For Quick Alerts
  ALLOW NOTIFICATIONS  
  For Daily Alerts

  ಕೊರೊನಾ ಸಮಯದಲ್ಲಿ ಸುಂದರ ಚಿತ್ರ ಹಂಚಿಕೊಂಡ ಸಲ್ಮಾನ್ ಖಾನ್

  |

  ಕೊರೊನಾ ವೈರಸ್ ಕಾರಣದಿಂದ ಇಡೀಯ ರಾಷ್ಟ್ರವೇ ಸಂಕ್ಟದಲ್ಲಿದೆ. ದೇಶದಲ್ಲಿ ಕೊರೊನಾ ಸಂಕಟದ ಜೊತೆಗೆ ಕೋಮು ಸಂಕಟವೂ ಸಣ್ಣದಾಗಿ ಉದ್ಭವವಾಗಿದೆ.

  ವೈದ್ಯರಿಗೆ ಕಲ್ಲು ಹೊಡಯುವುದು ನಿಲ್ಲಿಸಿ ಎಂದ ಸಲ್ಮಾನ್ ಖಾನ್

  ಭಾರತದಲ್ಲಿ ಕೊರೊನಾ ಹೆಚ್ಚು ಹರಡಲು ಒಂದು ಕೋಮಿನವರು ಕಾಣವೆಂದು ಮತ್ತೊಂದು ಕೋಮಿನವರು ದೂರುತ್ತಿದ್ದಾರೆ. ಕೆಲವು ಮಾಧ್ಯಮಗಳು ಇದಕ್ಕೆ ತುಪ್ಪ ಸುರಿಯುತ್ತಿವೆ.

  ಹುಚ್ಚ ಸಿನಿಮಾ ರೀಮೇಕ್ ಮಾಡುವಾಗ ಹೀಗೆ ಹೇಳಿದ್ದರು ಸಲ್ಮಾನ್ ಖಾನ್ಹುಚ್ಚ ಸಿನಿಮಾ ರೀಮೇಕ್ ಮಾಡುವಾಗ ಹೀಗೆ ಹೇಳಿದ್ದರು ಸಲ್ಮಾನ್ ಖಾನ್

  ತಬ್ಲಿಘಿ ಜಮಾತ್ ಅನ್ನು ನೆವವಾಗಿಟ್ಟುಕೊಂಡು ಮುಸ್ಲಿಮರ ವಿರುದ್ಧ ಇತರ ಕೋಮನ್ನು ಎತ್ತಿಕಟ್ಟುವ ಹುನ್ನಾರವನ್ನೂ ಸಾಮಾಜಿಕ ಜಾಲತಾಣದಲ್ಲಿ ಮಾಡಲಾಗುತ್ತಿದೆ. ಕೆಲವು ರಾಜಕಾರಣಿಗಳು ಸಹ ಇದಕ್ಕೆ ದನಿ ಗೂಡಿಸಿದ್ದಾರೆ. ಆದರೆ ಯಡಿಯೂರಪ್ಪ ಮತ್ತು ಇತರ ಕೆಲವು ನಿಜದ ನಾಯಕರು ಇದನ್ನು ತೀವ್ರವಾಗಿ ಖಂಡಿಸಿದ್ದಾರೆ.

  ಸಲ್ಮಾನ್ ಹಂಚಿಕೊಂಡಿದ್ದಾರೊಂದು ಚಿತ್ರ

  ಸಲ್ಮಾನ್ ಹಂಚಿಕೊಂಡಿದ್ದಾರೊಂದು ಚಿತ್ರ

  ಇಂಥಹಾ ಕ್ಲಿಷ್ಟಕರ ಸನ್ನಿವೇಶದಲ್ಲಿ ನಟ ಸಲ್ಮಾನ್ ಖಾನ್ ಅವರು ಅದ್ಭುತವಾದ ಚಿತ್ರವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಈ ಚಿತ್ರ ಲಕ್ಷಾಂತರ ಜನರ ಮನ ಗೆದ್ದಿದೆ. ಸ್ವತಃ ಚಿತ್ರಕಾರರೂ ಆಗಿರುವ ಸಲ್ಮಾನ್ ಕಲಾತ್ಮಕ ಚಿತ್ರವನ್ನು ಚೆನ್ನಾಗಿ ಗುರುತಿಸಬಲ್ಲರು.

  ಕೋಮು ಸೌರ್ಹಾರ್ದ ಸಾರುತ್ತಿರುವ ಚಿತ್ರ

  ಕೋಮು ಸೌರ್ಹಾರ್ದ ಸಾರುತ್ತಿರುವ ಚಿತ್ರ

  ಕೋಮು ಸೌರ್ಹಾರ್ದ ಸಾರುವ ಜೊತೆಗೆ ಕೊರೊನಾ ಸಮಯದಲ್ಲಿ ಜಾಗೃತಿಯನ್ನೂ ಮೂಡಿಸುವ ಚಿತ್ರ ಇದಾಗಿದೆ. ಸಕಲ ಧರ್ಮವನ್ನು ಗೌರವಿಸುವ ಜೊತೆಗೆ ಕೊರೊನಾ ಲಾಕ್‌ಡೌನ್ ಅನ್ನೂ ಪಾಲಿಸುವಂತೆ ಸಲ್ಮಾನ್ ಹಂಚಿಕೊಂಡಿರುವ ಚಿತ್ರ ಸಾರಿ ಹೇಳುತ್ತಿದೆ.

  ಸಲ್ಮಾನ್ ಖಾನ್ ಟ್ವಿಟ್ಟರ್ ಗೆ ಬಂದು 10 ವರ್ಷ: ಇನ್ನೂ ಬದಲಾಗಿಲ್ಲ ಸಲ್ಲು ಡಿಪಿಸಲ್ಮಾನ್ ಖಾನ್ ಟ್ವಿಟ್ಟರ್ ಗೆ ಬಂದು 10 ವರ್ಷ: ಇನ್ನೂ ಬದಲಾಗಿಲ್ಲ ಸಲ್ಲು ಡಿಪಿ

  ಇಬ್ಬರು ಭಿನ್ನ ವ್ಯಕ್ತಿಗಳು ದೇವರಿಗೆ ನಮಿಸುತ್ತಿರುವ ದೃಶ್ಯ

  ಇಬ್ಬರು ಭಿನ್ನ ವ್ಯಕ್ತಿಗಳು ದೇವರಿಗೆ ನಮಿಸುತ್ತಿರುವ ದೃಶ್ಯ

  ಸಲ್ಮಾನ್ ಖಾನ್ ಹಂಚಿಕೊಂಡಿರುವ ಚಿತ್ರದಲ್ಲಿ ಒಂದೇ ಅಪಾರ್ಟ್‌ಮೆಂಟ್ ಒಂದರಲ್ಲಿ ತನ್ನ ಮನೆಯ ಮುಂದೆ ಹಿಂದು ವ್ಯಕ್ತಿ ದೇವರಿಗೆ ಕೈ ಮುಗಿದಿದ್ದರೆ, ಅದೇ ಮನೆಯ ಕೆಳಗಿನ ಮನೆಯ ಮುಸ್ಲಿಂ ವ್ಯಕ್ತಿ ಅಲ್ಲಾಹುನನ್ನು ನೆನಸುತ್ತಿದ್ದಾನೆ.

  ಸಾವಿರಾರು ಮಂದಿ ಲೈಕ್ ಮಾಡಿದ್ದಾರೆ

  ಸಾವಿರಾರು ಮಂದಿ ಲೈಕ್ ಮಾಡಿದ್ದಾರೆ

  ಸಲ್ಮಾನ್ ಖಾನ್ ಅವರು ಹಂಚಿಕೊಂಡಿರುವ ಈ ಚಿತ್ರವನ್ನು ಕೆಲವೇ ಗಂಟೆಗಳಲ್ಲಿ ಸಾವಿರಾರು ಮಂದಿ ಲೈಕ್ ಮಾಡಿದ್ದಾರೆ. ಸಾವಿರಾರು ಮಂದಿ ಕಮೆಂಟ್ ಮಾಡಿದ್ದಾರೆ. ರೀಟ್ವೀಟ್ ಸಹ ಮಾಡಿದ್ದಾರೆ. ಸದ್ಯದ ಪರಿಸ್ಥಿತಿಗೆ ಸೂಕ್ತವಾದ ಚಿತ್ರ ಇದಾಗಿದೆ.

  ಬಾಲಿವುಡ್‌ ಖ್ಯಾತ ನಟರ ನಿಜವಾದ ಹೆಸರುಗಳು ಇಲ್ಲಿವೆ ನೋಡಿಬಾಲಿವುಡ್‌ ಖ್ಯಾತ ನಟರ ನಿಜವಾದ ಹೆಸರುಗಳು ಇಲ್ಲಿವೆ ನೋಡಿ

  ಕೊರೊನಾ ವಿರುದ್ಧ ಹೋರಾಟಕ್ಕೆ ದೇಣಿಗೆ ನೀಡಿರುವ ನಟ

  ಕೊರೊನಾ ವಿರುದ್ಧ ಹೋರಾಟಕ್ಕೆ ದೇಣಿಗೆ ನೀಡಿರುವ ನಟ

  ಸಲ್ಮಾನ್ ಖಾನ್ ಅವರು ಕೊರೊನಾ ವಿರುದ್ಧ ಹೋರಾಟಕ್ಕೆ ಬೆಂಬಲ ನೀಡಿದ್ದಾರೆ. ಹಣ ದೇಣಿಗೆ ನೀಡುವ ಜೊತೆಗೆ ಆಹಾರ, ದಿನಸಿ ಸಾಮಗ್ರಿಗಳನ್ನು ಅವರು ತಮ್ಮ ಫೌಂಡೇಶನ್, 'ಬೀಯಿಂಗ್ ಹ್ಯೂಮನ್' ಮೂಲಕ ನೀಡುತ್ತಿದ್ದಾರೆ.

  English summary
  Salman Khan shared a picture in tweet today which is seting example of communal harmony.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X