For Quick Alerts
  ALLOW NOTIFICATIONS  
  For Daily Alerts

  ಸಲ್ಲು 'ಕಿಸಿ ಕಾ ಭಾಯ್ ಕಿಸಿ ಕಿ ಜಾನ್' ಚಿತ್ರಕ್ಕೂ ದರ್ಶನ್ ನಟಿಸಿದ್ದ ಆ ಚಿತ್ರಕ್ಕೂ ಇದೆ ಲಿಂಕ್!

  |

  ಸಲ್ಮಾನ್ ಖಾನ್ ನಟನೆಯ 'ಕಿಸಿ ಕಾ ಭಾಯ್ ಕಿಸಿ ಕಿ ಜಾನ್' ಚಿತ್ರದ ಸಣ್ಣ ಟೀಸರ್ ಇತ್ತೀಚೆಗೆ ಬಿಡುಗಡೆ ಆಗಿತ್ತು. ಸಲ್ಮಾನ್ ಖಾನ್ ಬೈಕ್ ಏರಿ ಉದ್ದನೆಯ ಕೂದಲು ಸ್ಟೈಲಿಶ್ ಲುಕ್‌ನಲ್ಲಿ ದರ್ಶನ ಕೊಟ್ಟಿದ್ದರು. ಈ ಚಿತ್ರದ ಕಥೆಗೂ ದರ್ಶನ್ ನಟಿಸಿದ್ದ 'ಒಡೆಯ' ಚಿತ್ರಕ್ಕೂ ಲಿಂಕ್ ಇದೆ. ಈ ವಿಚಾರ ಈಗ ಬಹಿರಂಗವಾಗಿದೆ.

  ಬಾಲಿವುಡ್ ಬಾಕ್ಸಾಫೀಸ್ ಸುಲ್ತಾನ್ ಸಲ್ಮಾನ್ ಖಾನ್ ಸಿನಿಮಾಗಳಿಗೆ ಇರುವ ಕ್ರೇಜ್ ಬಗ್ಗೆ ಬಿಡಿಸಿ ಹೇಳುವುದು ಬೇಕಾಗಿಲ್ಲ. ಇನ್ನು ಸಲ್ಲು ಸಾಕಷ್ಟು ಸೌತ್ ಸಿನಿಮಾಗಳನ್ನು ರೀಮೆಕ್ ಮಾಡಿ ಗೆದ್ದಿದ್ದಾರೆ. 'ಕಿಸಿ ಕಾ ಭಾಯ್ ಕಿಸಿ ಕಿ ಜಾನ್' ರೀಮೆಕ್ ಸಿನಿಮಾ ಅನ್ನಲಾಗ್ತಿದೆ. ಕಳೆದ ಮೇ ತಿಂಗಳಲ್ಲೇ ಈ ಚಿತ್ರದ ಮುಹೂರ್ತ ನೆರವೇರಿತ್ತು. ಮೊದಲಿಗೆ 'ಕಭಿ ಈದ್ ಕಭಿ ದಿವಾಲಿ' ಎನ್ನುವ ಟೈಟಲ್ ಫೈನಲ್ ಮಾಡಿದ್ದರು. ನಂತರ 'ಭಾಯ್ಜಾನ್' ಅನ್ನುವ ಟೈಟಲ್ ಚಾಲ್ತಿಗೆ ಬಂದಿತ್ತು. ಇದೀಗ ಇವೆರಡನ್ನೂ ಬಿಟ್ಟು ಹೊಸ ಟೈಟಲ್ ಫಿಕ್ಸ್ ಮಾಡಿದ್ದಾರೆ.

  ಆ ಊರಿನ ಘಟನೆಯೇ ಸ್ಫೂರ್ತಿ: 'D56' ಸಿನಿಮಾ ಸ್ಟೋರಿ ಅದೇನಾ?ಆ ಊರಿನ ಘಟನೆಯೇ ಸ್ಫೂರ್ತಿ: 'D56' ಸಿನಿಮಾ ಸ್ಟೋರಿ ಅದೇನಾ?

  ಫರ್ಹಾದ್ ಸಮ್ಜಿ ನಿರ್ದೇಶನದ 'ಕಿಸಿ ಕಾ ಭಾಯ್ ಕಿಸಿ ಕಿ ಜಾನ್' ಚಿತ್ರದಲ್ಲಿ ಪೂಜಾ ಹೆಗ್ಡೆ ನಾಯಕಿಯಾಗಿ ನಟಿಸ್ತಿದ್ದಾರೆ. ಚಿತ್ರಕ್ಕೆ 'KGF' ಸಿನಿಮಾ ಖ್ಯಾತಿಯ ಕನ್ನಡಿಗ ರವಿಬಸ್ರೂರು ಹಿನ್ನೆಲೆ ಸಂಗೀತ ಸಂಯೋಜನೆ ಮಾಡ್ತಿರೋದು ವಿಶೇಷ. ಸದ್ಯ ಚಿತ್ರದ ಟೀಸರ್ ಸಿಕ್ಕಾಪಟ್ಟೆ ಸೌಂಡ್ ಮಾಡ್ತಿದೆ.

   'ಒಡೆಯ' ಚಿತ್ರದ ಕಥೆಯಲ್ಲಿ ಸಲ್ಲು

  'ಒಡೆಯ' ಚಿತ್ರದ ಕಥೆಯಲ್ಲಿ ಸಲ್ಲು

  8 ವರ್ಷಗಳ ಹಿಂದೆ ತಮಿಳಿನಲ್ಲಿ ಅಜಿತ್ ನಟಿಸಿದ್ದ 'ವೀರಂ' ಸಿನಿಮಾ ಸೂಪರ್ ಹಿಟ್ ಆಗಿತ್ತು. ನಂತರ ಈ ಸಿನಿಮಾ ಕನ್ನಡ ಹಾಗೂ ತೆಲುಗಿಗೆ ರೀಮೆಕ್ ಆಗಿತ್ತು. ಕನ್ನಡದಲ್ಲಿ 'ಒಡೆಯ' ಆಗಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟಿಸಿದ್ರೆ, ತೆಲುಗಿನಲ್ಲಿ 'ಕಾಟಮರಾಯುಡು' ಆಗಿ ಪವನ್ ಕಲ್ಯಾಣ್ ಅಬ್ಬರಿಸಿದ್ದರು. ಆದರೆ ಎರಡೂ ಭಾಷೆಗಳಲ್ಲಿ ಸಿನಿಮಾ ಅಷ್ಟಾಗಿ ಸದ್ದು ಮಾಡಲಿಲ್ಲ. ಇದೇ ಕಥೆಯಲ್ಲಿ ಈಗ ಸಲ್ಲುಮಿಯಾ ಬಣ್ಣ ಹಚ್ಚಿದ್ದಾರೆ.

  ಸಿಧು ಮೂಸೆವಾಲಾ ಕೊಂದವರ ಹಿಟ್‌ಲಿಸ್ಟ್‌ನಲ್ಲಿ ಸಲ್ಮಾನ್ ಖಾನ್ಸಿಧು ಮೂಸೆವಾಲಾ ಕೊಂದವರ ಹಿಟ್‌ಲಿಸ್ಟ್‌ನಲ್ಲಿ ಸಲ್ಮಾನ್ ಖಾನ್

  4 ಜನ ಸಹೋದರರ ಅಣ್ಣನಾಗಿ ಸಲ್ಮಾನ್

  4 ಜನ ಸಹೋದರರ ಅಣ್ಣನಾಗಿ ಸಲ್ಮಾನ್

  ಸಿನಿಮಾ ಕಥೆ ಬಹಳ ಸಿಂಪಲ್. ಊರಿನಲ್ಲಿ ಎಲ್ಲರಿಗೂ ಬೇಕಾಗಿರುವ ವ್ಯಕ್ತಿ ನಾಯಕ. ಅವನಿಗೆ 4 ಜನ ತಮ್ಮಂದಿರು. ಆದರೆ ಆತನಿಗೆ ಮದುವೆ ಅಂದರೆ ಇಷ್ಟ ಇರುವುದಿಲ್ಲ. ತಮ್ಮಂದಿರೆಲ್ಲಾ ಸೇರಿ ಅಣ್ಣನಿಗೆ ಮದುವೆ ಮಾಡಲು ಮುಂದಾಗುತ್ತಾರೆ. ಆತನ ಬಾಲ್ಯದ ಸ್ನೇಹಿತೆ ಮೇಲೆ ಪ್ರೀತಿ ಹುಟ್ಟುವಂತೆ ಮಾಡ್ತಾರೆ. ಅಲ್ಲಿಂದ ಮುಂದೆ ಏನೆಲ್ಲಾ ನಡೆಯುತ್ತೆ ಅನ್ನೋದು ಸಿನಿಮಾ ಕಥೆ. ಕಂಪ್ಲೀಟ್ ಫ್ಯಾಮಿಲಿ ನೋಡುವಂತಹ ಕಥೆ ಚತ್ರದಲ್ಲಿದೆ. ಇದನ್ನು ಬಾಲಿವುಡ್‌ಗೆ ತಕ್ಕಂತೆ ಬದಲಿಸಿಕೊಂಡು ಸಿನಿಮಾ ಮಾಡ್ತಿದ್ದಾರೆ.

  ಸಲ್ಲು ಜೊತೆ ವಿಕ್ಟರಿ ವೆಂಕಟೇಶ್ ಹವಾ

  ಸಲ್ಲು ಜೊತೆ ವಿಕ್ಟರಿ ವೆಂಕಟೇಶ್ ಹವಾ

  ತೆಲುಗಿನ ವಿಕ್ಟರಿ ವೆಂಕಟೇಶ್ 'ಕಿಸಿ ಕಾ ಭಾಯ್ ಕಿಸಿ ಕಿ ಜಾನ್' ಚಿತ್ರದ ಸ್ಪೆಷಲ್ ರೋಲ್‌ನಲ್ಲಿ ನಟಿಸ್ತಿದ್ದಾರೆ. ಇನ್ನು ಸಹೋದರರ ಪಾತ್ರಗಳಲ್ಲಿ ರಾಘವ್ ಜಯಲ್, ಜೆಸ್ಸಿ ಗಿಲ್, ಸಿದ್ಧಾರ್ಥ್ ನಿಗಮ್ ನಟಿಸುತ್ತಿದ್ದಾರೆ. ಶೆಹನಾಜ್ ಗಿಲ್, ಮಾಳವಿಕಾ ಶರ್ಮಾ ತಾರಾಗಣದಲ್ಲಿದ್ದಾರೆ. ಸಲ್ಮಾನ್ ಖಾನ್ ತಮ್ಮದೇ ಬ್ಯಾನರ್‌ನಲ್ಲಿ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ.

  ಸದ್ದಿಲ್ಲದೇ ಫಾರಿನ್ ಫ್ಲೈಟ್ ಏರಿದ ದರ್ಶನ್: ಎಲ್ಲಿಗೆ ಪಯಣ.. ಏನ್ ಸಮಾಚಾರ?ಸದ್ದಿಲ್ಲದೇ ಫಾರಿನ್ ಫ್ಲೈಟ್ ಏರಿದ ದರ್ಶನ್: ಎಲ್ಲಿಗೆ ಪಯಣ.. ಏನ್ ಸಮಾಚಾರ?

  ಹೊಸ ವರ್ಷಕ್ಕೆ 'ಕಿಸಿ ಕಾ ಭಾಯ್ ಕಿಸಿ ಕಿ ಜಾನ್'

  ಹೊಸ ವರ್ಷಕ್ಕೆ 'ಕಿಸಿ ಕಾ ಭಾಯ್ ಕಿಸಿ ಕಿ ಜಾನ್'

  ಹೊಸ ವರ್ಷದ ಸಂಭ್ರಮದಲ್ಲಿ ಡಿಸೆಂಬರ್ 30ರಂದು 'ಕಿಸಿ ಕಾ ಭಾಯ್ ಕಿಸಿ ಕಿ ಜಾನ್' ಸಿನಿಮಾ ರಿಲೀಸ್ ಪ್ಲ್ಯಾನ್ ನಡೀತಿದೆ. ಬಾಲಿವುಡ್‌ನಲ್ಲಿ ಇತ್ತೀಚೆಗೆ ಯಾವುದೇ ಸಿನಿಮಾ ಸದ್ದು ಮಾಡ್ತಿಲ್ಲ. ಸಲ್ಮಾನ್ ಖಾನ್ ನಟನೆಯ 'ರಾಧೆ' ಸಿನಿಮಾ ಕೂಡ ಮುಗ್ಗರಿಸಿತ್ತು. ಹಾಗಾಗಿ ಈ ಸಿನಿಮಾ ಬಗ್ಗೆ ಭಾರೀ ನಿರೀಕ್ಷೆ ಇದೆ. ಇನ್ನು ಟೀಸರ್‌ನಲ್ಲಿ ಉದ್ದನೆಯ ಕೂಡಲು ಬಿಟ್ಟು, ಒಂದು ಕಿವಿಗೆ ಓಲೆ ಸಿಕ್ಕಿಸಿಕೊಂಡು ಕೈಯಲ್ಲಿರೋ ಬ್ರೇಸ್‌ಲೆಟ್‌ ತೋರಿಸುತ್ತಾ ಸಲ್ಲು ಮಿಂಚಿದ್ದಾರೆ. ಆದರೆ ಕೆಲವರಿಗೆ ಸಿನಿಮಾ ಟೈಟಲ್ ಇಷ್ಟವಾಗಿಲ್ಲ.

  English summary
  Salman Khan Starrer Kisi Ka Bhai Kisi Ki Jaan to have Darshan’s Odeya film shades. Directed by Farhad Samji, Kisi Ka Bhai Kisi Ki Jaan is the official Hindi remake of the 2014 Ajith's Tamil film, Veeram.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X