»   » ಶಾರೂಖ್ ಖಾನ್ ಮಗಳ ಚೊಚ್ಚಲ ಸಿನಿಮಾಗೆ ತಯಾರಿ?

ಶಾರೂಖ್ ಖಾನ್ ಮಗಳ ಚೊಚ್ಚಲ ಸಿನಿಮಾಗೆ ತಯಾರಿ?

Posted By:
Subscribe to Filmibeat Kannada

ಬಾಲಿವುಡ್ ಬಾದ್ ಶಾ ಶಾರುಖ್ ಖಾನ್ ಪುತ್ರಿ ಸುಹಾನಾ ಬಿ.ಟೌನ್ ಗೆ ಲಗ್ಗೆ ಇಡಲು ಸಿದ್ಧತೆ ನಡೆಸುತ್ತಿದ್ದಾರೆ. ಬಿಗ್ ಬ್ಯಾನರ್ ನಲ್ಲಿ ಸುಹಾನ ಖಾನ್ ಇಂಡಸ್ಟ್ರಿಗೆ ಎಂಟ್ರಿ ಕೊಡ್ತಾರೆ, ಅದಕ್ಕಾಗಿ ಎಲ್ಲ ರೀತಿಯ ತಯಾರಿ ನಡೆಯುತ್ತಿದೆ ಎನ್ನಲಾಗಿದೆ.

ಹೀಗಿರುವಾಗ, ಮತ್ತಷ್ಟು ಬೆಳವಣಿಗೆಗಳು ಈ ಕುತೂಹಲವನ್ನ ಹೆಚ್ಚಿಸಿದೆ. ಇತ್ತೀಚೆಗಷ್ಟೆ ಸುಹಾನಾ, ನಿರ್ಮಾಪಕ ಕರಣ್ ಜೋಹರ್ ಅವರ ಆಫೀಸ್ ಗೆ ಭೇಟಿ ನೀಡಿದ್ದರು. ಈ ವೇಳೆ ಸುಹಾನ ಅವರ ಹೇರ್ ಶ್ಟೈಲಿಸ್ಟ್ ಕೂಡ ಭಾಗಿಯಾಗಿದ್ದರು ಎಂಬುದು ಸದ್ಯದ ಚರ್ಚೆ.

Shah Rukh Khan’s daughter Bollywood debut

ಇನ್ನು ಹಿರಿಯ ಫೋಟೋಗ್ರಾಫರ್ ಒಬ್ಬರ ಬಳಿ ಶಾರೂಖ್ ಖಾನ್ ಪುತ್ರಿಯ ಫೋಟೋಶೂಟ್ ಮಾಡಿಸಿದ್ದಾರೆ ಎನ್ನಲಾಗಿದೆ. ಈ ಎಲ್ಲ ರೀತಿಯ ತಯಾರಿಯನ್ನ ಸ್ವತಃ ಕಿಂಗ್ ಖಾನ್ ಬೆಂಬಲವಾಗಿ ನಿಂತು ಮಾಡಿಸುತ್ತಿದ್ದಾರಂತೆ.

ಅದೇನೇ ಇರಲಿ, ಶ್ರೀದೇವಿ ಪುತ್ರಿ, ಸೈಫ್ ಅಲಿ ಖಾನ್ ಪುತ್ರಿ ಸಾರಾ ಅಲಿ ಖಾನ್ ಈಗ ಶಾರೂಖ್ ಖಾನ್ ಮಗಳು.....ಹೀಗೆ, ಸ್ಟಾರ್ ಗಳ ಮಕ್ಕಳು ಬಣ್ಣದ ಲೋಕಕ್ಕೆ ಜಿಗಿಯಲು ರೆಡಿಯಾಗಿ ನಿಂತಿದ್ದಾರೆ. ಆದ್ರೆ, ಯಾವಾಗ, ಯಾವ ಚಿತ್ರಗಳಲ್ಲಿ ಎಂಬುದರ ಬಗ್ಗೆ ಮಾತ್ರ ನಿಗದಿಯಾಗಬೇಕಿದೆ ಎಂದು ಬಾಲಿವುಡ್ ಮಾಧ್ಯಮಗಳು ವರದಿ ಮಾಡಿವೆ.

English summary
Shah Rukh Khan’s daughter Suhana Khan gearing up for Bollywood debut.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada