For Quick Alerts
  ALLOW NOTIFICATIONS  
  For Daily Alerts

  ರಾಮ್ ಗೋಪಾಲ್ ವರ್ಮಾ ವಿರುದ್ಧ ಉರಿದುಬಿದ್ದ ಸಂಜಯ್ ದತ್ ಸಹೋದರಿ.!

  By Harshitha
  |

  ಬಾಲಿವುಡ್ ನಟ ಸಂಜಯ್ ದತ್ ಗೂ ಭೂಗತ ಲೋಕಕ್ಕೂ ನಂಟು ಬೆಳೆದಿದ್ದು ಹೇಗೆ.? ಹೋಗಿ ಹೋಗಿ ತಮ್ಮ ನಿವಾಸದಲ್ಲಿ ಸಂಜಯ್ ದತ್ ಎಕೆ-56 ರೈಫಲ್ ಇಟ್ಟುಕೊಂಡಿದ್ದು ಯಾಕೆ.? ಮುಂಬೈ ಸರಣಿ ಬಾಂಬ್ ಸ್ಫೋಟ ಪ್ರಕರಣದಲ್ಲಿ ಸಂಜಯ್ ದತ್ ಪಾತ್ರವೇನು.? ಈ ಎಲ್ಲಾ ಪ್ರಶ್ನೆಗಳಿಗೆ 'ಸಂಜು' ಸಿನಿಮಾದಲ್ಲಿ ವಿಸ್ತಾರವಾದ ವಿವರ ನೀಡಿಲ್ಲ ಅನ್ನೋದು ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಅಭಿಪ್ರಾಯ.

  ಹೀಗಾಗಿ, 'ಸಂಜು: ದಿ ರಿಯಲ್ ಸ್ಟೋರಿ' ಎಂಬ ಶೀರ್ಷಿಕೆ ಅಡಿ ಸಂಜಯ್ ದತ್ ಬದುಕಿನ ಕರಾಳ ಅಧ್ಯಾಯಗಳ ಕುರಿತು ಸಿನಿಮಾ ಮಾಡಲು ರಾಮ್ ಗೋಪಾಲ್ ವರ್ಮಾ ರೆಡಿ ಆಗಿದ್ದಾರೆ.

  'ಸಂಜು: ದಿ ರಿಯಲ್ ಸ್ಟೋರಿ' ಸಿನಿಮಾದಲ್ಲಿ ಸಂಜಯ್ ದತ್ ಹಾಗೂ ಅಂಡರ್ ವರ್ಲ್ಡ್ ಲಿಂಕ್ ಬಗ್ಗೆ ವಿವರಿಸಲು ರಾಮ್ ಗೋಪಾಲ್ ವರ್ಮಾ ಸಜ್ಜಾಗಿದ್ದಾರೆ. ವಿವಾದಾತ್ಮಕ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ರವರ ಈ ನಡೆ ಸಂಜಯ್ ದತ್ ಕುಟುಂಬಕ್ಕೆ ಕೋಪ ತರಿಸಿದೆ.

  ಮುಗಿದು ಹೋಗಿರುವ ಕಥೆಗಳನ್ನ ಕೆದಕುವ ಪ್ರಯತ್ನ ಮಾಡುತ್ತಿರುವ ರಾಮ್ ಗೋಪಾಲ್ ವರ್ಮಾ ವಿರುದ್ಧ ಸಂಜಯ್ ದತ್ ಸಹೋದರಿ ನಮ್ರತಾ ದತ್ ಸಿಡಿದೆದ್ದಿದ್ದಾರೆ. ಮುಂದೆ ಓದಿರಿ....

  ದುರಾದೃಷ್ಟಕರ ಘಟನೆ

  ದುರಾದೃಷ್ಟಕರ ಘಟನೆ

  ''ಅದು ಸಂಜಯ್ ದತ್ ಬದುಕಿನ ದುರಾದೃಷ್ಟಕರ ಘಟನೆ. ಅದನ್ನ ಸಂಜಯ್ ದತ್ ದಾಟಿ ಬಂದಿದ್ದಾಗಿದೆ. ಈಗ ಯಾಕೆ ಅದನ್ನ ರಾಮ್ ಗೋಪಾಲ್ ವರ್ಮಾ ಕೆದಕಬೇಕು.?'' ಅಂತ ನಮ್ರತಾ ದತ್ ಗುಡುಗಿದ್ದಾರೆ.

  'ಸಂಜು' ನೋಡಿ ಬೇಸರಗೊಂಡ ವರ್ಮಾ ಕೊಟ್ರು ಬ್ರೇಕಿಂಗ್ ನ್ಯೂಸ್ 'ಸಂಜು' ನೋಡಿ ಬೇಸರಗೊಂಡ ವರ್ಮಾ ಕೊಟ್ರು ಬ್ರೇಕಿಂಗ್ ನ್ಯೂಸ್

  ಇಷ್ಟೊಂದು ಚರ್ಚೆ ಯಾಕೆ.?

  ಇಷ್ಟೊಂದು ಚರ್ಚೆ ಯಾಕೆ.?

  ''ಸಂಜಯ್ ದತ್ ಬದುಕಿನ ಬಗ್ಗೆ ಇಷ್ಟೊಂದು ಚರ್ಚೆ ಯಾಕೆ.? ನಮಗೆಲ್ಲ ಯಾಕೆ ಇಷ್ಟೊಂದು ನೋವು ಕೊಡುತ್ತಿದ್ದಾರೆ.? ಹಾಗೇನಾದರೂ, ರಾಮ್ ಗೋಪಾಲ್ ವರ್ಮಾ ಗೆ ಸಂಜಯ್ ದತ್ ಗ್ರೀನ್ ಸಿಗ್ನಲ್ ಕೊಟ್ಟರೆ, ನಾವ್ಯಾರೂ ಬೇಡ ಎನ್ನಲು ಆಗಲ್ಲ'' ಅಂತ ಸಂದರ್ಶನವೊಂದರಲ್ಲಿ ನಮ್ರತಾ ದತ್ ತಿಳಿಸಿದ್ದಾರೆ.

  'ಸಂಜು' ವಿಮರ್ಶೆ: ರಣ್ಬೀರ್-ರಾಜಕುಮಾರ್ ಹಿರಾನಿಯ 'ಮಾಸ್ಟರ್ ಪೀಸ್'! 'ಸಂಜು' ವಿಮರ್ಶೆ: ರಣ್ಬೀರ್-ರಾಜಕುಮಾರ್ ಹಿರಾನಿಯ 'ಮಾಸ್ಟರ್ ಪೀಸ್'!

  ಸಿನಿಮಾ ಮಾಡಿಯೇ ತೀರುವೆ ಎಂಬ ವರ್ಮಾ.!

  ಸಿನಿಮಾ ಮಾಡಿಯೇ ತೀರುವೆ ಎಂಬ ವರ್ಮಾ.!

  ರಾಮ್ ಗೋಪಾಲ್ ವರ್ಮಾ ಕಣ್ಣು ಇದೀಗ ಸಂಜಯ್ ದತ್ ಬದುಕಿನ ಮೇಲೆ ಬಿದ್ದಾಗಿದೆ. 'ಸಂಜು: ದಿ ರಿಯಲ್ ಸ್ಟೋರಿ' ಸಿನಿಮಾದಲ್ಲಿ ಸಂಜಯ್ ದತ್ ಬದುಕಿನ ಎರಡು ಪ್ರಮುಖ ಘಟನೆಗಳ (ಸಂಜಯ್ ದತ್ ಗೂ ಭೂಗತ ಲೋಕಕ್ಕೂ ಇರುವ ನಂಟು ಹಾಗೂ ಸಂಜಯ್ ದತ್ ಅಫೇರ್ಸ್) ಬಗ್ಗೆ ರಾಮ್ ಗೋಪಾಲ್ ವರ್ಮಾ ಹೇಳಲು ಹೊರಟಿದ್ದಾರೆ. ಈಗಾಗಲೇ ಈ ಬಗ್ಗೆ ರಿಸರ್ಚ್ ಮಾಡಲು ಆರಂಭಿಸಿದ್ದಾರೆ ವರ್ಮಾ ಸಾಹೇಬ್ರು.

  ಒಟ್ಟಿಗೆ ಕೆಲಸ ಮಾಡಿರುವ ವರ್ಮಾ-ಸಂಜಯ್

  ಒಟ್ಟಿಗೆ ಕೆಲಸ ಮಾಡಿರುವ ವರ್ಮಾ-ಸಂಜಯ್

  ಸಂಜಯ್ ದತ್ ಹಾಗೂ ರಾಮ್ ಗೋಪಾಲ್ ವರ್ಮಾ ಈಗಾಗಲೇ ಒಟ್ಟಿಗೆ ಕೆಲಸ ಮಾಡಿದ್ದಾರೆ. 1997 ರಲ್ಲಿ ಬಿಡುಗಡೆ ಆದ 'ದೌಡ್' ಚಿತ್ರದಲ್ಲಿ ಸಂಜಯ್ ಗೆ ವರ್ಮಾ ಆಕ್ಷನ್ ಕಟ್ ಹೇಳಿದ್ದರು.

  English summary
  Bollywood Actor Sanjay Dutt's sister Namrata Dutt lashes out at Ram Gopal Varma.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X