»   » ಸಲ್ಮಾನ್ ಖಾನ್ 'ಟೈಗರ್' ಆಗಮನಕ್ಕೆ ದಿನಾಂಕ ಫಿಕ್ಸ್

ಸಲ್ಮಾನ್ ಖಾನ್ 'ಟೈಗರ್' ಆಗಮನಕ್ಕೆ ದಿನಾಂಕ ಫಿಕ್ಸ್

Posted By:
Subscribe to Filmibeat Kannada

'ಸುಲ್ತಾನ್' ಚಿತ್ರದ ನಂತರ ಬಂದ ಸಲ್ಮಾನ್ ಖಾನ್ 'ಟ್ಯೂಬ್ ಲೈಟ್' ಚಿತ್ರ ಬಾಕ್ಸ್ ಆಫೀಸ್ ನಿರೀಕ್ಷೆಯನ್ನು ಹುಸಿಗೊಳಿಸಿತು. ಅಲ್ಲದೇ ಚಿತ್ರ ವಿತರಕರಿಗೆ ತಮ್ಮ ಕೈಯಿಂದ ಹಣ ಕೊಡುವಂತೆಯೂ ಮಾಡಿತು. ಈ ಚಿತ್ರದ ಸೋಲಿಗೆ ಬೇಸರಗೊಳ್ಳದ ಬಾಯ್‌ ಜಾನ್ ಈಗ 'ಟೈಗರ್ ಜಿಂದಾ ಹೈ' ಚಿತ್ರೀಕರಣದಲ್ಲಿ ತೊಡಗಿಕೊಂಡಿದ್ದಾರೆ.

ಮತ್ತೆ ಒಂದಾದ ಸಲ್ಮಾನ್ ಖಾನ್ ಮತ್ತು ಮಾಜಿ ಪ್ರಿಯತಮೆ!

ಹೌದು, 'ಟೈಗರ್ ಜಿಂದಾ ಹೈ' ಚಿತ್ರೀಕರಣ ಸದ್ಯದಲ್ಲಿ ಮೊರಾಕೊದಲ್ಲಿ ನಡೆಯುತ್ತಿದೆ. ಅಲ್ಲಿನ ಶೂಟಿಂಗ್ ಸಂದರ್ಭದ ಸ್ಟಿಲ್ ಗಳು ಸಹ ಈಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ. ಈ ಚಿತ್ರದಲ್ಲಿ ಸಲ್ಮಾನ್ ಖಾನ್ ಗೆ ಅವರ ಮಾಜಿ ಪ್ರಿಯತಮೆ ಕತ್ರಿನಾ ಕೈಫ್ ಜೊತೆಯಾಗಿ ನಟಿಸುತ್ತಿದ್ದು, ಚಿತ್ರಕ್ಕಾಗಿ ಕತ್ತಿ ವರಸೆ ಮತ್ತು ಮುಂತಾದ ತರಬೇತಿಗಳನ್ನು ಪಡೆದಿದ್ದಾರೆ.

Salman Khan Starrer 'Tiger Zinda Hai' movie all set to release in December 22 1

ಅಂದಹಾಗೆ 'ಟೈಗರ್ ಜಿಂದಾ ಹೈ' ಚಿತ್ರ ಈ ಹಿಂದೆ ಸಲ್ಲು ಮತ್ತು ಕ್ಯಾಟ್ ಕಾಂಬಿನೇಷನ್ ನಲ್ಲಿ ಮೂಡಿಬಂದಿದ್ದ 'ಏಕ್‌ ಥಾ ಟೈಗರ್' ಸೀಕ್ವೆಲ್ ಸಿನಿಮಾ. ಈ ಚಿತ್ರದಂತೆಯೇ ಈಗ ಮಾಜಿ ಕಪಲ್ಸ್ ಮತ್ತೆ ಕಮಾಲ್ ಮಾಡುವ ಭರವಸೆ ಮೂಡಿಸಿದ್ದಾರೆ. ಕೆಲದಿನಗಳ ಹಿಂದೆಯೇ ಬಿಡುಗಡೆ ಆಗಿದ್ದ 'ಟೈಗರ್ ಜಿಂದಾ ಹೈ' ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಸಲ್ಲು ಅಭಿಮಾನಿಗಳಲ್ಲಿ ಹೆಚ್ಚು ಕುತೂಹಲ ಮೂಡಿಸಿತ್ತು.

Salman Khan Starrer 'Tiger Zinda Hai' movie all set to release in December 22

ಚಿತ್ರದ ಶೂಟಿಂಗ್ ಕಾರ್ಯ ಇನ್ನು ನಡೆಯುತ್ತಿರುವಾಗಲೇ ಸಿನಿಮಾ ವಿಮರ್ಶಕ ಮತ್ತು ವಾಣಿಜ್ಯ ವಿಶ್ಲೇಷಕ ತರಣ್ ಆದರ್ಶ್ ರವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಚಿತ್ರ ಬಿಡುಗಡೆ ದಿನಾಂಕವನ್ನು ಪ್ರಕಟಿಸಿದ್ದಾರೆ. ಅಲಿ ಅಬ್ಬಾಸ್ ಜಫರ್ ಆಕ್ಷನ್ ಕಟ್ ಹೇಳುತ್ತಿರುವ 'ಟೈಗರ್ ಜಿಂದಾ ಹೈ' ಡಿಸೆಂಬರ್ 22 ಕ್ಕೆ ತೆರೆಕಾಣಲಿದೆ ಎಂದು ತರಣ್ ಆದರ್ಶ್ ಟ್ವೀಟ್ ಮಾಡಿದ್ದಾರೆ.

English summary
Indian film critic, journalist, editor and film trade analyst Taran Adarsh has taken his twitter account to announce 'Tiger Zinda Hai' movie release date.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada