»   » ಕತ್ರಿನಾ ವ್ಯಾಮೋಹ; ಬದಲಾಗದ ಸಲ್ಮಾನ್ ಖಾನ್

ಕತ್ರಿನಾ ವ್ಯಾಮೋಹ; ಬದಲಾಗದ ಸಲ್ಮಾನ್ ಖಾನ್

Posted By:
Subscribe to Filmibeat Kannada

ಬಾಲಿವುಡ್ ಬ್ಯಾಡ್ ಬಾಯ್ ಖ್ಯಾತಿಯ ಸಲ್ಮಾನ್ ಖಾನ್, ಕತ್ರಿನಾ ಬಗ್ಗೆ ಇನ್ನೂ ಭಾರಿ ವ್ಯಾಮೋಹ ಹೊಂದಿದ್ದಾರೆ ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ಅದೆಷ್ಟೋ ದಿನಗಳ ಹಿಂದೆಯೇ ಈ ಇಬ್ಬರ ಡೇಟಿಂಗ್ ಹಾಗೂ ಲವ್ ಮುರಿದುಬಿದ್ದಿತ್ತು. ಆದರೆ ಇಬ್ಬರೂ ಉತ್ತಮ ಸ್ನೇಹಿತರಾಗಿಯೇ ಮುಂದುವರಿದಿದ್ದರು. ಆದರೆ ಇನ್ನೂ ಸಲ್ಲೂಗೆ ಕತ್ರಿನಾ ಮೇಲಿನ ವ್ಯಾಮೋಹ ಕಡಿಮೆಯೇ ಆಗಿಲ್ಲ ಎಂಬುದು ಮತ್ತೆ ಬೆಳಕಿಗೆ ಬಂದಿದೆ.

ಆದರೆ ಸಲ್ಮಾನ್ ವಿಷಯ ಜಗತ್ತಿಗೆ ಗೊತ್ತು. ಅವರು ಬದಲಾಗಿದ್ದಾರೆ ಎಂದರೆ ಸಾಮಾನ್ಯವಾಗಿ ಯಾರೂ ನಂಬುವುದಿಲ್ಲ. ಈ ಬಾರಿಯೂ ಅವರು ಕತ್ರಿನಾರಿಂದ ದೂರವಾಗಿದ್ದಾರೆ ಎಂಬ ಮಾತನ್ನು ಯಾರೂ ನಂಬಿರಲಿಲ್ಲ. ಮತ್ತೆ ಅದೇ ಆಗಿದೆ, ಅವರಿಬ್ಬರೂ ಜೊತೆಯಾದರೆ ಎಂದಿನಂತೆ ಸಲ್ಮಾನ್ ಕತ್ರಿನಾ ಬಗ್ಗೆ ಬಹಳ ಅಕ್ಕರೆ ತೋರಿಸುತ್ತಾರೆ. ತೀರಾ ಇತ್ತೀಚಿಗೂ ಅದು ಮುಂದುವರಿದಿದೆ.

ಮೊನ್ನೆ ಜೀ ಟಿವಿ ಶೋ ಒಂದಕ್ಕೆ ತಮ್ಮ 'ಏಕ್ ಥಾ ಟೈಗರ್' ಚಿತ್ರದ ಪ್ರಚಾರಕ್ಕೆ ಆಗಮಿಸಿದ್ದ ಸಲ್ಮಾನ್ ಮತ್ತು ಕತ್ರಿನಾ ಜೋಡಿ ಸಾಕಷ್ಟು ಮಾತನಾಡಿದ್ದಾರೆ. ಈ ವೇಳೆ ಸಲ್ಲೂ, ಕತ್ರಿನಾ ಬಗ್ಗೆ ಮೀತಿಮೀರಿದ ಆಸ್ಥೆ ವಹಿಸಿದ್ದು ಎಲ್ಲರ ಗಮನಕ್ಕೆ ಬಂದಿದೆ. ಪ್ರೇಕ್ಷಕರ ಜೊತೆ ಹೆಜ್ಜೆಹಾಕಲು ಸಲ್ಲೂಗೆ ನಿರೂಪಕರು ಹೇಳಿದರೆ, ತಾವು ಕತ್ರಿನಾ ಜೊತೆ ಹೆಜ್ಜೆ ಸೇರಿಸುವುದಾಗಿ ಹೇಳಿದ್ದಾರೆ ಸಲ್ಲೂ.

ಅಷ್ಟೇ ಏಕೆ, ಪ್ರೇಕ್ಷಕರು ಕತ್ರಿನಾ ಜೊತೆ ಹೆಜ್ಜೆ ಹಾಕುವುದಾದರೆ ತಾವು ಅದನ್ನು ಡೀಲ್ ಮಾಡುವುದಾಗಿ ಘೋಷಿಸಿದರು ಸಲ್ಮಾನ್. ಈ ಮಾತು ಕೇಳಿದವರು ಕಕ್ಕಾಬಿಕ್ಕಿ. ಅಂದರೆ, ಕತ್ರಿನಾ ತಮಗೆ ಸಂಬಂಧಿಸಿದವರು ಅಂದಕೊಂಡರೇ ಸಲ್ಲೂ? ಎಂಬುದು ಅಲ್ಲಿದ್ದವರ ಪ್ರಶ್ನೆಯಾಗಿತ್ತು. ಅದಕ್ಕೆ ಉತ್ತರ ಮೊದಲೇ ಸಿಕ್ಕಿತ್ತು ಎನ್ನಿ. ಒಟ್ಟಿನಲ್ಲಿ ಸಲ್ಲೂ ಬದಲಾಗಿಲ್ಲ ಎನ್ನಬಹುದು. (ಏಜೆನ್ಸೀಸ್) 

English summary
Salman Khan and Katrina Kaif are not dating now and decided to remain good friends even after their break up. But, Salman still cares for Katrina a lot. Recently, promoting EK Tha Tiger on a TV show, he also showed possessiveness for Katrina Kaif.
 
Please Wait while comments are loading...