For Quick Alerts
  ALLOW NOTIFICATIONS  
  For Daily Alerts

  ಯಶ್ ಬಳಿಕ ಪ್ರಭಾಸ್‌ ಎದುರು ನಿಲ್ತಾರಾ ಸಂಜಯ್ ದತ್? 'ಕೆಜಿಎಫ್ 2' ಬಳಿಕ ಮುಂದೇನು?

  |

  'ಕೆಜಿಎಫ್ 2' ಸಿನಿಮಾ ಮೂಲಕ ಬಾಲಿವುಡ್‌ ನಟ ಸಂಜಯ್ ದತ್ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಟ್ಟಿದ್ದರು. ಇದೇ ಸಿನಿಮಾ ಮೂಲಕ ದಕ್ಷಿಣ ಚಿತ್ರರಂಗಕ್ಕೂ ಪಾದಾರ್ಪಣೆ ಮಾಡಿದಂತಾಗಿತ್ತು. ಈಗ ಮತ್ತೊಂದು ಸೌತ್‌ ಸಿನಿಮಾದಲ್ಲಿ ನಟಿಸುವುದಕ್ಕೆ ಗ್ರೀನ್ ಸಿಗ್ನಲ್ ಕೊಟ್ಟಿರೋ ಸುದ್ದಿ ಬಾಲಿವುಡ್ ಅಂಗಳದಲ್ಲಿ ಓಡಾಡುತ್ತಿದೆ.

  ಈ ಬಾರಿ ಕೂಡ ಸಂಜಯ್ ದತ್ ಪ್ಯಾನ್‌ ಇಂಡಿಯಾ ಸೂಪರ್‌ಸ್ಟಾರ್ ಜೊತೆ ಕಾಣಿಸಿಕೊಳ್ತಾರೆ ಅನ್ನೋ ಮಾತು ಕೇಳಿ ಬರುತ್ತಿದೆ. 'ಕೆಜಿಎಫ್ 2' ಸಿನಿಮಾದಲ್ಲಿ ಅಧೀರನಾಗಿ ಪವರ್‌ಫುಲ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ಸಂಜಯ್ ದತ್ ಹೊಸ ಸಿನಿಮಾದಲ್ಲಿ ಹೇಗೆ ಕಾಣಿಸಿಕೊಳ್ಳುತ್ತಾರೆ ಅನ್ನೋ ಕುತೂಹಲವಿದೆ.

  ಪ್ರಭಾಸ್ ಸಿನಿಮಾದಲ್ಲಿ ನಟಿಸುವುದಕ್ಕೆ ಸಂಜಯ್ ದತ್ ಒಪ್ಪಿಕೊಂಡಿದ್ದಾರೆ ಅನ್ನೋದು ಸದ್ಯ ಕೇಳಿಬರುತ್ತಿರೋ ಸುದ್ದಿ. ಯಶ್ ಬಳಿಕ ಮತ್ತೊಬ್ಬ ಪ್ಯಾನ್ ಇಂಡಿಯಾ ಸ್ಟಾರ್ ಪ್ರಭಾಸ್‌ಗೆ ಟಕ್ಕರ್ ಕೊಡುವುದಕ್ಕೆ ಸಜ್ಜಾಗುತ್ತಿದ್ದಾರೆ ಅಂತ ಗುಲ್ಲೆದ್ದಿದೆ. ಅಸಲಿಗೆ ಪ್ರಭಾಸ್ ಹಾಗೂ ಸಂಜಯ್ ಕಾಂಬಿನೇಷನ್ ಸಿನಿಮಾ ಯಾವುದು? ಸಂಜಯ್ ದತ್ ಪಾತ್ರ ಹೇಗಿದೆ? ಅನ್ನೋದನ್ನು ತಿಳಿಯಲು ಮುಂದೆ ಓದಿ.

  ಹಾರರ್, ಕಾಮಿಡಿಯಲ್ಲಿ ಸಂಜಯ್ ದತ್

  ಹಾರರ್, ಕಾಮಿಡಿಯಲ್ಲಿ ಸಂಜಯ್ ದತ್

  ನಿರ್ದೇಶಕ ಮಾರುತಿ ಡಾರ್ಲಿಂಗ್ ಪ್ರಭಾಸ್‌ಗೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಇದೇ ಸಿನಿಮಾದಲ್ಲಿ ಪ್ರಭಾಸ್ ಎದುರು ಸಂಜಯ್ ದತ್ ಕಾಣಿಸಿಕೊಳ್ಳುತ್ತಿದ್ದಾರೆ ಅಂತ ಗುಲ್ಲೆದ್ದಿದೆ. ಫ್ರಿ ಪ್ರೆಸ್ ಜರ್ನಲ್ ವರದಿ ಪ್ರಕಾರ, ಪ್ರಭಾಸ್ ಹೊಸ ಸಿನಿಮಾದಲ್ಲಿ ಸಂಜಯ್ ದತ್ ಹಾಗೂ ಬಾಲಿವುಡ್ ನಟಿ ಜರೀನಾ ವಹಾಬ್ ಕಾಣಿಸಿಕೊಳ್ಳುತ್ತಿದ್ದಾರೆ. ಇದೊಂದು ಕಾಮಿಡಿ ಕಮ್ ಹಾರರ್ ಸಿನಿಮಾ ಆಗಿದ್ದು, ಈಗಾಗಲೇ ಶೂಟಿಂಗ್ ಕೂಡ ಆರಂಭ ಆಗಿದೆಯಂತೆ.

  ಸಂಜಯ್ ದತ್ ರೋಲ್ ಏನು?

  ಸಂಜಯ್ ದತ್ ರೋಲ್ ಏನು?

  ಪ್ರಭಾಸ್ ಸಿನಿಮಾದಲ್ಲಿ ಸಂಜಯ್ ದತ್ ನಟಿಸುತ್ತಾರೆ ಅಂದ್ಮೇಲೆ ಅದು ಪ್ರಮುಖ ಪಾತ್ರ ಆಗಿರುತ್ತೆ. ಮೂಲಗಳ ಪ್ರಕಾರ, ಸಂಜಯ್ ದತ್ ಡಾರ್ಲಿಂಗ್ ಪ್ರಭಾಸ್‌ಗೆ ಅಜ್ಜನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇಷ್ಟೇ ಅಲ್ಲದೆ, ಸಿನಿಮಾದ ಶೂಟಿಂಗ್ ಈಗಾಗಲೇ ಶುರುವಾಗಿದ್ದು, ಹೈದರಾಬಾದ್‌ನಲ್ಲಿ ಎರಡು ಹಂತದ ಶೂಟಿಂಗ್ ಮುಗಿದಿದೆ ಎನ್ನಲಾಗಿದೆ. ಹಾಗೇ ಇದು ಕೇವಲ ತೆಲುಗಿನಲ್ಲಿ ಮಾತ್ರ ಶೂಟ್ ಆಗುತ್ತಿದೆ ಅನ್ನೋ ಮಾತು ಕೇಳಿಬರುತ್ತಿದೆ.

  ಸಂಜಯ್ ದತ್ ಶೂಟಿಂಗ್‌ಗೆ ಬರೋದ್ಯಾವಾಗ?

  ಸಂಜಯ್ ದತ್ ಶೂಟಿಂಗ್‌ಗೆ ಬರೋದ್ಯಾವಾಗ?

  ಪ್ರಭಾಸ್ ಹಾಗೂ ಮಾರುತಿ ಕಾಂಬಿನೇಷನ್‌ ಸಿನಿಮಾದ ಶೂಟಿಂಗ್ ಈಗಾಗಲೇ ಆರಂಭ ಆಗಿದೆ. ಆದರೆ, ಇನ್ನೂ ಬಾಲಿವುಡ್ ನಟ ಸಂಜಯ್ ದತ್ ಸಿನಿಮಾದ ಶೂಟಿಂಗ್‌ನಲ್ಲಿ ಪಾಲ್ಗೊಂಡಿಲ್ಲ. 2023 ಫೆಬ್ರವರಿ ತಿಂಗಳಿನಿಂದ ಈ ಸಿನಿಮಾದ ಶೂಟಿಂಗ್ ಆರಂಭ ಆಗಲಿದೆ ಎಂದು ವರದಿಯಾಗಿದೆ. ಸಂಜಯ್ ದತ್ ಜೊತೆ ಬಾಲಿವುಡ್ ನಟಿ ಜರೀನಾ ವಹಾಬ್ ಕೂಡ ಇದೇ ಸಮಯದಲ್ಲಿ ಶೂಟಿಂಗ್‌ನಲ್ಲಿ ಭಾಗವಹಿಸಲಿದ್ದಾರೆ ಅನ್ನೋ ಮಾತುಗಳು ಕೂಡ ಕೇಳಿಬರುತ್ತಿವೆ.

  ಅಜ್ಜ ಅಜ್ಜಿ ಮೊಮ್ಮಗನ ಕಥೆ

  ಅಜ್ಜ ಅಜ್ಜಿ ಮೊಮ್ಮಗನ ಕಥೆ

  ಮಾರುತಿ ನಿರ್ದೇಶಿಸುತ್ತಿರುವ ಹಾರರ್ ಕಾಮಿಡಿ ಸಿನಿಮಾದಲ್ಲಿ ಪ್ರಭಾಸ್ ಮೊಮ್ಮೊಗನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಸಂಜಯ್ ದತ್ ಅಜ್ಜನ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಹಾಗೇ ಜರೀನಾ ವಹಾಬ್ ಅಜ್ಜಿಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಹೀಗಾಗಿ ಇದು ಅಜ್ಜ ಅಜ್ಜಿ ಹಾಗೂ ಮೊಮ್ಮಗನ ಕಥೆಯನ್ನು ಆಧರಿಸಿದ ಸಿನಿಮಾ ಎನ್ನಲಾಗಿದೆ. ಸದ್ಯ ಪ್ರಭಾಸ್ ಬ್ಯುಸಿಯಾಗಿದ್ದು, ಮೊದಲೇ ಒಪ್ಪಂದ ಮಾಡಿಕೊಂಡಂತೆ ಸಮಯ ಸಿಕ್ಕಾಗ ಈ ಚಿತ್ರದಲ್ಲಿ ನಟಿಸುತ್ತಿದ್ದಾರೆ ಎನ್ನಲಾಗುತ್ತಿದೆ.

  English summary
  Sanjay Dutt To Star In Prabhas And Maruti's Horror Comedy Movie,Know More.
  Monday, December 19, 2022, 18:57
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X