Just In
Don't Miss!
- Automobiles
ಬಿಡುಗಡೆಗೆ ಸಜ್ಜಾಗುತ್ತಿದೆ 2021ರ ಮಾರುತಿ ಎಕ್ಸ್ಎಲ್5 ಕಾರು
- Sports
ನೇಥನ್ ಲಿಯಾನ್ಗೆ ಅವಿಸ್ಮರಣೀಯ ಉಡುಗೊರೆ ಕೊಟ್ಟ ಅಜಿಂಕ್ಯ ರಹಾನೆ
- News
ನಮಗೆ ಮಾತ್ರ ಏಕೆ ಕೋವ್ಯಾಕ್ಸಿನ್ ಲಸಿಕೆ?: ಸರ್ಕಾರಕ್ಕೆ ನಿವಾಸಿ ವೈದ್ಯರ ಪ್ರಶ್ನೆ
- Lifestyle
ಚೀನಾದ ಐಸ್ ಕ್ರೀಮ್ ನಲ್ಲಿ ಕೊರೊನಾ ವೈರಸ್ ಪತ್ತೆ!!!
- Finance
ಷೇರುಪೇಟೆಯಲ್ಲಿ ಉತ್ಸಾಹ; ಹೂಡಿಕೆದಾರರ ಸಂಪತ್ತು 3.50 ಲಕ್ಷ ಕೋಟಿ ರು. ಹೆಚ್ಚಳ
- Education
NBT Recruitment 2021: 26 ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಸಿನಿಮಾಗಳಲ್ಲಿ ಕಡಿಮೆ ಪ್ರಾಮುಖ್ಯತೆ: ಯೋಗ್ಯತೆ ಬಗ್ಗೆ ಸಾರಾ ಅಲಿ ಖಾನ್ ಮಾತು
ಸಿನಿಮಾಗಳು ಮೊದಲಿನಿಂದಲೂ ಪುರುಷ ಪ್ರಧಾನವೇ. ಸಿನಿಮಾ ರಂಗದಲ್ಲಿ ತೊಡಗಿಕೊಂಡಿರುವವರು ಸೇರಿದಂತೆ, ಸಿನಿಮಾಗಳ ಕತೆಗಳು ಸಹ ಪುರುಷ ಪ್ರಧಾನವಾಗಿಯೇ ಇರುತ್ತವೆ.
ಗಂಡಸರದ್ದೇ ಮೇಲುಗೈ ಇರುವ ಸಿನಿಮಾ ರಂಗದಲ್ಲಿ ಮಹಿಳೆಯರು ತಮ್ಮ ಅಸ್ಥಿತ್ವ ಉಳಿಸಿಕೊಳ್ಳಲು, ದೊಡ್ಡ ಎತ್ತರಕ್ಕೆ ಏರಲು ಪ್ರಯತ್ನಗಳನ್ನು ಪಡುತ್ತಲೇ ಇದ್ದಾರೆ. ಮುಂದೆಯೂ ಇದು ಹೀಗೆಯೇ ಸಾಗುತ್ತದೆಯೋ ಏನೋ?
ಆದರೆ ಕೆಲವು ನಟಿಯರು 'ನಮಗೆ ದಕ್ಕಿದ್ದಿಷ್ಟೆ' ಇಷ್ಟಕ್ಕೆ ತೃಪ್ತರಾಗಿದ್ದುಬಿಡುತ್ತೇವೆ ಎಂಬ ಭಾವದಲ್ಲಿದ್ದಾರೆ. ಅದರಲ್ಲಿ ಒಬ್ಬರು ಸೈಫ್ ಅಲಿ ಖಾನ್ ಮಗಳು ನಟಿ ಸಾರಾ ಅಲಿ ಖಾನ್.
ಸಾರಾ ಅಲಿ ಖಾನ್ ಈ ವರೆಗೆ ಕೇವಲ 'ಬಬ್ಲಿ' ಹುಡುಗಿ ಮಾದರಿಯ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಕೆಲವು ಸಿನಿಮಾಗಳಲ್ಲಿಯಂತೂ ಅವರ ಪಾತ್ರ ಕೇವಲ ಹಾಡು-ಕುಣಿತ, ರೊಮಾನ್ಸ್‌ಗೆ ಮಾತ್ರವೇ ಸೀಮಿತವಾಗಿದೆ.
ಕೆಲವು ಸಿನಿಮಾಗಳಲ್ಲಿ ತಮ್ಮ ಪಾತ್ರಕ್ಕೆ ಹೆಚ್ಚು ಪ್ರಾಮುಖ್ಯತೆ ಇಲ್ಲದೇ ಇರುವ ಬಗ್ಗೆ ಮಾತನಾಡಿರುವ ಸಾರಾ ಅಲಿ ಖಾನ್, 'ಅವರವರ ಯೋಗ್ಯತೆಗೆ ತಕ್ಕಂತೆ ಪಾತ್ರಗಳು ಸಿಗುತ್ತವೆ' ಎಂದಿದ್ದಾರೆ.
'ರಣ್ವೀರ್ ಸಿಂಗ್, ವರುಣ್ ಧವನ್ ಅಂಥಹಾ ಸ್ಟಾರ್‌ಗಳೊಟ್ಟಿಗೆ ಸಿನಿಮಾ ಮಾಡುವಾಗ ನಮ್ಮ ಯೋಗ್ಯತೆ ನಮಗೆ ಗೊತ್ತಿರಬೇಕು, ನಮ್ಮ ಯೋಗ್ಯತೆಗೆ ತಕ್ಕಂತೆ ನಮ್ಮ ಪಾತ್ರಗಳಿಗೆ ಪ್ರಾಮುಖ್ಯತೆ ಇರುತ್ತದೆ' ಎಂದಿದ್ದಾರೆ ಸಾರಾ. ಆ ಮೂಲಕ ತಮಗೆ 'ಯೋಗ್ಯತೆ' ಇಲ್ಲವೆಂದು ಅವರೇ ಹೇಳಿಕೊಂಡಿದ್ದಾರೆ.
ಬಾಲಿವುಡ್‌ನ ಪುರುಷ ಪ್ರಧಾನ ಸಿನಿರಂಗದಲ್ಲಿ ದೀಪಿಕಾ ಪಡುಕೋಣೆ, ತಾಪ್ಸಿ ಪನ್ನು, ಕಂಗನಾ ರಣೌತ್ ಅಂತಹಾ ಕೆಲವು ನಟಿಯರು ತಮ್ಮದೇ ಆದ ಛಾಪು ಮೂಡಿಸುತ್ತಿದ್ದಾರೆ. ಮಹಿಳಾ ಪ್ರಧಾನ ಸಿನಿಮಾಗಳಲ್ಲಿ ಈ ನಟಿಯರು ಕಾಣಿಸಿಕೊಳ್ಳುತ್ತಿದ್ದಾರೆ.