For Quick Alerts
  ALLOW NOTIFICATIONS  
  For Daily Alerts

  ಬೆಂಗಳೂರಿನಲ್ಲಿ ಬದುಕಿಗಾಗಿ ಹೋರಾಡುತ್ತಿರುವ ನಟನ ಸಹಾಯಕ್ಕೆ ಬಂದ ಸಲ್ಮಾನ್ ಖಾನ್

  |

  ಬಾಲಿವುಡ್ ನಟ ಫರಾಜ್ ಖಾನ್ ಅನಾರೋಗ್ಯದಿಂದ ಬಳಲುತ್ತಿದ್ದು, ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಸಾವು ಬದುಕಿಗಾಗಿ ಹೋರಾಟ ಮಾಡುತ್ತಿದ್ದಾರೆ. ಫರಾಜ್ ಖಾನ್ ಆರೋಗ್ಯ ಸ್ಥಿತಿ ಬಗ್ಗೆ ವಿವರಿಸಿದ್ದ ಸಹೋದರ ಆರ್ಥಿಕವಾಗಿ ಸಹಾಯ ಬೇಕಿದೆ ಎಂದು ವಿನಂತಿಸಿದ್ದರು.

  ಆಸ್ಪತ್ರೆಯ ಖರ್ಚಿಗಾಗಿ ನಿಧಿಸಂಗ್ರಹ ಮಾಡಲು ಮುಂದಾಗಿದ್ದೇವೆ ಎಂದು ಅಸಹಾಯಕತೆ ವ್ಯಕ್ತಪಡಿಸಿದ್ದರು. ಫರಾಜ್ ಖಾನ್ ಮತ್ತು ಕುಟುಂಬದ ಸಂಕಷ್ಟಕ್ಕೆ ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ನೆರವಾಗಿದ್ದಾರೆ. ಫರಾಜ್ ಖಾನ್ ಚಿಕಿತ್ಸಾ ವೆಚ್ಚ ಭರಿಸುವುದಾಗಿ ಭರವಸೆ ನೀಡಿದ್ದಾರೆ ಎನ್ನಲಾಗಿದೆ.

  ಬೆಂಗಳೂರಿನ ಆಸ್ಪತ್ರೆಯಲ್ಲಿ ಸಾವು-ಬದುಕಿಗಾಗಿ ಹೋರಾಡುತ್ತಿರುವ ಬಾಲಿವುಡ್ ನಟ

  ಈ ಕುರಿತು ಬಾಲಿವುಡ್ ನಟಿ ಹಾಗೂ ಸಲ್ಮಾನ್ ಖಾನ್ ಜೊತೆ ಕೆಲಸ ಮಾಡಿರುವ ಕಾಶ್ಮೀರಾ ಶಾ ತಮ್ಮ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಸಲ್ಮಾನ್ ಮಾನವೀಯತೆ ಗುಣಕ್ಕೆ ನಾನು ಸದಾ ಚಿರಋಣಿ ಎಂದು ಬರೆದುಕೊಂಡಿದ್ದಾರೆ. ಮುಂದೆ ಓದಿ....

  ಫರಾಜ್ ಸಹಾಯಕ್ಕೆ ಬಂದಿದ್ದಕ್ಕೆ ಧನ್ಯವಾದಗಳು

  ಫರಾಜ್ ಸಹಾಯಕ್ಕೆ ಬಂದಿದ್ದಕ್ಕೆ ಧನ್ಯವಾದಗಳು

  ''ನೀವು ನಿಜವಾಗಿಯೂ ದೊಡ್ಡ ವ್ಯಕ್ತಿ. ಫರಾಜ್ ಖಾನ್ ಅವರ ವೈದ್ಯಕೀಯ ಖರ್ಚು ನೋಡಿಕೊಂಡಿದ್ದಕ್ಕಾಗಿ ಧನ್ಯವಾದಗಳು. ಫರಾಜ್ ಖಾನ್ ಗಂಭೀರ ಸ್ಥಿತಿಯಲ್ಲಿದ್ದಾರೆ, ಸಲ್ಮಾನ್ ಅವರ ಪಕ್ಕದಲ್ಲಿ ನಿಂತು ಇತರರಿಗೆ ಸಹಾಯ ಮಾಡುವಂತೆ ಅವರಿಗೆ ಸಹಾಯ ಮಾಡಿದ್ದಾರೆ. ನಾನು ಯಾವಾಗಲೂ ಅವರಿಗೆ ನಿಜವಾದ ಅಭಿಮಾನಿಯಾಗಿ ಉಳಿಯುತ್ತೇನೆ. ಜನರು ಈ ಪೋಸ್ಟ್ ಅನ್ನು ಇಷ್ಟಪಡದಿದ್ದರೆ ನಾನು ಹೆದರುವುದಿಲ್ಲ. ನೀವು ಬೇಕಾದರೆ ನನ್ನನ್ನು ಅನ್‌ಫಾಲೋ ಮಾಡಬಹುದು. ಇದು ನನ್ನ ಅನಿಸಿಕೆ. ಈ ಚಿತ್ರರಂಗದಲ್ಲಿ ನಾನು ಭೇಟಿಯಾದ ಅತ್ಯಂತ ವಿನಮ್ರ ವ್ಯಕ್ತಿ ನೀವು ಎಂದು ನಾನು ಭಾವಿಸುತ್ತೇನೆ'' ಎಂದು ಬರೆದುಕೊಂಡಿದ್ದಾರೆ.

  ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಫರಾಜ್

  ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಫರಾಜ್

  ''ಫರಾಜ್ ಸುಮಾರು ಒಂದು ವರ್ಷದಿಂದ ಕೆಮ್ಮು ಮತ್ತು ಅವನ ಎದೆಯಲ್ಲಿ ಸೋಂಕಿನಿಂದ ಬಳಲುತ್ತಿದ್ದಾರೆ. ಬೆಂಗಳೂರಿನ ವಿಕ್ರಂ ಆಸ್ಪತ್ರೆಗೆ ದಾಖಲಿಸಲಾಗಿದೆ, ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಮೆದುಳಿನಲ್ಲಿ ಹರ್ಪಿಸ್ ಸೋಂಕು ಪತ್ತೆಯಾದ ಬಳಿಕ ಮೂರು ಬಾರಿ ರೋಗಗ್ರಸ್ತವಾಗುವಿಕೆ ಆಯಿತು. ಅದಾದ ಬಳಿಕ ಅವನ ಆರೋಗ್ಯ ಸ್ಥಿತಿ ಮತ್ತಷ್ಟು ಹದಗೆಟ್ಟಿತು. ಕಳೆದ ಐದು ದಿನಗಳಿಂದ ವೆಂಟಿಲೇಟರ್‌ನಲ್ಲಿದ್ದಾರೆ ಮತ್ತು ವೈದ್ಯರ ಪ್ರಕಾರ, ಅವರ ಬದುಕುಳಿಯುವ ಸಾಧ್ಯತೆಗಳು ಶೇಕಡಾ 50% ರಷ್ಟು ಮಾತ್ರ ಸಾಧ್ಯತೆ ಇದೆ. ಅವರು ಚಿಕಿತ್ಸೆಗೆ ಸ್ಪಂದಿಸುತ್ತಿದ್ದರೂ ಪ್ರಜ್ಞಾಹೀನರಾಗಿದ್ದಾರೆ" ಎಂದು ಸಹೋದರ ಫಹ್ಮಾನ್ ಮಾಹಿತಿ ನೀಡಿದ್ದರು.

  ನಮಗೆ 25 ಲಕ್ಷ ರೂ ಹಣ ಬೇಕು

  ನಮಗೆ 25 ಲಕ್ಷ ರೂ ಹಣ ಬೇಕು

  "ಹೆಚ್ಚಿನ ಚಿಕಿತ್ಸೆಗಾಗಿ ನಮಗೆ 25 ಲಕ್ಷ ರೂ ಹಣ ಬೇಕು. ನಮ್ಮ ಬಳಿಯಿದ್ದ ಹಣವನ್ನು ಈಗಾಗಲೇ ಚಿಕಿತ್ಸೆಗೆ ಖರ್ಚು ಮಾಡಲಾಗಿದೆ. ಮುಂದೆ ಏನಾಗಲಿದೆ ಅಥವಾ ಚಿಕಿತ್ಸೆಗಾಗಿ ನಾವು ಹೇಗೆ ಹಣಕಾಸು ವ್ಯವಸ್ಥೆ ಮಾಡಲಿದ್ದೇವೆ ಎಂದು ನನಗೆ ತಿಳಿದಿಲ್ಲ. ಕೊರೊನಾದಿಂದ ಪ್ರತಿಯೊಬ್ಬರೂ ಹಣಕಾಸಿನ ಬಿಕ್ಕಟ್ಟಿನಲ್ಲಿದ್ದಾರೆ. ನಾವು ಭರವಸೆಯನ್ನು ಕಳೆದುಕೊಳ್ಳಲು ಸಾಧ್ಯವಿಲ್ಲ. ಆದ್ದರಿಂದ ನಾವು ನಿಧಿಸಂಗ್ರಹದ ಮೂಲಕ ಸಹಾಯವನ್ನು ಕೇಳಲು ಬಯಸುತ್ತಿದ್ದೇವೆ"ಎಂದು ನಟನ ಸಹೋದರ ಹೇಳಿಕೊಂಡಿದ್ದರು. ಇದೀಗ, ಸಲ್ಮಾನ್ ಖಾನ್ ಸಹಾಯಕ್ಕೆ ಬಂದಿದ್ದಾರೆ.

  ಯಾರು ಈ ಫರಾಜ್ ಖಾನ್?

  ಯಾರು ಈ ಫರಾಜ್ ಖಾನ್?

  ನಟ ಯೂಸೂಫ್ ಖಾನ್ ಅವರ ಪುತ್ರ ಫರಾಜ್ ಖಾನ್ 1989ರಲ್ಲಿ 'ಮೈನೇ ಪ್ಯಾರ್ ಕಿಯಾ' ಚಿತ್ರಕ್ಕೆ ನಾಯಕರಾಗಿ ಆಯ್ಕೆಯಾಗಿದ್ದರು. ಚಿತ್ರೀಕರಣ ಸಹ ಆರಂಭವಾಗಿತ್ತು. ನಂತರ ಆ ಜಾಗಕ್ಕೆ ಸಲ್ಮಾನ್ ಖಾನ್ ಬಂದರು. 1996ರಲ್ಲಿ 'ಫರೀಬ್' ಚಿತ್ರದಲ್ಲಿ ನಟಿಸಿದರು. ರಾಣಿ ಮುಖರ್ಜಿ ಜೊತೆ 'ಮೆಹಂದಿ' ಸಿನಿಮಾ ಮಾಡಿದರು.

  English summary
  Bollywood actor Salman Khan pays ailing actor Faraaz Khan’s medical bills; Kashmera Shah lauds him.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X