For Quick Alerts
  ALLOW NOTIFICATIONS  
  For Daily Alerts

  ಬಾಕ್ಸ್ ಆಫೀಸ್ ನಲ್ಲಿ 'ಸಂಜು' ಅಬ್ಬರ: ಇಲ್ಲಿಯವರೆಗಿನ ಕಲೆಕ್ಷನ್ ಎಷ್ಟು ಗೊತ್ತಾ.?

  By Harshitha
  |

  ರಣ್ಬೀರ್ ಕಪೂರ್ ಅಭಿನಯದ ರಾಜಕುಮಾರ್ ಹಿರಾನಿ ನಿರ್ದೇಶನದ 'ಸಂಜು' ಸಿನಿಮಾ ಬಿಡುಗಡೆ ಆಗಿ ಒಂದು ತಿಂಗಳು ಕಳೆದಿದೆ. ಇಷ್ಟಾದರೂ, 'ಸಂಜು' ಸಿನಿಮಾ ನೋಡಲು ಥಿಯೇಟರ್ ನಲ್ಲಿ ರಶ್ ಮಾತ್ರ ಕಮ್ಮಿ ಆಗಿಲ್ಲ. ಈಗಲೂ ಅನೇಕ ಕಡೆ 'ಸಂಜು' ಸಿನಿಮಾ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ.

  ಹೇಳಿ ಕೇಳಿ 'ಖಳನಾಯಕ್' ಸಂಜಯ್ ದತ್ ಜೀವನ ಚರಿತ್ರೆ ಆಧಾರಿತ ಸಿನಿಮಾ 'ಸಂಜು'. ಹೀಗಾಗಿ, ಸಂಜಯ್ ದತ್ ನಿಜ ಜೀವನದಲ್ಲಿ ಏನೇನೆಲ್ಲಾ ಆಯ್ತು.? ಮುಂಬೈ ಸರಣಿ ಬಾಂಬ್ ಸ್ಫೋಟ ಪ್ರಕರಣದಲ್ಲಿ ಸಂಜಯ್ ದತ್ ಸಿಲುಕಿದ್ದು ಹೇಗೆ ಅಂತ ತಿಳಿಯುವ ಕುತೂಹಲ ಹೊಂದಿರುವ ವೀಕ್ಷಕರು ಥಿಯೇಟರ್ ನತ್ತ ಮುಗಿಬೀಳುತ್ತಿದ್ದಾರೆ.

  ''ಜೀವನ ಚರಿತ್ರೆ ಆಧಾರಿತ ಸಿನಿಮಾ ಮಾಡುವ ವ್ಯಕ್ತಿತ್ವ ಸಂಜಯ್ ದತ್ ಗೆ ಇಲ್ಲ'' ಅಂತ ಹಲವರು ಲೇವಡಿ ಮಾಡಿದ್ದರು. ಆದ್ರೆ, ಸಿನಿಮಾದಲ್ಲಿ ಸಂಜಯ್ ದತ್ ನೋವಿನ ಕಥೆ ಪ್ರೇಕ್ಷಕರ ಮನ ಮುಟ್ಟಿದೆ. ಹೀಗಾಗಿ, ಬಾಕ್ ಆಫೀಸ್ ನಲ್ಲಿ 'ಸಂಜು' ಈಗಲೂ ಅಬ್ಬರಿಸುತ್ತಿದ್ದಾನೆ.

  ಈಗಾಗಲೇ ಹಲವು ರೆಕಾರ್ಡ್ ಗಳನ್ನು ಉಡೀಸ್ ಮಾಡಿರುವ 'ಸಂಜು' ಸಿನಿಮಾ ಇದೀಗ ಹೊಸ ದಾಖಲೆ ಬರೆದಿದೆ. ಅದೇನು ಅಂತ ತಿಳಿಯುವ ಕುತೂಹಲ ಇದ್ದರೆ, ಫೋಟೋ ಸ್ಲೈಡ್ ಗಳತ್ತ ಕಣ್ಣಾಡಿಸಿ...

  ನಾಲ್ಕನೇ ಸ್ಥಾನಕ್ಕೆ ಏರಿದ 'ಸಂಜು' ಸಿನಿಮಾ

  ನಾಲ್ಕನೇ ಸ್ಥಾನಕ್ಕೆ ಏರಿದ 'ಸಂಜು' ಸಿನಿಮಾ

  ಇಡೀ ಭಾರತೀಯ ಚಿತ್ರರಂಗದ ಇತಿಹಾಸದಲ್ಲಿಯೇ ಅತಿ ಹೆಚ್ಚು ಕಲೆಕ್ಷನ್ ಮಾಡಿರುವ ಹಿಂದಿ ಸಿನಿಮಾಗಳ ಪಟ್ಟಿಯಲ್ಲಿ ಸದ್ಯ ರಣ್ಬೀರ್ ಕಪೂರ್ ಅಭಿನಯದ ರಾಜಕುಮಾರ್ ಹಿರಾನಿ ನಿರ್ದೇಶನದ 'ಸಂಜು' ಸಿನಿಮಾ ನಾಲ್ಕನೇ ಸ್ಥಾನಕ್ಕೆ ಏರಿದೆ.

  'ಸಂಜು' ವಿಮರ್ಶೆ: ರಣ್ಬೀರ್-ರಾಜಕುಮಾರ್ ಹಿರಾನಿಯ 'ಮಾಸ್ಟರ್ ಪೀಸ್'!'ಸಂಜು' ವಿಮರ್ಶೆ: ರಣ್ಬೀರ್-ರಾಜಕುಮಾರ್ ಹಿರಾನಿಯ 'ಮಾಸ್ಟರ್ ಪೀಸ್'!

  ಹಾಗಾದ್ರೆ, 'ಸಂಜು' ಮಾಡಿರುವ ಕಲೆಕ್ಷನ್ ಎಷ್ಟು.?

  ಹಾಗಾದ್ರೆ, 'ಸಂಜು' ಮಾಡಿರುವ ಕಲೆಕ್ಷನ್ ಎಷ್ಟು.?

  ಬಿಡುಗಡೆ ಆದ ನಾಲ್ಕು ವಾರಗಳಲ್ಲಿ 'ಸಂಜು' ಸಿನಿಮಾ 339.75 ಕೋಟಿ ಕಲೆಕ್ಷನ್ ಮಾಡಿದೆ. ರಣ್ಬೀರ್ ಕಪೂರ್ ವೃತ್ತಿ ಬದುಕಿನಲ್ಲಿಯೇ ಇದು 'ಆಲ್ ಟೈಮ್ ಬ್ಲಾಕ್ ಬಸ್ಟರ್'.

  ಬ್ಲಾಕ್ ಬಸ್ಟರ್ ಆಯ್ತು 'ಸಂಜು' ಸಿನಿಮಾ: ರಣ್ಬೀರ್ ಗೆ ಹೊಡೆಯಿತು ಜಾಕ್ ಪಾಟ್.!ಬ್ಲಾಕ್ ಬಸ್ಟರ್ ಆಯ್ತು 'ಸಂಜು' ಸಿನಿಮಾ: ರಣ್ಬೀರ್ ಗೆ ಹೊಡೆಯಿತು ಜಾಕ್ ಪಾಟ್.!

  ಸಲ್ಮಾನ್ ರೆಕಾರ್ಡ್ ಬ್ರೇಕ್ ಮಾಡಿದ 'ಸಂಜು'

  ಸಲ್ಮಾನ್ ರೆಕಾರ್ಡ್ ಬ್ರೇಕ್ ಮಾಡಿದ 'ಸಂಜು'

  ಸಲ್ಮಾನ್ ಖಾನ್ ಅಭಿನಯದ 'ಟೈಗರ್ ಝಿಂದಾ ಹೈ' ಚಿತ್ರ ಬಾಕ್ಸ್ ಆಫೀಸ್ ನಲ್ಲಿ ಮಾಡಿದ ದಾಖಲೆಯನ್ನ 'ಸಂಜು' ಸಿನಿಮಾ ಅಳಿಸಿ ಹಾಕಿದೆ. ಆ ಮೂಲಕ 'ಟೈಗರ್ ಝಿಂದಾ ಹೈ' ಚಿತ್ರವನ್ನ ಕೆಳಕ್ಕೆ ತಳ್ಳಿ ನಾಲ್ಕನೇ ಸ್ಥಾನಕ್ಕೇರಿದೆ 'ಸಂಜು'.

  'ಸಂಜು' ಹವಾ ಬಲು ಜೋರು: ಸಲ್ಮಾನ್ ನ ಸೈಡಿಗೆ ತಳ್ಳಿದ ರಣ್ಬೀರ್ ಕಪೂರ್.!'ಸಂಜು' ಹವಾ ಬಲು ಜೋರು: ಸಲ್ಮಾನ್ ನ ಸೈಡಿಗೆ ತಳ್ಳಿದ ರಣ್ಬೀರ್ ಕಪೂರ್.!

  ಈಗ 'ಪಿಕೆ' ಟಾರ್ಗೆಟ್

  ಈಗ 'ಪಿಕೆ' ಟಾರ್ಗೆಟ್

  ಆಮೀರ್ ಖಾನ್ ಅಭಿನಯದ 'ಪಿಕೆ' ಸಿನಿಮಾ 340.8 ಕೋಟಿ ಕಲೆಕ್ಷನ್ ಮಾಡಿತ್ತು. 'ಪಿಕೆ' ರೆಕಾರ್ಡ್ ನ ಬ್ರೇಕ್ ಮಾಡೋಕೆ 'ಸಂಜು'ಗೆ ಜಾಸ್ತಿ ದಿನ ಬೇಕಿಲ್ಲ. ಇನ್ನೆರಡು ದಿನಗಳ ಒಳಗೆ ಅತಿ ಹೆಚ್ಚು ಕಲೆಕ್ಷನ್ ಮಾಡಿರುವ ಹಿಂದಿ ಸಿನಿಮಾಗಳ ಪಟ್ಟಿಯಲ್ಲಿ 'ಸಂಜು' ಮೂರನೇ ಸ್ಥಾನ ಪಡೆದರೂ ಅಚ್ಚರಿ ಇಲ್ಲ.

  English summary
  Ranbir Kapoor starrer 'Sanju' collects 339.75 Crore and is now 4th Highest grossing Hindi film.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X