ಅಲಿಯಾ ಭಟ್ ನಟನೆಯ 'ಗಂಗೂಬಾಯಿ ಕಾಥಿಯಾವಾಡಿ' ಚಿತ್ರೀಕರಣ ದಿಢೀರ್ ಸ್ಥಗಿತ; ಕಾರಣವೇನು?

ಅಲಿಯಾ ಭಟ್ ನಟನೆಯ 'ಗಂಗೂಬಾಯಿ ಕಾಥಿಯಾವಾಡಿ' ಸಿನಿಮಾದ ಚಿತ್ರೀಕರಣ ಭರ್ಜರಿಯಾಗಿ ನಡೆಯುತ್ತಿತ್ತು. ಇತ್ತೀಚಿಗಷ್ಟೆ ಚಿತ್ರದ ಟೀಸರ್ ರಿಲೀಸ್ ಮಾಡುವ ಮೂಲಕ ಅಭಿಮಾನಿಗಳ ನಿರೀಕ್ಷೆ, ಕುತೂಹಲವನ್ನು ಹೆಚ್ಚಿಸಿದ್ದರು.

ಇತ್ತೀಚಿಗಷ್ಟೆ ನಟ ಅಜಯ್ ದೇವಗನ್ ಸಹ ಚಿತ್ರೀಕರಣ ಸೆಟ್ ಸೇರಿಕೊಂಡಿದ್ದರು. ಇದೀಗ ಚಿತ್ರೀಕರಣ ದಿಢೀರ್ ಸ್ಥಗಿತಗೊಳಿಸಲಾಗಿದೆ. ಯಾಕಂದ್ರೆ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿಗೆ ಕೊರೊನಾ ಪಾಸಿಟಿವ್ ಕಾರಣ ಚಿತ್ರೀಕರಣಕ್ಕೆ ತಾತ್ಕಾಲಿಕ ಬ್ರೇಕ್ ಹಾಕಲಾಗಿದೆ. ಇಂದು ಬಾಲಿವುಡ್ ಖ್ಯಾತ ನಟ ರಣಬೀರ್ ಕಪೂರ್ ಗೆ ಕೊರೊನಾ ಪಾಸಿಟಿವ್ ವರದಿ ಬಂದ ಬೆನ್ನಲ್ಲೇ ನಿರ್ದೇಶಕ ಬನ್ಸಾಲಿಗೂ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ.

ಸದ್ಯ ಬನ್ಸಾಲಿ ಅವರ ಆಫೀಸ್ ನಲ್ಲಿ ಕ್ವಾರಂಟೈನ್ ಆಗಿದ್ದಾರೆ ಎನ್ನುವ ಮಾಹಿತಿ ತಿಳಿದುಬಂದಿದೆ ಬನ್ಸಾಲಿ ಅವರ ತಾಯಿ ಕೊರೊನಾ ಪರೀಕ್ಷೆ ಮಾಡಿಸಲಾಗಿದ್ದು, ವರದಿಗಾಗಿ ಕಾಯುತ್ತಿದ್ದಾರೆ. ಸಂಜಯ್ ಲೀಲಾ ಬನ್ಸಾಲಿ ಸದ್ಯ ಅಜಯ್ ದೇವಗನ್ ಭಾಗದ ಚಿತ್ರೀಕರಣ ಮಾಡುತ್ತಿದ್ದರು.

 Sanjay leela Bhansali testes positive for Corona

ಸದ್ಯ ಚಿತ್ರೀಕರಣ ಸ್ಥಗಿತ ಮಾಡಿದ್ದು, ಅಲಿಯಾ ಭಟ್ ಮತ್ತು ಅಜಯ್ ದೇವಗನ್ ಸೇರಿದಂತೆ ಇಡೀ ಸಿನಿಮಾತಂಡ ಪರೀಕ್ಷೆಗೆ ಒಳಗಾಗುವ ಸಾಧ್ಯತೆ ಇದೆ. ಅಂದಹಾಗೆ ಮಹಾರಾಷ್ಟ್ರದಲ್ಲಿ ಕೊರೊನಾ ಪಾಸಿಟಿವ್ ವರದಿಗಳು ಜಾಸ್ತಿ ಆಗುತ್ತಿದ್ದು, ಜನರಲ್ಲಿ ಮತ್ತೆ ಆತಂಕ ಮನೆ ಮಾಡಿದೆ.

Recommended Video

ಡಿ ಬಾಸ್ ನಮ್ಮ ಅಮ್ಮನ್ನ ಯಾವಾಗ್ಲು ಹಂಗೆ ಮಾತಾಡ್ಸೋದು | Tharun Sudhir | Roberrt | Filmibeat Kannada

More from Filmibeat

English summary
Gangubai Kathiawadi shooting put on hold after Sanjay leela Bhansali tested positive for Corona.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X