For Quick Alerts
  ALLOW NOTIFICATIONS  
  For Daily Alerts

  ವಿಡಿಯೋ: ಸಲ್ಮಾನ್ ಖಾನ್ ಬರೆದು, ಹಾಡಿರುವ ಸುಂದರ ಹಾಡು ನೋಡಿ

  |

  ಕೊರೊನಾ ಲಾಕ್‌ಡೌನ್‌ನಿಂದಾಗಿ ಫಾರಂ ಹೌಸ್‌ನಲ್ಲಿ ಕುಟುಂಬ ಸದಸ್ಯರೊಂದಿಗೆ ಸಿಕ್ಕಿ ಹಾಕಿಕೊಂಡಿರುವ ಸಲ್ಮಾನ್ ಖಾನ್ ತನ್ನ ಕ್ರಿಯಾಶೀಲ ಹವ್ಯಾಸಗಳನ್ನು ಪುನರ್‌ಜಾಗೃತಗೊಳಿಸುತ್ತಿದ್ದಾರೆ.

  ಹೌದು, ಕೊರೊನಾ ಲಾಕ್‌ಡೌನ್ ಸಮಯದಲ್ಲಿ ಹೆಚ್ಚು ಕ್ರಿಯಾಶೀಲರಾಗಿರುವ ಸಲ್ಮಾನ್ ಖಾನ್, ಚಿತ್ರ ಬರೆಯುವುದು, ಕುದುರೆ ಸವಾರಿ ಮಾಡುವುದು ಮಾಡುತ್ತಿದ್ದಾರೆ. ಇದರ ಜೊತೆಗೆ ಈಗ ಹಾಡು ಬರೆಯುವುದು ಸಹ ಸೇರಿಕೊಂಡಿದೆ.

  ಕೊರೊನಾ ಸಂಕಷ್ಟದ ಸಮಯದಲ್ಲಿ ಕೊರೊನಾ ಸಮಯದಲ್ಲಿ ನಾಗರೀಕರು ತೋರಬೇಕಾದ ಸಂಯಮ, ಪರಸ್ಪರ ಮನುಷ್ಯ ಪ್ರೇಮ, ಸಾವಧಾನ ಇನ್ನಿತರ ವಿಷಯಗಳ ಕುರಿತಾಗಿ ಸುಂದರವಾದ ಹಾಡು ರಚಿಸಿ, ಅದನ್ನು ತಾವೇ ಹಾಡಿದ್ದಾರೆ.

  ಕೆಲವೇ ಗಂಟೆಗಳಲ್ಲಿ ವೈರಲ್ ಆದ ಪ್ಯಾರ್ ಕೊರೊನಾ

  ಸಲ್ಮಾನ್ ಖಾನ್ ಅವರ ಈ 'ಪ್ಯಾರ್ ಕರೋನಾ' ಹಾಡು ಕೆಲವೇ ಗಂಟೆಗಳಲ್ಲಿ ವೈರಲ್ ಆಗಿಬಿಟ್ಟಿದೆ. ಸಲ್ಮಾನ್ ವಿರಚಿತ ಹಾಡು ಚೆನ್ನಾಗಿಯೇ ಇದೆ. ಹಾಡನ್ನು ಸ್ವತಃ ಅವರೇ ಹಾಡಿ, ಅಭಿನಯಿಸಿದ್ದಾರೆ ಸಹ.

  ಹಾಡನ್ನು ಚೆನ್ನಾಗಿಯೇ ಬರೆದಿದ್ದಾರೆ ಸಲ್ಮಾನ್

  ಹಾಡನ್ನು ಚೆನ್ನಾಗಿಯೇ ಬರೆದಿದ್ದಾರೆ ಸಲ್ಮಾನ್

  'ಸಾರೆ ಜಹಾಂಸೆ ಅಚ್ಛಾ ಹಿಂದೂಸ್ತಾನ್ ಹಮಾರಾ' ಎಂಬ ಸಾಲುಗಳನ್ನೂ ಸೇರಿಸಿಕೊಂಡು ಚೆನ್ನಾಗಿಯೇ ಹಾಡು ಬರೆದಿದ್ದಾರೆ ಸಲ್ಮಾನ್, ಆರಂಭದಲ್ಲಿ ಸುಮಧುರವಾಗಿ ಸಾಗುವ ಹಾಡು, ನಡು-ನಡುವೆ ರ್ಯಾಪ್ ರೂಪವನ್ನೂ ತಾಳುತ್ತದೆ.

  ಸಲ್ಮಾನ್ ಖಾನ್ ಹಾಗೂ ಹುಸೇನ್ ದಲಾಲ್ ರಚಿಸಿದ ಹಾಡು

  ಸಲ್ಮಾನ್ ಖಾನ್ ಹಾಗೂ ಹುಸೇನ್ ದಲಾಲ್ ರಚಿಸಿದ ಹಾಡು

  ಹಾಡನ್ನು ಸಲ್ಮಾನ್ ಖಾನ್ ಹಾಗೂ ಹುಸೇನ್ ದಲಾಲ್ ಒಟ್ಟಿಗೆ ರಚಿಸಿದ್ದಾರೆ. ಹಾಡಿಗೆ ಸಂಗೀತ ನಿರ್ದೇಶನ ಮಾಡಿರುವುದು ಸಾಜಿದ್ ವಾಜಿದ್. ಹಾಡಿನ ನಿರ್ದೇಶನವನ್ನು ಅಭಿರಾಜ್ ಮಿನಾವಾಲಾ ಮಾಡಿದ್ದಾರೆ. ಸಂಗೀತ ನಿರ್ಮಾಣ ಅದಿತ್ಯ ದೇವ್ ಅವರದ್ದಾಗಿದೆ. ಸಲ್ಮಾನ್ ಅವರ ಫಾರಂ ನಲ್ಲಿಯೇ ಹಾಡಿನ ಚಿತ್ರೀಕರಣ ಮಾಡಲಾಗಿದೆ. ಅದನ್ನು ಯೂಟ್ಯೂಬ್‌ನಲ್ಲಿ ಅಪ್‌ಲೋಡ್ ಮಾಡಲಾಗಿದೆ.

  ವಿಡಿಯೋ ಅಪ್‌ಲೋಡ್ ಮಾಡಿದ್ದ ಸಲ್ಮಾನ್

  ವಿಡಿಯೋ ಅಪ್‌ಲೋಡ್ ಮಾಡಿದ್ದ ಸಲ್ಮಾನ್

  ಲಾಕ್‌ಡೌನ್ ಆದ ನಂತರ ಸಾಮಾಜಿಕ ಜಾಲತಾಣದಲ್ಲಿ ತುಸು ಹೆಚ್ಚಿಗೆ ಸಕ್ರಿಯರಾಗಿರುವ ಸಲ್ಮಾನ್ ಖಾನ್, ಕೊರೊನಾ ಕುರಿತಾದ ಕೆಲವು ಚಿತ್ರಗಳನ್ನು ಅಪ್‌ಲೋಡ್ ಮಾಡಿದ್ದರು. ನಂತರ ವೈದ್ಯರ ಮೇಲೆ ಕಲ್ಲು ಎಸೆದವರ ವಿರುದ್ಧ ಸಿಟ್ಟಾಗಿ ವಿಡಿಯೋ ಒಂದನ್ನು ಬಿಡುಗಡೆ ಮಾಡಿದ್ದರು. ಈಗ ಹಾಡು ಹಾಡಿದ್ದಾರೆ.

  English summary
  Actor Salman Khan wrote and sung a song about Corona. Song uploaded to you tube and went viral in few hours.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X