»   » ತಮಿಳು ಚಿತ್ರ 'ಮರಿಯಪ್ಪನ್' ಫಸ್ಟ್‌ ಲುಕ್ ಬಿಡುಗಡೆ ಮಾಡಿದ ಶಾರುಖ್‌ ಖಾನ್‌

ತಮಿಳು ಚಿತ್ರ 'ಮರಿಯಪ್ಪನ್' ಫಸ್ಟ್‌ ಲುಕ್ ಬಿಡುಗಡೆ ಮಾಡಿದ ಶಾರುಖ್‌ ಖಾನ್‌

Posted By:
Subscribe to Filmibeat Kannada

ಬಾಲಿವುಡ್‌ ಅಂಗಳದಲ್ಲಿ ಇತ್ತೀಚೆಗೆ ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಿದ ಹಲವು ವ್ಯಕ್ತಿಗಳ ಜೀವನಾಧಾರಿತ ಕಥೆ ಇಟ್ಟು ಕೊಂಡು ಚಿತ್ರಗಳು ಮೂಡಿ ಬರುತ್ತಿರುವುದು ಸಿನಿ ಪ್ರಿಯರಿಗೆ ಗೊತ್ತೇ ಇದೆ. ಸಲ್ಮಾನ್‌ ಖಾನ್ ರ 'ಸುಲ್ತಾನ್', ಅಮೀರ್ ಖಾನ್ ನಿರ್ಮಾಣ ಮತ್ತು ಅಭಿನಯದ 'ದಂಗಲ್', ಪ್ರಿಯಾಂಕ ಚೋಪ್ರಾ ಅಭಿನಯದ 'ಮೇರಿ ಕೊಂ' ಚಿತ್ರಗಳು ಉದಾಹರಣೆಗಳು ಮಾತ್ರವಲ್ಲದೇ, ಭಾರತೀಯ ಸಿನಿಮಾ ಅಂಗಳದಲ್ಲಿ ಪ್ರಖ್ಯಾತ ಸಿನಿಮಾಗಳು ಸಹ ಆಗಿವೆ. ಈ ಸರದಿ ಈಗ ಕಾಲಿವುಡ್ ಅಂಗಳದಲ್ಲಿ ಶುರುವಾಗಿದೆ.

ಅಂದಹಾಗೆ ಕಾಲಿವುಡ್ ನಲ್ಲಿ ಈಗ ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಿದವರ ಕಥೆ ಆಧಾರಿತ ಚಿತ್ರವೊಂದಕ್ಕೆ ಸೂಪರ್ ಸ್ಟಾರ್ ರಜನಿಕಾಂತ್ ಪುತ್ರಿ ಐಶ್ವರ್ಯಾ ಧನುಷ್ ಆಕ್ಷನ್ ಕಟ್ ಹೇಳುತ್ತಿದ್ದು, ಈ ಚಿತ್ರದ ಮೊದಲ ಪೋಸ್ಟರ್ ಅನ್ನು ಬಾಲಿವುಡ್ ಕಿಂಗ್ ಖಾನ್‌ 'ಶಾರುಖ್ ಖಾನ್' ಬಿಡುಗಡೆ ಮಾಡಿದ್ದಾರೆ. ಆ ಚಿತ್ರ ಯಾವುದು? ಯಾವ ವ್ಯಕ್ತಿಯ ಕುರಿತ ಚಿತ್ರ? ಎಂಬಿತ್ಯಾದಿ ಮಾಹಿತಿ ಇಲ್ಲಿದೆ ನೋಡಿ.[ತಮಿಳು ಚಿತ್ರದಲ್ಲಿ ಧನುಷ್‌ ಜೊತೆ ಡಿಡಿಎಲ್‌ಜೆ ಕಾಜೋಲ್‌]

ಐಶ್ವರ್ಯಾ ಧನುಷ್ ಆಕ್ಷನ್ ಹೇಳುತ್ತಿರುವ ಸಿನಿಮಾ ಇದೇ..

ಸೂಪರ್ ಸ್ಟಾರ್ ರಜನಿಕಾಂತ್ ಪುತ್ರಿ ಐಶ್ವರ್ಯಾ ಧನುಷ್ ನಿರ್ದೇಶನ ಮಾಡುತ್ತಿರುವ ಹೊಸ ಚಿತ್ರದ ಹೆಸರು 'ಮರಿಯಪ್ಪನ್'.

ಮರಿಯಪ್ಪನ್ ಪೋಸ್ಟರ್ ಬಿಡುಗಡೆ ಮಾಡಿದ ಶಾರುಖ್ ಖಾನ್

ಐಶ್ವರ್ಯಾ ಧನುಷ್ ಆಕ್ಷನ್ ಕಟ್ ಹೇಳುತ್ತಿರುವ 'ಮರಿಯಪ್ಪನ್' ಚಿತ್ರದ ಫಸ್ಟ್‌ ಲುಕ್‌ ಅನ್ನು ಬಾಲಿವುಡ್ ಬಾದ್‌ ಷಾ ಶಾರುಖ್ ಖಾನ್ ಬಿಡುಗಡೆ ಮಾಡಿದ್ದಾರೆ. ಚಿತ್ರದ ಫಸ್ಟ್‌ ಲುಕ್ ಬಿಡುಗಡೆ ಮಾಡಿದ ನಂತರ ಶಾರುಖ್ ತಮ್ಮ ಟ್ವಿಟರ್ ಖಾತೆಯಲ್ಲಿ ಫೋಟೋ ಅಪ್‌ಲೋಡ್ ಮಾಡಿ ಇತರರಿಗೂ 'ಮರಿಯಪ್ಪನ್' ದರ್ಶನ ಮಾಡಿಸಿದ್ದಾರೆ. ಅಲ್ಲದೇ ಆಲ್‌ ದ ಬೆಸ್ಟ್ ಐಶ್ವರ್ಯಾ ಎಂದು ಟ್ವೀಟ್ ಮಾಡಿದ್ದಾರೆ. ಮರಿಯಪ್ಪನ್‌ ಯಾರು ಗೊತ್ತೇ? ತಿಳಿಯಲು ಮುಂದೆ ಓದಿ.[ದಿಲ್ವಾಲೆ: ಶಾರುಖ್ ಚಿತ್ರಕ್ಕೆ ವಿಮರ್ಶಕರಿಂದ ಚಾಟಿಯೇಟು]

ಕ್ರೀಡಾಪಟು ಮರಿಯಪ್ಪನ್

ಕಳೆದ ವರ್ಷ (2016) ರಿಯೋ ಡಿ ಜನೈರೋದಲ್ಲಿ ನಡೆದ ಪ್ಯಾರಾಲಿಂಪಿಕ್ಸ್ ನ ಹೈಜಂಪ್ ವಿಭಾಗದಲ್ಲಿ ಭಾರತ ದೇಶಕ್ಕೆ ಚಿನ್ನದ ಪದಕ ತಂದುಕೊಟ್ಟವರೇ ಮರಿಯಪ್ಪನ್. ಮೂಲತಃ ತಮಿಳುನಾಡಿನ ಇವರ ಪೂರ್ಣ ಹೆಸರು 'ಮರಿಯಪ್ಪನ್ ತಂಗವೇಲು'. ಇವರ ಜೀವನಾಧಾರಿತ ಕಥೆ 'ಮರಿಯಪ್ಪನ್' ಚಿತ್ರಕ್ಕಿದೆ.

ಐಶ್ವರ್ಯಾ ಧನುಷ್ ಆಕ್ಷನ್ ಕಟ್

21 ವರ್ಷದ ಹೈಜಂಪರ್ ಮರಿಯಪ್ಪನ್ ತಂಗವೇಲು ರವರು ತಮಿಳುನಾಡಿನ ಸಲೆಂ ಜಿಲ್ಲೆಯವರು. ಇವರು 2016 ರ ಬೇಸಿಕೆ ಪ್ಯಾರಾಲಿಂಪಿಕ್ಸ್ ಗೇಮ್‌ ನಲ್ಲಿ ಭಾರತಕ್ಕೆ ಹೈಜಂಪ್ ಟಿ-42 ವಿಭಾಗದಲ್ಲಿ ಚಿನ್ನದ ಪದಕ ತಂದುಕೊಟ್ಟಿದ್ದರು.

ಮರಿಯಪ್ಪನ್ ಚಿತ್ರಕ್ಕೆ ಸೀನ್ ರೋಲ್ಡನ್ ಸಂಗೀತ

ಐಶ್ವರ್ಯಾ ಧನುಷ್ ಆಕ್ಷನ್‌ ಕಟ್ ಹೇಳುತ್ತಿರುವ 'ಮರಿಯಪ್ಪನ್' ಚಿತ್ರಕ್ಕೆ ಸೀನ್ ರೋಲ್ಡನ್ ಸಂಗೀತ ನಿರ್ದೇಶನವಿದ್ದು, ವೆಲ್ರಜ್ ಛಾಯಾಗ್ರಹಣ, ರಾಜು ಮುರುಗನ್ ಸಂಭಾಷಣೆ ಬರೆದಿದ್ದಾರೆ. ಈ ಸಿನಿಮಾ ಇಂಗ್ಲೀಷ್‌ ಭಾಷೆಯಲ್ಲೂ ಸಹ ಮೂಡಿಬರುತ್ತಿದೆ.

English summary
Bollywood superstar Shah Rukh Khan took to Twitter and released the first look poster of Aishwaryaa R Dhanush's upcoming biopic on Mariyappan Thangavelu.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada