Don't Miss!
- News
ವಿಮಾನದ ಕ್ಯಾಬಿನ್ ಸಿಬ್ಬಂದಿಯೊಂದಿಗೆ ಅನುಚಿತ ವರ್ತನೆ: ಪ್ರಯಾಣಿಕರ ವಿರುದ್ಧ ಕ್ರಮ
- Automobiles
ಟಾಟಾ ಹ್ಯಾರಿಯರ್, ಸಫಾರಿ ಫೇಸ್ಲಿಫ್ಟ್ ಶೀಘ್ರ ಬಿಡುಗಡೆ: ಏನೆಲ್ಲ ಹೊಸತನ ಹೊಂದಿವೆ..
- Sports
ಹ್ಯಾರಿಸ್ ರೌಫ್ ಜೊತೆ ಭಾರತದ ಈ ವೇಗಿಯನ್ನು ಹೋಲಿಸಬೇಡಿ ಎಂದ ಪಾಕ್ ಮಾಜಿ ಕ್ರಿಕೆಟಿಗ
- Finance
America IT Company Layoffs: ಐಟಿ ಕಂಪನಿಗಳಲ್ಲಿ ಉದ್ಯೋಗ ಕಡಿತ: ಲಕ್ಷಾಂತರ ವೃತ್ತಿಪರರ ಬದುಕು ಅತಂತ್ರ
- Technology
ಭಾರತದಲ್ಲಿ ವಿಶ್ವದ ಮೊದಲ PTZ ಕ್ಯಾಮೆರಾ ಪರಿಚಯಿಸಿದ ಸೋನಿ! ಇದರ ಕಾರ್ಯವೈಖರಿ ಹೇಗಿದೆ?
- Lifestyle
ಜ್ವರ ರಾತ್ರಿ ಹೊತ್ತಿನಲ್ಲಿ ಹೆಚ್ಚಾಗುವುದೇಕೆ? ಜ್ವರ ಕಡಿಮೆಯಾಗಲು ಏನು ಮಾಡಬೇಕು?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಶಾರುಖ್ ಖಾನ್ ಕ್ರೇಜ್ ಶುರು, ವಿದೇಶದಲ್ಲಿ ದಾಖಲೆಯ ಅಡ್ವಾನ್ಸ್ ಬುಕಿಂಗ್!
ಮುಳುಗುತ್ತಿರುವ ಬಾಲಿವುಡ್ ಅನ್ನು ಯಾರಾದರೂ ಕಾಪಾಡಬಲ್ಲರು ಎಂದರೆ ಅದು ಶಾರುಖ್ ಖಾನ್ ಮಾತ್ರವೇ ಎಂದು ಕೆಲವು ದಿನಗಳ ಹಿಂದೆ ಬಾಲಿವುಡ್ ನಿರ್ದೇಶಕರೊಬ್ಬರು ಹೇಳಿದ್ದರು, ಅದು ನಿಜವಾಗುವ ಸುಳಿವು ಕಾಣಿಸಿಕೊಂಡಿದೆ.
ಶಾರುಖ್ ಖಾನ್ ನಟನೆಯ 'ಪಠಾಣ್' ಸಿನಿಮಾ ಕೆಲವೇ ದಿನಗಳಲ್ಲಿ ಬಿಡುಗಡೆ ಆಗಲಿದ್ದು, ಸಿನಿಮಾದ ಟಿಕೆಟ್‌ಗಳ ಅಡ್ವಾನ್ಸ್ ಬುಕಿಂಗ್ ಹೊರದೇಶಗಳಲ್ಲಿ ಪ್ರಾರಂಭಿಸಲಾಗಿದೆ. ಅಡ್ವಾನ್ಸ್ ಬುಕಿಂಗ್‌ಗೆ ಅಭೂತಪೂರ್ವ ಪ್ರತಿಕ್ರಿಯೆ ಶಾರುಖ್ ಅಭಿಮಾನಿಗಳಿಂದ ದೊರೆತಿದ್ದು, ಸಿನಿಮಾ ಸೂಪರ್ ಡೂಪರ್ ಹಿಟ್ ಆಗುವ ನಿರೀಕ್ಷೆ ಹುಟ್ಟಿಸಿದೆ.
ಆಸ್ಟ್ರೇಲಿಯಾ, ಜರ್ಮನಿ, ದುಬೈ, ಯುಎಇ ಸೇರಿದಂತೆ ಇನ್ನೂ ಕೆಲವು ರಾಷ್ಟ್ರಗಳಲ್ಲಿ 'ಪಠಾಣ್' ಸಿನಿಮಾದ ಪ್ರೀ ಬುಕಿಂಗ್ ಆರಂಭವಾಗಿದ್ದು, ಬುಕಿಂಗ್ ಆರಂಭವಾಗುತ್ತಿದ್ದಂತೆ ಅಭಿಮಾನಿಗಳು ಮುಗಿಬಿದ್ದು ಟಿಕೆಟ್ ಬುಕ್ ಮಾಡುತ್ತಿದ್ದಾರೆ. ಭಾರತದ ಇನ್ಯಾವುದೇ ಸಿನಿಮಾಕ್ಕೂ ಸಿಗದಷ್ಟು ಉತ್ತಮ ಪ್ರತಿಕ್ರಿಯೆ ವಿದೇಶದಲ್ಲಿ 'ಪಠಾಣ್'ಗೆ ಲಭ್ಯವಾಗುತ್ತಿದೆ.

ಗಂಟೆಗಳಲ್ಲಿ ಸಾವಿರಾರು ಟಿಕೆಟ್ ಬುಕ್
ಅಡ್ವಾನ್ಸ್ ಬುಕಿಂಗ್ ಓಪನ್ ಆದ ಗಂಟೆಯಲ್ಲಿಯೇ ಯುಎಇಯಲ್ಲಿ 'ಪಠಾಣ್' ಸಿನಿಮಾದ 3500 ಟಿಕೆಟ್‌ಗಳು ಮಾರಾಟವಾಗಿವೆ. ಆಸ್ಟ್ರೇಲಿಯಾನಲ್ಲಿ 3000 ಟಿಕೆಟ್‌ಗಳು ಮಾರಾಟವಾಗಿವೆ. ಜರ್ಮನಿಯಲ್ಲಿ 8500 ಟಿಕೆಟ್‌ಗಳು ಈಗಾಗಲೇ ಬುಕ್ ಆಗಿಬಿಟ್ಟಿವೆ. 2017 ರಲ್ಲಿ ಬಿಡುಗಡೆ ಆಗಿದ್ದ ಶಾರುಖ್ ಖಾನ್‌ರ 'ರಯೀಸ್' ಸಿನಿಮಾದ ಅಡ್ವಾನ್ಸ್ ಬುಕಿಂಗ್ ನ ದುಪ್ಪಟ್ಟು ವೇಗದಲ್ಲಿ ಈ ಸಿನಿಮಾದ ಅಡ್ವಾನ್ಸ್ ಬುಕಿಂಗ್ ನಡೆಯುತ್ತಿದೆ.

ವಿದೇಶದಲ್ಲಿ ಭಾರಿ ಕಲೆಕ್ಷನ್ ನಿರೀಕ್ಷೆ
'ಪಠಾಣ್' ಸಿನಿಮಾದ ವಿದೇಶಿ ಬಾಕ್ಸ್ ಆಫೀಸ್ ಕಲೆಕ್ಷನ್ ಸುಮಾರು 50 ಕೋಟಿ ದಾಟುವ ಸಾಧ್ಯತೆ ಇದೆ. ಸಿನಿಮಾದ ಬಗ್ಗೆ ಭಾರತದಲ್ಲಿಯೂ ಭಾರಿ ಬೇಡಿಕೆ ಇದ್ದು, ಈಗಾಗಲೇ ಶಾರುಖ್ ಖಾನ್‌ರ ಒಂದು ಪ್ಯಾನ್ಸ್ ಕ್ಲಬ್‌ನವರು ಸುಮಾರು 50,000 ಶಾರುಖ್ ಖಾನ್ ಅಭಿಮಾನಗಳಿಗೆ ದೇಶದಾದ್ಯಂತ ವಿಶೇಷ ಶೋ ಆಯೋಜನೆ ಮಾಡಿದೆ. ಭಾರತದಲ್ಲಿ 'ಪಠಾಣ್' ಸಿನಿಮಾದ ಕಲೆಕ್ಷನ್ ಕೆಲವೇ ದಿನಗಳಲ್ಲಿಯೇ ನೂರು ಕೋಟಿ ದಾಟುವ ಸಾಧ್ಯತೆಯೂ ಇದೆ.

ಸಿನಿಮಾದ ಸುತ್ತ ವಿವಾದ
ಭಾರತದಲ್ಲಿ 'ಪಠಾಣ್' ಸಿನಿಮಾದ ಸುತ್ತ ಕೆಲವು ವಿವಾದಗಳನ್ನು ಸುತ್ತಲಾಗಿದೆ. 'ಪಠಾಣ್' ಸಿನಿಮಾದ ಬೇಷರಮ್ ಹಾಡಿನಲ್ಲಿ ನಾಯಕಿ ದೀಪಿಕಾ ಪಡುಕೋಣೆ ಕೇಸರಿ ಬಣ್ಣದ ಬಿಕಿನಿ ಧರಿಸಿ ನರ್ತಿಸಿರುವುದಕ್ಕೆ ಕೆಲವು ಹಿಂದು ಪರ ಸಂಘಟನೆಗಳು ಆಕ್ಷೇಪ ವ್ಯಕ್ತಪಡಸಿದ್ದು, ಸಿನಿಮಾವನ್ನು ಬ್ಯಾನ್ ಮಾಡುವಂತೆ ಒತ್ತಾಯಿಸಿವೆ. ವಿವಾದಗಳ ನಡುವೆಯೂ 'ಪಠಾಣ್' ಸಿನಿಮಾ ದೊಡ್ಡ ಮಟ್ಟದ ಕಲೆಕ್ಷನ್ ಮಾಡುವ ಸಾಧ್ಯತೆ ಇದೆ.

ಸಿನಿಮಾ ಬಿಡುಗಡೆ ಯಾವಾಗ?
'ಪಠಾಣ್' ಸಿನಿಮಾದಲ್ಲಿ ಶಾರುಖ್ ಖಾನ್ ಜೊತೆಗೆ ದೀಪಿಕಾ ಪಡುಕೋಣೆ, ಜಾನ್ ಅಬ್ರಹಾಂ ನಟಿಸಿದ್ದಾರೆ. ಸಿನಿಮಾವು ಸ್ಪೈ ಥ್ರಿಲ್ಲರ್ ಕತೆ ಹೊಂದಿದ್ದು, ಹಲವು ದೇಶಗಳಲ್ಲಿ ಸಿನಿಮಾದ ಚಿತ್ರೀಕರಣ ಮಾಡಲಾಗಿದೆ. ಸಿನಿಮಾವನ್ನು ಸಿದ್ಧಾರ್ಥ್ ಆನಂದ್ ನಿರ್ದೇಶನ ಮಾಡಿದ್ದು, ಯಶ್ ರಾಜ್ ಫಿಲಮ್ಸ್ ನಿರ್ಮಾಣ ಮಾಡಿದ್ದಾರೆ. ಸಿನಿಮಾವು ಜನವರಿ 25 ರಂದು ಬಿಡುಗಡೆ ಆಗಲಿದೆ.