For Quick Alerts
  ALLOW NOTIFICATIONS  
  For Daily Alerts

  ತಮಿಳು ಚಿತ್ರದಲ್ಲಿ ಧನುಷ್‌ ಜೊತೆ ಡಿಡಿಎಲ್‌ಜೆ ಕಾಜೋಲ್‌

  By Suneel
  |

  ಡಿಡಿಎಲ್‌ಜೆ ಫೇಮಸ್ ನಟಿ ಕಾಜೋಲ್ 'ದಿಲ್ವಾಲೆ' ಸಿನಿಮಾ ನಂತರ ಬಾಲಿವುಡ್‌ನಲ್ಲಿ ಬಿಗ್‌ ಬ್ರೇಕ್‌ ತೆಗೆದುಕೊಂಡಿದ್ದರು. ಈಗ ಸದ್ದಿಲ್ಲದೇ ಒಂದು ಬ್ರೇಕಿಂಗ್ ನ್ಯೂಸ್ ನೀಡಿದ್ದಾರೆ.(ದಿಲ್ವಾಲೆ: ಶಾರುಖ್ ಚಿತ್ರಕ್ಕೆ ವಿಮರ್ಶಕರಿಂದ ಚಾಟಿಯೇಟು)

  ಕಾಜೋಲ್ 20 ವರ್ಷದ ನಂತರ ತಮಿಳು ಸಿನಿಮಾದಲ್ಲಿ ನಟಿಸಲು ಬಂದಿದ್ದಾರೆ. ಬಾಲಿವುಡ್ ಬೆಳ್ಳಿತೆರೆಯಿಂದ ನೇರವಾಗಿ ತಮಿಳುನಲ್ಲಿ ಆಕ್ಟಿಂಟ್ ಮಾಡಲು ಒಪ್ಪಿ ಕೊಂಡಿದ್ದಾರೆ. ಕಾಜೋಲ್‌, ತಮ್ಮ ಪತಿ ಅಜಯ್ ದೇವ್ಗನ್ ನಿರ್ಮಾಣದ, ಆನಂದ್ ಗಾಂಧಿ ನಿರ್ದೇಶನದ ಮುಂದಿನ ಸಿನಿಮಾದಲ್ಲಿ ನಟಿಸಲಿದ್ದಾರೆ ಎಂಬ ಸುದ್ದಿ ಈ ಮೊದಲು ಹರಿದಾಡುತ್ತಿದ್ದವು. ಆದರೆ ಇದಕ್ಕೆ ವಿರುದ್ಧವಾಗಿ ಈಗ ಕಾಜೋಲ್‌ ಶಾಕ್‌ ನೀಡಿದ್ದಾರೆ. ಹಾಗಿದ್ರೆ ಕಾಜೋಲ್ ನಟಿಸುತ್ತಿರುವ ತಮಿಳು ಸಿನಿಮಾ ಯಾವುದು, ನಟ, ಯಾರು ಎಂಬಿತ್ಯಾದಿ ಮಾಹಿತಿಗಳನ್ನು ಮುಂದೆ ಓದಿರಿ.

  ಧನುಷ್ ಜೊತೆ ಕಾಜೋಲ್ ಅಭಿನಯ

  ಧನುಷ್ ಜೊತೆ ಕಾಜೋಲ್ ಅಭಿನಯ

  ಹೌದು, 20 ವರ್ಷಗಳ ನಂತರ ಕಾಜೋಲ್ ತಮಿಳು ಸಿನಿಮಾದಲ್ಲಿ ನಟಿಸುತ್ತಿರುವುದು ನಟ ಧನುಷ್ ಜೊತೆ. ಸಿನಿಮಾ ಯಾವುದು ಗೊತ್ತೇ?

  ಕಾಜೋಲ್‌ ಅಭಿನಯದ 2ನೇ ತಮಿಳು ಸಿನಿಮಾ ಇದೇ!

  ಕಾಜೋಲ್‌ ಅಭಿನಯದ 2ನೇ ತಮಿಳು ಸಿನಿಮಾ ಇದೇ!

  ಕಾಜೋಲ್, ತಮಿಳು ನಟ ಧನುಷ್‌ ಜೊತೆ 'ವೇಲೈಇಲ್ಲಾ ಪಟ್ಟಧಾರಿ 2' ಎಂಬ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾದಲ್ಲಿ ಕಾಜೋಲ್‌ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರಂತೆ.

  ಸೌಂದರ್ಯ ರಜನಿಕಾಂತ್ ಆಕ್ಷನ್‌ ಕಟ್‌

  ಸೌಂದರ್ಯ ರಜನಿಕಾಂತ್ ಆಕ್ಷನ್‌ ಕಟ್‌

  'ವೇಲೈಇಲ್ಲಾ ಪಟ್ಟಧಾರಿ 2' ಸಿನಿಮಾಗೆ ರಜನಿಕಾಂತ್‌ ಮಗಳು ಸೌಂದರ್ಯ ಆಕ್ಷನ್‌ ಕಟ್ ಹೇಳುತ್ತಿದ್ದಾರೆ. ಸಿನಿಮಾವನ್ನು ಧನುಷ್ ಹೋಮ್ ಬ್ಯಾನರ್ 'ವಂಡರ್ಬಾರ್ ಫಿಲ್ಮ್ಸ್‌' ಅಡಿಯಲ್ಲಿ ನಿರ್ಮಾಣ ಮಾಡಲಾಗುತ್ತಿದೆ.

  ತಮಿಳಿನಲ್ಲಿ ಕಾಜೋಲ್‌ 2 ನೇ ಸಿನಿಮಾ

  ತಮಿಳಿನಲ್ಲಿ ಕಾಜೋಲ್‌ 2 ನೇ ಸಿನಿಮಾ

  20 ವರ್ಷಗಳ ನಂತರ ತಮಿಳು ಚಿತ್ರರಂಗದಲ್ಲಿ ನಟಿಸುತ್ತಿರುವ ಕಾಜೋಲ್‌, ಈ ಹಿಂದೆ 1997 ರಲ್ಲಿ 'ಮಿನ್ಸಾರ ಕನವು' ಚಿತ್ರದಲ್ಲಿ ನಟಿಸಿದ್ದರು. ಸಿನಿಮಾದಲ್ಲಿ ಪ್ರಭುದೇವ ಹಾಗೂ ಅರವಿಂದ ಸ್ವಾಮಿ ಜೊತೆ ನಟಿಸಿದ್ದರು. ಸಿನಿಮಾಗೆ ರಾಜೀವ್ ಮೆನನ್ ಆಕ್ಷನ್ ಕಟ್ ಹೇಳಿದ್ದರು.

  ಕಾಜೋಲ್‌ಗೆ ಬರೋಬ್ಬರಿ 4 ಕೋಟಿ ರೂ ಸಂಭಾವನೆ

  ಕಾಜೋಲ್‌ಗೆ ಬರೋಬ್ಬರಿ 4 ಕೋಟಿ ರೂ ಸಂಭಾವನೆ

  ಧನುಷ್ ಜೊತೆ 'ವೇಲೈಇಲ್ಲಾ ಪಟ್ಟಧಾರಿ 2' ಸಿನಿಮಾದಲ್ಲಿ ಕಾಜೋಲ್‌ ನಟಿಸಲು ಪಡೆಯುತ್ತಿರುವ ಸಂಭಾವನೆ ಬರೋಬ್ಬರಿ 4 ಕೋಟಿ ಎಂದು ಈ ಹಿಂದೆ ಚಿತ್ರತಂಡದ ಮೂಲಗಳಿಂದಲೇ ಬಹಿರಂಗವಾಗಿತ್ತು.

  ಸಿನಿಮಾ ಶೂಟಿಂಗ್‌ಗೆ ರಜನಿಕಾಂತ್ ಚಾಲನೆ

  ಸಿನಿಮಾ ಶೂಟಿಂಗ್‌ಗೆ ರಜನಿಕಾಂತ್ ಚಾಲನೆ

  ಸಿನಿಮಾ ಶೂಟಿಂಗೆ ಸೂಪರ್‌ ಸ್ಟಾರ್‌ ರಜನಿಕಾಂತ್‌ ರವರು ಚಾಲನೆ ನೀಡಿದ್ದಾರೆ. ಚಿತ್ರದ ಮೊದಲ ಭಾಗದಲ್ಲಿ ಅಮಲಾ ಪೌಲ್ ಧನುಷ್‌ ಜೊತೆ ರೊಮ್ಯಾನ್ಸ್ ಮಾಡಲಿದ್ದಾರಂತೆ. (ಬರ್ತ್ ಡೇ ಆಚರಿಸಿಕೊಳ್ಳುವ ಮೂಡ್ ನಲ್ಲಿಲ್ಲ ರಜನಿಕಾಂತ್!)

  ಕಥೆ-ಚಿತ್ರಕಥೆ ಧನುಷ್

  ಕಥೆ-ಚಿತ್ರಕಥೆ ಧನುಷ್

  'ವೇಲೈಇಲ್ಲಾ ಪಟ್ಟಧಾರಿ 2' ಸಿನಿಮಾದ ಕಥೆ-ಚಿತ್ರಕಥೆ ಧನುಷ್‌ ರವರೇ ಬರೆದಿದ್ದಾರೆ. ಚಿತ್ರದಲ್ಲಿ ಧನುಷ್‌, ಕಾಜೋಲ್, ಅಮಲಾ ಪೌಲ್‌ ಹೊರತು ಪಡಿಸಿ, ಸಮುಥಿರಕನಿ, ಸರಣ್ಯಾ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಸಿನಿಮಾ 2017 ರಲ್ಲಿ ತೆರೆಗೆ ಬರಲಿದೆ.

  English summary
  Kajol has signed another film. No, it is not the Anand Gandhi film produced by her husband Ajay Devgn. Instead of she has given her nod for her second Tamil film Velaiilla Pattadhari 2. Yes She is acting with Dhanush, directed by Soundarya Rajinikanth.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X