For Quick Alerts
  ALLOW NOTIFICATIONS  
  For Daily Alerts

  ಕರಣ್ ಜೋಹರ್‌ಗೆ ಸಿನಿಮಾ ಮಾಡುವುದಕ್ಕೆ ಬರಲ್ವಾ? ಸಮಂತಾ ಮಾತಿನ ಅರ್ಥವೇನು?

  |

  ಕರಣ್ ಜೋಹರ್ ನಡೆಸಿಕೊಡುವ ಟಾಕ್ ಶೋ 'ಕಾಫಿ ವಿಥ್ ಕರಣ್' ಹಲವು ಕಾರಣಗಳಿಗೆ ಜನಪ್ರಿಯ. ಇಲ್ಲಿ ಸೆಲೆಬ್ರೆಟಿಗಳು ಕರಣ್‌ ಜೋಹರ್ ಜೊತೆ ಫಿಲ್ಟರ್ ಇಲ್ಲದೆ ಮಾತಾಡುತ್ತಾರೆ. ಕರಣ್ ಜೋಹರ್ ಕೂಡ ಸೆಲೆಬ್ರೆಟಿಗಳನ್ನು ತಮ್ಮ ಪ್ರಶ್ನೆಗಳಿಂದ ಪೇಚಿಗೆ ಸಿಲುಕಿಸುತ್ತಾರೆ.

  ಈ ಬಾರಿ ಕರಣ್ ಜೋಹರ್ ಟಾಕ್ ಶೋ ಟಿವಿಯಲ್ಲಿ ಪ್ರಸಾರವಾಗುತ್ತಿಲ್ಲ. ಒಟಿಟಿಯಲ್ಲಿ ಪ್ರೀಮಿಯರ್ ಆಗುತ್ತಿದೆ. ಅದರ ಪ್ರೋಮೊ ರಿಲೀಸ್ ಆಗಿದ್ದು, ಕಾಫಿ ವಿಥ್ ಕರಣ್ ಸೀಸನ್ 7ರಲ್ಲಿ ಟಾಲಿವುಡ್‌ ನಟಿ ಸಮಂತಾ ಕಾಣಿಸಿಕೊಂಡಿದ್ದಾರೆ.

  ಪ್ರೋಮೊ ರಿಲೀಸ್ ಆದಲ್ಲಿಂದ ಸಮಂತಾ ಕೊಟ್ಟ ಒಂದು ಹೇಳಿಕೆ ವೈರಲ್ ಆಗುತ್ತಿದೆ. ಖುಷಿ ಇಲ್ಲದ ಮದುವೆಗಳಿಗೆ ಕರಣ್‌ ಜೋಹರ್ ಕಾರಣವೆಂದು ಹೇಳಲಾಗಿದೆ. ಅಸಲಿಗೆ ಸಮಂತಾ ಕೊಟ್ಟ ಹೇಳಿಕೆ ಅರ್ಥವನ್ನು ಹುಡುಕಲು ಆರಂಭಿಸಿದ್ದಾರೆ ಅಭಿಮಾನಿಗಳು.

  ಸಮಂತಾ ಮದುವೆ ಬಗ್ಗೆ ಹೇಳಿದ್ದೇನು?

  ಸಮಂತಾ ಮದುವೆ ಬಗ್ಗೆ ಹೇಳಿದ್ದೇನು?

  ಕಾಫಿ ವಿಥ್ ಕರಣ್ ಸೀಸನ್ 7 ಟಾಕ್ ಶೋ ಒಟಿಟಿಯಲ್ಲಿ ಪ್ರಸಾರ ಆಗುತ್ತಿದೆ. ಈ ಶೋನಲ್ಲಿಸ ಅತಿಥಿಗಳು ಯಾರು ಬರುಬಹುದು ಎಂದು ಗೆಸ್ ಮಾಡಲಾಗಿತ್ತು. ಊಹಿಸಿದಂತೆಯೇ ಸಮಂತಾ ಮೊದಲ ಬಾರಿಗೆ 'ಕಾಫಿ ವಿಥ್ ಕರಣ್' ಶೋನಲ್ಲಿ ಭಾಗವಹಿಸಿದ್ದಾರೆ. ಈಗಾಗಲೇ ಇದರ ಪ್ರೋಮೊ ರಿಲೀಸ್ ಆಗಿದ್ದು, ಇದರಲ್ಲಿ ಖುಷಿ ಇಲ್ಲದ ಮದುವೆಗಳಿಗೆ ಕರಣ್ ಜೋಹರ್ ಕಾರಣವೆಂದು ಹೇಳಿದ್ದಾರೆ. ಈ ಹೇಳಿಕೆ ಮೂಲಕ ಹೊಸ ಚರ್ಚೆಯೊಂದು ಶುರುವಾಗಿದೆ.

  ಕರಣ್‌ಗೆ ಸಿನಿಮಾ ನೈಜತೆಗೂ ದೂರ

  ಕರಣ್‌ಗೆ ಸಿನಿಮಾ ನೈಜತೆಗೂ ದೂರ

  ಸಮಂತಾ ಪ್ರೋಮೊದಲ್ಲಿ ಕರಣ್‌ ಜೋಹರ್ ನಿರ್ದೇಶಿಸಿದ 'ಕಭಿ ಖುಷಿ ಕಭಿ ಗಮ್' ಸಿನಿಮಾವನ್ನು ಮುಂದಿಟ್ಟುಕೊಂಡು ಈ ಮಾತನ್ನು ಹೇಳಿದ್ದಾರೆ. ಇದು ಕರಣ್ ಕಾಲೆಳೆಯಲು ಹೇಳಿದ ಮಾತಾಗಿದ್ದರೂ, ಕರಣ್‌ ಜೋಹರ್ ಸಿನಿಮಾ ಮೇಕಿಂಗ್ ಮೇಲೆ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಆರಂಭ ಆಗಿದೆ. ಕರಣ್ ಜೋಹರ್ ಕೌಟುಂಬಿಕ ಸಿನಿಮಾ ಮಾಡಿದ್ದರೂ, ನೈಜತೆಗೆ ವಿರುದ್ಧವಾದ ಸಿನಿಮಾ ಮಾಡುತ್ತಾರಾ ಎಂಬ ಪ್ರಶ್ನೆ ಎದ್ದಿದೆ.

  ಕಾಫಿ ವಿಥ್ ಕರಣ್ ಯಾವಾಗ?

  ಕಾಫಿ ವಿಥ್ ಕರಣ್ ಯಾವಾಗ?

  ಸೆಲೆಬ್ರೆಟಿಗಳ ಫೇವರಿಟ್ ಟಾಕ್ ಶೋ 'ಕಾಫಿ ವಿಥ್ ಕರಣ್ ಸೀಸನ್ 7'ಗೆ ಕ್ಷಣಗಣನೆ ಆರಂಭವಾಗಿದೆ. ಇದೇ ತಿಂಗಳು, ಅಂದರೆ, ಜುಲೈ 7ರಿಂದ 7ನೇ ಸೀಸನ್ ಆರಂಭ ಆಗಲಿದೆ. ಕರಣ್ ಜೋಹರ್ ಕೇಳುವ ವಿವಾದಾತ್ಮಕ ಪ್ರಶ್ನೆಗಳಿಗೆ ಸೆಲೆಬ್ರೆಟಿಗಳು ಹೇಗೆ ಉತ್ತರ ನೀಡುತ್ತಾರೆ ಎಂಬುದು ಕುತೂಹಲ ಕೆರಳಿಸಿದೆ. ಅದರಲ್ಲೂ ದಕ್ಷಿಣ ಭಾರತದ ನಟಿ ಸಮಂತಾ ತಮ್ಮ ವೈವಾಹಿಕ ಜೀವನದ ಬಗ್ಗೆ ಮಾತಾಡುತ್ತಾರಾ? ಏನೆಲ್ಲಾ ಕಾರಣಗಳನ್ನು ನೀಡಬಹುದು ಎನ್ನುವುದನ್ನು ತಿಳಿಯಲು ಕಾದು ಕೂತಿದ್ದಾರೆ.

  ಸೆಲೆಬ್ರೆಟಿಗಳು ಯಾರು?

  ಸೆಲೆಬ್ರೆಟಿಗಳು ಯಾರು?

  'ಕಾಫಿ ವಿತ್ ಕರಣ್' ಸೀಸನ್ 7ರ ಟ್ರೈಲರ್‌ನಲ್ಲಿ ಸಮಂತಾ ಅಷ್ಟೇ ಅಲ್ಲ. ಈ ಶೋನಲ್ಲಿ ಭಾಗವಹಿಸುವ ಸೆಲೆಬ್ರೆಟಿಗಳನ್ನೂ ರಿವೀಲ್ ಮಾಡಲಾಗಿದೆ. ದೀಪಿಕಾ ಪಡುಕೋಣೆ ಪತಿ ರಣ್ವೀರ್ ಸಿಂಗ್, ರಣ್ಬೀರ್ ಕಪೂರ್ ಪತ್ನಿ ಆಲಿಯಾ ಭಟ್ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ಇನ್ನೊಂದು ಕಡೆ ಸಾರಾ ಅಲಿ ಖಾನ್ ಹಾಗೂ ಶ್ರೀದೇವಿ ಪುತ್ರಿ ಜಾನ್ಹವಿ ಕಪೂರ್ ಕೂಡ ಜೊತೆಯಾಗಿ ಕಾಣಿಸಿಕೊಂಡಿದ್ದಾರೆ. ವರುಣ್ ಧವನ್ ಹಾಗೂ ಅನಿಲ್ ಕಪೂರ್, ಶಾಹಿದ್ ಕಪೂರ್, ಟೈಗರ್ ಶ್ರಾಫ್ ಪ್ರೋಮೊದಲ್ಲಿ ಕಾಣಿಸಿಕೊಂಡಿದ್ದಾರೆ.

  English summary
  Samantha blaming Karan Johar for Unrealistic Movies: In Koffee With Karan season 7, Know More.
  Sunday, July 3, 2022, 22:15
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X