»   » 'ಪದ್ಮಾವತ್' ನಂತರ ಬನ್ಸಾಲಿ ಆಫರ್ ತಿರಸ್ಕರಿಸಿದ ಶಾರೂಖ್: ಕಾರಣವೇನು?

'ಪದ್ಮಾವತ್' ನಂತರ ಬನ್ಸಾಲಿ ಆಫರ್ ತಿರಸ್ಕರಿಸಿದ ಶಾರೂಖ್: ಕಾರಣವೇನು?

Posted By:
Subscribe to Filmibeat Kannada

ಎಲ್ಲ ಅಂದುಕೊಂಡಂತೆ ಆಗಿದ್ದರೇ, 'ಪದ್ಮಾವತ್' ಚಿತ್ರದ ನಂತರ ಸಂಜಯ್ ಲೀಲಾ ಬನ್ಸಾಲಿ ಹಾಗೂ ಬಾಲಿವುಡ್ ಬಾದ್ ಶಾ ಜೊತೆ ಸಿನಿಮಾ ಮಾಡಬೇಕಿತ್ತು. ಅರಂಭದಲ್ಲಿ ಶಾರೂಖ್ ಮತ್ತು ಬನ್ಸಾಲಿ ಚಿತ್ರಕ್ಕೆ ದೀಪಿಕಾ ಪಡುಕೋಣೆ ನಾಯಕಿಯಾಗಿ ಆಯ್ಕೆ ಮಾಡಲಾಯ್ತು.

ಇದೊಂದು ಟ್ರಯಾಂಗಲ್ ಲವ್ ಸ್ಟೋರಿಯಾಗಿಗಿದ್ದರಿಂದ ದೀಪಿಕಾ ಜೊತೆಯಲ್ಲಿ ಕಂಗನಾ ರನೌತ್ ಕೂಡ ಬನ್ಸಾಲಿ ಹಾಗೂ ಶಾರೂಖ್ ಚಿತ್ರದಲ್ಲಿ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ ಎಂಬು ಸುದ್ದಿ ಬಾಲಿವುಡ್ ನಲ್ಲಿ ಹರಿದಾಡುತ್ತಿದೆ.

ಈ ಮಧ್ಯೆ, ಬನ್ಸಾಲಿ ಚಿತ್ರವನ್ನ ಶಾರೂಖ್ ಖಾನ್ ತಿರಸ್ಕರಿಸಿದ್ದಾರೆ ಎಂಬ ಹೊಸ ಸುದ್ದಿ ಕೇಳಿ ಬರುತ್ತಿದೆ. ಚಿತ್ರದ ಸ್ಕ್ರಿಪ್ಟ್ ಇಷ್ಟವಾಗದ ಕಾರಣ ಶಾರೂಖ್ ಈ ಚಿತ್ರದಿಂದ ಹೊರಬರುತ್ತಿದ್ದಾರಂತೆ.

ಲೈಂಗಿಕ ಕಿರುಕುಳದ ಬಗ್ಗೆ ಖಾರವಾಗಿ ಮಾತನಾಡಿದ ಕಿಂಗ್ ಖಾನ್

Shah Rukh Khan Refuse A Film With Sanjay Leela Bhansali

2012 ರಲ್ಲಿ ತೆರೆಕಂಡಿದ್ದ 'ದೇವದಾಸ್' ಚಿತ್ರದಲ್ಲಿ ಬನ್ಸಾಲಿ ಮತ್ತು ಶಾರೂಖ್ ಖಾನ್ ಒಟ್ಟಿಗೆ ಅಭಿನಯಿಸಿದ್ದರು. ಮಾಧುರಿ ದೀಕ್ಷಿತ್ ಮತ್ತು ಐಶ್ವರ್ಯ ರೈ ನಾಯಕಿಯರಾಗಿದ್ದರು. 'ದೇವದಾಸ್' ಚಿತ್ರದ ನಂತರ ಮತ್ತೆ ಒಂದಾಗುತ್ತಿರುವ ಬನ್ಸಾಲಿ ಮತ್ತು ಶಾರೂಖ್ ಮತ್ತೊಂದು 'ದೇವದಾಸ್' ಅಂತಹ ಸಿನಿಮಾ ನೀಡಲಿದ್ದಾರೆ ಎಂಬ ಆಸೆ ನಿರಾಸೆಯಾಗಿದೆ.

ಸದ್ಯ, ಆನಂದ್ ಎಲ್ ರೈ ನಿರ್ದೇಶನ ಮಾಡುತ್ತಿರುವ 'ಜೀರೋ' ಚಿತ್ರದಲ್ಲಿ ಕಿಂಗ್ ಖಾನ್ ಅಭಿನಯಿಸುತ್ತಿದ್ದಾರೆ. ಬಹುಶಃ ಮುಂದಿನ ದಿನಗಳಲ್ಲಿ ಬನ್ಸಾಲಿಯ ಸ್ಕ್ರಿಪ್ಟ್ ಇಷ್ಟವಾದರೇ, ಶಾರೂಖ್ ಅಭಿನಯಿಸಬಹುದು.

English summary
First we heard that he is keen on signing on Shah Rukh Khan for a love story. We next heard that Deepika might play his heroine in Bhansali’s next. but, now latest reports Shah Rukh Khan Refuse A Film With Sanjay Leela Bhansali agian.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada