Don't Miss!
- Finance
ಬಜೆಟ್ 2023: ಗಣರಾಜ್ಯೋತ್ಸವ ದಿನದಂದೇ ಬಜೆಟ್ ಹಲ್ವಾ ಸಮಾರಂಭ
- Sports
ICC ODI Rankings: ಏಕದಿನ ರ್ಯಾಂಕಿಂಗ್ನಲ್ಲಿ ಅಗ್ರ 10ರೊಳಗೆ ಶುಭ್ಮನ್ ಗಿಲ್; ಕೊಹ್ಲಿ ಸ್ಥಾನ ಕುಸಿತ
- Automobiles
ಮಾರುತಿಯಿಂದ 2023 ರಲ್ಲಿ 5 ಹೊಸ ಎಸ್ಯುವಿಗಳ ಬಿಡುಗಡೆ... ಶೀಘ್ರದಲ್ಲೇ 3 ಕಾರುಗಳು ಮಾರುಕಟ್ಟೆಗೆ
- News
Breaking: ಹುಲಿ ಸಂರಕ್ಷಿತ ಪ್ರದೇಶದಲ್ಲಿಯೇ ತುರ್ತು ನೆಲಕ್ಕಿಳಿದ ರವಿಶಂಕರ್ ಗುರೂಜಿ ಹೆಲಿಕಾಪ್ಟರ್
- Technology
ನಾಯ್ಸ್ ಬಡ್ಸ್ ಕಾಂಬ್ಯಾಟ್ ಇಯರ್ಬಡ್ಸ್ ಅನಾವರಣ; ದೀರ್ಘ ಬ್ಯಾಟರಿ ಬ್ಯಾಕಪ್!
- Lifestyle
ಗರ್ಭಾವಸ್ಥೆಯಲ್ಲಿ ಕಾಡುವ ಮೂತ್ರ ಸೋಂಕುUTI: ತಡೆಗಟ್ಟುವುದು ಹೇಗೆ, ಚಿಕಿತ್ಸೆಯೇನು?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
'ಸಂಜು' ಚಿತ್ರದಲ್ಲಿ ಸಂಜಯ್ ಮೊದಲ ಪತ್ನಿ ಬಗ್ಗೆ ಉಲ್ಲೇಖ ಯಾಕಿಲ್ಲ.? ಇಲ್ಲಿದೆ ಸತ್ಯ..
ಬಾಲಿವುಡ್ ನಟ ಸಂಜಯ್ ದತ್ ಜೀವನ ಚರಿತ್ರೆ ಆಧಾರಿತ ಸಿನಿಮಾ 'ಸಂಜು'. ರಾಜಕುಮಾರ್ ಹಿರಾನಿ ನಿರ್ದೇಶನದ 'ಸಂಜು' ಸಿನಿಮಾದಲ್ಲಿ ಸಂಜಯ್ ದತ್ ಡ್ರಗ್ ಅಡಿಕ್ಟ್ ಆಗಿದ್ದು ಯಾಕೆ.? ಅದರಿಂದ ಅವರು ಹೊರಬಂದಿದ್ದು ಹೇಗೆ.? ಎಂಬುದರ ಬಗ್ಗೆ ಸವಿವರವಾಗಿ ತೋರಿಸಲಾಗಿದೆ.
ಹಾಗೇ, ಸಂಜಯ್ ದತ್ 'ಭಯೋತ್ಪಾದಕ ಅಲ್ಲ' ಅನ್ನೋದನ್ನ ಸೆಕೆಂಡ್ ಹಾಫ್ ಪೂರ್ತಿ ಸಾಬೀತು ಪಡಿಸಲಾಗಿದೆ. ಈ ನಡುವೆ ಸಿನಿಮಾದಲ್ಲಿ ಸಂಜಯ್ ದತ್ ಮೂರನೇ ಪತ್ನಿ ಮಾನ್ಯತಾ ಪಾತ್ರಧಾರಿ ದಿಯಾ ಮಿರ್ಝಾ ಕಾಣ್ತಾರೆ ಹೊರತು ಮೊದಲೆರಡು ಪತ್ನಿಯರ ಬಗ್ಗೆ ಉಲ್ಲೇಖ ಇಲ್ಲ.
ಹಾಗೇ, ಸಂಜಯ್ ದತ್ ಸಹೋದರಿಯರ ಬಗ್ಗೆಯೂ ಸಿನಿಮಾದಲ್ಲಿ ಎಲ್ಲೂ ತೋರಿಸಿಲ್ಲ. ಹೀಗಾಗಿದ್ದು ಯಾಕೆ.? ಬೇಕಂತಲೇ ಕೆಲ ಘಟನೆಗಳನ್ನು ಮರೆಮಾಚಲಾಗಿದ್ಯಾ.? ಇಲ್ಲ, ಇದನ್ನೆಲ್ಲ ತೋರಿಸ್ಬೇಡಿ ಅಂತ ನಿರ್ದೇಶಕ ರಾಜಕುಮಾರ್ ಹಿರಾನಿಗೆ ಸಂಜಯ್ ದತ್ ತಾಕೀತು ಮಾಡಿದ್ರಾ.?
ಈ ಡೌಟ್ ಗೆ ಇದೀಗ ಕ್ಲಾರಿಟಿ ಸಿಕ್ಕಿದೆ. ನಟ ಸಂಜಯ್ ದತ್ ಈ ಬಗ್ಗೆ ಬಾಯ್ಬಿಟ್ಟಿದ್ದಾರೆ. ಸಂಜಯ್ ದತ್ ಹೇಳಿರುವುದೇನು ಅಂತ ನೀವೇ ಓದಿರಿ ಫೋಟೋ ಸ್ಲೈಡ್ ಗಳಲ್ಲಿ...

ನಾನು ತಾಕೀತು ಮಾಡಿಲ್ಲ.!
''ಇರುವುದೆಲ್ಲವನ್ನೂ ನಾನು ನಿರ್ದೇಶಕರ ಜೊತೆಗೆ ಹಂಚಿಕೊಂಡಿದ್ದೆ. ಇದನ್ನ ಮಾತ್ರ ತೋರಿಸಿ, ಕೆಲವನ್ನ ಬಿಟ್ಟುಬಿಡಿ ಅಂತ ನಾನು ಹೇಳಿಲ್ಲ. ನನ್ನ ಮೊದಲೆರಡು ಮದುವೆಗಳ ಬಗ್ಗೆ ಸಿನಿಮಾದಲ್ಲಿ ತೋರಿಸಬೇಡಿ ಅಂತ ನಾನು ನಿರ್ದೇಶಕರಿಗೆ ತಾಕೀತು ಮಾಡಿಲ್ಲ. ಅವರಿಗೆ ಯಾವುದು ಪ್ರಮುಖ ಅಂತ ಅನಿಸಿದ್ಯೋ, ಅದನ್ನಷ್ಟೇ ತೋರಿಸಿದ್ದಾರೆ. ಎಲ್ಲವನ್ನೂ ತೋರಿಸಿದಿದ್ರೆ, ಚಿತ್ರದ ಅವಧಿ ಹೆಚ್ಚಾಗುತ್ತಿತ್ತು'' ಅಂತ ಸಂಜಯ್ ದತ್ ಹೇಳಿದ್ದಾರೆ.
ರಾಮ್
ಗೋಪಾಲ್
ವರ್ಮಾ
ವಿರುದ್ಧ
ಉರಿದುಬಿದ್ದ
ಸಂಜಯ್
ದತ್
ಸಹೋದರಿ.!

ಮಾನ್ಯತಾ ಐಡಿಯಾ
''ನನ್ನ ಜೀವನಚರಿತ್ರೆ ಆಧಾರಿತ ಸಿನಿಮಾ ಮಾಡಬೇಕು ಎಂಬ ಐಡಿಯಾ ಬಂದಿದ್ದು ಪತ್ನಿ ಮಾನ್ಯತಾ ಕಡೆಯಿಂದ. ನಾನು ಜೈಲಿನಲ್ಲಿ ಇರುವಾಗ ಈ ಬಗ್ಗೆ ಆಕೆ ನಿರ್ದೇಶಕರ ಜೊತೆಗೆ ಮಾತುಕತೆ ಮಾಡಿದ್ದಳು'' ಎಂದಿದ್ದಾರೆ ಸಂಜಯ್ ದತ್.
'ಸಂಜು':
ನಿರ್ದೇಶಕರು
ಮುಟ್ಟದ
ಸಂಜಯ್
ದತ್
ಬದುಕಿನ
10
ಅಧ್ಯಾಯಗಳು

ಭಯೋತ್ಪಾದಕ ಅಲ್ಲ
''ನನ್ನ ಮನೆಯಲ್ಲಿ ರೈಫಲ್ ಇಟ್ಟುಕೊಂಡ ತಪ್ಪಿಗೆ ದೊಡ್ಡ ಶಿಕ್ಷೆ ಅನುಭವಿಸಿದ್ದೇನೆ. ನಾನು ಭಯೋತ್ಪಾದಕ ಅಲ್ಲ ಅಂತ ಮತ್ತೆ ಮತ್ತೆ ಹೇಳುತ್ತಿದ್ದೇನೆ. ನನ್ನ ಕನ್ಫೆಶನ್ ನ ದಯವಿಟ್ಟು ಓದಿರಿ. ಶಸ್ತ್ರಾಸ್ತ್ರ ಕಾಯ್ದೆ ಅಡಿ ನನ್ನನ್ನ ಬಂಧಿಸಲಾಗಿತ್ತು. ನಾನು ಓಡಿ ಹೋಗಲಿಲ್ಲ. ಎಲ್ಲವನ್ನೂ ಎದುರಿಸಿ ಬಂಧನಕ್ಕೆ ಒಳಗಾದೆ'' - ಸಂಜಯ್ ದತ್
'ಸಂಜು'
ವಿಮರ್ಶೆ:
ರಣ್ಬೀರ್-ರಾಜಕುಮಾರ್
ಹಿರಾನಿಯ
'ಮಾಸ್ಟರ್
ಪೀಸ್'!

ಭಿನ್ನಾಭಿಪ್ರಾಯ ಇಲ್ಲ
''ನನ್ನ ಹಾಗೂ ನನ್ನ ಸಹೋದರಿಯರ ನಡುವೆ ಯಾವುದೇ ಭಿನ್ನಾಭಿಪ್ರಾಯ ಇಲ್ಲ. ನಾವೆಲ್ಲ ಚೆನ್ನಾಗಿದ್ದೇವೆ. ನನ್ನ ಸಹೋದರಿಯರ ಜೊತೆಗೆ ಮಾನ್ಯತಾ ಕೂಡ ಹೊಂದುಕೊಂಡಿದ್ದಾಳೆ'' - ಸಂಜಯ್ ದತ್