Don't Miss!
- Sports
U-19 ಮಹಿಳಾ ಟಿ20 ವಿಶ್ವಕಪ್ ಗೆದ್ದ ಭಾರತ ಮಹಿಳಾ ತಂಡಕ್ಕೆ ಬಹುಮಾನ ಘೋಷಿಸಿದ ಜಯ್ ಶಾ
- Lifestyle
ಫೆಬ್ರವರಿಯಲ್ಲಿದೆ ಈ 3 ಗ್ರಹಗಳ ಸಂಚಾರ: ಈ 4 ರಾಶಿಯವರಿಗೆ ಮಂಗಳಕರ
- News
Breaking: ಸಹಾಯಕ ಸಬ್ ಇನ್ಸ್ಪೆಕ್ಟರ್ ಗುಂಡಿನ ದಾಳಿ: ಆಸ್ಪತ್ರೆಯಲ್ಲಿ ಓಡಿಶಾ ಆರೋಗ್ಯ ಸಚಿವ ಸಾವು
- Finance
ರಾಷ್ಟ್ರವ್ಯಾಪಿ ಬ್ಯಾಂಕ್ ಮುಷ್ಕರ ಮುಂದೂಡಿದ ಬ್ಯಾಂಕ್ ಯೂನಿಯನ್ಸ್: ಜ.31ಕ್ಕೆ ಮಹತ್ವದ ಸಭೆ
- Technology
ಬಜೆಟ್ ಬೆಲೆಯಲ್ಲಿ ಈ ಸ್ಮಾರ್ಟ್ಫೋನ್ಗಳು ಬೆಸ್ಟ್ ಎನಿಸಿಲಿವೆ! ಜಬರ್ದಸ್ತ್ ಫೀಚರ್ಸ್!
- Automobiles
ಬೆಲೆ ಏರಿಕೆ ಪಡೆದುಕೊಂಡ ಪರ್ಫಾಮೆನ್ಸ್ ಕಾರು ಪ್ರಿಯರ ಮೆಚ್ಚಿನ ಹ್ಯುಂಡೈ ಐ20 ಎನ್ ಲೈನ್
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಕಾಜೋಲ್ ಜೊತೆ ನಟಿಸಬೇಡ: ಆಮೀರ್ ಖಾನ್ ಗೆ ಶಾರುಖ್ ಹೀಗೆ ಹೇಳಿದ್ದೇಕೆ?
ಬಾಲಿವುಡ್ ನ ಸೂಪರ್ ಹಿಟ್ ಜೋಡಿಗಳಲ್ಲಿ ಶಾರುಖ್ ಮತ್ತು ಕಾಜೋಲ್ ಜೋಡಿ ಕೂಡ ಒಂದು. 'ಬಾಜಿಗರ್' ಚಿತ್ರದ ಮೂಲಕ ಮೊದಲ ಬಾರಿಗೆ ತೆರೆಹಂಚಿಕೊಂಡ ಈ ಜೋಡಿ ನಂತರ ಸಾಕಷ್ಟು ಹಿಟ್ ಸಿನಿಮಾಗಳಲ್ಲಿ ಒಟ್ಟಿಗೆ ಅಭಿನಯಿಸಿದ್ದಾರೆ. ಸಿನಿಮಾದಲ್ಲಿ ಮಾತ್ರವಲ್ಲ ಶಾರುಖ್ ಮತ್ತು ಕಾಜೋಲ್ ಇಬ್ಬರು ನಿಜ ಜೀವನದಲ್ಲೂ ಉತ್ತಮ ಸ್ನೇಹಿತರು.
Recommended Video
ಶಾರುಖ್ ಮತ್ತು ಕಾಜೋಲ್ ಮೊದಲ ಸಿನಿಮಾ 'ಬಾಜಿಗರ್' ಮಾಡುವಾಗ ಇಬ್ಬರು ಅಷ್ಟೇನೂ ಸ್ನೇಹಿತರಾಗಿರಲಿಲ್ಲ. ಆ ಸಮಯದಲ್ಲಿ ಶಾರುಖ್ ಖಾನ್, ನಟ ಆಮೀರ್ ಖಾನ್ ಗೆ ಕಾಜೋಲ್ ಜೊತೆ ನಟಿಸಬೇಡ ಎಂದು ಹೇಳಿದ್ದಂತೆ. ಅಷ್ಟಕ್ಕೂ ಶಾರುಖ್ ಹೀಗೆ ಹೇಳಿದ್ದೇಕೆ? ಮುಂದೆ ಓದಿ...

ಶಾರುಖ್ ಮತ್ತು ಕಾಜೋಲ್ ಮೊದಲ ಸಿನಿಮಾ
ಶಾರುಖ್ ಮತ್ತು ಕಾಜೋಲ್ ಮೊದಲ ಬಾರಿಗೆ ಅಭಿಮಾನಿಗಳ ಮುಂದೆ ಬಂದ ಸಿನಿಮಾ ಬಾಜಿಗರ್. ಈ ಸಿನಿಮಾ ಬಾಲಿವುಡ್ ನಲ್ಲಿ ಸಕ್ಸಸ್ ಆಯಿತು. ನಟಿ ಕಾಜೋಲ್ ಕಮರ್ಷಿಯಲ್ ನಟಿಯಾಗಿ ಯಶಸ್ಸು ಕಂಡ ಮೊದಲ ಸಿನಿಮಾ. ಜೊತೆಗೆ ಶಾರುಖ್ ಮತ್ತು ಕಾಜೋಲ್ ಜೋಡಿಯೂ ಬಾಲಿವುಡ್ ನ ಹಿಟ್ ಜೋಡಿಯಾಗಿ ಹೊರಹೊಮ್ಮಿತು.

ಕಾಜೋಲ್ ಜೊತೆ ನಟಿಸುವ ಆಸೆ ವ್ಯಕ್ತಪಡಿಸಿದ್ದರು ಆಮೀರ್
ಸಂದರ್ಶವೊಂದರಲ್ಲಿ ಮಾತನಾಡಿದ ಶಾರುಖ್, ಆಮೀರ್ ಖಾನ ಗೆ ಕಾಜೋಲ್ ಜೊತೆ ನಟಿಸಬೇಡ ಎಂದು ಹೇಳಿರುವ ಬಗ್ಗೆ ಮಾತನಾಡಿದ್ದಾರೆ. "ಬಾಜಿಗರ್ ಸಿನಿಮಾದ ಸಂದರ್ಭ ಕಾಜೋಲ್ ಮತ್ತು ನನ್ನ ಮಧ್ಯೆ ಅಷ್ಟೇನು ಗೆಳೆತನ ಇರಲಿಲ್ಲ. ಆ ಸಮಯದಲ್ಲಿ ಆಮೀರ್ ಖಾನ್ ಫೋನ್ ಮಾಡಿ, ಕಾಜೋಲ್ ಜೊತೆ ನಟಿಸಬೇಕು ಎನ್ನುವ ಆಸೆಯನ್ನು ವ್ಯಕ್ತಪಡಿಸಿದ್ದರು" ಎಂದಿದ್ದಾರೆ.

ಕಾಜೋಲ್ ಜೊತೆ ನಟಿಸಬೇಡ ಎಂದ್ದಿದ್ದರು ಶಾರುಖ್
ಆಮೀರ್ ಖಾನ್ ಫೋನ್ ಮಾಡಿ ಕಾಜೋಲ್ ಜೊತೆ ನಟಿಸುವ ಆಸೆ ವ್ಯಕ್ತಪಡಿಸಿದ್ದರಂತೆ. ಆಗ ಶಾರುಖ್ "ಆಕೆಗೆ ಕೆಲಸದಲ್ಲಿ ಫೋಕಸ್ ಇಲ್ಲ ಎಂದು ನಾನೆ ಬೇಡ ಅಂತ ಹೇಳಿದ್ದೆ. ನಂತರ ಚಿತ್ರದ ಒಂದಿಷ್ಟು ದೃಶ್ಯಗಳನ್ನು ನೋಡಿದಾಗ, ಕಾಜೋಲ್ ಎಂಥಾ ಅದ್ಭುತ ನಟಿ ಎನ್ನುವುದು ಗೊತ್ತಾಯಿತು. ಆ ನಂತರ ಆಮೀರ್ ಖಾನ್ ಗೆ ಫೋನ್ ಮಾಡಿ ಹೇಳಿದೆ. ಸ್ಕ್ರೀನ್ ಮೇಲೆ ಆಕೆ ಸುಂದರವಾಗಿ ಕಾಣಿಸುತ್ತಾಳೆ" ಎಂದು ಹೇಳಿದ್ದಾರೆ.

ಕಾಜೋಲ್ ಗೂ ಶಾರುಖ್ ಬಗ್ಗೆ ಉತ್ತಮ ಅಭಿಪ್ರಾಯವಿರಲಿಲ್ಲ
ಕಾಜೋಲ್ ಗೂ ಶಾರುಖ್ ಬಗ್ಗೆ ಒಳ್ಳೆಯ ಅಭಿಪ್ರಾಯವಿರಲಿಲ್ಲವಂತೆ. ಒಮ್ಮೆ ಕಾಜೋಲ್, ಶಾರುಖ್ ಮೇಕಪ್ ಮ್ಯಾನ್ ಜೊತೆ ಮಾತನಾಡುವ ವೇಳೆ ಶಾರುಖ್ ಗದರಿದರಂತೆ. ಆದರೂ ಮಾತು ನಿಲ್ಲಿಸದೆ ಮೇಕಪ್ ಮ್ಯಾನ್ ಜೊತೆ ಕಾಜೋಲ್ ಮಾತನಾಡುತ್ತಿದ್ದು. ಆಗ ಶಾರುಖ್ ಬಂದು ಶಟಪ್ ಎಂದು ಹೇಳಿ ಕೋಪ ಮಾಡಿಕೊಂಡಿದ್ದರಂತೆ. ಅಲ್ಲಿಂದ ಇಬ್ಬರ ಸ್ನೇಹ ಪ್ರಾರಂಭವಾಯಿತು ಎಂದು ನಟಿ ಕಾಜೋಲ್ ಹೇಳಿದ್ದಾರೆ.

ಶಾರುಖ್-ಕಾಜೋಲ್ ಸಿನಿಮಾ
ಶಾರುಖ್ ಮತ್ತು ಕಾಜೋಲ್ ಇಬ್ಬರು ಬಾಲಿವುಡ್ ನ ಉತ್ತಮ ಸ್ನೇಹಿತರು. ಸಾಕಷ್ಟು ಸೂಪರ್ ಹಿಟ್ ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಬಾಜಿಗರ್, ಕರಣ್-ಅರ್ಜುನ್, ದಿಲ್ವಾಲೆ ದುಲ್ಹನಿಯಾ ಲೇಜಾಯೆಂಗೆ, ಕುಚ್ ಕುಚ್ ಹೋತಾ ಹೈ, ಕಬಿ ಖುಷಿ ಕಬಿ ಗಮ್, ಮೈ ನೇಮ್ ಈಸ್ ಖಾನ್ ಸಿನಿಮಾಗಳಲ್ಲಿ ಅಭಿಮಾನಿಗಳನ್ನು ಮಾಡಿದ್ದಾರೆ.