For Quick Alerts
  ALLOW NOTIFICATIONS  
  For Daily Alerts

  ಬೊಟ್ಟನ್ನಿಟ್ಟು ಬನಾರಸ್‌ ಬೀದಿಯಲ್ಲಿ ಬಿಂದಾಸ್‌ ಸುತ್ತಾಡಿದ ಬಾಲಿವುಡ್ ಖಾನ್ ಪುತ್ರಿ

  |

  ಬಾಲಿವುಡ್‌ ಮೇಲೆ ಖಾನ್‌ ಗಳ ಪ್ರಭಾವ ಎಷ್ಟೆಂಬುದು ತಿಳಿದವರಿಲ್ಲ. ಅಲ್ಲಿ ಖಾನ್‌, ಕಪೂರ್‌ ಗಳದ್ದೇ ಜೋರು. ಖಾನ್‌ ಗಳ ಜನಪ್ರಿಯತೆ ಎಷ್ಟೆಂದರೆ ಅವರು ಮಾತ್ರವಲ್ಲ ಅವರ ಮನೆಮಂದಿಯೆಲ್ಲಾ ಬಾಲಿವುಡ್‌ ಗೆ ಸೆಲಿಬ್ರಿಟಿಗಳೇ.

  ಇಂತಹುದರಲ್ಲಿ ಸೈಫ್ ಅಲಿ ಖಾನ್ ಮಗಳು, ಬಾಲಿವುಡ್‌ ಗೆ ಹೊಸದಾಗಿ ಪ್ರವೇಶ ಪಡೆದಿರುವ ಸಾರಾ ಅಲಿ ಖಾನ್, ಸಾಮಾನ್ಯಳಂತೆ ಬನಾರಸ್‌ ನ ಬ್ಯುಸಿ ಬೀದಿಗಳಲ್ಲಿ ಬಿಂದಾಸ್ ಆಗಿ ಸುತ್ತಾಡಿದ್ದಾಳೆ. ಅಷ್ಟೆ ಅಲ್ಲ ಬನಾರಸ್‌ ಬೀದಿಗಳ ಪರಿಚಯವನ್ನೂ ತಮ್ಮ ಇನ್ಸ್ಟಾ ಅಭಿಮಾನಿಗಳಿಗೆ ಮಾಡಿಕೊಟ್ಟಿದ್ದಾಳೆ.

  ಸಾರಾ ಅಲಿ ಖಾನ್ ಇನ್‌ಸ್ಟಾಗ್ರಾಂ ನಲ್ಲಿ ವಿಡಿಯೋ ಒಂದನ್ನು ಹಾಕಿದ್ದು, ದೊಡ್ಡದಾಗಿ ಕುಂಕುಮ, ವಿಭೂತಿ ಇಟ್ಟುಕೊಂಡು, ಕೊರಳಿಗೆ ಹೂ ಮಾಲೆಯೊಂದನ್ನು ಧರಿಸಿಕೊಂಡು ಬನಾರಸ್‌ ನ ಬೀದಿಗಳಲ್ಲಿ ಸುತ್ತಿದ್ದಾರೆ. ಅಷ್ಟೆ ಅಲ್ಲದೆ ವರದಿಗಾರ್ತಿಯಂತೆ ಬೀದಿಗಳಲ್ಲಿ ವರದಿಗಾರಿಕೆ ಸಹ ಮಾಡಿದ್ದಾರೆ.

  ಸೈಫ್ ಅಲಿ ಖಾನ್‌ ಮೊದಲ ಹೆಂಡತಿ ಮಗಳು

  ಸೈಫ್ ಅಲಿ ಖಾನ್‌ ಮೊದಲ ಹೆಂಡತಿ ಮಗಳು

  ಸಾರಾ ಅಲಿ ಖಾನ್, ಸೈಫ್ ಅಲಿ ಖಾನ್ ಮತ್ತು ಅಮೃತ್ ಅರೋರಾ ದಂಪತಿಯ ಮಗಳು. ನಂತರ ಸೈಫ್ ಅಲಿ ಖಾನ್ ಅಮೃತ್ ಅರೋರಾಗೆ ವಿಚ್ಛೇಧನ ನೀಡಿ ಈಗ ಕರೀನಾ ಕಪೂರ್ ಅನ್ನು ಮದುವೆಯಾಗಿ ಒಂದು ಮಗು ಪಡೆದಿದ್ದಾರೆ.

  ಗಂಗಾರತಿ ದರ್ಶನ ಮಾಡಿದ ಸಾರಾ ಅಲಿ ಖಾನ್

  ಗಂಗಾರತಿ ದರ್ಶನ ಮಾಡಿದ ಸಾರಾ ಅಲಿ ಖಾನ್

  ಸಾರಾ ಅಲಿ ಖಾನ್ ತನ್ನ ತಾಯಿ ಅಮೃತಾ ಸಿಂಗ್ ಅವರೊಂದಿಗೆ ಕೆಲ ದಿನದಿಂದ ವಾರಣಾಸಿಯಲ್ಲಿ ಸುತ್ತಾಡುತ್ತಿದ್ದಾರೆ. ಅಮ್ಮ ಮಗಳು ಗಂಗಾರತಿಯನ್ನು ಕಣ್ತುಂಬಿಸಿಕೊಂಡಿದ್ದಾರೆ. ಈಗ ಸಾರಾ ಅಲಿ ಖಾನ್ ಪೋಸ್ಟ್ ಮಾಡಿರುವ ವಿಡಯೋ ವನ್ನು ಶೂಟ್ ಮಾಡಿರುವುದು ಅಮೃತಾ ಸಿಂಗ್ ಅಂತೆ.

  ಜನನಿಭಿಡ ಬೀದಿಗಳಲ್ಲಿ ಆರಾಮಾಗಿ ಸುತ್ತಾಡಿದ ಸಾರಾ

  ವಿಡಿಯೋದಲ್ಲಿ ಸಾರಾ ಅಲಿ ಖಾನ್, ಅಲ್ಲಿನ ಮೊಸರಿನ ಅಂಗಡಿ, ಬಳೆಗಳ ಅಂಗಡಿಗಳೆಲ್ಲವನ್ನೂ ತೋರಿಸಿದ್ದಾರೆ. ಸ್ವಲ್ಪ ತರಲೆಯನ್ನೂ ಮಾಡಿದ್ದಾರೆ. ಬೀದಿಯಲ್ಲಿ ಅಷ್ಟೋಂದು ಜನರಿದ್ದರೂ ಯಾರೂ ಸಹ ಸಾರಾ ಅವರನ್ನು ಗುರುತು ಹಿಡಿದಿಲ್ಲ, ಆರಾಮವಾಗಿ ಅವರು ಜನನಿಭಿಡ ಬೀದಿಗಳಲ್ಲಿ ಸುತ್ತಾಡಿದ್ದಾರೆ.

  ಕೇದಾರ್‌ನಾಥ್ ಸಿನಿಮಾ ಮೂಲಕ ಬಾಲಿವುಡ್ ಪ್ರವೇಶ

  ಕೇದಾರ್‌ನಾಥ್ ಸಿನಿಮಾ ಮೂಲಕ ಬಾಲಿವುಡ್ ಪ್ರವೇಶ

  ಸಾರಾ ಅಲಿ ಖಾನ್ 'ಕೇದಾರ್‌ನಾಥ್' ಸಿನಿಮಾ ಮೂಲಕ ಬಾಲಿವುಡ್ ಪ್ರವೇಶ ಮಾಡಿದರು. ನಂತರ ಸಿಂಬಾ ಹಾಗೂ ಲವ್ ಆಜ್‌ ಕಲ್ ಸಿನಿಮಾದಲ್ಲಿ ನಟಿಸಿದ್ದಾರೆ. 'ಕೂಲಿ ನಂ 1' ಮತ್ತು ಅತರಂಗೀ ರೇ ಸಿನಿಮಾಗಳು ಚಿತ್ರೀಕರಣ ಹಂತದಲ್ಲಿವೆ.

  English summary
  Saif Ali Khan's daughter Sara Ali Khan roms in streets of Banaras. She turns journalist in the street.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X