Don't Miss!
- Finance
ಫೆಬ್ರವರಿ 1ರಿಂದ ಟಾಟಾ ಮೋಟರ್ಸ್ ಕಾರು ದುಬಾರಿ, ಯಾಕೆ, ಇಲ್ಲಿದೆ ಕಾರಣ?
- News
ಹಾಸನ ಟಿಕೆಟ್ ಬಗ್ಗೆ ಮಾತನಾಡಲು ರೇವಣ್ಣ ಬಿಟ್ಟರೆ ಯಾರಿಗೂ ಅವಕಾಶವಿಲ್ಲ; HDKಗೆ ಸೂರಜ್ ಟಾಂಗ್
- Technology
ಭಾರತದಲ್ಲಿ ಹೊಸ ಸಂಚಲನ ಸೃಷ್ಟಿಸಿದ ಫೈರ್ಬೋಲ್ಟ್ ಕಂಪೆನಿ!..ಪ್ರತಿಸ್ಫರ್ಧಿಗಳು ಕಂಗಾಲು!
- Lifestyle
ಬಿಪಿ ಸಮಸ್ಯೆಯೇ? ಪಿಜ್ಜಾ, ಮಜ್ಜಿಗೆ ಈ ಬಗೆಯ ಅಧಿಕ ಸೋಡಿಯಂ ಆಹಾರ ಸೇವಿಸಲೇಬೇಡಿ
- Sports
Women's Premier League : ಫೆಬ್ರವರಿ 2ನೇ ವಾರ ಆಟಗಾರರ ಹರಾಜು: ದೆಹಲಿಯಲ್ಲಿ ಹರಾಜು ಪ್ರಕ್ರಿಯೆ
- Automobiles
ಬಾಕ್ಸ್ ಆಫೀಸ್ನಲ್ಲಿ 'ಪಠಾಣ್' ಅಬ್ಬರ: ಈ ಚಿತ್ರದಲ್ಲಿ ಕಾಣಿಸಿಕೊಂಡ ಆಕರ್ಷಕ ಕಾರುಗಳಿವು...
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
'ಸಂಜು' ಹವಾ ಬಲು ಜೋರು: ಸಲ್ಮಾನ್ ನ ಸೈಡಿಗೆ ತಳ್ಳಿದ ರಣ್ಬೀರ್ ಕಪೂರ್.!
''ಸಂಜು' ಹೇಳಿಕೊಳ್ಳುವಂತಹ ಸಿನಿಮಾ ಏನಲ್ಲ. ಅದೊಂದು ಮಿಮಿಕ್ರಿ ಶೋ ಇದ್ದ ಹಾಗಿದೆ. ಸಂಜಯ್ ದತ್ ಗೆ ಹೀರೋ ಇಮೇಜ್ ಕೊಡುವ ಉದ್ದೇಶದಿಂದ ಈ ಚಿತ್ರ ಮಾಡಲಾಗಿದೆ ಅಷ್ಟೇ'' ಅಂತ ಯಾರು ಎಷ್ಟೇ ಕಾಲೆಳೆದರೂ, 'ಸಂಜು' ಕಲೆಕ್ಷನ್ ನ ತಡೆದು ನಿಲ್ಲಿಸುವ ತಾಕತ್ತು ಯಾರಿಗೂ ಇಲ್ಲ.!
'ಸಂಜು' ಬಿಡುಗಡೆ ಆಗಿ ಮೂರು ವಾರಗಳು ಕಳೆದಿವೆ. ಆದರೂ, ಬಾಕ್ಸ್ ಆಫೀಸ್ ನಲ್ಲಿ 'ಸಂಜು' ಕಲೆಕ್ಷನ್ ಕೊಂಚ ಕೂಡ ಡಲ್ ಆಗಿಲ್ಲ. ವಾರದಿಂದ ವಾರಕ್ಕೆ 'ಸಂಜು' ಕಲೆಕ್ಷನ್ ಜೋರಾಗಿದೆ.
ಸಂಜಯ್ ದತ್ ಬದುಕಲ್ಲಿ ಏನಾಯಿತು, ಅವರು ಡ್ರಗ್ ಅಡಿಕ್ಟ್ ಆಗಿದ್ದು ಯಾಕೆ.? ಮುಂಬೈ ಬಾಂಬ್ ಸ್ಫೋಟ ಪ್ರಕರಣದಲ್ಲಿ ಸಂಜಯ್ ದತ್ ಹೆಸರು ತಳುಕು ಹಾಕಿಕೊಂಡಿದ್ದು ಹೇಗೆ.? ಎಂಬುದರ ಬಗ್ಗೆ 'ಸಂಜು' ಸಿನಿಮಾದಲ್ಲಿ ಸ್ಪಷ್ಟ ವಿವರಣೆ ಇದೆ. ಹೀಗಾಗಿ ಪ್ರೇಕ್ಷಕರು ಕೂಡ ಕುತೂಹಲದಿಂದಲೇ ಥಿಯೇಟರ್ ನತ್ತ ಮುಗಿಬೀಳ್ತಿದ್ದಾರೆ.
ಬಿಡುಗಡೆ ಆದ ಮೂರು ದಿನಗಳಲ್ಲೇ ನೂರು ಕೋಟಿ ಕ್ಲಬ್ ಸೇರಿದ 'ಸಂಜು' ಇದೀಗ ಬಾಕ್ಸ್ ಆಫೀಸ್ ರೆಕಾರ್ಡ್ ಗಳನ್ನೆಲ್ಲ ಪೀಸ್ ಪೀಸ್ ಮಾಡಲು ಸಜ್ಜಾಗಿದೆ. 'ಸಂಜು' ಓಟ ಹೀಗೆ ಮುಂದುವರೆದರೆ, ಸಲ್ಮಾನ್ ಖಾನ್ ಮಾಡಿರುವ ಎಲ್ಲಾ ರೆಕಾರ್ಡ್ ಗಳು ಪುಡಿ ಪುಡಿ ಆಗುವುದು ಖಂಡಿತ.! ಮುಂದೆ ಓದಿರಿ...

ಆರನೇ ಸ್ಥಾನದಲ್ಲಿ 'ಸಂಜು'
ಇಡೀ ಭಾರತೀಯ ಚಿತ್ರರಂಗದ ಇತಿಹಾಸದಲ್ಲಿಯೇ ಅತಿ ಹೆಚ್ಚು ಕಲೆಕ್ಷನ್ ಮಾಡಿರುವ ಸಿನಿಮಾಗಳ ಪಟ್ಟಿಯಲ್ಲಿ ಸದ್ಯ ರಣ್ಬೀರ್ ಕಪೂರ್ ಅಭಿನಯದ ರಾಜಕುಮಾರ್ ಹಿರಾನಿ ನಿರ್ದೇಶನದ 'ಸಂಜು' ಸಿನಿಮಾ ಆರನೇ ಸ್ಥಾನದಲ್ಲಿದೆ. ಮೂರು ವಾರಕ್ಕೆ ಮುನ್ನೂರು ಕೋಟಿ ಕ್ಲಬ್ ಸೇರಿ ದಾಖಲೆ ಬರೆದಿದೆ 'ಸಂಜು' ಚಿತ್ರ.
'ಸಂಜು'
ವಿಮರ್ಶೆ:
ರಣ್ಬೀರ್-ರಾಜಕುಮಾರ್
ಹಿರಾನಿಯ
'ಮಾಸ್ಟರ್
ಪೀಸ್'!

'ಸಂಜು' ಮಾಡಿರುವ ಕಲೆಕ್ಷನ್ ಎಷ್ಟು.?
ಮೂರು ವಾರಗಳಲ್ಲಿ 'ಸಂಜು' ಸಿನಿಮಾ ಒಟ್ಟಾರೆ 316.64 ಕೋಟಿ ಕಲೆಕ್ಷನ್ ಮಾಡಿದೆ. ರಣ್ಬೀರ್ ಕಪೂರ್ ಹಾಗೂ ರಾಜಕುಮಾರ್ ಹಿರಾನಿ ವೃತ್ತಿ ಬದುಕಿನಲ್ಲಿಯೇ ಇದು ರೆಕಾರ್ಡ್ ಬ್ರೇಕಿಂಗ್.!
'ಸಂಜು'
ನಾಗಾಲೋಟವನ್ನ
ಹಿಡಿದು
ನಿಲ್ಲಿಸುವ
ತಾಕತ್ತು
ಯಾರಿಗೂ
ಇಲ್ಲ
ಬಿಡಿ.!

ಸಲ್ಮಾನ್ ಖಾನ್ ದಾಖಲೆ ಧೂಳಿಪಟ ಆದರೂ ಅಚ್ಚರಿ ಇಲ್ಲ.!
ಸಲ್ಮಾನ್ ಖಾನ್ ಅಭಿನಯದ 'ಭಜರಂಗಿ ಭಾಯಿಜಾನ್' ಸಿನಿಮಾ 320.34 ಕೋಟಿ ಕಲೆಕ್ಷನ್ ಮಾಡಿತ್ತು. ಇದು ಸಲ್ಮಾನ್ ಖಾನ್ ಕೆರಿಯರ್ ನಲ್ಲಿಯೇ ಅತಿ ಹೆಚ್ಚು ಕಲೆಕ್ಷನ್ ಮಾಡಿದ ಸಿನಿಮಾ. 'ಸಂಜು' ನಾಗಾಲೋಟ ಹೀಗೇ ಮುಂದುವರೆದರೆ, 'ಟೈಗರ್ ಝಿಂದಾ ಹೈ' ಹಾಗೂ 'ಭಜರಂಗಿ ಭಾಯಿಜಾನ್' ರೆಕಾರ್ಡ್ ಗಳನ್ನ ರಣ್ಬೀರ್ ಕಪೂರ್ ಉಡೀಸ್ ಮಾಡಿ ಮೇಲಕ್ಕೇರುವುದು ಪಕ್ಕಾ.
'ಸಂಜು'
ಮಾಡಿದ್ದಕ್ಕೆ
ಸಂಜಯ್
ದತ್
ಗೆ
ಎಷ್ಟು
ಕೋಟಿ
ಸಿಕ್ಕಿದೆ?

ಮೂರನೇ ಸ್ಥಾನಕ್ಕೆ ಬರಬಹುದು.!
ಭಾರತೀಯ ಚಿತ್ರರಂಗದ ಇತಿಹಾಸದಲ್ಲಿಯೇ ಅತಿ ಹೆಚ್ಚು ಕಲೆಕ್ಷನ್ ಮಾಡಿರುವ ಚಿತ್ರಗಳು 'ಬಾಹುಬಲಿ-2' ಹಾಗೂ 'ದಂಗಲ್'. ಇವೆರಡು ಚಿತ್ರಗಳ ದಾಖಲೆಯನ್ನ ಸೈಡಿಗೆ ತಳ್ಳಲು ಸಾಧ್ಯವಾಗದೇ ಇದ್ದರೂ, ಮೂರನೇ ಸ್ಥಾನಕ್ಕೆ 'ಸಂಜು' ಬರುವುದು ಪಕ್ಕಾ ಅಂತಿದ್ದಾರೆ ಬಾಲಿವುಡ್ ಟ್ರೇಡ್ ಎಕ್ಸ್ ಪರ್ಟ್ಸ್.

ರಣ್ಬೀರ್ ಮುಂದೆ ಸಲ್ಮಾನ್ ಡಮ್ಮಿ.?!
ಒಂದು ವೇಳೆ ಕಲೆಕ್ಷನ್ ಲೆಕ್ಕಾಚಾರದಲ್ಲಿ 'ಸಂಜು' ಸಿನಿಮಾ ಮೂರನೇ ಸ್ಥಾನಕ್ಕೆ ಬಂದರೆ ರಣ್ಬೀರ್ ಕಪೂರ್ ಬಾಲಿವುಡ್ ನ ಬಹು ಬೇಡಿಕೆಯ ನಟರಾಗುವುದರಲ್ಲಿ ಯಾವುದೇ ಅನುಮಾನ ಇಲ್ಲ. ರಣ್ಬೀರ್ ಕಪೂರ್ ಮುಂದೆ 'ಬಾಲಿವುಡ್ ಟೈಗರ್' ಸಲ್ಮಾನ್ ಡಮ್ಮಿ ಆಗೋದ್ರಲ್ಲಿ ಡೌಟ್ ಬೇಡ.!