For Quick Alerts
  ALLOW NOTIFICATIONS  
  For Daily Alerts

  ಪರಭಾಷೆಯಲ್ಲಿ 'ಉಗ್ರಂ'ಗೆ ಡಿಮ್ಯಾಂಡೋ ಡಿಮ್ಯಾಂಡ್

  By Rajendra
  |

  ಶ್ರೀಮುರಳಿ ಅಭಿನಯ ಆಕ್ಷನ್ ಪ್ಯಾಕ್ಡ್ ಚಿತ್ರ 'ಉಗ್ರಂ' ಅರ್ಧ ಸೆಂಚುರಿ ಪೂರೈಸಿದೆ. ಉಗ್ರಂ ಓಟಕ್ಕೆ ಸದ್ಯಕ್ಕೆ ಬ್ರೇಕ್ ಹಾಕುವ ಸ್ಯಾಂಡಲ್ ವುಡ್ ಚಿತ್ರವ್ಯಾವುದೂ ಕಾಣುತ್ತಿಲ್ಲ. ಈಗಾಗಲೆ ಚಿತ್ರ ಸಪ್ತಸಾಗರದಾಚೆಗೂ ಹಾರಿ ಅಲ್ಲೂ ಭರ್ಜರಿ ಪ್ರದರ್ಶನ ಕಾಣುತ್ತಿದೆ.

  ಬೆಂಗಳೂರಿನ ಪ್ರಮುಖ ಚಿತ್ರಮಂದಿರ ನರ್ತಕಿಗೆ ಚಿತ್ರದ ನಾಯಕ ನಟ ಶ್ರೀಮುರಳಿ ಮತ್ತು ಚಿತ್ರತಂಡ ಮಾರ್ಚ್ 27ರಂದು ಭೇಟಿ ನೀಡುತ್ತಿದೆ. ಇದೇ ಸಂದರ್ಭದಲ್ಲಿ ಪ್ರೇಕ್ಷಕರಿಗೆ ಶ್ರೀಮುರಳಿ ಜೊತೆ ಉಗ್ರಂ ಬಗ್ಗೆ ಸಂವಾದ ನಡೆಸುವ ಅವಕಾಶವನ್ನೂ ಕಲ್ಪಿಸಲಾಗಿದೆ. [ತೆಲುಗು, ತಮಿಳು ಸ್ಟಾರ್ ಗಳ ನಿದ್ದೆಗೆಡಿಸಿರುವ 'ಉಗ್ರಂ']

  ಪರಭಾಷೆಯಲ್ಲೂ ಚಿತ್ರಕ್ಕೆ ಸಾಕಷ್ಟು ಡಿಮ್ಯಾಂಡ್ ಕ್ರಿಯೇಟ್ ಆಗಿದೆ. ನಾಮುಂದು ತಾಮುಂದು ಎಂದು ಪರಭಾಷಾ ತಾರೆಗಳು ಉಗ್ರಂ ರೀಮೇಕ್ ಗೆ ಮುಂದಾಗಿದ್ದಾರೆ. ತೆಲುಗಿನಲ್ಲಿ ಅಲ್ಲು ಅರ್ಜುನ್ ಗೆ ಬದಲಾಗಿ ಪ್ರಭಾಸ್ ಅವರು 'ಉಗ್ರಂ' ರೀಮೇಕ್ ನಲ್ಲಿ ಅಭಿನಯಿಸಲಿದ್ದಾರೆ. [ಉಗ್ರಂ ಚಿತ್ರವಿಮರ್ಶೆ]

  ಶ್ರೀಮುರಳಿ ಅನ್ನೋ ಹೀರೋ ಫೀನಿಕ್ಸ್ ನಂತೆ ಎದ್ದು ಬಂದಿದ್ದಾರೆ. 'ಉಗ್ರಂ' ಸಿನಿಮಾ ಮೂಲಕ ಮುರಳಿ ಮರಳಿ ಬಂದಿದ್ದಾರೆ. ಮುರಳಿ ಸಿನಿಮಾವನ್ನ ಕೊಳ್ಳೋಕೆ ತಮಿಳು, ತೆಲುಗು ಚಿತ್ರರಂಗದವರು ಭರ್ಜರಿ ಆಫರ್ ಕೊಟ್ಟಿದ್ದಾರೆ. [ಮೋದಿ ಮಾತನ್ನು ಕನ್ನಡದಲ್ಲಿ ಕೇಳಿರಿ]

  ಉಗ್ರಂ ಕೈಗೆತ್ತಿಕೊಳ್ಳಲಿರುವ ನಟ ಸಲ್ಮಾನ್ ಖಾನ್

  ಉಗ್ರಂ ಕೈಗೆತ್ತಿಕೊಳ್ಳಲಿರುವ ನಟ ಸಲ್ಮಾನ್ ಖಾನ್

  ಇನ್ನು ತಮಿಳು ಹಾಗೂ ಬಾಲಿವುಡ್ ನಲ್ಲಿ ಧನುಷ್ ಅಭಿನಯಿಸಲಿದ್ದಾರೆ ಎನ್ನಲಾಗಿತ್ತು. ಇದೀಗ ಸಲ್ಮಾನ್ ಖಾನ್ ಅವರು ಉಗ್ರಂ ನೋಡಿ ಥ್ರಿಲ್ ಆಗಿದ್ದು ತಾನೇ ಹಿಂದಿಯಲ್ಲಿ ಅಭಿನಯಿಸುವುದಾಗಿ ಹೇಳಿದ್ದಾರೆ. ಬನ್ನಿ ಸಲ್ಲು ಮೈಂಡ್ ನಲ್ಲಿ ಏನಿದೆ ಎಂದು ನೋಡೋಣ.

  ಉಗ್ರಂ ಟ್ರೇಲರ್ ನೋಡಿ ಥ್ರಿಲ್ ಆದ ಸಲ್ಲು

  ಉಗ್ರಂ ಟ್ರೇಲರ್ ನೋಡಿ ಥ್ರಿಲ್ ಆದ ಸಲ್ಲು

  ಇತ್ತೀಚೆಗೆ ಉಗ್ರಂ ಚಿತ್ರದ ಟ್ರೇಲರ್ ನೋಡಿರುವ ಸಲ್ಮಾನ್ ಖಾನ್ ಸಖತ್ ಇಂಪ್ರೆಸ್ ಆಗಿದ್ದಾರೆ. ಶೀಘ್ರದಲ್ಲೇ ಚಿತ್ರವನ್ನು ವೀಕ್ಷಿಸುವುದಾಗಿಯೂ ಹೇಳಿದ್ದಾರೆ. ಸದ್ಯಕ್ಕೆ ಬಾಲಿವುಡ್ ನಲ್ಲಿ ಬಿಜಿಯಾಗಿರುವ ಸ್ಟಂಟ್ ಮಾಸ್ಟರ್ ರವಿ ವರ್ಮಾ ಅವರು ಖಚಿತಪಡಿಸಿದ್ದಾರೆ.

  ಉಗ್ರಂ ಚಿತ್ರಕ್ಕೆ ಹೇಳಿ ಮಾಡಿಸಿದ ಮೈಕಟ್ಟು

  ಉಗ್ರಂ ಚಿತ್ರಕ್ಕೆ ಹೇಳಿ ಮಾಡಿಸಿದ ಮೈಕಟ್ಟು

  ಉಗ್ರಂ ಚಿತ್ರಕ್ಕೆ ಹೇಳಿ ಮಾಡಿಸಿದ ಮೈಕಟ್ಟಿನ ನಟ ಎಂದರೆ ಸಲ್ಮಾನ್ ಖಾನ್. ಚಿತ್ರದ ಕಥೆ ಬಯಸುವ ಎಲ್ಲಾ ಅಂಶಗಳು ಸಲ್ಮಾನ್ ಅವರಲ್ಲಿವೆ. ಹಾಗಾಗಿ ಬಾಲಿವುಡ್ ನಲ್ಲೂ ಚಿತ್ರ ಸೂಪರ್ ಡೂಪರ್ ಹಿಟ್ ಗ್ಯಾರಂಟಿ.

  ರವಿ ವರ್ಮ ಕ್ಯಾಮೆರಾ ಕಮಾಲ್

  ರವಿ ವರ್ಮ ಕ್ಯಾಮೆರಾ ಕಮಾಲ್

  'ಉಗ್ರಂ' ಚಿತ್ರದ ಮೂಲಕ ರವಿ ವರ್ಮ ಅವರು ರವಿ ವರ್ಮನ್ ಆಗಿ ಕ್ಯಾಮೆರಾ ಹಿಡಿದಿದ್ದಾರೆ. ಬಾಲಿವುಡ್ ಚಿತ್ರಕ್ಕೂ ಅವರು ಕ್ಯಾಮೆರಾ ಹಿಡಿಯುವ ಸಾಧ್ಯತೆಗಳು ಸಾಕಷ್ಟಿವೆ.

  ಸದ್ಯಕ್ಕೆ ಸಲ್ಲು ಹಲವಾರು ಪ್ರಾಜೆಕ್ಟ್ ಗಳಲ್ಲಿ ಬಿಜಿ

  ಸದ್ಯಕ್ಕೆ ಸಲ್ಲು ಹಲವಾರು ಪ್ರಾಜೆಕ್ಟ್ ಗಳಲ್ಲಿ ಬಿಜಿ

  ಸದ್ಯಕ್ಕೆ 'ಕಿಕ್' ಚಿತ್ರದಲ್ಲಿ ಸಲ್ಮಾನ್ ಖಾನ್ ಬಿಜಿಯಾಗಿದ್ದಾರೆ. ಇದಾದ ಕೂಡಲೆ ಅವರ ಕೈಯಲ್ಲಿ ಇನ್ನೊಂದಷ್ಟು ಪ್ರಾಜೆಕ್ಟ್ ಗಳಿವೆ. ಆ ಬಳಿಕ ಉಗ್ರಂ ಕೈಗೆತ್ತಿಕೊಳ್ಳಲಿದ್ದಾರೆ ಎನ್ನುತ್ತವೆ ಮೂಲಗಳು.

  ಕಥೆಯಲ್ಲಿ ಅಲ್ಪಸ್ವಲ್ಪ ಬದಲಾವಣೆಗಳುಂಟಂತೆ

  ಕಥೆಯಲ್ಲಿ ಅಲ್ಪಸ್ವಲ್ಪ ಬದಲಾವಣೆಗಳುಂಟಂತೆ

  ಬಾಲಿವುಡ್ ಪ್ರೇಕ್ಷಕರ ಅಭಿರುಚಿಗೆ ತಕ್ಕಂತೆ ಕಥೆಯಲ್ಲಿ ಅಲ್ಪಸ್ವಲ್ಪ ಬದಲಾವಣೆ ಮಾಡಿಕೊಂಡು ತರಲಾಗುತ್ತದೆ. ಒಟ್ಟಾರೆಯಾಗಿ ಉಗ್ರಂ ಚಿತ್ರ ಪರಭಾಷಾ ನಟರ ನಿದ್ದೆಗೆಡಿಸಿರುವುದಂತೂ ನಿಜ.

  ಸೈಲೆಂಟ್ ಸ್ಟಾರ್ ಶ್ರೀಮುರಳಿ ವಯೋಲೆಂಟ್ ಮೂವಿ

  ಸೈಲೆಂಟ್ ಸ್ಟಾರ್ ಶ್ರೀಮುರಳಿ ವಯೋಲೆಂಟ್ ಮೂವಿ

  'ಉಗ್ರಂ' ಚಿತ್ರ ಶ್ರೀಮುರಳಿ ಹತ್ತು ವರ್ಷದ ನಂತರ ಮರಳಿ ಬರೋ ಹಾಗೆ ಮಾಡಿದೆ. ಸೈಲೆಂಟ್ ಸ್ಟಾರ್ ಶ್ರೀಮುರಳಿ ಅವರು 'ಉಗ್ರಂ' ಸಿನಿಮಾದಲ್ಲಿ ಉಗ್ರರೂಪಿಯಾಗ್ತಾರೆ. ಚಿತ್ರದ ಕ್ಯಾಮೆರಾ ನಿಮಗೆ ಮೋಡಿ ಮಾಡದೇ ಇರೋದಿಲ್ಲ. ಪ್ರಶಾಂತ್ ನೀಲ್ ಅನ್ನೋ ನಿರ್ದೇಶಕ ನಿದ್ರೆ ಬಿಟ್ಟು ಕೆಲಸ ಮಾಡಿರೋದಕ್ಕೆ ಚಿತ್ರತಂಡ ಈಗ ಸಂಭ್ರಮದಲ್ಲಿ.

  English summary
  The latest buzz from the Bollywood has said that Hindi Superstar Salman Khan is bowled over by watching the Kannada movie Ugramm's thrilling theatrical trailer, and made up his mind to work on the Hindi version of the film.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X