್ ನಟ ಸಲ್ಮಾನ್ ಖಾನ್‌ಗೆ ಭೂಗತ ಲೋಕದಿಂದ ಜೀವ ಬೆದರಿಕೆ ಬಂದಿದ್ದು ಈ ಬಗ್ಗೆ ಪೊಲೀಸರು ಗಂಭೀರವಾಗಿ ತನಿಖೆ ನಡೆಸುತ್ತಿದ್ದಾರೆ.
ಭೂಗತ ಪಾತಕಿಗಳಾದ ಲಾರೆನ್ಸ್ ಬಿಶ್ಣೋಯಿ ಮತ್ತು ಗೋಲ್ಡಿ ಬ್ರಾರ್ ಸಹೋದರರು ಸಲ್ಮಾನ್ ಖಾನ್‌ಗೆ ಜೀವ ಬೆದರಿಕೆ ಹಾಕಿದ್ದಾರೆ ಎನ್ನಲಾಗಿದ್ದು, ಪೊಲೀಸರು ಈಗಾಗಲೇ ಲಾರೆನ್ಸ್ ಬಿಶ್ಣೋಯಿಯ ವಿಚಾರಣೆ ನಡೆಸುತ್ತಿದ್ದಾರೆ.
ಸಲ್ಮಾನ್ ಖಾನ್‌ಗೆ ಜೀವ ಬೆದರಿಕೆ ಬಂದ ಬೆನ್ನಲ್ಲೆ ಸಲ್ಮಾನ್ ನಿವಾಸಕ್ಕೆ, ಕುಟುಂಬಕ್ಕೆ ಹಾಗೂ ಸ್ವತಃ ಸಲ್ಮಾನ್ ಖಾನ್‌ಗೆ ಭದ್ರತೆ ಹೆಚ್ಚು ಮಾಡಲಾಗಿದೆ. ಈ ನಡುವೆ ನಿನ್ನೆ (ಜುಲೈ 23) ರಂದು ಸಲ್ಮಾನ್ ಖಾನ್ ಮುಂಬೈ ಪೊಲೀಸ್ ಜಂಟಿ ಆಯುಕ್ತರನ್ನು ಭೇಟಿಯಾಗಿದ್ದು, ಗನ್ ಲೈಸೆನ್ಸ್‌ಗೆ ಅರ್ಜಿ ಸಲ್ಲಿಸಿದ್ದಾರೆ.
ಬಂದೂಕು ಪರವಾನಗಿ ಪಡೆಯಲು ಸಲ್ಮಾನ್ ಖಾನ್ ಲಿಖಿತ ಮನವಿಯನ್ನು ಮುಂಬೈ ಪೊಲೀಸರಿಗೆ ನೀಡಿದ್ದು ಮುಂಬೈ ಪೊಲೀಸ್ ಜಂಟಿ ಆಯುಕ್ತ ವಿಶ್ವಾಸ್ ನಾಗರೆ ಪಾಟೀಲ್ ಅವರನ್ನು ಭೇಟಿ ಮಾಡಿ ಬಂದೂಕಿನ ಅವಶ್ಯಕತೆಯನ್ನು ಮನದಟ್ಟು ಸಹ ಮಾಡಿದ್ದಾರೆ.

ಬಂದೂಕು ಹಿಂಪಡೆಯಲಾಗಿತ್ತು
ಸಲ್ಮಾನ್ ಖಾನ್ ಬಳಿ ಈ ಹಿಂದೆ ಪರವಾನಗಿ ಹೊಂದಿರುವ ಬಂದೂಕಿತ್ತು. ಆದರೆ ವಿವಿಧ ಅಪರಾಧ ಪ್ರಕರಣಗಳಲ್ಲಿ ಅವರು ಆರೋಪಿ ಆದ ಬಳಿಕ ಅವರಿಂದ ಬಂದೂಕನ್ನು ನಿಯಮದಂತೆ ಹಿಂಪಡೆಯಲಾಯಿತು. ಕೃಷ್ಣ ಮೃಗ ಭೇಟೆ ಪ್ರಕರಣದಲ್ಲಿ ಅವರ ಪರವಾನಗಿ ಹೊಂದಿರುವ ಬಂದೂಕು ಪ್ರಮುಖ ಸಾಕ್ಷ್ಯವಾಗಿತ್ತು.

ಅತ್ಯಾಧುನಿಕ ಬಂದೂಕು ಖರೀದಿ
ಸಲ್ಮಾನ್ ಖಾನ್ ಜೀವ ಬೆದರಿಕೆ ಪ್ರಕರಣದ ಆರೋಪಿ ಲಾರೆನ್ಸ್ ಬಿಶ್ಣೋಯಿಯನ್ನು ಪೊಲೀಸರು ವಿಚಾರಣೆ ನಡೆಸುತ್ತಿದ್ದು, ಸಲ್ಮಾನ್ ಖಾನ್ ಅನ್ನು ಕೊಲ್ಲಲು ಹಲವು ಬಾರಿ ಯತ್ನಿಸಿದ್ದಾಗಿ ಲಾರೆನ್ಸ್ ಹೇಳಿದ್ದಾನೆ. ಸಲ್ಮಾನ್ ಅನ್ನು ಕೊಲ್ಲಲೆಂದೇ ನಾಲ್ಕು ಲಕ್ಷ ಮೌಲ್ಯದ ಬಂದೂಕು ಖರೀದಿಸಿದ್ದಾಗಿಯೂ ಹೇಳಿದ್ದಾನೆ. ಕೃಷ್ಣಮೃಗ ಭೇಟೆ ಆಡಿದ ಸಲ್ಮಾನ್ ಖಾನ್ ವಿರುದ್ಧ ಸೇಡು ತೀರಿಸಿಕೊಳ್ಳಲು ಆತನನ್ನು ಕೊಲ್ಲಲು ಯತ್ನಿಸಿದ್ದಾಗಿ ಬಿಶ್ಣೋಯಿ ಹೇಳಿಕೊಂಡಿದ್ದಾನೆ.

ನಾಲ್ಕು ಲಕ್ಷ ಮೌಲ್ಯದ ಬಂದೂಕು ಖರೀದಿ
ಸಲ್ಮಾನ್ ಖಾನ್ ಅನ್ನು ಕೊಲ್ಲಲು 2018 ರಾಜಸ್ಥಾನದ ಗ್ಯಾಂಗ್‌ಸ್ಟರ್ ಒಬ್ಬನ ಸಹಾಯವನ್ನು ಲಾರೆನ್ಸ್ ಕೇಳಿದ್ದ. ಆಗ ಸಂಪತ್ ನೆಹ್ರಾ ಎಂಬ ಶಾರ್ಪ್ ಶೂಟರ್ ಅನ್ನು ಸಲ್ಮಾನ್ ಖಾನ್ ಅನ್ನು ಕೊಲ್ಲಲು ನೇಮಿಸಲಾಯಿತು. ಆದರೆ ಆತನ ಬಳಿ ಕೇವಲ ಸಾಮಾನ್ಯ ಪಿಸ್ತೂಲು ಇದ್ದಿದ್ದರಿಂದ ಸಲ್ಮಾನ್ ಖಾನ್ ಗೆ ಸರಿಯಾಗಿ ಗುರಿ ಇಡಲಾಗದೆ ಪ್ರಯತ್ನ ವಿಫಲವಾಯಿತು. ಆ ಬಳಿಕ ಲಾರೆನ್ಸ್, ನಾಲ್ಕು ಲಕ್ಷ ರುಪಾಯಿ ಬೆಲೆಯ ಅತ್ಯಾಧುಕಿನ ಆರ್‌ಕೆ ಸ್ಪ್ರಿಂಗ್ ರೈಫಲ್ ಅನ್ನು ಖರೀದಿಸಿದ. ಅತ್ಯಾಧುಕಿನ ಆರ್‌ಕೆ ಸ್ಪ್ರಿಂಗ್ ರೈಫಲ್ ಅನ್ನು ದಿನೇಶ್ ಫೌಜಿ ಹೆಸರಿನ ವ್ಯಕ್ತಿಯಿಂದ ಲಾರೆನ್ಸ್ ಬಿಶ್ಣೋಯಿ ಖರೀದಿ ಮಾಡಿದ್ದ. ಆತ, ಸಲ್ಮಾನ್ ಖಾನ್ ಅನ್ನು ಕೊಲ್ಲಲು ನೇಮಿಸಲಾಗಿದ್ದ ನೆಹರು ಎಂಬಾತನ ಹಳ್ಳಿಯವನೇ ಆಗಿದ್ದ. ರೈಫಲ್ ಖರೀದಿಸಿ ಅನಿಲ್ ಪಾಂಡೆ ಹಾಗೂ ಡಗರ್ ಎಂಬಾತನಿಗೆ ಹಣ ನೀಡಿದ್ದ ಲಾರೆನ್ಸ್. ಆದರೆ ಕೆಲವೇ ದಿನಗಳಲ್ಲಿ ಪೊಲೀಸ್ ರೈಡ್ ಒಂದರಲ್ಲಿ ಡಗರ್ ಎಂಬಾತನ ನಿವಾಸದಿಂದ ಆ ಆರ್ ಕೆ ಸ್ಪ್ರಿಂಗ್ ರೈಫಲ್ ಪೊಲೀಸರ ವಶ ಸೇರಿತು. ಹಾಗಾಗಿ ಸಲ್ಮಾನ್ ಖಾನ್ ಅನ್ನು ಕೊಲ್ಲುವ ಯೋಜನೆ ಮತ್ತೊಮ್ಮೆ ವಿಫಲವಾಯಿತು.

'ರೆಡಿ' ಚಿತ್ರೀಕರಣದ ಸಮಯದಲ್ಲಿ ಕೊಲ್ಲಲು ಯತ್ನ
2018 ಕ್ಕೂ ಮುನ್ನಾ 'ರೆಡಿ' ಸಿನಿಮಾದ ಚಿತ್ರೀಕರಣದ ವೇಳೆ ಸಹ ಸಲ್ಮಾನ್ ಖಾನ್ ಅನ್ನು ಕೊಲ್ಲಲು ಯೋಜನೆ ಹಾಕಲಾಗಿತ್ತು. 2010 ರಲ್ಲಿ 'ರೆಡಿ' ಸಿನಿಮಾದ ಚಿತ್ರೀಕರಣ ನಡೆದಿತ್ತು, ಈ ಸಮಯದಲ್ಲಿ ಸಲ್ಮಾನ್ ಖಾನ್‌ರ ಚಿತ್ರೀಕರಣದ ಸೆಟ್ ಮೇಲೆ ದಾಳಿ ನಡೆಸಿ ಸಲ್ಮಾನ್ ಖಾನ್ ಅನ್ನು ಕೊಲ್ಲಲು ಯೋಜಿಸಲಾಗಿತ್ತು. ಆದರೆ ಕೆಲವು ಭಿನ್ನಾಭಿಪ್ರಾಯಗಳ ಕಾರಣ ಆ ಪ್ಲಾನ್ ಕೊನೆ ನಿಮಿಷದಲ್ಲಿ ರದ್ದಾಯಿತು ಎಂದು ಸ್ವತಃ ಲಾರೆನ್ಸ್ ಬಿಶ್ಣೋಯಿ ಪೊಲೀಸರ ಬಳಿ ಹೇಳಿಕೊಂಡಿದ್ದಾನೆ.