For Quick Alerts
  ALLOW NOTIFICATIONS  
  For Daily Alerts

  ಕ್ಯಾನ್ಸರ್ ಪೀಡಿತ ಸಂಜಯ್ ದತ್‌ಗೆ ಆತ್ಯಾಪ್ತ ಗೆಳೆಯನ ಭಾವುಕ ಪತ್ರ

  |

  ನಟ ಸಂಜಯ್ ದತ್ ಗೆ ಶ್ವಾಸಕೋಶದ ಕ್ಯಾನ್ಸರ್ ಆಗಿದ್ದು, ಕ್ಯಾನ್ಸರ್ ಅಪಾಯಕಾರಿ ಮಟ್ಟದಲ್ಲಿದ್ದು ಚಿಕಿತ್ಸೆಗಾಗಿ ಅವರು ಅಮೆರಿಕಕ್ಕೆ ತೆರಳಲಿದ್ದಾರೆ.

  Prem 6 pack ಫೋಟೋಶೂಟ್ , 'ಮಳೆ' ಚಿತ್ರಕ್ಕಾಗಿ | Filmibeat Kannada

  ಕ್ಯಾನ್ಸರ್‌ ಜೊತೆ ಸೆಣಸಾಡುತ್ತಿರುವ ಸಂಜಯ್ ದತ್ ಗೆ ಅವರ ಆಪ್ತಮಿತ್ರ ಪರೇಶ್ ಗೆಲಾನಿ ಭಾವುಕ ಪತ್ರವೊಂದನ್ನು ಬರೆದಿದ್ದು, ಗೆಳೆಯನಿಗೆ ಧೈರ್ಯ ತುಂಬುವ ಕಾರ್ಯ ಮಾಡಿದ್ದಾರೆ.

  ಸಂಜಯ್ ದತ್‌ಗೆ ಭಾವನಾತ್ಮಕ ಸಂದೇಶ ರವಾನಿಸಿದ ಚಿರಂಜೀವಿ

  ಸಂಜಯ್ ದತ್ ಜೀವನ ಆಧರಿಸಿದ 'ಸಂಜು' ಸಿನಿಮಾ ನೋಡಿದ್ದವರಿಗೆ ಗೊತ್ತಿರುತ್ತದೆ ಪರೇಶ್ ಗೆ ಸಂಜಯ್ ದತ್ ಜೀವನದಲ್ಲಿ ಎಂಥಹಾ ಸ್ಥಾನವಿದೆ ಎಂಬುದು. ಅಂಥಹಾ ಆಪ್ತ ಮಿತ್ರ ಪರೇಶ್ ಇದೀಗ ಜೀವನದ ದೊಡ್ಡ ಯುದ್ಧಕ್ಕೆ ತೆರಳುತ್ತಿರುವ ಸಂಜಯ್ ಗೆ ಪತ್ರ ಬರೆದಿದ್ದಾರೆ.

  ಈ ಯುದ್ಧ ನೀನು ಗೆದ್ದೇ ಗೆಲ್ಲುವೆ: ಸಂಜಯ್

  ಈ ಯುದ್ಧ ನೀನು ಗೆದ್ದೇ ಗೆಲ್ಲುವೆ: ಸಂಜಯ್

  'ಜೀವನದ ರೋಲರ್‌ಕೋಸ್ಟರ್ ರೈಡ್ ಇನ್ನೂ ಬಾಕಿ ಇದೆ. ಜೀವನದ ಮತ್ತೊಂದು ಯುದ್ಧ ಪ್ರಾರಂಭವಾಗಿದೆ. ಈ ಯುದ್ಧವನ್ನು ನೀನು ಗೆದ್ದೇ ಗೆಲ್ಲುತ್ತೀಯ. ನೀನು ಗಟ್ಟಿ ಹೃದಯದವನು, 'ನೀನು ಸಿಂಹ ಗೆಳೆಯ ಸಿಂಹ' ಎಂದಿದ್ದಾರೆ ಗೆಳೆಯ ಪರೇಶ್.

  ಸಂಜಯ್ ದತ್ ಜೊತೆಗೆ ಭವಿಷ್ಯದ ಚರ್ಚೆ

  ಸಂಜಯ್ ದತ್ ಜೊತೆಗೆ ಭವಿಷ್ಯದ ಚರ್ಚೆ

  'ನಮ್ಮ ಇನ್ನು ಮುಂದಿನ ಜೀವನವನ್ನು ಹೇಗೆ ಕಳೆಯಬೇಕು ಎಂದು ನಾವು ಕೆಲವು ದಿನಗಳ ಹಿಂದಷ್ಟೆ ಮಾತನಾಡಿಕೊಂಡೆವು. ವಾಕಿಂಗ್, ಜಾಗಿಂಗ್ ಮಾಡುತ್ತಾ ಉಳಿದ ಜೀವನವನ್ನು ಚೆನ್ನಾಗಿ ಕಳೆಯಬೇಕು ಎಂದು ಕೆಲವು ದಿನಗಳ ಹಿಂದಷ್ಟೆ ನಾವು ಮಾತನಾಡಿಕೊಂಡೆವು' ಎಂದು ಸಂಜಯ್ ಜೊತೆಗೆ ಕಳೆದ ಘಳಿಗೆಯನ್ನು ನೆನಪಿಸಿಕೊಂಡಿದ್ದಾರೆ.

  ನಟ ಸಂಜಯ್ ದತ್ ಕುಟುಂಬದಲ್ಲೇ ಇದೆ ಮಾರಕ ಕ್ಯಾನ್ಸರ್ ಇತಿಹಾಸ

  ಮುಂದಿನ ಜೀವನ ಚೆನ್ನಾಗಿ ಬದುಕಲಿದ್ದೇವೆ: ಪರೇಶ್

  ಮುಂದಿನ ಜೀವನ ಚೆನ್ನಾಗಿ ಬದುಕಲಿದ್ದೇವೆ: ಪರೇಶ್

  ನಾವು ಬಹಳ ಪುಣ್ಯವಂತರು, ನಾವು ನಮ್ಮ ಜೀವನವನ್ನು ಚೆನ್ನಾಗಿ ಬದುಕಿದ್ದೇವೆ. ನಮ್ಮ ಮುಂದಿನ ಜೀವನವನ್ನು ಇನ್ನೂ ಚೆನ್ನಾಗಿ ಬದುಕಲಿದ್ದೀವಿ, ದೇವರು ನಮ್ಮ ಕಡೆಗೆ ಇದ್ದಾನೆ ಎಂದಿದ್ದಾರೆ ಪರೇಶ್.

  ನೋವಿನ ನಡುವೆಯೂ ದೇಶಭಕ್ತಿ ಮರೆಯದ ಸಂಜಯ್ ದತ್

  ಸಂಜಯ್ ದತ್ ಜೀವದ ಗೆಳೆಯ ಪರೇಶ್

  ಸಂಜಯ್ ದತ್ ಜೀವದ ಗೆಳೆಯ ಪರೇಶ್

  ಸಂಜು ಸಿನಿಮಾದಲ್ಲಿ ವಿಕ್ಕಿ ಕೌಶಲ್ ನಿರ್ವಹಿಸಿದ್ದ ಪಾತ್ರ ಪರೇಶ್ ಅವರದ್ದೇ ಆಗಿತ್ತು. ಸಾಕಷ್ಟು ಏಳು ಬೀಳುಗಳನ್ನು ಕಂಡಿರುವ ಸಂಜಯ್ ದತ್ ಅವರಿಗೆ ದಶಕಗಳಿಂದಲೂ ಜೊತೆಯಾಗಿ ನಿಂತಿರುವವರು ಪರೇಶ್. ಸಂಜಯ್ ದತ್ ಅವರ ಜೀವದ ಗೆಳೆಯ ಪರೇಶ್.

  ಸಂಜಯ್ ದತ್ ಗೆ 4ನೇ ಹಂತದ ಕ್ಯಾನ್ಸರ್ ಎಂದು ಖಚಿತ ಪಡಿಸಿದ ಆಸ್ಪತ್ರೆ ಮೂಲಗಳು

  English summary
  Actor Sanjay Dutt's close friend Paresh Gelani wrote emotional letter to Sanjay Dutt who fighting with cancer.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X