For Quick Alerts
  ALLOW NOTIFICATIONS  
  For Daily Alerts

  ಡ್ರಗ್ಸ್ ಪ್ರಕರಣ: ರಕುಲ್ ಮತ್ತು ಸಾರಾ ಅಲಿ ಖಾನ್ ಪರ ನಿಂತ ನಟಿ ಸಮಂತಾ

  |

  ಭಾರತೀಯ ಸಿನಿಮಾರಂಗದಲ್ಲೀಗ ಡ್ರಗ್ಸ್ ಪ್ರಕರಣ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಸ್ಯಾಂಡಲ್ ವುಡ್ ನಲ್ಲಿ ನಟಿ ರಾಗಿಣಿ ಮತ್ತು ಸಂಜನಾ ಸೇರಿದಂತೆ ಅನೇಕರನ್ನು ಬಂಧಿಸಲಾಗಿದೆ. ಬಾಲಿವುಡ್ ನಲ್ಲಿಯೂ ಸುಶಾಂತ್ ಸಿಂಗ್ ಪ್ರೇಯಸಿ ರಿಯಾ ಚಕ್ರವರ್ತಿ ಮತ್ತು ಸಹೋದರ ಶೋವಿಕ್ ಸೇರಿದಂತೆ ಸುಶಾಂತ್ ಸ್ನೇಹಿತರನ್ನು ಮಾದಕ ವಸ್ತು ನಿಯಂತ್ರಣ ಇಲಾಖೆ ಬಂಧಿಸಿ ವಿಚಾರಣೆ ನಡೆಸುತ್ತಿದೆ.

  ಎನ್ ಸಿ ಬಿ ವಿಚಾರಣೆ ವೇಳೆ ರಿಯಾ ಚಕ್ರವರ್ತಿ ಬಾಲಿವುಡ್ ನ ಅನೇಕ ಸ್ಟಾರ್ಸ್ ಹೆಸರನ್ನು ಬಾಯಿಬಿಟ್ಟಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ. ರಿಯಾ ಬಾಯಿಬಿಟ್ಟಿದ್ದಾರೆ ಎನ್ನಲಾಗುತ್ತಿರುವ ಪಟ್ಟಿಯಲ್ಲಿ ಬಾಲಿವುಡ್ ನಟಿ, ಸೈಫ್ ಅಲಿ ಖಾನ್ ಮಗಳು ಸಾರಾ ಅಲಿ ಖಾನ್ ಮತ್ತು ನಟಿ ರಕುಲ್ ಪ್ರೀತ್ ಸಿಂಗ್ ಹೆಸರು ವೈರಲ್ ಆಗಿದೆ. ಮುಂದೆ ಓದಿ..

  ಕ್ಷಮಿಸು ರಕುಲ್, ಕ್ಷಮಿಸು ಸಾರಾ ಎಂದ ಸಮಂತಾ

  ಕ್ಷಮಿಸು ರಕುಲ್, ಕ್ಷಮಿಸು ಸಾರಾ ಎಂದ ಸಮಂತಾ

  ರಿಯಾ ಅನೇಕರ ಹೆಸರನ್ನು ಹೇಳಿದ್ದಾರೆ ಎನ್ನುವ ಸುದ್ದಿ ಸುಳ್ಳು ಎಂದು ಹೇಳಲಾಗುತ್ತಿದೆ. ರಿಯಾ ಯಾರ ಹೆಸರನ್ನು ಹೇಳಿಲ್ಲ ಎನ್ನುವ ಮಾತು ಕೇಳಿ ಬರುತ್ತಿದೆ. ಎನ್ ಸಿ ಬಿ ನಿರ್ದೇಶಕ ಕೆಪಿಎಸ್ ಮಲ್ಹೋತ್ರ, ರಿಯಾ ಯಾರ ಹೆಸರನ್ನು ಹೇಳಿಲ್ಲ ಎಂದು ಹೇಳಿದ್ದಾರೆ. ಈ ಬಗ್ಗೆ ನಟಿ ಸಮಂತಾ ಕೂಡ ಪ್ರತಿಕ್ರಿಯೆ ನೀಡಿದ್ದಾರೆ. 'ಕ್ಷಮಿಸು ರಕುಲ್, ಕ್ಷಮಿಸು ಸಾರಾ' ಎಂದು ಬರೆದುಕೊಂಡು, ಎನ್ ಸಿ ಬಿ ಅಧಿಕಾರಿ ಹೇಳಿರುವ ಪೋಸ್ಟ್ ಅನ್ನು ಇನ್ಸ್ಟಾಗ್ರಾಮ್ ನಲ್ಲಿ ಶೇರ್ ಮಾಡಿದ್ದಾರೆ.

  ಡ್ರಗ್ಸ್ ಪ್ರಕರಣದಲ್ಲಿ ರಕುಲ್ ಹೆಸರು, ಹಳೇ ಫೋಟೋ ವೈರಲ್, ಟಾಲಿವುಡ್‌ಗೂ ಆತಂಕ!ಡ್ರಗ್ಸ್ ಪ್ರಕರಣದಲ್ಲಿ ರಕುಲ್ ಹೆಸರು, ಹಳೇ ಫೋಟೋ ವೈರಲ್, ಟಾಲಿವುಡ್‌ಗೂ ಆತಂಕ!

  ರಿಯಾ ಯಾವ ಸ್ಟಾರ್ಸ್ ಹೆಸರನ್ನು ಹೇಳಲಿಲ್ಲ

  ರಿಯಾ ಯಾವ ಸ್ಟಾರ್ಸ್ ಹೆಸರನ್ನು ಹೇಳಲಿಲ್ಲ

  'ನಾವು ಯಾವುದೇ ಬಾಲಿವುಡ್ ಪಟ್ಟಿಯನ್ನು ಸಿದ್ಧಪಡಿಸಿಲ್ಲ. ಮೊದಲೇ ಸಿದ್ಧಪಡಿಸಿದ ಹೆಸರುಗಳು ಬಾಲಿವುಡ್ ನಲ್ಲಿ ಗೊಂದಲಕ್ಕೀಡು ಮಾಡಿದೆ' ಎಂದು ಕೆಪಿಎಸ್ ಮಲ್ಹೋತ್ರ ಹೇಳಿದ್ದಾರೆ. ರಿಯಾ ಚಕ್ರವರ್ತಿ ಅಧಿಕಾರಿಗಳ ಒತ್ತಡಕ್ಕೆ ಮಣಿದು ಡ್ರಗ್ಸ್ ಬಗ್ಗೆ ಬಾಯಿಬಿಟ್ಟಿರುವುದಾಗಿ ಹೇಳಿದ್ದಾರೆ.

  ಸಾರಾ ಮತ್ತು ರಕುಲ್ ಪರ ನಿಂತ ಸ್ಟಾರ್ಸ್

  ಸಾರಾ ಮತ್ತು ರಕುಲ್ ಪರ ನಿಂತ ಸ್ಟಾರ್ಸ್

  ಇದೀಗ ರಕುಲ್ ಮತ್ತು ಸಾರಾ ಪರವಾಗಿ ಅನೇಕರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡುತ್ತಿದ್ದಾರೆ. ಕ್ಷಮಿಸು ಸಾರಾ ಮತ್ತು ಕ್ಷಮಿಸು ರಕುಲ್ ಎಂದು ಹ್ಯಾಶ್ ಟ್ಯಾಗ್ ಹಾಕಿ ವೈರಲ್ ಮಾಡುತ್ತಿದ್ದಾರೆ. ಆದರೆ ಈ ಬಗ್ಗೆ ರಕುಲ್ ಆಗಲಿ ಅಥವಾ ಸಾರಾ ಅಲಿ ಖಾನ್ ಆಗಲಿ ಎಲ್ಲಿಯೂ ಪ್ರತಿಕ್ರಿಯೆ ನೀಡಿಲ್ಲ.

  ಪತ್ನಿ Revathi ಕಾಲೆಳೆದ Nikhil Kumaraswamy | Oneindia Kannada
  ಟಾಲಿವುಡ್ ಮಂದಿಗೂ ಆತಂಕ

  ಟಾಲಿವುಡ್ ಮಂದಿಗೂ ಆತಂಕ

  ರಕುಲ್ ಪ್ರೀತ್ ಸಿಂಗ್ ಹೆಸರು ಕೇಳಿ ಬರುತ್ತಿದ್ದಂತೆ ಟಾಲಿವುಡ್ ಮಂದಿಗೂ ಭಯ ಶುರುವಾಗಿದೆ. ರಕುಲ್ ಬಾಲಿವುಡ್‌ ಇಂಡಸ್ಟ್ರಿಗಿಂತ ತೆಲುಗು ಚಿತ್ರರಂಗದಲ್ಲಿ ಹೆಚ್ಚು ತೊಡಗಿಕೊಂಡಿದ್ದಾರೆ. ಹೀಗಾಗಿ, ಡ್ರಗ್ಸ್ ಕರಿ ನೆರಳು ಟಾಲಿವುಡ್ ಗೂ ಬರಲಿದೆಯಾ ಎಂಬ ಆತಂಕ ತೆಲುಗು ಮಂದಿಯನ್ನು ಕಾಡುತ್ತಿದೆ. ಈ ಹಿಂದೆ ತೆಲುಗು ಇಂಡಸ್ಟ್ರಿಯಲ್ಲಿ ಡ್ರಗ್ಸ್ ಜಾಲದ ತನಿಖೆ ಬಹಳ ದೊಡ್ಡ ಮಟ್ಟದಲ್ಲಿ ನಡೆದಿತ್ತು.

  English summary
  Actress Samantha Akkineni supports to Rakul Preet Singh and Sara Ali Khan. She says Sorry Sara and Rakul.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X