For Quick Alerts
  ALLOW NOTIFICATIONS  
  For Daily Alerts

  ವಿಡಿಯೋ : 'ಭಾರತ್' ಚಿತ್ರದ ಮತ್ತೊಂದು ಮಸ್ತ್ ಹಾಡು ರಿಲೀಸ್

  |

  ಸಲ್ಮಾನ್ ಖಾನ್ ನಟನೆಯ 'ಭಾರತ್' ಸಿನಿಮಾದ ಮತ್ತೊಂದು ಹಾಡು ಬಿಡುಗಡೆಯಾಗಿದೆ. ಚಿತ್ರದ ಜಿಂದಾ ಸಾಂಗ್ ಇಂದು ರಿಲೀಸ್ ಆಗಿದೆ.

  ಸಿನಿಮಾದ ಪ್ರಮುಖ ಹಾಡು ಇದಾಗಿದೆ. ಹಾಡಿನ ಮೂಲಕ ಸಿನಿಮಾ ಮೇಲಿನ ಕುತೂಹಲವನ್ನು ಹೆಚ್ಚು ಮಾಡಲಾಗಿದೆ. ಚಿತ್ರದ ಮುಖ್ಯ ದೃಶ್ಯಗಳು ಹಾಡಿನಲ್ಲಿ ಬಂದು ಹೋಗುತ್ತವೆ. ಹಾಡು ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ 5 ಲಕ್ಷಕ್ಕೂ ಅಧಿಕ ಹಿಟ್ಸ್ ಪಡೆದುಕೊಂಡಿದೆ.

  ವಿಡಿಯೋ : 'ಭಾರತ್' ಸ್ಲೋ ಮೋಷನ್ ಹಾಡಿಗೆ ಸಲ್ಮಾನ್, ದಿಶಾ ಡ್ಯಾನ್ಸ್

  ಈ ಹಿಂದೆ ಬಿಡುಗಡೆಯಾಗಿದ್ದ ಸ್ಲೋ ಮೋಷನ್ ಹಾಡು ಹಿಟ್ ಆಗಿದ್ದು, ಈ ಹಾಡು ಕೂಡ ಅದೇ ಹಾದಿಯಲ್ಲಿ ಸಾಗಿದೆ. 'ಭಾರತ್' ಸಲ್ಲು ಅಭಿಮಾನಿಗಳಿಗೆ ಭರ್ಜರಿ ಮನರಂಜನೆ ನೀಡುವ ಸೂಚನೆ ನೀಡಿದೆ.

  ಚಿತ್ರದಲ್ಲಿ ಸಲ್ಮಾನ್ ಎರಡು ಗೆಟಪ್ ಗಳಲ್ಲಿ ಕಾಣಿಸಿಕೊಂಡಿದ್ದಾರೆ. ವಯಸ್ಸಾದ ಸಲ್ಲು ಲುಕ್ ಗಮನ ಸೆಳೆದಿದೆ. 1964 ರಿಂದ ಪ್ರಾರಂಭವಾಗುವ ಈ ಕತೆ 2010ರಲ್ಲಿ ಮುಕ್ತಾಯವಾಗುತ್ತೆ. ಈ ಎಲ್ಲಾ ಕಾಲಘಟ್ಟಕ್ಕೂ ಹೊಂದಿಕೊಳ್ಳವ ಹಾಗೆ ಸಲ್ಮಾನ್ ಗೆಟಪ್ ಬದಲಾಯಿಸಿಕೊಂಡಿದ್ದಾರೆ.

  ದಿಶಾ ಪಟಾನಿ ಹಾಗೂ ಕತ್ರೀನಾ ಕೈಫ್ ಸಿನಿಮಾದ ನಾಯಕಿಯರಾಗಿದ್ದಾರೆ. ನಿರ್ದೇಶಕ ಅಲಿ ಅಬ್ಬಾಸ್ ಜಫರ್ ಚಿತ್ರದ ನಿರ್ದೇಶನ ಮಾಡಿದ್ದಾರೆ. ಸಿನಿಮಾ ಜೂನ್ 5 ರಂದು ಬಿಡುಗಡೆಯಾಗಲಿದೆ.

  English summary
  Bollywood bad boy Salman Khan starrer Bharat movie Zinda song released. This movie is directed by ali abbas zafer.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X