twitter
    For Quick Alerts
    ALLOW NOTIFICATIONS  
    For Daily Alerts

    ಡ್ರಗ್ ಕೇಸ್: ಪಾಸ್‌ಪೋರ್ಟ್ ಹಿಂತಿರುಗಿಸುವಂತೆ ಮುಂಬೈ ಕೋರ್ಟ್ ಮೊರೆ ಹೋದ ಆರ್ಯನ್

    |

    ಡ್ರಗ್ ಕೇಸ್‌ನಲ್ಲಿ ಶಾರುಖ್ ಖಾನ್ ಪುತ್ರಸ ಆರ್ಯನ್ ಖಾನ್‌ಗೆ ಎನ್‌ಸಿಬಿಯಿಂದ ಕ್ಲೀನ್ ಚಿಟ್ ಸಿಕ್ಕಿದೆ. ಈ ಹಿನ್ನೆಲೆಯಲ್ಲಿ ಆರ್ಯನ್ ಖಾನ್‌ ಮುಂಬೈ ಕೋರ್ಟ್ ಮೆಟ್ಟಿಲೇರಿದ್ದಾರೆ. ಜಾಮೀನು ಬಾಂಡ್‌ ಅನ್ನು ಕ್ಯಾನ್ಸಲ್ ಮಾಡಿ ಪಾಸ್‌ಪೋರ್ಟ್ ಅನ್ನು ಹಿಂತಿರುಗಿಸುವಂತೆ ಮನವಿ ಮಾಡಿಕೊಂಡಿದ್ದಾರೆ.

    ಆರ್ಯನ್ ಖಾನ್ ಜಾಮೀನು ನೀಡುವ ವೇಳೆ ನ್ಯಾಯಾಲಯ ಪಾಸ್‌ಪೋರ್ಟ್ ಒಪ್ಪಿಸಿದ ಬಳಿಕ ಜಾಮೀನನ್ನು ಮಂಜೂರು ಮಾಡಿತ್ತು. ಬಾಂಬೆ ಹೈ ಕೋರ್ಟ್ ಆದೇಶದ ಮೇರೆಗೆ ಎನ್‌ಡಿಪಿಎಸ್ ಕಾಯ್ದೆ ಅಡಿಯಲ್ಲಿ ವಿಶೇಷ ನ್ಯಾಯಾಲಯಕ್ಕೆ ಆರ್ಯನ್ ಖಾನ್ ಪಾಸ್ ಪೋರ್ಟ್ ಅನ್ನು ನೀಡಿದ್ದರು. ಆ ಪಾಸ್‌ಪೋರ್ಟ್ ಅನ್ನು ಹಿಂತಿರುಗಿಸುವಂತೆ ಮನವಿ ಮಾಡಿಕೊಂಡಿದ್ದಾರೆ.

    ಡ್ರಗ್ಸ್ ಪ್ರಕರಣದಲ್ಲಿ ಆರ್ಯನ್‌ ಖಾನ್‌ಗೆ ಕ್ಲೀನ್ ಚಿಟ್: ಎನ್‌ಸಿಬಿ ವಿರುದ್ಧ ಚಾಟಿ!ಡ್ರಗ್ಸ್ ಪ್ರಕರಣದಲ್ಲಿ ಆರ್ಯನ್‌ ಖಾನ್‌ಗೆ ಕ್ಲೀನ್ ಚಿಟ್: ಎನ್‌ಸಿಬಿ ವಿರುದ್ಧ ಚಾಟಿ!

    ಆರ್ಯನ್ ಮನವಿಯಲ್ಲಿ ಏನಿದೆ?

    ಆರ್ಯನ್ ಮನವಿಯಲ್ಲಿ ಏನಿದೆ?

    ಕ್ರೂಸ್ ಡ್ರಗ್ ಕೇಸ್‌ನಲ್ಲಿ ಆರ್ಯನ್ ಖಾನ್ ಅನ್ನು ಬಂಧಿಸಿದ ವೇಳೆ ನೀಡಿದ್ದ ಪಾಸ್‌ಪೋರ್ಟ್‌ ಅನ್ನು ಮರಳಿ ಪಡೆಯಲು ಮನವಿ ಸಲ್ಲಿಸಿದ್ದಾರೆ. ತನ್ನ ಮನವಿಯಲ್ಲಿ ಆರ್ಯನ್ ಖಾನ್ ನ್ಯಾಯಾಲಯಕ್ಕೆ ವಿಶೇಷ ಮನವಿಯನ್ನು ಮಾಡಿಕೊಂಡಿದ್ದಾರೆ. ಸಾಕ್ಷಾಧಾರಗಳ ಕೊರತೆಯಿಂದಾಗಿ ಎನ್‌ಸಿಬಿ ಅಧಿಕಾರಿಗಳು ಆರ್ಯನ್ ಖಾನ್‌ಗೆ ಕ್ಲೀನ್ ಚಿಟ್ ಈ ಆಧಾರದ ಮೇಲೆ ಜಾಮೀನು ಮಂಜೂರು ಮಾಡಿತ್ತು.

    ಡ್ರಗ್ಸ್ ಪ್ರಕರಣ: ಶಾರುಖ್ ಪುತ್ರ ಆರ್ಯನ್ ಖಾನ್‌ಗೆ ಕ್ಲೀನ್ ಚಿಟ್ ನೀಡಿದ ಎನ್‌ಸಿಬಿಡ್ರಗ್ಸ್ ಪ್ರಕರಣ: ಶಾರುಖ್ ಪುತ್ರ ಆರ್ಯನ್ ಖಾನ್‌ಗೆ ಕ್ಲೀನ್ ಚಿಟ್ ನೀಡಿದ ಎನ್‌ಸಿಬಿ

    ಆರ್ಯನ್ ಮನವಿಯಲ್ಲೇನಿದೆ?

    ಆರ್ಯನ್ ಮನವಿಯಲ್ಲೇನಿದೆ?

    "ಅರ್ಜಿದಾರನನ್ನು ಪ್ರಸ್ತುತ ವಿಷಯದಿಂದ ಮುಕ್ತಗೊಳಿಸಲಾಗಿದೆ. ಅಲ್ಲದೆ ಪ್ರಸ್ತುತ ಪ್ರಕರಣದಲ್ಲಿ ಅವನು ಇನ್ನು ಮುಂದೆ ಆರೋಪಿಯಾಗಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ. ಈ ಕಾರಣಕ್ಕೆ ಜಾಮೀನು ಬಾಂಡ್ ಅನ್ನು ರದ್ದುಗೊಳಿಸಿ ಪಾಸ್‌ಪೋರ್ಟ್ ಅನ್ನು ಅವರಿಗೆ ಹಿಂತಿರುಗಿಸುವುದು ಮತ್ತು ವೈಯಕ್ತಿಕ ಬಾಂಡ್ ಅನ್ನು ಬಿಡುಗಡೆ ಮಾಡುವುದು ನ್ಯಾಯಯುತವಾಗಿದೆ." ಎಂದು ಅರ್ಜಿ ಸಲ್ಲಿಸಲಾಗಿದೆ.

    ಕಳೆದ ವರ್ಷ ಎನ್‌ಸಿಬಿಯಿಂದ ಬಂಧನ

    ಕಳೆದ ವರ್ಷ ಎನ್‌ಸಿಬಿಯಿಂದ ಬಂಧನ

    ಆರ್ಯನ್ ಖಾನ್ ಅನ್ನು ಅಕ್ಟೋಬರ್ 02, 2021ರಂದು ಮುಂಬೈನಿಂದ ಗೋವಾಗೆ ತೆರಳುತ್ತಿದ್ದ ಐಶಾರಾಮಿ ಕ್ರ್ಯೂಸ್‌ನಲ್ಲಿ ಎನ್‌ಸಿಬಿ ಅಧಿಕಾರಿಗಳು ಬಂಧಿಸಿದ್ದರು. ಎನ್‌ಡಿಪಿಎಸ್ ಆಕ್ಟ್‌ನ ಸೆಕ್ಷನ್ 8(ಸಿ), 20(ಡಿ), 27, 28,29 ಮತ್ತು 35ರ ಡಿಯಲ್ಲಿ ಆರ್ಯನ್ ಖಾನ್ ಅನ್ನು ಬಂಧಿಸಲಾಗಿತ್ತು. ಈ ಕ್ರ್ಯೂಸ್ ಕಾರ್ಯಾಚರಣೆಯಲ್ಲಿ ಎನ್‌ಸಿಬಿ ಅಧಿಕಾರಿಗಳು 13 ಗ್ರಾಂ ಕೊಕೇನ್, 5ಗ್ರಾಂ ಎಂ, 21 ಗ್ರಾಂ ಚರಸ್ ಹಾಗೂ 22 ಎಂಡಿಎಂಎ ಗುಳಿಗೆಗಳನ್ನು ವಶಕ್ಕೆ ಪಡೆದಿದ್ದರು.

    Aryan Khan Case: ಆರ್ಯನ್ ಖಾನ್ ಡ್ರಗ್ಸ್ ಪ್ರಕರಣದ ಪ್ರಮುಖ ಸಾಕ್ಷಿ ಪ್ರಭಾಕರ್ ನಿಧನAryan Khan Case: ಆರ್ಯನ್ ಖಾನ್ ಡ್ರಗ್ಸ್ ಪ್ರಕರಣದ ಪ್ರಮುಖ ಸಾಕ್ಷಿ ಪ್ರಭಾಕರ್ ನಿಧನ

    ಜಾಮೀನು ನಿರಾಕರಿಸಿದ್ದ ಕೋರ್ಟ್

    ಜಾಮೀನು ನಿರಾಕರಿಸಿದ್ದ ಕೋರ್ಟ್

    ಮೆಟ್ರೊಪೊಲಿಟನ್‌ನ ಮುಖ್ಯ ನ್ಯಾಯಾಧೀಶರು ಜಾಮೀನು ಅರ್ಜಿಯನ್ನು ಮೊದಲು ತಿರಸ್ಕರಿಸಿದ್ದರು. ಬಳಿಕ ಆರ್ಯನ್ ಖಾನ್ ಅಕ್ಟೋಬರ್ 20ರಂದು ಸ್ಪೆಷಲ್ ಕೋರ್ಟ್‌ಗೆ ಹೋಗಿದ್ದರು. ಅಲ್ಲೂ ಜಾಮೀನು ನಿರಾಕರಣೆ ಮಾಡಿದ್ದರು. ಬಳಿಕ ಅಕ್ಟೋಬರ್ 28, 2021ರಂದು ಹೈ ಕೋರ್ಟ್ ಜಾಮೀನು ನೀಡಿತ್ತು. 2022 ಮೇ 27ಕ್ಕೆ ಎನ್‌ಸಿಬಿ ಕ್ಲೀನ್ ಚಿಟ್ ನೀಡಿತ್ತು.

    English summary
    Shah Rukh Khan Son Aryan Khan Moves Mumbai Court For Return Of Passport, Know More.
    Friday, July 1, 2022, 18:13
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X