Don't Miss!
- News
ಮಂಗಳೂರಿನಲ್ಲಿ ಚಾಕು ಇರಿತದಿಂದ ಜ್ಯುವೆಲ್ಲರಿ ಅಂಗಡಿ ಸಿಬ್ಬಂದಿ ಸಾವು
- Automobiles
ಕಡಿಮೆ ಬೆಲೆಯ ಟಾಟಾ ಎಲೆಕ್ಟ್ರಿಕ್ ಕಾರಿನ ವಿತರಣೆ ಪ್ರಾರಂಭ: 2,000 ಕಾರುಗಳ ಹಸ್ತಾಂತರ
- Sports
Border-Gavaskar Trophy: ಭಾರತ ವಿರುದ್ಧ ಮೊದಲ ಪಂದ್ಯದಲ್ಲಿ ಈ ವೇಗಿ ಬೌಲಿಂಗ್ ಮಾಡಲ್ಲ; ಪ್ಯಾಟ್ ಕಮ್ಮಿನ್ಸ್
- Finance
ಅದಾನಿ ಗ್ರೂಪ್ ಬಿಕ್ಕಟ್ಟಿನ ಮಧ್ಯೆ ಭರವಸೆ ನೀಡಿದ ವಿತ್ತ ಸಚಿವೆ, ಹೇಳಿದ್ದೇನು?
- Lifestyle
ಗಂಡ-ಹೆಂಡತಿ ಜಗಳವಾಡಿದರೆ ಈ ಪ್ರಯೋಜನಗಳೂ ಇವೆ!
- Technology
ಕ್ಯಾನನ್ ಕಂಪೆನಿಯಿಂದ ಹೊಸ ಪ್ರಿಂಟರ್ ಬಿಡುಗಡೆ! ಏನೆಲ್ಲಾ ಸೌಲಭ್ಯವಿದೆ ಗೊತ್ತಾ?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
Pathaan Trailer Leaked : ಶಾರುಖ್ ಖಾನ್ ಸಿನಿಮಾ 'ಪಠಾಣ್'ಗೆ ಬ್ಯಾಕ್ ಟು ಬ್ಯಾಕ್ ಶಾಕ್: ಆನ್‌ಲೈನ್‌ನಲ್ಲಿ ಟ್ರೈಲರ್ ಲೀಕ್!
ಶಾರುಖ್ ಖಾನ್ ಸಿನಿಮಾ 'ಪಠಾಣ್'ಗೆ ಯಾಕೋ ಸಂಕಷ್ಟ ತಪ್ಪುತ್ತಲೇ ಇಲ್ಲ. ಒಂದಲ್ಲ ಒಂದು ವಿವಾದಗಳು ಕಿಂಗ್ ಖಾನ್ ಸಿನಿಮಾವನ್ನು ಸುತ್ತಿಕೊಳ್ಳುತ್ತಲೇ ಇದೆ. ಆದರೂ, ಶಾರುಖ್ ಖಾನ್ ಅಭಿಮಾನಿಗಳು 'ಪಠಾಣ್' ಸಿನಿಮಾ ಟ್ರೈಲರ್‌ಗಾಗಿ ಎದುರು ನೋಡುತ್ತಲೇ ಇದ್ದರು.
ಶಾರುಖ್ ಖಾನ್ ಕಳೆದ ನಾಲ್ಕು ವರ್ಷಗಳಿಂದ ಸೈಲೆಂಟ್ ಆಗಿದ್ದರು. ಒಂದರ ಹಿಂದೊಂದು ಸೋಲುಗಳನ್ನು ಕಂಡಿದ್ದ ಬಾದ್‌ಷಾಗೆ ಹೊಸ ಅವತಾರದೊಂದಿಗೆ ಬಾಲಿವುಡ್‌ಗೆ ಮರಳಿದ್ದಾರೆ. ಹೀಗಾಗಿ 'ಪಠಾಣ್' ಸಿನಿಮಾ ಮೇಲೆ ಇಡೀ ದೇಶವೇ ಕಣ್ಣಿಟ್ಟಿದೆ.
ಶಾರುಖ್
ಖಾನ್
ಕೈಯಲ್ಲಿ
ಬಾಲಿವುಡ್
ಭವಿಷ್ಯ:
ಜರ್ಮಿನಿಯಲ್ಲಿ
'ಪಠಾಣ್'
ಸಖತ್
ರೆಸ್ಪಾನ್ಸ್!
ಕಿಂಗ್ ಖಾನ್‌ಗೆ 'ಪಠಾಣ್' ಸಿನಿಮಾ ಗೆಲ್ಲಲೇ ಬೇಕಿದೆ. ಸೋಲಿನಿಂದ ಹೊರಬಂದು ಮತ್ತೊಂದು ಬ್ಲಾಕ್ ಬಸ್ಟರ್ ಸಿನಿಮಾವನ್ನು ನೀಡಲೇಬೇಕು ಅನ್ನೋ ಒತ್ತಡದಲ್ಲಿದ್ದಾರೆ. ಈ ಬೆನ್ನಲೇ "ಭೇಷರಂ ರಂಗ್..." ಹಾಡು ವಿವಾದಕ್ಕೆ ಸಿಲುಕಿತ್ತು. ಈಗ ಇದೇ ಸಿನಿಮಾದ ಟ್ರೈಲರ್ ಆನ್‌ಲೈನ್‌ನಲ್ಲಿ ಲೀಕ್ ಆಗಿದೆ.

'ಪಠಾಣ್' ಟ್ರೈಲರ್ ಆನ್‌ಲೈನ್‌ನಲ್ಲಿ ಲೀಕ್
'ಪಠಾಣ್' ಹಾಡಿನ ವಿವಾದದ ಬಳಿಕ ಟ್ರೈಲರ್ ರಿಲೀಸ್‌ಗೆ ಮುಹೂರ್ತ ಫಿಕ್ಸ್ ಮಾಡಲಾಗಿತ್ತು. ಜನವರಿ 5ಕ್ಕೆ ದೀಪಿಕಾ ಪಡುಕೋಣೆ ಹುಟ್ಟುಹಬ್ಬವಿದೆ. ಇದೇ ದಿನದಂದು ಟ್ರೈಲರ್ ರಿಲೀಸ್ ಮಾಡಲು ಮುಂದಾಗಿತ್ತು. ಈ ಬೆನ್ನಲ್ಲೇ ಸೋಶಿಯಲ್ ಮೀಡಿಯಾದಲ್ಲಿ ಕೌಂಟ್‌ಡೌನ್ ಶುರು ಮಾಡಿತ್ತು. ಇನ್ನೇನು ಬಿಡುಗಡೆಗೆ ಕೆಲವೇ ದಿನಗಳು ಬಾಕಿ ಉಳಿದಿರುವಾಗಲೇ ಆನ್‌ಲೈನ್‌ನಲ್ಲಿ ಟ್ರೈಲರ್‌ನ ಕೆಲವು ತುಣುಕುಗಳು ಲೀಕ್ ಆಗಿವೆ.
ಶಾರುಖ್
ಖಾನ್‌ಗೆ
ಬೆಂಕಿ
ಇಟ್ಟು
ಕೊಲ್ಲುವೆ:
ಪರಮಹಂಸ
ಆಚಾರ್ಯ
ಸ್ವಾಮೀಜಿ

'ಪಠಾಣ್' ಟ್ರೈಲರ್‌ನಲ್ಲಿ ಆಕ್ಷನ್ ಕಿಕ್
'ಪಠಾಣ್' ಸಿನಿಮಾದ ಟ್ರೈಲರ್ ಬಿಡುಗಡೆಗೂ ಮುನ್ನ ಟ್ವಿಟರ್‌ನಲ್ಲಿ ಲೀಕ್ ಆಗಿದೆ. ಲೀಕ್ ಆಗಿರೋ ವಿಡಿಯೋದಲ್ಲಿ ಶಾರುಖ್ ಖಾನ್ ಫುಲ್ ಆಕ್ಷನ್ ಅವತಾರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಚಿಕ್ಕದೊಂದು ತುಣುಕಿನಲ್ಲಿ ಶಾರುಖ್ ಖಾನ್ ಟ್ರೈನ್‌ನಲ್ಲಿ ಹೆವಿ ಫೈಟ್ ಮಾಡುತ್ತಿರುವ ದೃಶ್ಯವಿದೆ. ಈ ಫೈಟ್ ಸೀಕ್ವೆನ್ಸ್ ನೋಡಿ ಪ್ರೇಕ್ಷಕರು ಫುಲ್ ಫಿದಾ ಆಗಿದ್ದಾರೆ. ಫುಲ್ ಟ್ರೈಲರ್ ನೋಡುವುದಕ್ಕೆ ತುದಿಗಾಲಲ್ಲಿ ನಿಂತಿದ್ದಾರೆ.

ಶಾರುಖ್ ಖಾನ್ RAW ಏಜೆಂಟ್
ಈ ಸಿನಿಮಾದಲ್ಲಿ ಶಾರುಖ್ ಖಾನ್ 'ರಾ' ಏಜೆಂಟ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಇದರಲ್ಲಿ ಶಾರುಖ್ ಪಾತ್ರದ ಕೋಡ್ ನೇಮ್ 'ಪಠಾಣ್' ಎನ್ನಲಾಗಿದೆ. ಹೈ ಲೆವೆಲ್ ಆಕ್ಷನ್ ಥ್ರಿಲ್ಲರ್ ಸೀಕ್ವೆನ್ಸ್ ಈ ಸಿನಿಮಾದಲ್ಲಿದ್ದು, ಜನವರಿ 25ರಂದು ಈ ಸಿನಿಮಾ ವಿಶ್ವದಾದ್ಯಂತ ಬಿಡುಗಡೆ ಮಾಡುವುದಕ್ಕೆ ಸಜ್ಜಾಗಿ ನಿಂತಿದೆ. ಹಿಂದಿ ಸೇರಿದಂತೆ ತೆಲುಗು ಹಾಗೂ ತಮಿಳು ಭಾಷೆಯಲ್ಲಿ ಏಕಕಾಲಕ್ಕೆ ಬಿಡುಗಡೆಯಾಗುತ್ತಿದೆ.

'ಭೇಷರಂ ರಂಗ್..' ಸಾಂಗ್ ವಿವಾದ
ಡಿಸೆಂಬರ್ 12ರಂದು 'ಪಠಾಣ್' ಸಿನಿಮಾದ "ಭೇಷರಂ ರಂಗ್..." ಬಿಡುಗಡೆಯಾಗಿತ್ತು. ಈ ಹಾಡಿನಲ್ಲಿ ದೀಪಿಕಾ ಪಡುಕೋಣೆ ಬಿಕಿನಿಯಲ್ಲಿ ಕಾಣಿಸಿಕೊಂಡಿದ್ದರು. ಕೇಸರಿ ಬಿಕಿನಿಯಲ್ಲಿ ಹೆಜ್ಜೆ ಹಾಕಿದ್ದು ಹಲವರ ನಿದ್ದೆ ಕೆಡಿಸಿತ್ತು. ಹಿಂದೂ ಭಾವನೆಗಳಿಗೆ ಧಕ್ಕೆಯಾಗುತ್ತಿದೆ ಎಂದು ಆರೋಪ ಮಾಡಿದ್ದರು. ಮತ್ತೆ ಕೆಲವರು ಇದು ಅಶ್ಲೀಲ ದೃಶ್ಯಗಳಿವೆ ಎಂದು ಕಿಡಿಕಾರಿದ್ದರು.