»   » ಸಂಜಯ್ ದತ್ ಬಯೋಪಿಕ್ ಗೊಂದಲಕ್ಕೆ ಬ್ರೇಕ್ ಹಾಕಿದ ಹಿರಾನಿ

ಸಂಜಯ್ ದತ್ ಬಯೋಪಿಕ್ ಗೊಂದಲಕ್ಕೆ ಬ್ರೇಕ್ ಹಾಕಿದ ಹಿರಾನಿ

Posted By:
Subscribe to Filmibeat Kannada

ಬಾಲಿವುಡ್ ನಟ ಸಂಜಯ್ ದತ್ ಜೀವನ ಆಧರಿತ ಸಿನಿಮಾ ಸಿದ್ದವಾಗುತ್ತಿದ್ದು, ಪ್ರತಿ ಹಂತದಲ್ಲೂ ಕುತೂಹಲ ಹೆಚ್ಚಿಸುತ್ತಿದೆ. ಸಂಜಯ್ ದತ್ ಪಾತ್ರದಲ್ಲಿ ರಣ್ಬೀರ್ ಕಪೂರ್ ಅಭಿನಯಿಸುತ್ತಿದ್ದು, ದತ್ ಅವತಾರದಲ್ಲಿ ರಣ್ಬೀರ್ ಕಾಣಿಸಿಕೊಂಡಿರುವ ಗೆಟಪ್ ಗಳು ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಹೀಗಿರುವಾಗ, ಚಿತ್ರದ ಬಿಡುಗಡೆ ಬಗ್ಗೆ ಬಾಲಿವುಡ್ ನಲ್ಲಿ ಸಖತ್ ಚರ್ಚೆಯಾಗುತ್ತಿದೆ.

ಮುಂದಿನ ವರ್ಷ ಈದ್ ಹಬ್ಬಕ್ಕೆ ಸಂಜಯ್ ದತ್ ಸಿನಿಮಾ ತೆರೆ ಕಾಣಲಿದೆ. ಅದೇ ದಿನ ಸಲ್ಮಾನ್ ಖಾನ್ ಚಿತ್ರವೂ ಬಿಡುಗಡೆಯಾಗಲಿದೆ. ಹೀಗಾಗಿ, ಬಾಕ್ಸ್ ಆಫೀಸ್ ನಲ್ಲಿ ಇವೆರಡು ಚಿತ್ರಗಳ ಮಧ್ಯೆ ಬಿಗ್ ಫೈಟ್ ನೋಡಬಹುದು ಎಂಬ ಲೆಕ್ಕಾಚಾರ ಮಾಡುತ್ತಿದ್ದಾರೆ ಬಾಲಿವುಡ್ ಪಂಡಿತರು. ಆದ್ರೆ, ಈ ಎಲ್ಲ ಲೆಕ್ಕಾಚಾರಗಳನ್ನ ಉಲ್ಟಾ ಮಾಡಿದ ನಿರ್ದೇಶಕ ರಾಜ್ ಕುಮಾರ್ ಹಿರಾನಿ ಸಂಜಯ್ ದತ್ ಬಯೋಪಿಕ್ ರಿಲೀಸ್ ಡೇಟ್ ಅನೌನ್ಸ್ ಮಾಡಿ ವದಂತಿಗಳಿಗೆ ತೆರೆ ಎಳೆದಿದ್ದಾರೆ.

ಸುದೀಪ್ 'ವಿಲನ್' ಹೇರ್ ಸ್ಟೈಲ್ ಕಾಪಿ ಮಾಡಿದ್ರಾ ಬಾಲಿವುಡ್ ನಟ?

Sanjay Dutt will Released in March 30th

2018, ಮಾರ್ಚ್ 30 ರಂದು ಸಂಜಯ್ ದತ್ ಬಯೋಪಿಕ್ ಬಿಗ್ ಸ್ಕ್ರೀನ್ ಮೇಲೆ ಬರಲಿದೆ ಎಂದು ನಿರ್ದೇಶಕ ರಾಜ್ ಕುಮಾರ್ ಹಿರಾನಿ ಸ್ಪಷ್ಟಪಡಿಸಿದ್ದಾರೆ. ಈ ಮೂಲಕ ದತ್ ಬಯೋಪಿಕ್ ರಿಲೀಸ್ ಬಗ್ಗೆ ಇದ್ದ ಎಲ್ಲ ಗೊಂದಲಗಳಿಗೆ ಬ್ರೇಕ್ ಬಿದ್ದಿದೆ.

Sanjay Dutt will Released in March 30th

ಅಂದ್ಹಾಗೆ, ಸಂಜಯ್ ದತ್ ಪಾತ್ರವನ್ನ ನಿರ್ವಹಿಸುತ್ತಿರುವ ರಣ್ಬೀರ್ ಕಪೂರ್ ಈ ಚಿತ್ರಕ್ಕಾಗಿ ತುಂಬಾ ಹಾರ್ಡ್ ವರ್ಕ್ ಮಾಡಿದ್ದು, ಒಟ್ಟು 6 ಶೇಡ್ ಗಳಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ. ಪ್ರತಿಯೊಂದು ಶೇಡ್ ನಲ್ಲೂ ಸಂಜಯ್ ದತ್ ಅವರನ್ನೇ ಹೋಲುವಂತೆ ಗೆಟಪ್, ಲುಕ್ ಬದಲಾಯಿಸಿಕೊಂಡಿದ್ದಾರಂತೆ.

ಕೋಪಗೊಂಡ ಕತ್ರಿನಾ, ರಣ್ಬೀರ್ ಕಪೂರ್ ಗೆ ವಾರ್ನಿಂಗ್ ಕೊಟ್ರಂತೆ.!

'ಪಿಕೆ' ಚಿತ್ರದ ನಂತರ ನಿರ್ದೇಶಕ ರಾಜ್ ಕುಮಾರ್ ಹಿರಾನಿ ಈ ಚಿತ್ರವನ್ನ ನಿರ್ದೇಶನ ಮಾಡುತ್ತಿದ್ದಾರೆ. ಸಂಜಯ್ ದತ್ ಪಾತ್ರದಲ್ಲಿ ರಣ್ಬೀರ್ ಕಪೂರ್ ಬಣ್ಣ ಹಚ್ಚಿದ್ದರೇ, ಸುನೀಲ್ ದತ್ ಆಗಿ ಪರೇಶ್ ರಾವಲ್ ಕಾಣಿಸಿಕೊಳ್ಳುತ್ತಿದ್ದಾರೆ. ನರ್ಗೀಸ್ ಪಾತ್ರದಲ್ಲಿ ಮನೀಶಾ ಕೊಯಿರಾಲಾ, ಮಾನ್ಯತಾ ದತ್ ಪಾತ್ರದಲ್ಲಿ ಡಿಯಾ ಮಿರ್ಜಾ, ಮಾಧುರಿ ದೀಕ್ಷಿತ್ ಪಾತ್ರದಲ್ಲಿ ಕರೀಷ್ಮಾ ತನ್ನಾ, ಹಾಗೂ ಅನುಷ್ಕಾ ಶರ್ಮಾ ಕೂಡ ಈ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ.

English summary
The much-awaited biopic on actor Sanjay Dutt will release as scheduled in March 2018, says director Rajkumar Hirani.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada