»   » ಬೆಂಗಳೂರಿನ ದೌರ್ಜನ್ಯ ಘಟನೆಗಳಿಗೆ ಬಾಲಿವುಡ್‌ ಬಾದ್‌ ಶಾ ಹೇಳಿದ್ದೇನು?

ಬೆಂಗಳೂರಿನ ದೌರ್ಜನ್ಯ ಘಟನೆಗಳಿಗೆ ಬಾಲಿವುಡ್‌ ಬಾದ್‌ ಶಾ ಹೇಳಿದ್ದೇನು?

Posted By:
Subscribe to Filmibeat Kannada

ಬಾಲಿವುಡ್ ಬಾದ್‌ ಶಾ ಶಾರುಖ್ ಖಾನ್ 'ಪೋಷಕರು, ತಮ್ಮ ಗಂಡು ಮಕ್ಕಳಿಗೆ ಮಹಿಳೆಯರಿಗೆ ಹೇಗೆ ಗೌರವ ಕೊಡಬೇಕು ಎಂಬುದನ್ನು ಕಲಿಸಬೇಕು' ಎಂದು ಬೆಂಗಳೂರಿನ ಮಹಿಳೆಯರ ಮೇಲಿನ ಸರಣಿ ದೌರ್ಜನ್ಯ ಕುರಿತು ಹೇಳಿದ್ದಾರೆ.[ಶಾರುಖ್ ಖಾನ್‌, ಹೃತಿಕ್ ರೋಷನ್ ಬೀಟ್ ಮಾಡಿದ್ರು ಕಿಚ್ಚ ಸುದೀಪ್!]

ಶನಿವಾರ ಚಾರಿಟಿ ಈವೆಂಟ್ ಒಂದರಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಶಾರುಖ್ ಖಾನ್, ಬೆಂಗಳೂರಿನಲ್ಲಿ ಕಿಡಿಗೇಡಿಗಳು ಮಹಿಳೆಯರೊಂದಿಗೆ ಅಸಭ್ಯವಾಗಿ ನಡೆದು ಕೊಂಡ ಬಗ್ಗೆ ಇದು ಸಂಪೂರ್ಣ ತಪ್ಪು. ತಂದೆ ಮತ್ತು ತಾಯಿ ತಮ್ಮ ಗಂಡು ಮಕ್ಕಳಿಗೆ ಮಹಿಳೆಯರಿಗೆ ಹೇಗೆ ಗೌರವ ನೀಡಬೇಕು ಎಂಬುದನ್ನು ಹೇಳಿಕೊಡಬೇಕು ಎಂದಿದ್ದಾರೆ.

Shah Rukh Khan Said, 'Parents should teach sons to respect women'

"ಎಲ್ಲಾ ಮಹಿಳೆಯರು ಮಗಳಾಗಿ ಮತ್ತು ತಾಯಿಯಾಗಿ ನಮ್ಮ ಹೃದಯಕ್ಕೆ ತುಂಬಾ ಹತ್ತಿರವಾಗುತ್ತಾರೆ. ಪ್ರಪಂಚದಲ್ಲಿ ಮಹಿಳೆಯರು ಹೆಚ್ಚು ಗೌರವ ಪಡೆಯುವವರು. ಇದನ್ನು ನಾವು ಅರ್ಥ ಮಾಡಿಕೊಳ್ಳಲೇಬೇಕಾದ ಸಮಯ ಬಂದಿದೆ. ಮಹಿಳೆಯರು ದೇವರ ಅತ್ಯದ್ಭುತ ಸೃಷ್ಟಿಯಾಗಿದ್ದಾರೆ" ಎಂದು ಶಾರುಖ್ ತಮ್ಮ ಅಭಿಪ್ರಾಯ ತಿಳಿಸಿದ್ದಾರೆ.[ತಮಿಳು ಚಿತ್ರ 'ಮರಿಯಪ್ಪನ್' ಫಸ್ಟ್‌ ಲುಕ್ ಬಿಡುಗಡೆ ಮಾಡಿದ ಶಾರುಖ್‌ ಖಾನ್‌]

ಈ ಹಿಂದೆ ಬಾಲಿವುಡ್ ಸೆಲೆಬ್ರಿಟಿಗಳಾದ ಸಲಿಂ ಖಾನ್, ಶೇಖರ್ ಕಪೂರ್, ಅಕ್ಷಯ್‌ ಕುಮಾರ್ ಮತ್ತು ಫರ್ಹಾನ್ ಅಖ್ತರ್, ಬೆಂಗಳೂರಿನಲ್ಲಿ ಮಹಿಳೆಯರ ದೌರ್ಜನ್ಯ ಕುರಿತು ಆಕ್ರೋಶದಿಂದ ಬೇಸರ ವ್ಯಕ್ತಪಡಿಸಿದ್ದರು.

English summary
Bollywood Superstar Shah Rukh Khan has urged parents to teach their sons how to respect women. Asked about the recent Bengaluru mass molestation, Shah Rukh said, "It is completely wrong. I feel mothers and fathers should teach their sons how to respect women."

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada