Don't Miss!
- Finance
ಅದಾನಿ ಗ್ರೂಪ್ ಬಿಕ್ಕಟ್ಟಿನ ಮಧ್ಯೆ ಭರವಸೆ ನೀಡಿದ ವಿತ್ತ ಸಚಿವೆ, ಹೇಳಿದ್ದೇನು?
- Lifestyle
ಗಂಡ-ಹೆಂಡತಿ ಜಗಳವಾಡಿದರೆ ಈ ಪ್ರಯೋಜನಗಳೂ ಇವೆ!
- Technology
ಕ್ಯಾನನ್ ಕಂಪೆನಿಯಿಂದ ಹೊಸ ಪ್ರಿಂಟರ್ ಬಿಡುಗಡೆ! ಏನೆಲ್ಲಾ ಸೌಲಭ್ಯವಿದೆ ಗೊತ್ತಾ?
- News
ಪಾಕಿಸ್ತಾನ: ಕರಾಚಿಯ ಮಸೀದಿಯ ಮೇಲೆ ಮತ್ತೊಂದು ದಾಳಿ- ವಿಡಿಯೋ
- Automobiles
ಮಾರುತಿ, ಟಾಟಾ ಕಾರುಗಳ ಪ್ರಾಬಲ್ಯದ ನಡುವೆ ದಾಖಲೆ ಮಟ್ಟದ ಮಾರಾಟವಾದ ಹ್ಯುಂಡೈ ಕ್ರೆಟಾ
- Sports
ಸ್ಪಿನ್ನರ್ಗಳ ವಿರುದ್ಧ ಪರದಾಡುವ ಕೊಹ್ಲಿಗೆ ಆಸಿಸ್ ಸರಣಿಗೂ ಮುನ್ನ ಪಠಾಣ್ 'ಆಕ್ರಮಣಕಾರಿ' ಸಲಹೆ!
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
'ಮಗನೇ.. ಮಾತನಾಡಬೇಡ'; ಅಕ್ಷಯ್ ಕುಮಾರ್ ಫ್ಯಾನ್‌ಗೆ ಶಾರುಖ್ ಖಾನ್ ಖಡಕ್ ಉತ್ತರ!
ಯಾವುದೇ ಇಂಡಸ್ಟ್ರಿಯಲ್ಲಾದರೂ ಫ್ಯಾನ್ ವಾರ್ ಎನ್ನುವುದು ಮಾಮೂಲು. ಅಭಿಮಾನಿಗಳ ಹಗೆತನ ಕೆಲವೊಮ್ಮೆ ನಟರವರೆಗೂ ಸಹ ತಲುಪಿಬಿಡುತ್ತದೆ. ತಾನು ವಿರೋಧಿಸುವ ನಟ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುವ ಪೋಸ್ಟ್‌ಗೆ ನೆಗೆಟಿವ್ ಕಾಮೆಂಟ್ ಮಾಡುವ ಮೂಲಕ ತಮ್ಮ ವಿರೋಧವನ್ನು ವ್ಯಕ್ತಪಡಿಸುತ್ತಾರೆ. ಇನ್ನು ಈ ರೀತಿಯ ಕಾಮೆಂಟ್‌ಗಳನ್ನು ಕಂಡರೂ ಸಹ ಬಹುತೇಕ ನಟರು ಅವುಗಳನ್ನು ತಳ್ಳಿಹಾಕಿ ತಮ್ಮ ಕೆಲಸದತ್ತ ತೊಡಗಿಸಿಕೊಳ್ತಾರೆ.
ಇನ್ನೂ ಕೆಲ ನಟರು ಕೆಲವೊಮ್ಮೆ ಕೆಟ್ಟ ಕಾಮೆಂಟ್ ಮಾಡುವ ಹಾಗೂ ಕೆರಳಿಸುವಂತಹ ಕಾಮೆಂಟ್ ಮಾಡುವವರಿಗೆ ಸರಿಯಾದ ರೀತಿ ಉತ್ತರ ನೀಡಿ ಬಾಯಿ ಮುಚ್ಚಿಸಿಬಿಡ್ತಾರೆ. ಅದೇ ರೀತಿ ಈಗ ಶಾರುಖ್ ಖಾನ್ ಕೂಡ ಉತ್ತರ ನೀಡಿ ವಿರೋಧಿಗೆ ಟಾಂಗ್ ನೀಡಿದ್ದಾರೆ. ಹೌದು, ಶಾರುಖ್ ಖಾನ್ ಟ್ವಿಟರ್‌ಗೆ ಬಂದು 13 ವರ್ಷಗಳು ತುಂಬಿದ ಸಲುವಾಗಿ ತಮ್ಮ ಹಿಂಬಾಲಕರ ಜತೆ ಟ್ವೀಟ್ ಚರ್ಚೆಯನ್ನು ನಡೆಸಿದ್ದಾರೆ.
ಈ ಚರ್ಚೆಯಡಿಯಲ್ಲಿ ಅಭಿಮಾನಿಗಳು ಕೇಳುವ ವಿವಿಧ ಪ್ರಶ್ನೆಗಳಿಗೆ ಶಾರುಖ್ ಖಾನ್ ಉತ್ತರ ನೀಡಿದ್ದಾರೆ. ಇದೇ ವೇಳೆ ಅಕ್ಷಯ್ ಕುಮಾರ್ ಅಭಿಮಾನಿಯೋರ್ವ ಪಠಾಣ್ ಚಿತ್ರ ಈಗಾಗಲೇ ಸೋಲನ್ನು ಅನುಭವಿಸಿದೆ, ಸುಮ್ಮನೆ ನಿವೃತ್ತಿ ತೆಗೆದುಕೊಳ್ಳಿ ಎಂದು ಕಾಮೆಂಟ್ ಮಾಡಿದ್ದ. ಈ ಕಾಮೆಂಟ್‌ಗೆ ಶಾರುಖ್ ಖಾನ್ ರಿಪ್ಲೈ ಮಾಡಿದ್ದು, ಸದ್ಯ ಶಾರುಖ್ ನೀಡಿರುವ ಉತ್ತರ ಎಲ್ಲೆಡೆ ಸಖತ್ ವೈರಲ್ ಆಗಿದೆ.

ಮಗನೇ ಪ್ರವಾಹದ ಬಗ್ಗೆ ಮಾತನಾಡಬೇಡ!
ಅಕ್ಷಯ್ ಕುಮಾರ್ ಅಭಿಮಾನಿ ನಿವೃತ್ತಿ ತೆಗೆದುಕೊಳ್ಳಿ ಎಂದು ಮಾಡಿದ್ದ ಕಾಮೆಂಟ್‌ಗೆ ಪ್ರತಿಕ್ರಿಯಿಸಿರುವ ಶಾರುಖ್ ಖಾನ್ "ಮಗನೇ, ಪ್ರವಾಹದ ಬಗ್ಗೆ ಈ ರೀತಿ ಮಾತನಾಡಬೇಡ" ಎಂದು ಬರೆದುಕೊಂಡಿದ್ದಾರೆ. ಈ ಮೂಲಕ ಶಾರುಖ್ ಖಾನ್ ತಾನು ಹಾಗೂ ತನ್ನ ಚಿತ್ರ ಪ್ರವಾಹದ ಹಾಗೆ ಅದನ್ನು ಕೆಣಕಬೇಡಿ ಎಂದು ಪರೋಕ್ಷವಾಗಿ ತಿಳಿಸಿದ್ದಾರೆ. ಸದ್ಯ ಶಾರುಖ್ ಖಾನ್ ಮಾಡಿರುವ ಈ ಟ್ವೀಟ್ ಎಲ್ಲೆಡೆ ವೈರಲ್ ಆಗಿದ್ದು, ನೆಟ್ಟಿಗರು ಫಿದಾ ಆಗಿದ್ದಾರೆ. ಹಗೆತನ ಸಾಧಿಸುವ ವೈರಿಗಳಿಗೆ ಈ ರೀತಿಯೇ ಉತ್ತರಿಸಬೇಕು ಎಂದು ಬೆಂಬಲ ನೀಡಿದ್ದಾರೆ.

ತಮಿಳು ನಟರ ಬಗ್ಗೆ ಶಾರುಖ್ ಹೇಳಿದ್ದಿಷ್ಟು
ಇನ್ನು ಇದೇ ಪ್ರಶ್ನಾವಳಿಯಲ್ಲಿ ನೆಟ್ಟಿಗರು ತಮಿಳಿನ ಹಲವು ನಟರ ಬಗ್ಗೆ ನಿಮ್ಮ ಅಭಿಪ್ರಾಯವೇನು ಎಂಬ ಪ್ರಶ್ನೆಯನ್ನು ಕೇಳಿದ್ದಾರೆ. ರಜನಿಕಾಂತ್ ಬಗ್ಗೆ ಟ್ವೀಟ್ ಮಾಡಿ ಉತ್ತರಿಸಿರುವ ಶಾರುಖ್ ಖಾನ್ "ರಜನಿ ಬಾಸ್ ಮ್ಯಾನ್" ಎಂದಿದ್ದಾರೆ. ತಮಿಳು ನಟ ವಿಜಯ್ ಸೇತುಪತಿ ಬಗ್ಗೆ ಟ್ವೀಟ್ ಮಾಡಿ ಉತ್ತರಿಸಿರುವ ಶಾರುಖ್ ಖಾನ್ "ಅದ್ಭುತ ಹಾಗೂ ಅದ್ಭುತ" ಎಂದಿದ್ದಾರೆ. ತಳಪತಿ ವಿಜಯ್ ಬಗ್ಗೆ ಕೂಡ ಶಾರುಖ್ ಖಾನ್ ಟ್ವೀಟ್ ಮಾಡಿ ಉತ್ತರಿಸಿದ್ದು, ವಿಜಯ್ ತುಂಬಾ ಸ್ವೀಟ್ ಎಂದಿದ್ದಾರೆ ಹಾಗೂ ವಿಜಯ್ ತನಗೆ ಭೋಜನವನ್ನೂ ಸಹ ಮಾಡಿಸಿದ್ದರು ಎಂದು ಶಾರುಖ್ ಖಾನ್ ಬಿಚ್ಚಿಟ್ಟಿದ್ದಾರೆ.

ಸರಿಯಾದ ಪ್ರಚಾರ ಇಲ್ಲ ಎಂದವನಿಗೂ ಜಾಣ್ಮೆಯ ಉತ್ತರ
ಇನ್ನು ಮತ್ತೋರ್ವ ನೆಟ್ಟಿಗ ಪಠಾಣ್ ಬಿಡುಗಡೆ ದಿನ ಹತ್ರಿರ ಬರುತ್ತಿದ್ದರೂ ಸಹ ಚಿತ್ರತಂಡ ಸರಿಯಾಗಿ ಪ್ರಚಾರ ಮಾಡುತ್ತಿಲ್ಲ ಎಂದು ಆರೋಪಿಸಿ, ಇದನ್ನು ಪ್ರಶ್ನಿಸಿದ್ದಾನೆ. ಇದಕ್ಕೆ ಉತ್ತರಿಸಿದ ಶಾರುಖ್ ಖಾನ್ 'ನಿಮಗೆ ಪಠಾಣ್ ಬಿಡುಗಡೆಯಾಗುತ್ತಿರುವ ವಿಷಯ ತಿಳಿದಿದೆ ಅಲ್ವಾ? ಇದಕ್ಕಿಂತ ಇನ್ನೇನು ಪ್ರಚಾರ ಬೇಕಿದೆ?' ಎಂದು ಬರೆದು ರಿಪ್ಲೈ ಮಾಡಿದ್ದಾರೆ. ಈ ಮೂಲಕ ಚಿತ್ರಕ್ಕೆ ತಕ್ಕ ಪ್ರಚಾರ ಸಿಕ್ಕಿದೆ ಎಂದು ಶಾರುಖ್ ಖಾನ್ ತಿಳಿಸಿದ್ದಾರೆ.