For Quick Alerts
  ALLOW NOTIFICATIONS  
  For Daily Alerts

  'ಸುಶಾಂತ್ ಸಿಂಗ್ ಪ್ರೀತಿಯಲ್ಲಿ ನಿಯತ್ತಾಗಿ ಇರಲಿಲ್ಲ' ಎಂದ ಸಾರಾ ಅಲಿ ಖಾನ್.!

  |

  ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ಬಳಿಕ ಸಾಕಷ್ಟು ವಿಚಾರಗಳು ಬಹಿರಂಗವಾಗಿವೆ. ಸುಶಾಂತ್ ಸಿಂಗ್ ಸಾವಿನ ಹಿಂದಿನ ರಹಸ್ಯಕ್ಕೆ ಕಾರಣವೇನು ಎನ್ನುವ ಪ್ರಶ್ನೆಗೆ ಇನ್ನು ಉತ್ತರ ಸಿಕ್ಕಿಲ್ಲ. ಸುಶಾಂತ್ ಸಿಂಗ್ ಸಾವಿನ ಪ್ರಕರಣ ತನಿಖೆ ಈಗ ಡ್ರಗ್ಸ್ ಪ್ರಕರಣಕ್ಕೆ ತಿರುಗಿ, ಇಡೀ ಭಾರತೀಯ ಸಿನಿಮಾರಂಗದಲ್ಲಿ ಬಿರುಗಾಳಿ ಎಬ್ಬಿಸಿದೆ. ಈ ವಿಚಾರವಾಗಿ ಈಗಾಗಲೇ ಸಾಕಷ್ಟು ಸ್ಟಾರ್ ನಟಿಯನ್ನು ವಿಚಾರಣೆಗೆ ಒಳಪಡಿಸಲಾಗಿದೆ.

  ನಟಿ ಸಾರಾ ಅಲಿ ಖಾನ್ ಅವರನ್ನು ಸಹ ಎನ್ ಸಿ ಬಿ ವಿಚಾರಣೆಗೆ ಒಳಪಡಿಸಿತ್ತು. ಈ ವೇಳೆ ಸಾರಾ, ಸುಶಾಂತ್ ಸಿಂಗ್ ಬಗ್ಗೆ ಅಚ್ಚರಿಕರ ಮಾಹಿತಿಯನ್ನು ಬಹಿರಂಗ ಪಡಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಸಾರಾ ಮತ್ತು ಸುಶಾಂತ್ ಸಿಂಗ್ ಇಬ್ಬರು ಪ್ರೀತಿಯಲ್ಲಿದ್ದರು, ಇಬ್ಬರು ಒಬ್ಬರಿಗೊಬ್ಬರು ಪ್ರೀತಿಸುತ್ತಿದ್ದರು, ಬಳಿಕ ದೂರ ದೂರ ಆದರು ಎನ್ನುವ ವಿಚಾರ ಗುಟ್ಟಾಗಿ ಉಳಿದಿಲ್ಲ. ಸುಶಾಂತ್ ಸಾವಿನ ಬಳಿಕ ಇಬ್ಬರ ಸಂಬಂಧ ದೊಡ್ಡ ಮಟ್ಟಕ್ಕೆ ಚರ್ಚೆಯಾಯಿತು. ಸಾರಾ ಅಲಿ ಖಾನ್ ರಿಂದ ದೂರ ಆದ ಬಳಿಕ ಸುಶಾಂತ್ ಮಾನಸಿಕವಾಗಿ ಕುಗ್ಗಿ ಹೋಗಿದ್ದರು ಎನ್ನುವ ಮಾತುಗಳು ಕೇಳಿ ಬರುತ್ತಿವೆ. ಈ ಬಗ್ಗೆ ಎನ್ ಸಿ ಬಿ ವಿಚಾರಣೆ ವೇಳೆ ಸಾರಾ ಪ್ರತಿಕ್ರಿಯೆ ನೀಡಿದ್ದಾರೆ. ಮುಂದೆ ಓದಿ...

  'ಕೇದಾರನಾಥ' ಸಿನಿಮಾದಲ್ಲಿ ಒಟ್ಟಿಗೆ ಅಭಿನಯ

  'ಕೇದಾರನಾಥ' ಸಿನಿಮಾದಲ್ಲಿ ಒಟ್ಟಿಗೆ ಅಭಿನಯ

  ನಟಿ ಸಾರಾ ಅಲಿ ಖಾನ್ ಚೊಚ್ಚಲ ಚಿತ್ರ 'ಕೇದಾರನಾಥ' ಸಿನಿಮಾದಲ್ಲಿ ನಟ ಸುಶಾಂತ್ ಸಿಂಗ್ ರಜಪೂತ್ ನಾಯಕನಾಗಿ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾದಲ್ಲಿ ಸುಶಾಂತ್ ಡ್ರಗ್ಸ್ ತೆಗೆದುಕೊಳ್ಳುತ್ತಿದ್ದರು ಆರೋಪ ಕೇಳಿ ಬಂದಿದೆ. ಕೇದಾರನಾಥ ಸಿನಿಮಾ ನಂತರ ಸುಶಾಂತ್ ಮಾದಕ ದ್ರವ್ಯ ವ್ಯಸನಿಯಾಗಿದ್ದರು ಎಂದು ರಿಯಾ ಚಕ್ರವರ್ತಿ ಎನ್ ಸಿ ಬಿ ಅಧಿಕಾರಿಗಳ ಮುಂದೆ ಹೇಳಿದ್ದಾರೆ ಎಂದು ಹೇಳಲಾಗುತ್ತಿದೆ.

  ಚರ್ಚೆಗೆ ಕಾರಣವಾಗಿದ್ದ ಬ್ಯಾಂಕಾಕ್ ಪ್ರವಾಸ

  ಚರ್ಚೆಗೆ ಕಾರಣವಾಗಿದ್ದ ಬ್ಯಾಂಕಾಕ್ ಪ್ರವಾಸ

  ಈ ಸಿನಿಮಾ ಬಳಿಕ ಸುಶಾಂತ್ ಮತ್ತು ಸಾರಾ ಅಲಿ ಖಾನ್ ಇಬ್ಬರು ಉತ್ತಮ ಸ್ನೇಹಿತರಾಗಿದ್ದರು. ಈ ಸ್ನೇಹ ಪ್ರೀತಿಗೆ ತಿರುಗಿ ಇಬ್ಬರು ಜಾಲಿ ಟ್ರಿಪ್ ಮಾಡುತ್ತಿದ್ದರು. ಸಾರಾ ಅಲಿ ಖಾನ್ ಮತ್ತು ಸುಶಾಂತ್ ಇಬ್ಬರು ಬ್ಯಾಂಕಾಕ್ ಪ್ರವಾಸಕ್ಕೆ ಹೋಗಿರುವುದು ದೊಡ್ಡ ಮಟ್ಟಕ್ಕೆ ಚರ್ಚೆಯಾಗಿತ್ತು. ಇದೀಗ ಸಾರಾ ಎನ್ ಸಿ ಬಿ ವಿಚಾರಣೆ ವೇಳೆ ಸುಶಾಂತ್ ಸಿಂಗ್ ಬಗ್ಗೆ ಶಾಕಿಂಗ್ ಕೇಳಿಕೆಯನ್ನು ನೀಡಿದ್ದಾರೆ.

  ನಟಿಯರ ಮೊಬೈಲ್ ಎನ್‌ಸಿಬಿ ಕೈಯಲ್ಲಿ, ಹೆಚ್ಚಾದ ಆತಂಕನಟಿಯರ ಮೊಬೈಲ್ ಎನ್‌ಸಿಬಿ ಕೈಯಲ್ಲಿ, ಹೆಚ್ಚಾದ ಆತಂಕ

  ಪ್ರೀತಿಯಲ್ಲಿ ನಿಯತ್ತಾಗಿ ಇರಲಿಲ್ಲ

  ಪ್ರೀತಿಯಲ್ಲಿ ನಿಯತ್ತಾಗಿ ಇರಲಿಲ್ಲ

  ಸಾರಾ ಅಲಿ ಖಾನ್, ಸುಶಾಂತ್ ಸಿಂಗ್ ಜೊತೆ ಪ್ರೀತಿಯಲ್ಲಿದ್ದ ವಿಚಾರವನ್ನು ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. '2019ರಲ್ಲಿ ಇಬ್ಬರು ಬೇರೆ ಬೇರೆ ಆದೆವು. ಇಬ್ಬರು ದೂರ ಆಗಲು ಕಾರಣ ಸುಶಾಂತ್ ಪ್ರೀತಿಯಲ್ಲಿ ನಿಯತ್ತಾಗಿ ಇರಲಿಲ್ಲ. ಅವರಿಗೆ ಬೇರೆ ಹುಡುಗಿಯರ ಜೊತೆ ಸಂಬಂಧ ಇತ್ತು' ಎಂದು ಸಾರಾ ಹೇಳಿದ್ದಾರಂತೆ.

  ಜೊತೆ ಜೊತೆಯಲಿ ಮೇಘ ಶೆಟ್ಟಿಗೆ ಬಂತು ಬಂಪರ್ ಆಫರ್ | Filmibeat Kannada
  ಸಾರಾನೇ ನಾಯಕಿಯಾಗಬೇಕೆಂದು ಒತ್ತಡ ಹೇರುತ್ತಿದ್ದರಾ ಸುಶಾಂತ್?

  ಸಾರಾನೇ ನಾಯಕಿಯಾಗಬೇಕೆಂದು ಒತ್ತಡ ಹೇರುತ್ತಿದ್ದರಾ ಸುಶಾಂತ್?

  ಇಬ್ಬರ ಸಂಬಂಧದ ಬಗ್ಗೆ ಸುಶಾಂತ್ ತುಂಬಾ ಪೊಸೆಸಿವ್ ಆಗಿದ್ದರು ಎಂದು ಹೇಳಿಕೊಂಡಿದ್ದಾರೆ. ಅಲ್ಲದೆ ಮುಂಬರುವ ಸುಶಾಂತ್ ಸಿನಿಮಾಗಳಲ್ಲಿ ಸಾರಾ ಅಲಿ ಖಾನ್ ನಾಯಕಿಯಾಗಿ ಆಯ್ಕೆ ಮಾಡಿಕೊಳ್ಳುವಂತೆ ನಿರ್ಮಾಪಕರ ಬಳಿ ಹೋಗಿ ಕೇಳಿಕೊಳ್ಳುತ್ತಿದ್ದರಂತೆ. ಆದರೆ ಸಾರಾ ಇದನ್ನು ಒಪ್ಪಿಕೊಳ್ಳುತ್ತಿರಲಿಲ್ಲ ಎಂದು ಸಾರಾ ಎನ್ ಸಿ ಬಿ ವಿಚಾರಣೆ ವೇಳೆ ಹೇಳಿದ್ದಾರೆ ಎಂದು ಹೇಳಲಾಗುತ್ತಿದೆ.

  English summary
  Sara Ali Khan says NCB Sushant Singh Rajput Wasn’t Loyal In Their Brief Relationship.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X