»   » ಚಿತ್ರಗಳು: ಭಾವಿ 'ಮಿಸ್ ಯೂನಿವರ್ಸ್' ಜೊತೆ ಸಲ್ಮಾನ್ ಖಾನ್ ಪೋಸ್..!

ಚಿತ್ರಗಳು: ಭಾವಿ 'ಮಿಸ್ ಯೂನಿವರ್ಸ್' ಜೊತೆ ಸಲ್ಮಾನ್ ಖಾನ್ ಪೋಸ್..!

Posted By:
Subscribe to Filmibeat Kannada

ಬಾಲಿವುಡ್ ನಟಿ ಕಮ್ ಮಾಡೆಲ್ ಊರ್ವಶಿ ರೌಟೇಲ ಅವರು ಸದ್ಯಕ್ಕೆ 'ಮಿಸ್ ಯೂನಿವರ್ಸ್ 2015' ಸ್ಪರ್ಧೆಯ ತಯಾರಿಯಲ್ಲಿ ತಮ್ಮನ್ನು ತಾವು ಭರ್ಜರಿಯಾಗಿ ತೊಡಗಿಸಿಕೊಂಡಿದ್ದಾರೆ.

ಅಂದಹಾಗೆ ನಟಿ ಕಮ್ ಮಾಡೆಲ್ ಊರ್ವಶಿ ಅವರನ್ನು ಭೇಟಿಯಾಗಲು ಮತ್ತು ವಿಶೇಷವಾಗಿ ಮಾಡೆಲ್ ಆಗಿರುವ ಊರ್ವಶಿ ರೌಟೇಲ ಅವರನ್ನು ನೋಡಲು ಬಾಲಿವುಡ್ ಬಾಕ್ಸಾಫೀಸ್ ಸುಲ್ತಾನ ಸಲ್ಮಾನ್ ಖಾನ್ ಅವರು ಆಗಮಿಸಿದ್ದರು.

'ಗ್ರೇಟ್ ಗ್ರ್ಯಾಂಡ್ ಮಸ್ತಿ' ಸಿನಿಮಾದ ಸೆಟ್ ನಲ್ಲಿ ನಟ ಸಲ್ಮಾನ್ ಖಾನ್ ಅವರು 'ಮಿಸ್ ಯೂನಿವರ್ಸ್' ಬೆಡಗಿ ಊರ್ವಶಿ ರೌಟೇಲ ಅವರನ್ನು ಇತ್ತೀಚೆಗೆ ಭೇಟಿಯಾಗಿದ್ದರು.[ಮಿಸ್ ಯುನಿವರ್ಸ್ ಆಗಲು ಹೊರಟ 'ಐರಾವತ' ಬೆಡಗಿ]

ನಟಿ ಊರ್ವಶಿ ರೌಟೇಲ ಅವರನ್ನು ನೋಡಿದ ಬಾಲಿವುಡ್ ಬಾಕ್ಸಾಫೀಸ್ ಸುಲ್ತಾನ ಸಲ್ಮಾನ್ ಖಾನ್ ಅವರು 'ಮಿಸ್ ಯೂನಿವರ್ಸ್ ಸ್ಪರ್ಧೆಗೆ, ಸ್ಪರ್ಧಿಸಲು ನಟಿ ಊರ್ವಶಿ ಅವರದು ಪರ್ಫೆಕ್ಟ್ ಆದ ಮುಖ, ಮಾತ್ರವಲ್ಲದೇ ಊರ್ವಶಿ ಅವರು ಭಾರತವನ್ನು ಪ್ರತಿನಿಧಿಸಲು ಸರಿಯಾದ ಸ್ಪರ್ಧಿ' ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

ನಟಿ ಕಮ್ ಮಾಡೆಲ್ ಊರ್ವಶಿ ಹಾಗೂ ಸಲ್ಮಾನ್ ಖಾನ್ ಅವರ ಭೇಟಿಯ ಎಕ್ಸ್ ಕ್ಲ್ಯೂಸಿವ್ ಚಿತ್ರಗಳನ್ನು ನೋಡಲು ಕೆಳಗಿನ ಸ್ಲೈಡ್ಸ್ ಕ್ಲಿಕ್ ಮಾಡಿ..

ಸಲ್ಮಾನ್ ಖಾನ್ ಜೊತೆ ಮಾಡೆಲ್ ಊರ್ವಶಿ

ಬಾಲಿವುಡ್ ಬಾಕ್ಸಾಫೀಸ್ ಸುಲ್ತಾನ ಜೊತೆ ಮಾಡೆಲ್ ಕಮ್ ನಟಿ ಊರ್ವಶಿ ರೌಟೇಲ. ಬಾಲಿವುಡ್ ನಟ ಸಲ್ಮಾನ್ ಅವರು 'ಮಿಸ್ ಯೂನಿವರ್ಸ್' ಸ್ಪರ್ಧೆಗೆ ಭಾರತವನ್ನು ಪ್ರತಿನಿಧಿಸುತ್ತಿರುವ ಊರ್ವಶಿ ಅವರನ್ನು ಭೇಟಿಯಾಗಿ ಮಾತನಾಡಿದರು.[ಈ ಬೆಡಗಿಗೆ ಬಿಕಿನಿ ಧರಿಸಲು ಯಾವುದೇ ಮುಜುಗರ ಇಲ್ಲವಂತೆ!]

ಮಾತು-ಕತೆಯಲ್ಲಿ ಬಾಕ್ಸಾಫೀಸ್ ಸುಲ್ತಾನ

'ಗ್ರೇಟ್ ಗ್ರ್ಯಾಂಡ್ ಮಸ್ತಿ' ಸಿನಿಮಾದ ಸೆಟ್ ನಲ್ಲಿ ಹಾಜರಿದ್ದ ನಟಿ ಊರ್ವಶಿ ರೌಟೇಲ ಅವರನ್ನು ನಟ ಸಲ್ಮಾನ್ ಅವರು ಭೇಟಿಯಾಗಿ ಕುಶಲೋಪರಿ ಹಂಚಿಕೊಂಡರು.['Mr.ಐರಾವತ'ನ ಡಾರ್ಲಿಂಗ್ ಗೆ, ಮನಸೋತ ಸಲ್ಮಾನ್ ಖಾನ್]

'ಗ್ರೇಟ್ ಗ್ರ್ಯಾಂಡ್ ಮಸ್ತಿ' ಸಿನಿಮಾ ಸೆಟ್ ನಲ್ಲಿ

ಮಿಸ್ ಯೂನಿವರ್ಸ್ ಸ್ಪರ್ಧೆಯ ತಯಾರಿಯ ಜೊತೆ ಜೊತೆಗೆ ನಿರ್ದೇಶಕ ಇಂದ್ರ ಕುಮಾರ್ ಅವರ 'ಗ್ರೇಟ್ ಗ್ರ್ಯಾಂಡ್ ಮಸ್ತಿ' ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಸಂದರ್ಭದಲ್ಲಿ ಸಲ್ಮಾನ್ ಖಾನ್ ಅವರು ಬರೀ ಊರ್ವಶಿ ಅವರನ್ನು ನೋಡಲೆಂದೇ ಶೂಟಿಂಗ್ ಸೆಟ್ ಗೆ ಬಂದಿದ್ದರು.

ಸಲ್ಮಾನ್ ಜೊತೆ ಊರ್ವಶಿ ಫೋಸ್

ಬಾಲಿವುಡ್ ನಟ ಸಲ್ಮಾನ್ ಖಾನ್ ಜೊತೆ 'ಮಿಸ್ ಯೂನಿವರ್ಸ್' ತಯಾರಿ ನಡೆಸುತ್ತಿರುವ ಬೆಡಗಿ ಊರ್ವಶಿ ಪೋಸ್ ಕೊಟ್ಟು ಫೊಟೋ ಕ್ಲಿಕ್ಕಿಸಿಕೊಂಡರು.

ನಟ ಅಫ್ತಾಬ್ ಶಿವದಾಸನಿ ಮಸ್ತಿ

ಶೂಟಿಂಗ್ ಸೆಟ್ ಗೆ ಸಲ್ಮಾನ್ ಖಾನ್ ಆಗಮಿಸಿ ಊರ್ವಶಿ ಅವರ ಜೊತೆ ಫೋಟೋ ಕ್ಲಿಕ್ಕಿಸಿಕೊಂಡಾಗ ಬಾಲಿವುಡ್ ನಟ ಅಫ್ತಾಬ್ ಶಿವದಾಸನಿ ಅವರು ಮಸ್ತಿ ಮಾಡಿದ ಪರಿ ನೋಡಿ.

ಶುಭ ಹಾರೈಸಿದ ಸಲ್ಮಾನ್ ಖಾನ್

ಮಿಸ್ ಯೂನಿವರ್ಸ್ ಸ್ಪರ್ಧೆಗೆ ಭಾರತವನ್ನು ಪ್ರತಿನಿಧಿಸುತ್ತಿರುವ ನಟಿ ಕಮ್ ಮಾಡೆಲ್ ಊರ್ವಶಿ ರೌಟೇಲ ಅವರಿಗೆ ನಟ ಸಲ್ಮಾನ್ ಖಾನ್ ಅವರು ಶುಭ ಹಾರೈಸಿದರು. ಜೊತೆಗೆ ಇವರಿಗೆ ಇಡೀ ಬಾಲಿವುಡ್ ಸಿನಿ ಕ್ಷೇತ್ರ ವ್ಯಾಪಕ ಬೆಂಬಲ ವ್ಯಕ್ತಪಡಿಸಿದೆ.

ಕನ್ನಡದವರಿಗೂ ಪಾಲಿದೆ

ಅಂದಹಾಗೆ ನಟಿ ಊರ್ವಶಿ ಅವರು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಜೊತೆ 'Mr ಐರಾವತ' ಚಿತ್ರದಲ್ಲಿ ಡ್ಯುಯೆಟ್ ಹಾಡಿದ್ದರು. ನಿರ್ದೇಶಕ ಎ.ಪಿ ಅರ್ಜುನ್ ಆಕ್ಷನ್-ಕಟ್ ಹೇಳಿದ್ದ ಈ ಸಿನಿಮಾ ಭರ್ಜರಿ 50 ದಿನಗಳನ್ನು ಪೂರೈಸಿದೆ. ಈ ಬೆಡಗಿ ಕನ್ನಡ ಚಿತ್ರದಲ್ಲಿ ನಟಿಸಿರುವುದರಿಂದಲೇ, ನಾವು ಹೇಳಿದ್ದು ನಮಗೂ ಪಾಲಿದೆ ಅಂತ.

ಅತೀ ಕಿರಿಯ ವಯಸ್ಸಿನ ನಟಿ ಊರ್ವಶಿ

ಜಸ್ಟ್ 21 ರ ಹರೆಯದ ಈ ನಟಿ ಕಮ್ ಮಾಡೆಲ್ ಸದ್ಯಕ್ಕೆ 'ಗ್ರೇಟ್ ಗ್ರ್ಯಾಂಡ್ ಮಸ್ತಿ' ಸಿನಿಮಾದ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದಾರೆ. ಚಿತ್ರದಲ್ಲಿ ನಟ ರಿತೇಶ್ ದೇಶ್ ಮುಖ್, ವಿವೇಕ್ ಒಬೆರಾಯ್, ನಟ ಅಫ್ತಾಬ್ ಶಿವದಾಸನಿ ಮುಂತಾದವರು ಪ್ರಮುಖ ಪಾತ್ರದಲ್ಲಿ ಮಿಂಚುತ್ತಿದ್ದಾರೆ.

English summary
Urvashi had recently met Salman on the sets of Great Grand Masti and believes that Urvashi has a perfect face and right candidate to represent India at the Universe Pageant. A source close to the actress said that Salman might visit Urvashi to wish her luck for the pageant.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada