twitter
    For Quick Alerts
    ALLOW NOTIFICATIONS  
    For Daily Alerts

    ನಟ ಸಂಜಯ್ ದತ್ ಕೆಲವು ಭಾವುಕ ಸನ್ನಿವೇಶಗಳು

    By Rajendra
    |

    ಉಪ್ಪು ತಿಂದ ಮೇಲೆ ನೀರು ಕುಡಿಯಲೇ ಬೇಕು. ಯಾರೇ ಆಗಲಿ ತಪ್ಪು ಮಾಡಿದ ಮೇಲೆ ಶಿಕ್ಷೆ ಅನುಭವಿಸಲೇಬೇಕು ಅಲ್ಲವೆ? ನಟ ಸಂಜಯ್ ದತ್ ಸಹ ಇದಕ್ಕೆ ಹೊರತಲ್ಲ. 1993ರ ಮುಂಬೈ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಅವರು ಗುರುವಾರ (ಮೇ 16) ಟಾಡಾ ನ್ಯಾಯಾಲಯಕ್ಕೆ ಶರಣಾಗಿದ್ದಾರೆ.

    ಪುಣೆಯ ಯರವಾಡ ಜೈಲಿನಲ್ಲಿ ಅವರು 42 ತಿಂಗಳ ಶಿಕ್ಷೆಯನ್ನು ಅನುಭವಿಸಲಿದ್ದಾರೆ. ಇರಲಿ ಮಿಂಚಿಹೋದ ಕಾರ್ಯಕ್ಕೆ ಚಿಂತಿಸಿ ಫಲವಿಲ್ಲ. ಬಾಲಿವುಡ್ ನಲ್ಲಿ ಬ್ಯಾಡ್ ಬಾಯ್ ಎಂದೇ ಕರೆಸಿಕೊಂಡಿದ್ದ ಸಂಜಯ್ ದತ್ ತಮ್ಮ ಕುಟುಂಬ ಸದಸ್ಯರ ಜೊತೆ ಹೇಗಿದ್ದರು. ಕೆಲವು ಭಾವುಕ ಸನ್ನಿವೇಶದ ಚಿತ್ರಣ ಇಲ್ಲಿದೆ.

    ಸುನಿಲ್ ದತ್ ಹಾಗೂ ನರ್ಗಿಸ್ ದತ್ ಅವರ ಏಕಮಾತ್ರ ಪುತ್ರ ಸಂಜಯ್ ದತ್ ಎಂಬುದು ಎಲ್ಲರಿಗೂ ತಿಳಿದೇ ಇದೆ. ಸಂಜಯ್ ದತ್ ಅವರನ್ನು ಮನೆಮಂದಿ, ಸಂಬಂಧಿಕರು ಪ್ರೀತಿಯಿಂದ ಕರೆಯುತ್ತಿದ್ದದ್ದು ಸಂಜು ಬಾಬಾ ಎಂದು. ಚಿಕ್ಕಂದಿನಿಂದಲೂ ಎಲ್ಲರ ಮನಗೆದ್ದಿದ್ದ ಸಂಜಯ್.

    ಇಬ್ಬರು ತಂಗಿಯರ ಪ್ರೀತಿಯ ಅಣ್ಣನಾಗಿ

    ಇಬ್ಬರು ತಂಗಿಯರ ಪ್ರೀತಿಯ ಅಣ್ಣನಾಗಿ

    ಸಂಜಯ್ ದತ್ ಗೆ ಇಬ್ಬರು ತಂಗಿಯರು ಪ್ರಿಯಾ ಹಾಗೂ ನಮ್ರತಾ. ಪ್ರಿಯಾ ಅವರಿಗೆ ಅವರ ತಂದೆ ಸುನಿಲ್ ದತ್ ಹೋಲಿಕೆಗಳಿವೆ. ಒವೆನ್ ರಾಂಕಾನ್ ಎಂಬುವವರನ್ನು ಅವರು ವರಿಸಿದರು. ಇನ್ನೊಬ್ಬ ತಂಗಿ ನಮ್ರತಾ ಅವರು ಬಾಲಿವುಡ್ ಖ್ಯಾತ ನಟ ರಾಜೇಂದ್ರ ಕುಮಾರ್ ಅವರ ಪುತ್ರ ಕುಮಾರ್ ಗೌರವ್ ಅವರ ಕೈಹಿಡಿದರು.

    ಅಣ್ಣನ ಮೇಲೆ ಮುನಿಸಿಕೊಂಡಿದ್ದ ತಂಗಿ

    ಅಣ್ಣನ ಮೇಲೆ ಮುನಿಸಿಕೊಂಡಿದ್ದ ತಂಗಿ

    2008ರಲ್ಲಿ ಮಾನ್ಯತಾ ಅವರನ್ನು ಸಂಜಯ್ ದತ್ ವರಿಸಿದಾಗ ಈ ಮದುವೆ ನಮ್ರತಾ ಅವರಿಗೆ ಸ್ವಲ್ಪವೂ ಇಷ್ಟವಿರಲಿಲ್ಲವಂತೆ. ಹಾಗಾಗಿ ಆಕೆ ಅಣ್ಣನ ಮೇಲೆ ಮುನಿಸಿಕೊಂಡದ್ದುಂಟು. ಕೆಲದಿನ ಆತನೊಂದಿಗೆ ಮಾತನಾಡುವುದನ್ನೂ ಬಿಟ್ಟಿದ್ದರಂತೆ. ಈಗ ಆಲ್ ಈಸ್ ವೆಲ್ ಎಂಬಂತಾಗಿದ್ದಾರೆ ಓರಗಿತ್ತಿಯರು.

    ಅಮ್ಮನ ಮಗ ಅನ್ನಿಸಿಕೊಂಡಿದ್ದ ಸಂಜಯ್ ದತ್

    ಅಮ್ಮನ ಮಗ ಅನ್ನಿಸಿಕೊಂಡಿದ್ದ ಸಂಜಯ್ ದತ್

    ಸಂಜಯ್ ದತ್ ಗೆ ಅವರ ತಾಯಿ ನರ್ಗೀಸ್ ದತ್ ಎಂದರೆ ಎಲ್ಲಿಲ್ಲದ ಪ್ರೀತಿ. ಹಾಗಾಗಿ ಸಂಜಯ್ ಅಮ್ಮನ ಮಗ ಅನ್ನಿಸಿಕೊಂಡಿದ್ದ. ಅವರ ತಾಯಿ ತೀರಿಕೊಂಡ ಬಳಿಕ ಬಹಳಷ್ಟು ನೊಂದಿದ್ದ. ಅಗಲಿಕೆಯ ನೋವಿನಿಂದ ಹೊರಬರಲು ಮಾದಕ ವ್ಯಸನಿಯಾದ.

    ಈ ಘಟನೆ ನೆನೆದರೆ ಸಂಜು ಕಣ್ಣು ಮಂಜಾಗುತ್ತದೆ

    ಈ ಘಟನೆ ನೆನೆದರೆ ಸಂಜು ಕಣ್ಣು ಮಂಜಾಗುತ್ತದೆ

    ತಮ್ಮ ತಾಯಿ ಬಗ್ಗೆ ಸಂಜು ಒಮ್ಮೆ ಮಾತನಾಡುತ್ತಾ, "ನಮ್ಮ ತಾಯಿಯವರು ಮೂರು, ನಾಲ್ಕು ತಿಂಗಳು ಕೋಮಾದಲ್ಲಿದ್ದರು. ಕೋಮಾದಿಂದ ಅವರು ಹೊರಬಂದಾಗ ಮೊದಲು ಕೇಳಿದ್ದೇ ಸಂಜು ಎಲ್ಲಿ ಎಂದು" ಈ ಘಟನೆಯನ್ನು ನೆನೆದರೆ ಸಂಜಯ್ ದತ್ ಕಣ್ಣಲ್ಲಿ ಈಗಲೂ ನೀರು ಬರುತ್ತದೆ.

    ಬಾಲನಟನಾಗಿ ಬೆಳ್ಳಿತೆರೆಗೆ ಪ್ರವೇಶ ಪಡೆದಿದ್ದ

    ಬಾಲನಟನಾಗಿ ಬೆಳ್ಳಿತೆರೆಗೆ ಪ್ರವೇಶ ಪಡೆದಿದ್ದ

    ಸಂಜಯ್ ದತ್ ಅವರ ವೃತ್ತಿಜೀವನ ಆರಂಭವಾಗಿದ್ದು ಬಾಲನಟನಾಗಿ. ಅವರ ತಂದೆ ಅಭಿನಯದ 'ರೇಷ್ಮಾ ಔರ್ ಶೇರಾ' (1972) ಚಿತ್ರದಲ್ಲಿ ಅಭಿನಯಿಸಿದ್ದರು. ಇದಾದ ಹತ್ತು ವರ್ಷಗಳ ಬಳಿಕ ಪೂರ್ಣ ಪ್ರಮಾಣದ ನಾಯಕ ನಟನಾಗಿ 'ರಾಕಿ' ಚಿತ್ರದ ಮೂಲಕ ಬೆಳ್ಳಿತೆರೆಗೆ ಪ್ರವೇಶಿಸಿದರು.

    English summary
    Bollywood actor Sanjay Dutt (53) was known to be very close to his mother and reports suggest that while he struggled with the aftermath of his mother's death, his drug addiction was creeping in.
    Thursday, May 16, 2013, 16:08
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X